Puttakkana Makkalu:ರಾಜಿ ಸೇಡಿನಾಟ ಪುಟ್ಟಕ್ಕನ ಮುಂದೆ ಬಯಲು; ಸ್ನೇಹಾ ಹೆಸರು ಕೆಡಿಸಲು ಹುನ್ನಾರ
ರಾಜಿ ಅಂದುಕೊಂಡ ಹಾಗೆ ಎಲ್ಲವೂ ನಡೆಯುತ್ತಿದೆ. ರಾಜೇಶ್ವರಿಗೆ ಪುಟ್ಟಕ್ಕನ ಮನೆಯವರು ನೆಮ್ಮದಿಯಾಗಿರುವುದು ಸ್ವಲ್ಪವೂ ಇಷ್ಟವಿಲ್ಲ. ಯಾವತ್ತೂ ನೋಡಿದರೂ ಪುಟ್ಟಕ್ಕನ ಆಸ್ತಿ, ಮೆಸ್ ಮೇಲೆ ಕಣ್ಣು. ಪುಟ್ಟಕ್ಕ ಬಡವಿ ಸಾಧ್ವಿ. ಎಲ್ಲರನ್ನೂ ಬಹಳ ಬೇಗ ನಂಬಿ ಬಿಡುತ್ತಾಳೆ. ಇದೀಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ಮೇಲೆ ಆಪಾಧನೆಗಳ ಮೇಲೆ ಆಪಾಧನೆ ಮಾಡಲಾಗುತ್ತಿದೆ. ಪುಟ್ಟಕ್ಕಗೆ ತನ್ನ ಮಗಳು ಸ್ನೇಹಾ ಎಂದರೆ ಬಹಳ ಪ್ರೀತಿ. ಆದರೆ ಸ್ನೇಹಾ ಸತ್ತ ಮೇಲೆ ಕೂಡ ಆಕೆಯ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ.
ರಾಜಿ ಸ್ನೇಹಾಳನ್ನು ಕಂಡರೆ ನಡುಗಿ ಓಡಿ ಹೋಗುತ್ತಿದ್ದಳು. ಇದೀಗ ರಾಜೇಶ್ವರಿಗೆ ಯಾರ ಭಯವೂ ಕೂಡ ಇಲ್ಲ. ಸ್ನೇಹಾ ಸತ್ತು ಹೋಗಿದ್ದಾಳೆ. ಇನ್ನೇನು ಪುಟ್ಟಕ್ಕನನ್ನು ಯಾಮಾರಿಸುವುದು ಸುಲಭ ಎಂದುಕೊಂಡಿದ್ದರು. ಆದರೆ ಸ್ನೇಹಾ ಹೆಸರಲ್ಲಿದ್ದ ಇನ್ಸೂರೆನ್ಸ್ ಯಾವಾಗ ಬರಲಿಲ್ಲವೋ ಅವತ್ತಿಂದ ಪುಟ್ಟಕ್ಕನಿಗೆ ಬಹಳ ಟೆನ್ಶನ್ ಆಗುತ್ತೆ. ಏಕೆಂದರೆ ಪುಟ್ಟ ಹಣವನ್ನು ದಾನ ಮಾಡಿರುತ್ತಾಳೆ. ಬಡ ಮಕ್ಕಳು ಸ್ನೇಹಾ ಹೆಸರು ಹೇಳಿಕೊಂಡು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯಲಿ ಎಂದು ಅವರಿಗೆ ನೀಡಿರುತ್ತಾಳೆ. ಆದರೆ, ಆ ಹಣ ಅವರಿಗೆ ಇದೀಗ ಸಿಗುತ್ತಿಲ್ಲ. ರಾಜಿ ಷಡ್ಯಂತ್ರದಿಂದಾಗಿ ಹಣ ಸಿಗುವುದು ರದ್ದಾಗಿದೆ.

ಇನ್ಸೂರೆನ್ಸ್ ಕಂಪನಿಯವರು ಬಂದು ಪುಟ್ಟಕ್ಕನ ಬಳಿ ಆ ಇನ್ಸೂರೆನ್ಸ್ ಬರಲು ಇನ್ನಷ್ಟು ದಾಖಲಾತಿಗಳು ಬೇಕು ಎಂದು ಕೇಳಿದ್ದಾರೆ. ಆದರೆ, ಈ ಮಾತುಗಳನ್ನು ಕೇಳಿದ ಪುಟ್ಟಕ್ಕನಿಗೆ ಏನು ಮಾಡಬೇಕೆಂದು ದಿಕ್ಕೇ ತೋಚುವುದಿಲ್ಲ. ಅಷ್ಟರಲ್ಲಿ ಎಲ್ಲಿಗೆ ಬಂದ ರಾಜೇಶ್ವರಿ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ ಆಗುತ್ತಾ ಎಂದು ನೋಡುತ್ತಾಳೆ. ಹಾಗೆಯೇ ನಾನು ಹಣವನ್ನು ಕೊಡುತ್ತೇನೆ. 25 ಲಕ್ಷ ಹಣವನ್ನು ನಿನಗೆ ನಾನು ಕೊಡುತ್ತೇನೆ. ಆದರೆ ನನ್ನ ಹೆಸರಿನಲ್ಲಿ ನಿನ್ನ ಮೆಸ್ ಹಾಗೂ ಮನೆಯನ್ನು ಬರೆದುಕೊಡಬೇಕು ಎಂದು ಹೇಳುತ್ತಾಳೆ. ರಾಜಿಯ ಈ ಮಾತು ಪುಟ್ಟಕ್ಕಗೆ ಶಾಕ್ ಆದರೂ ಕೂಡ ರಾಜಿ ಮಾತಿಗೆ ಅಸ್ತು ಎನ್ನುತ್ತಾಳೆ. ರಾಜಿ ಕೊಟ್ಟ ಪೇಪರ್ಸ್ ಮೇಲೆ ಸಹಿ ಹಾಕಲು ಸಿದ್ಧವಾಗುತ್ತಾಳೆ.
ಅಮ್ಮನಿಗೆ ಬುದ್ದಿ ಹೇಳಿದ ಸುಮಾ
ಅಷ್ಟೊತ್ತಿಗೆ ಅಲ್ಲಿಗೆ ಸಹನಾ, ಸುಮಾ ಹಾಗೂ ಗೋಪಾಲ ಬರುತ್ತಾರೆ. ತನ್ನ ತಾಯಿ ಯಾವ ಪೇಪರ್‌ಗೆ ಸಹಿ ಹಾಕಿದ್ದಾರೆಂದು ಬಹಳ ದೊಡ್ಡ ಚಿಂತೆ ಕಾಡುತ್ತದೆ. ಯಾಕೆಂದರೆ ನನ್ನ ತಾಯಿ ಇಂತಹ ಪೇಪರ್‌ಗೆ ಸಹಿ ಹಾಕಿದರೆ ಖಂಡಿತವಾಗಿಯೂ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವುದು ತಿಳಿದಿರುತ್ತದೆ. ಆದ ಕಾರಣ ಸುಮಾ ತನ್ನ ತಾಯಿ ಕೈಯಲ್ಲಿದ್ದ ಪೇಪರ್ ಅನ್ನು ಓದುತ್ತಾಳೆ. ಆ ಪೇಪರ್ ಓದಿದ ಕೂಡಲೇ ಆಕೆಗೆ ಯೋಚನೆಗಳು ಬರುತ್ತವೆ. ಯಾಕೆ ಹೀಗೆಲ್ಲ ಅಮ್ಮ ಓದದೇ ಪತ್ರಕ್ಕೇ ಸಹಿ ಹಾಕುವುದು. ಹಾಗೆಲ್ಲ ಮಾಡಲು ನಾನು ಬಿಡುವುದು ಇಲ್ಲ ಎಂದು ಹೇಳಿ ತನ್ನ ತಾಯಿಗೆ ಸಖತ್ತಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ.

ರಾಜಿ ಆಟಕ್ಕೆ ಬ್ರೇಕ್ ಹಾಕುತ್ತಾನಾ ಕಂಠಿ?
ಅಮ್ಮ ನೀನು ಯಾಕೆ ಈ ರೀತಿ ಮಾಡುತ್ತಿಯೋ ನನಗೆ ತಿಳಿಯುತ್ತಿಲ್ಲ. ಈ ರಾಜಿ ನಿನ್ನ ಮೆಸ್ ಹಾಗೂ ಮನೆಯನ್ನು ಆಕೆಯ ಹೆಸರಿಗೆ ಬರೆಸಿಕೊಂಡಿದ್ದಾಳೆ ಎನ್ನುವುದು ನನಗೆ ತಿಳಿದಿದೆ. ಆದರೆ ನೀನು ಓದದೇ ಹೀಗೆಲ್ಲ ಪತ್ರಕ್ಕೆ ಸಹಿ ಹಾಕುವುದು ಸರಿಯಲ್ಲ ಎಂದು ಪತ್ರವನ್ನು ಹರಿದು ಹಾಕುತ್ತಾಳೆ. ಆಗಲೇ ಸುಮಗೆ ತನ್ನ ತಾಯಿ 25 ಲಕ್ಷ ಹಣಕ್ಕೋಸ್ಕರ ತನ್ನ ಮೆಸ್ ಹಾಗೂ ಮನೆಯನ್ನು ರಾಜಿ ಹೆಸರಿಗೆ ಮಾಡಲು ಹೊರಟಿದ್ದಾಳೆ ಎನ್ನುವುದು ತಿಳಿಯುತ್ತೆ. ಆಗ ಗೋಪಾಲನಿಗೆ ರಾಜಿಯ ಮೇಲೆ ಬಹಳ ಸಿಟ್ಟು ಬರುತ್ತೆ. ರಾಜಿ ಪುಟ್ಟಕ್ಕನ ಕುಟುಂಬಕ್ಕೆ ಪಾಠ ಕಲಿಸಬೇಕು ಎಂದುಕೊಂಡು ಸ್ನೇಹಾ ಮೇಲೆ ಇಲ್ಲದ ಆಪಾಧನೆ ಹೊರಿಸಿ ಧರಣಿ ನಡೆಸುವಂತೆ ಕೆಲವರನ್ನು ಕಳುಹಿಸುತ್ತಾಳೆ. ಸ್ನೇಹಾ ಎಲ್ಲರಿಗೂ ಮೋಸ ಮಾಡಿದ್ದಾಳೆ ಎಂದು ದೂರುತ್ತಾಳೆ.
ಸ್ನೇಹ ಮೇಲೆ ದೂರು
ರಾಜಿ ಕಳಿಸಿದವರು ಬಡವರ ಹಣವನ್ನು ದೋಚಿದ್ದಾಳೆ ಎಂದು ಘೋಷಣೆ ಕೂಗುತ್ತಾರೆ. ಆಗ ಪುಟ್ಟಕ್ಕಾಗೆ ಬಹಳಷ್ಟು ನೋವಾಗುತ್ತೆ. ಹಾಗೆಯೇ ಬಂಗಾರಮ್ಮನವರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ವಿಚಾರ ಪ್ರತಿಭಟನಾಕಾರರು ಹೇಳಿದಾಗ ಕಂಠಿಗೆ ಬಹಳಷ್ಟು ಸಿಟ್ಟು ಬರುತ್ತೆ. ತನ್ನ ಹೆಂಡತಿ ಹಾಗೂ ತನ್ನ ತಾಯಿಯ ಹೆಸರನ್ನು ಕೆಡಿಸಬೇಕೆಂದು ಯಾರೋ ಹೊಂಚು ಹಾಕುತ್ತಿದ್ದಾರೆ ಎನ್ನುವುದು ಕಂಠಿಗೆ ತಿಳಿಯುತ್ತೆ. ಆದರೆ ಯಾರೆಂದು ಮಾತ್ರ ಗೊತ್ತಾಗದೆ ಬಹಳಷ್ಟು ಅಳುತ್ತಾರೆ. ತನ್ನ ಮಗಳು ಸತ್ತ ಮೇಲೆ ಇಂತಹ ಘಟನೆಗಳು ನಡೆಯುತ್ತಿದೆಯಲ್ಲ. ಆಕೆ ಹೆಸರನ್ನು ಕೆಡಿಸುವಂತಹ ಘಟನೆ ನಡೆಯುತ್ತಿದೆ ಎಂದು ಬಹಳಷ್ಟು ಬೇಸರ ವ್ಯಕ್ತಪಡಿಸುತ್ತಾಳೆ. ರಾಜಿ ಮಾಡುವ ಕೆಟ್ಟ ಕೆಲಸಗಳು ಪುಟ್ಟಕ್ಕನ ಮನೆ ಮನಸುಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ಮುಂದೇನು ನೋಡೋಣ.


Click it and Unblock the Notifications











