ನಿಜ ವಿಚಾರ ಬಿಚ್ಚಿಟ್ಟ ನಂಜಮ್ಮ; ಮಗುವಿನ ಬಗ್ಗೆ ಬೆಟ್ಟದಷ್ಟು ಕನಸು ಕಂಡ ಕಂಠಿ ಸ್ನೇಹಾಳನ್ನು ಕ್ಷಮಿಸುತ್ತಾನಾ?
ಪುಟ್ಟಕ್ಕನಿಗೆ ಮಗಳು ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಬಹಳ ಖುಷಿಯಾಗುತ್ತದೆ. ಹಾಗೆಯೇ ತನ್ನ ಮಗಳಿಗೆ ಏನಾದರೂ ಮಾಡಿಕೊಂಡು ಹೋಗಿ ಕೊಡಬೇಕು ಅಂದುಕೊಳ್ಳುತ್ತಾಳೆ. ಮಗಳು ಸ್ನೇಹಾಗೆ ಏನೇನೆಲ್ಲ ಇಷ್ಟ ಅದೆಲ್ಲವನ್ನೂ ಪುಟ್ಟಕ್ಕ ಮಾಡುತ್ತಾಳೆ. ಪುಟ್ಟಕ್ಕನಿಗೆ ಗೋಪಾಲ ಕೂಡ ಸಹಾಯ ಮಾಡುತ್ತಾನೆ. ಸುಮಾಗೆ ಹೋಳಿಗೆ ಅಂದರೆ ಬಹಳ ಇಷ್ಟ. ಹೋಳಿಗೆ ಮಾಡುತ್ತಿರುವ ಪರಿಮಳ ಮೂಗಿಗೆ ಬಡಿಯುತ್ತ ಇರುವಾಗಲೇ ಸುಮಾ ಮೆತ್ತಗೆ ಮನೆಯ ಒಳಗೆ ಬಂದು ಅಮ್ಮನ ಬಳಿ ಏನೋ ಒಂದು ನೆಪ ಹೇಳಿ ಹೋಳಿಗೆಯನ್ನು ತಿಂದುಕೊಳ್ಳುತ್ತಾಳೆ. ಹಾಗೆಯೇ ತನಗೆ ತಂದೆಯ ಮೇಲೆ ಇರುವ ಅನುಮಾನವನ್ನು ಹೊರಗೆ ಹಾಕುತ್ತಾಳೆ.
ಗೋಪಾಲ ಮಾತ್ರ ಮಗಳು ಏನೇ ಹೇಳಿದರೂ ಸುಮ್ಮನೆ ಆಗುತ್ತಾನೆ. ಯಾಕೆಂದರೆ, ಅಷ್ಟು ಅವಮಾನವನ್ನು ತನ್ನಿಂದ ಇವರು ಅನುಭವಿಸಿದ್ದಾರೆ. ಆ ನೋವು ನನ್ನ ಮಕ್ಕಳಲ್ಲಿ ಇದೆ ಎನ್ನುವುದು ಗೋಪಾಲನಿಗೆ ತಿಳಿದಿದೆ. ಇತ್ತ ಬಂಗಾರಮ್ಮನ ಮನೆಯಲ್ಲಿ ಇರುವ ರಾಧಾ ಹಾಗೂ ಶಶಿಕಲಾ ಆಕೆಯ ಕುಟುಂಬವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಂಜಮ್ಮಗೆ ನೇರವಾಗಿ ಕರೆ ಮಾಡಿದ ಶಶಿಕಲಾ ಹಾಗೂ ರಾಧಾ ಮಾತು ಶುರು ಮಾಡುತ್ತಾರೆ. ನಂಜಮ್ಮಗೆ ತನ್ನ ಸೊಸೆ ಗರ್ಭಿಣಿ ಆಗಿರುವುದು ತಿಳಿದು ಬಹಳ ಶಾಕ್ ಆಗುತ್ತದೆ. ನನ್ನ ಸೊಸೆ ಎಷ್ಟು ಚಾಲಾಕಿ ಇದ್ದಾಳೆ ಎಂದು ಕೊಳ್ಳುತ್ತಾಳೆ.

ನನಗೆ ತಿಳಿಯದೇ ಇಷ್ಟೆಲ್ಲ ಕಳ್ಳಾಟ ಆಡಿದ್ದಾರೆ. ಇದನ್ನೆಲ್ಲ ಬಯಲಿಗೆ ಎಳೆಯಬೇಕು ಎಂದು ರಾಧಾ ಬಳಿ ಹೇಳಿ ಬಹಳ ಕೋಪದಿಂದ ಕರೆ ಕಟ್ ಮಾಡುತ್ತಾಳೆ. ಇದನ್ನು ನೋಡಿದ ರಾಧಾ ಬಹಳ ಖುಷಿ ಪಟ್ಟುಕೊಳ್ಳುತ್ತಾಳೆ. ಇನ್ನು ನಂಜಮ್ಮ ಹಾಗೂ ಚಂದ್ರು ಬಂಗಾರಮ್ಮನ ಮನೆಗೆ ಬರುತ್ತಾರೆ. ಆ ವೇಳೆ ಅಲ್ಲಿಗೆ ಬಂದ ಚಂದ್ರು ಮೆತ್ತಗೆ ಹೆಂಡತಿಯತ್ತ ನೋಡಿ "ಹೇಗಿದ್ದೀಯಾ.. ವಸು" ಎಂದು ಕೇಳಿದಾಗ, ವಸು ಆರಾಮಾಗಿರುವುದಾಗಿ ಹೇಳುತ್ತಾರೆ. ಇನ್ನು ಬಂಗಾರಮ್ಮ ಮಾತ್ರ ನಂಜಮ್ಮನನ್ನು ನೋಡಿ ಬಹಳ ಕೋಪ ಮಾಡಿಕೊಳ್ಳುತ್ತಾಳೆ. ಯಾಕಾದರೂ ಈ ನಂಜಮ್ಮನನ್ನು ಮನೆಗೆ ಕರೆದುಕೊಂಡು ಬಂದನೋ ಎಂದು ಯೋಚನೆ ಮಾಡುತ್ತಾಳೆ.
ನಂಜಮ್ಮನನ್ನು ನೋಡಿ ಕೋಪಗೊಂಡ ಬಂಗಾರಮ್ಮ
ಹಾಗೆಯೇ ಬಂಗಾರಮ್ಮ, ಚಂದ್ರು ಬಳಿ ಹೇಳುತ್ತಾಳೆ. "ಚಂದ್ರು ನೀವು ಬಂದಿರುವುದು ನನಗೆ ಬಹಳ ಖುಷಿ ನೀಡಿದೆ.. ಆದರೆ, ನಿಮ್ಮ ಜೊತೆ ಬೇರೆಯವರನ್ನು ಕರೆದುಕೊಂಡು ಬಂದಿರುವುದು ನನಗೆ ಅದ್ಯಾಕೋ ಸರಿ ಎನಿಸುತ್ತಿಲ್ಲ." ಎಂದು ಹೇಳುತ್ತಾರೆ. ಇದನ್ನು ಕೇಳಿದ ನಂಜಮ್ಮ ಮಾತ್ರ ಬಂಗಾರಮ್ಮನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲ ಕೇಳಿದ ಮಾದೇಗೌಡರು ಕುಳಿತು ಮಾತನಾಡಲು ಹೇಳುತ್ತಾರೆ. ಆದರೆ, ನಂಜಮ್ಮ ಮಾತ್ರ ಬಂಗಾರಮ್ಮನ ಮನೆಗೆ ಬಂದಿರುವ ಪುಟ್ಟಕ್ಕ ಬಳಿ ಮಾತನಾಡುತ್ತಾಳೆ. ಹಾಗೆಯೇ ಸ್ನೇಹಾ ಸುಳ್ಳು ಹೇಳುತ್ತಾಳೆಂಬ ಆರೋಪ ಮಾಡುತ್ತಾಳೆ.
ನಂಜಮ್ಮನ ಮಾತು ಕೇಳಿ ಸ್ನೇಹಾ ಕಸಿವಿಸಿ
ಇದನ್ನು ಕೇಳಿದ ವಸು ಮನದಲ್ಲಿ ನಡುಕ ಶುರುವಾಗುತ್ತೆ. ಇನ್ನು ಪುಟ್ಟಕ್ಕ, ನಂಜಮ್ಮ ಬಳಿ ಮೆತ್ತಗೆ ಹೇಳುತ್ತಾಳೆ. "ನಂಜಮ್ಮ ಇದೀಗ ಗಲಾಟೆ ಎಲ್ಲಾ ಯಾಕೆ.. ನಾವೆಲ್ಲ ಸಂಭ್ರಮದಲ್ಲಿ ಇದ್ದೇವೆ" ಎಂದಾಗ ನಂಜಮ್ಮ ಕೊಂಚ ಜೋರಾಗಿ ಹೇಳುತ್ತಾಳೆ. "ಪುಟ್ಟಕ್ಕ ಗರ್ಭಿಣಿ ಆಗಿರುವುದು ನಿನ್ನ ಮಗಳಲ್ಲ.. ಬಂಗಾರಮ್ಮನ ಮಗಳು" ಎಂದಾಗ ಬಂಗಾರಮ್ಮನಿಗೆ ಶಾಕ್ ಆಗುತ್ತದೆ. ಹಾಗೆಯೇ ವಸುಗೆ ಮಾತ್ರ ಕೈ ಕಾಲು ಆಡುವುದಿಲ್ಲ. ಬಂಗಾರಮ್ಮ ವಸು ಬಳಿ ಕೇಳುವ ಮೊದಲೇ ಈ ನಂಜಮ್ಮ ಮಧ್ಯೆ ಬಾಯಿ ಹಾಕಿ ತಪ್ಪು ಮಾಡುತ್ತಾಳೆ.

ಶಶಿಕಲಾ.. ರಾಧಾಗೆ ಸಖತ್ ಖುಷಿ
ಇದನ್ನೆಲ್ಲ ನೋಡಿದ ಮಾದೇಗೌಡರು ನಂಜಮ್ಮನತ್ತ ಧುಮ್ಮಿಕ್ಕಿ ಬರುತ್ತಾರೆ. ನಂಜಮ್ಮನ ಹತ್ತಿರ ಬಂದ ಮಾದೇಗೌಡರು ಹೇಳುತ್ತಾರೆ. ನನ್ನ ಮಗಳ ಬಗ್ಗೆ ನೀವು ಏನು ತಿಳಿದುಕೊಂಡು ಇದ್ದೀರಾ? ನೀವು ಹೇಳುತ್ತಿರುವುದು ಸರಿಯಲ್ಲ. ನಾವು ಸ್ನೇಹಾ ಗರ್ಭಿಣಿ ಆಗಿರುವ ವಿಚಾರದಲ್ಲಿ ಬಹಳ ಖುಷಿಯಾಗಿ ಇದ್ದೇವೆ. ಅದನ್ನು ಹಾಳು ಮಾಡಬೇಡ ಎಂದು ಮಾದೇಗೌಡರು ಹೇಳುತ್ತಾರೆ. ಪುಟ್ಟಕ್ಕ ಕೂಡ ನಂಜಮ್ಮನ ಬಳಿ ಅದನ್ನೇ ಬೇಡಿಕೊಳ್ಳುತ್ತಾರೆ. ನಂಜಮ್ಮ ಮಾತ್ರ ಬಸಿರು ಆಗಿರುವುದು ವಸು ಎಂದು ಖಡಾ ಖಂಡಿತವಾಗಿ ಹೇಳಿದಾಗ ಮಾತ್ರ ಚಂದ್ರು ಏನು ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಇನ್ನೂ ಚಂದ್ರು ಮುಂದಿನ ನಿರ್ಧಾರವೇನು?


Click it and Unblock the Notifications











