ಊರು ಬಿಟ್ಟು ಕಾಶ್ಮೀರಕ್ಕೆ ಹೊರಟ ಪುಟ್ಟಕ್ಕನ ಮಗಳು; ಸಂಜನಾ ಬುರ್ಲಿ ಟ್ರಾವೆಲ್ ಡೈರಿ ಹೇಗಿದೆ ನೋಡಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳಾಗಿ ಎಲ್ಲರ ಮನ ಗೆದ್ದ ಮುದ್ದು ಮುಖದ ಚೆಲುವೆ ಈಕೆ. ಕಂಠಿಯ ಮನದರಸಿ ಬೇರೆ ಯಾರೂ ಅಲ್ಲ ಸಂಜನಾ ಬುರ್ಲಿ. ಸಂಜನಾ ಬುರ್ಲಿ ಈ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಎಲ್ಲರ ಜೊತೆ ಫೇಮಸ್ ಆಗಿ ಇದ್ದವರು. ಸೀರಿಯಲ್‌ನಲ್ಲಿ ಬಹಳ ಫೇಮಸ್ ಆದ ನಟಿ ಎಲ್ಲರ ಮನ ಗೆದ್ದಿರುವುದಂತು ಖಂಡಿತ. ಇದೀಗ ಸಂಜನಾ ಬುರ್ಲಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಸಂಜನಾಗೆ ಯಾವುದಾದರೂ ಪ್ರವಾಸಿ ತಾಣಕ್ಕೆ ವಿಸಿಟ್ ಮಾಡಬೇಕು ಎನ್ನುವ ಆಸೆ. ಹೀಗಾಗಿಯೇ ಸಂಜನಾ ಇದೀಗ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದಾರೆ.
ಪುಟ್ಟಕ್ಕನ ಮಗಳಾಗಿ ಸ್ನೇಹಾ ಬಹಳ ಮುದ್ದಾಗಿ ನಟನೆ ಮಾಡುತ್ತಿರುವುದು ಎಲ್ಲರಿಗೆ ಕೂಡ ಖುಷಿ ನೀಡುತ್ತಿದೆ. ಕಂಠಿಯನ್ನು ಸಹನಾ ತಿದ್ದಿ ಬುದ್ಧಿ ಪ್ರೀತಿ ಮಾಡುತ್ತಿದ್ದಾರೆ. ಇದೀಗ ಬಂಗಾರಮ್ಮನ ಮುದ್ದಿನ ಸೊಸೆ ಕೂಡ ಹೌದು. ಬಂಗಾರಮ್ಮ ತನ್ನ ಸೊಸೆಯ ವಿರುದ್ದ ಎಷ್ಟೇ ಕಠೋರ ನಿರ್ಧಾರ ತೆಗೆದುಕೊಂಡರೂ ಸ್ನೇಹಾ ಮಾತ್ರ ಇದೀಗ ಅತ್ತೆಯನ್ನು ಇಷ್ಟ ಪಡಲು ಶುರು ಮಾಡಿದ್ದಾಳೆ. ಇನ್ನೂ ಸಂಜನಾ ಬುರ್ಲಿ ಕಾಶ್ಮೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಜಮ್ಮು ಕಾಶ್ಮೀರದಲ್ಲಿ ವಿಂಟರ್ ಸೀಸನ್. ಇದನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

ಹಾಗೆಯೇ ಜಮ್ಮು ಕಾಶ್ಮೀರದ ಕೆಲವು ಪ್ರದೇಶಗಳಿಗೆ ಹೋಗಿ ಅಲ್ಲಿನ ರಮಣೀಯ ದೃಶ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಸೋನ್ ಮರ್ಗ್, ಗುಲ್ ಮರ್ಗ್ ನಂತಹ ಅದ್ಭುತ ತಾಣಗಳಿಗೆ ಸಂಜನಾ ತೆರಳಿದ್ದು, ಸ್ನೋ ಫಾಲ್ ಎಂಜಾಯ್ ಮಾಡುತ್ತಾ ಇದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಬುರ್ಲಿ ಫೋಟೋ ವೈರಲ್ ಆಗುತ್ತಿದೆ. ಫೋಟೋದಲ್ಲಿ ಸಂಜನಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕೈ ಗ್ಲೌಸ್ ಹಾಕಿ ಹಾಗೆಯೇ ಸ್ವೆಟರ್ ಹಾಕಿಕೊಂಡಿದ್ದಾರೆ. ಮಂಜಿನಲ್ಲಿ ನಿಂತು ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾ ಇದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವನ್ನು ನೋಡಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ಇದ್ದಾರೆ.
ಕಾಶ್ಮೀರದ ಸುಂದರ ತಾಣದಲ್ಲಿ ಸಂಜನಾ
ಸಂಜನಾ ಬುರ್ಲಿ ಕಾಶ್ಮೀರ್ ಡೈರಿಗೆ "ಮುದ್ದು ಮುಖದ ಚೆಲುವೆ", "ಮುದ್ದಾಗಿ ಕಾಣಿಸುತ್ತಿದ್ದೀರಾ" ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಸಂಜನಾ ಬರ್ಲಿ ಫೋಟೋ ನೋಡಿ ಬಹಳಷ್ಟು ಇಷ್ಟ ಪಟ್ಟಿದ್ದಾರೆ. ಸಂಜನಾ ಧಾರಾವಾಹಿ ಮಾತ್ರವಲ್ಲದೆ ಶಾರ್ಟ್ ಫಿಲ್ಮ್‌ನಲ್ಲಿ ಕೂಡ ನಟನೆ ಮಾಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಗಿಯ ಕೋ ಸ್ಟಾರ್ ಆಗಿರೋ ಪವನ್ ಕುಮಾರ್ ನಟಿಸಿರುವ ಶಾರ್ಟ್ ಫಿಲ್ಮ್ 'ಲವ್ ರೀಸೆಟ್' ಇತ್ತೀಚೆಗೆ ಬಿಡುಗಡೆಯಾಗಿದೆ. ಹಾಗೆಯೇ ಈ ಶಾರ್ಟ್ ಫಿಲ್ಮ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಸಂಜನಾ ಬುರ್ಲಿ ಫೋಟೋ ವೈರಲ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಅದ್ಭುತವಾಗಿ ನಟನೆಯನ್ನು ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ನಟನೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇನ್ನೂ ಸೀರಿಯಲ್ ಕಡೆಗೆ ಬರುವುದಾದರೆ, ಬಂಗಾರಮ್ಮಗೆ ಸ್ನೇಹಾ ಅಂದರೆ ಬಹಳ ಕೋಪ. ಯಾಕೆಂದರೆ, ಆಕೆ ನಂಜಮ್ಮನ ಸಹವಾಸ ಮಾಡಿದ್ದಾಳೆ. ನಂಜಮ್ಮ ಸರಿ ಇಲ್ಲ. ಆದರೂ, ಈಕೆ ನಂಜಮ್ಮ ಜೊತೆ ಆತ್ಮೀಯರಾಗಿರೋದಕ್ಕೆ ಬೇಸರವಿದೆ.
ಧಾರಾವಾಹಿ ಸ್ಟೋರಿ ಎಲ್ಲಿಗೆ ಬಂತು?
ಇನ್ನೂ ಸ್ನೇಹಾ ಆಗಿ ಸಂಜನಾ ಬುರ್ಲಿ ಬಹಳ ಅದ್ಭುತವಾಗಿ ನಟನೆ ಮಾಡುತ್ತಿದ್ದಾರೆ. ರಾಧಾ ಕಿತಾಪತಿಯಿಂದ ಬಂಗಾರಮ್ಮ ಹಾಗೂ ರಾಧಾ ದೂರ ಆಗುತ್ತಿದ್ದಾರೆ. ರಾಧಾಗೆ ಏನು ಅನಿಸಿದೆಯೋ ಅದನ್ನು ಪಟ್ಟ ಎಂದು ಹೇಳಿ ಬಿಡುತ್ತಾಳೆ. ಹಾಗೆಯೇ ಕಂಠಿಯನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಇರುತ್ತಾಳೆ.


Click it and Unblock the Notifications











