ಹಳೆ ವಿಚಾರ ಕೆದಕಿ ರಾಧಾ ಬೆವರಿಳಿಸಿದ ಸ್ನೇಹಾ; ಕಂಠಿ ಮುನಿಸು ಕರಗುವುದೆಂದು?

By ಪೂರ್ವ

ಪುಟ್ಟಕ್ಕ ಮಾತ್ರ ವಸು ಹಾಗೂ ಚಂದ್ರುವನ್ನೂ ಬಹಳ ಖುಷಿಯಾಗಿ ನೋಡಿಕೊಂಡಿರುತ್ತಾರೆ. ಆಕೆಗೆ ಸ್ನೇಹಾ ಸುಳ್ಳು ಹೇಳಿದ್ದರ ಬಗ್ಗೆ ಬಹಳ ನೋವು ಇದೆ. ಆದರೆ, ವಸು ಗರ್ಭಿಣಿ ಆಗಿರುವುದು ಮತ್ತಷ್ಟು ಖುಷಿ ನೀಡಿರುವುದು ಸತ್ಯ. ವಸು ಮಾತು ಕೇಳಿ ಸುಳ್ಳು ಹೇಳಿದ ಸ್ನೇಹಾ, ಇದೀಗ ಗಂಡನಿಂದ ಕೂಡ ಕೊಂಚ ದೂರ ಉಳಿದುಕೊಳ್ಳಬೇಕಾಗಿದೆ. ಕಂಠಿಗೆ ಸ್ನೇಹಾ ಕಂಡರೆ ಬಹಳ ಇಷ್ಟ . ಆದರೆ, ಅದನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ಆತ ಇಲ್ಲ. ಯಾಕೆಂದ್ರೆ ಸ್ನೇಹಾ ಈಗಾಗಲೇ ಕಂಠಿ ಜೊತೆ ಸುಳ್ಳು ಹೇಳಿರುವುದು ಆತನಿಗೆ ಆಘಾತ ತಂದಿದೆ.

ತನ್ನ ಮಗುವಿಗಾಗಿ ತಂದಿದ್ದ ಆಟಿಕೆಗಳನ್ನು ಗಂಟು ಮೂಟೆ ಕಟ್ಟಿ ಮನೆಯಿಂದ ಹೊರಗಡೆ ತೆಗೆದುಕೊಂಡು ಕಂಠಿ ಹೋಗಿದ್ದಾನೆ. ಪ್ರೇಮಿಗಳ ದಿನ ಕಂಠಿಗೆ ವಿಶ್ ಮಾಡಿದರೆ ಸ್ವಲ್ಪವಾದರೂ ಕಂಠಿಗೆ ಸಮಾಧಾನ ಆಗಬಹುದು ಎನ್ನುವ ನಿಟ್ಟಿನಲ್ಲಿ ಮೆತ್ತಗೆ ಕಂಠಿ ಬಳಿ ಬಂದು "ಹ್ಯಾಪಿ ವ್ಯಾಲೆಂಟೈನ್ಸ್ ಡೇ.." ಎಂದಾಗ ಕಂಠಿಗೆ ಅರ್ಥ ಆಗುವುದು ಇಲ್ಲ. ಡೇ ಅಂದರೆ ಏನು ಎಂದಾಗ ಸ್ನೇಹಾಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತೆ. ಕಂಠಿ ತರಾತುರಿಯಲ್ಲಿ ಹೋರಾಡುತ್ತಿರುವಾಗ ಸ್ನೇಹಾ ಮೆತ್ತಗೆ ಕಂಠಿಗೆ "ನೀವು ಸಂಜೆ ಬರುವಾಗ ಎಷ್ಟು ಹೊತ್ತು ಆಗುತ್ತದೆ" ಎಂದು ಕೇಳುತ್ತಾಳೆ.

Puttakkana Makkalu serial February 16th Episode Update

ಇದನ್ನು ಕೇಳಿದ ಕಂಠಿ ಕೊಂಚ ಜೋರು ಧ್ವನಿಯಲ್ಲಿ "ಗೊತ್ತಿಲ್ಲ" ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇತ್ತ ಶಶಿಕಲಾ ಮಹಡಿ ಮೇಲೆ ಹತ್ತಿಕೊಂಡು ಬರಬೇಕಾದರೆ ಕಂಠಿ ಮೇಲಿಂದ ಕೆಳಗೆ ಬರುತ್ತಾ ಇರುತ್ತಾನೆ. ಆ ಕೂಡಲೇ ಶಶಿಕಲಾ , "ಯಾಕಪ್ಪಾ ಕಂಠಿ ಇವತ್ತು ತಿಂಡಿ ಮಾಡಿಲ್ಲ.. ಹೆಂಡತಿ ಮೇಲಿನ ಕೋಪವನ್ನು ತಿಂಡಿ ಮೇಲೆ ತೋರಿಸುತ್ತಾ ಇದ್ದೀಯಾ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ಮಾತ್ರ "ಹಾಗೇನಿಲ್ಲ ಅತ್ತೆ.. ಹೊಟ್ಟೆ ಹಸಿವಿಲ್ಲ" ಎನ್ನುವಾಗ ಸ್ನೇಹಾ ಮಹಡಿ ಮೇಲಿನಿಂದ ಕಂಠಿಯನ್ನು ನೋಡುತ್ತಿರುತ್ತಾಳೆ. ಆ ವೇಳೆ ರಾಧಾ ಹಾರ್ಟ್ ಸಿಂಬಲ್‌ನಲ್ಲಿ ರಂಗೋಲಿ ಬಿಡಿಸುತ್ತಾ ಇರುತ್ತಾಳೆ. ಆ ರಂಗೋಲಿ ಮೇಲೆ ಕಂಠಿ ಗೊತ್ತಿಲ್ಲದೆ ಕಾಲು ಇರುತ್ತಾನೆ. ಇದನ್ನು ನೋಡಿದ ರಾಧಾ ಚಿಕ್ಕ ಮಕ್ಕಳ ಹಾಗೆ ರಂಪಾಟ ಮಾಡುತ್ತಾಳೆ. ಹಾಗೆ ಜೋರಾಗಿ ನಗುತ್ತಾಳೆ.

ರಾಧಾ ಮಾತಿಗೆ ಆತಂಕಗೊಂಡ ಕಂಠಿ

ಇನ್ನೂ ರಾಧಾ ಮಾತಿಗೆ ಕಂಠಿ ಇನ್ನಷ್ಟು ಕೋಪ ಬರುತ್ತದೆ. ಇತ್ತ ಕಂಠಿಯ ಜೊತೆ ಚಂದ್ರು ಮಾತನಾಡುತ್ತಾನೆ. ಹಾಗೆಯೇ ಸ್ನೇಹಾ ಮಾಡಿರುವ ಸಹಾಯವನ್ನು ನೆನಪಿಸಿಕೊಳ್ಳುತ್ತಾನೆ. ಇನ್ನು ರಾಧಾ ಹಾಗೂ ಶಶಿಕಲಾ ಮೆತ್ತಗೆ ಹೇಗಾದರೂ ಮಾಡಿ ಕಂಠಿ ಹಾಗೂ ಸ್ನೇಹಾಳನ್ನು ದೂರ ಮಾಡಲು ಇದೆ ಸಮಯ ಎಂದು ಹೊಂಚು ಹಾಕುತ್ತಾ ಇರುತ್ತಾರೆ. ಇತ್ತ ಸ್ನೇಹಾ ಮಾತ್ರ ಒಬ್ಬಳೇ ಕುಳಿತು ಯೋಚನೆ ಮಾಡುತ್ತಾ ಇರುತ್ತಾಳೆ.

ರಾಧಾ ಮುಖವಾಡ ಸ್ನೇಹಾ ಎದುರು ಬಯಲಾಗುತ್ತಾ?

ವಸು ಅತ್ತಿಗೆ ಗರ್ಭಿಣಿ ಆಗಿರುವುದು ನನಗೆ ಹಾಗೂ ವಸು ಅತ್ತಿಗೆಗೆ ಮಾತ್ರ ಗೊತ್ತಿದ್ದದ್ದು. ಅದಾದ ಬಳಿಕ ರಾಧಾ ಹಾಗೂ ಶಶಿಕಲಾ ಅವರಿಗೆ ಕೂಡ ವಿಚಾರ ತಿಳಿಯಿತು. ಈ ವಿಚಾರ ನಂಜಮ್ಮಗೆ ಯಾರು ಹೇಳಿರಬಹುದು ಎಂದು ಸ್ನೇಹಾ ಯೋಚನೆ ಮಾಡುತ್ತಾ ಇರುತ್ತಾಳೆ. ನಂಜಮ್ಮಗೆ , ರಾಧಾ ಹಾಗೂ ಶಶಿಕಲಾ ವಿಷಯ ಮುಟ್ಟಿಸಿದ್ದಾರೆಯೆ ಎಂದು ಅನುಮಾನಗೊಂಡು ರಾಧಾ ಬಳಿ ನೇರವಾಗಿ ಸ್ನೇಹಾ ಬಂದಿದ್ದಾಳೆ. ರಾಧಾ ಬಳಿ ಕೇಳುತ್ತಾಳೆ "ನಾನು ನಿಮಗೆ ನೇರವಾಗಿ ಪ್ರಶ್ನೆ ಕೇಳುತ್ತೇನೆ. ನನ್ನ ಪ್ರಶ್ನೆಗೆ ನೇರವಾದ ಉತ್ತರ ನೀವು ಕೊಡಬೇಕು" ಎಂದು ಹೇಳಿ ನಂಜಮ್ಮಗೆ ವಿಚಾರ ಹೇಗೆ ತಿಳಿಯಿತು ಎನ್ನುವ ಟಾಪಿಕ್ ಮಾತನಾಡಿದಾಗ ರಾಧಾಗೆ ಮಾತ್ರ ಸಖತ್ ಟೆನ್ಶನ್ ಆಗುತ್ತದೆ.

Puttakkana Makkalu serial February 16th Episode Update

ಪುರುಷೋತ್ತಮನ ಜೀವದ ಗೆಳತಿಯ ಮೋಸದಾಟ

ಪುರುಷೋತ್ತಮ ಆತನ ಜೀವದ ಗೆಳತಿಗೆ ಪ್ರಪೋಸ್ ಮಾಡುತ್ತಾನೆ. ಆದರೆ, ಪುರುಷೋತ್ತಮನ ಗೆಳತಿಯನ್ನು ಕಂಡರೆ ಸುಮಾಗೆ ಆಗುವುದು ಇಲ್ಲ. ಯಾಕೆಂದರೆ, ಆಕೆ ಬಹಳ ದೊಡ್ಡ ದುರಹಂಕಾರಿ. ಮೋಸಗಾತಿ, ಸುಳ್ಳುಗಾತಿ, ಪುರುಷೋತ್ತಮ ಆತನ ಗರ್ಲ್ ಫ್ರೆಂಡ್‌ಗೆ ಪ್ರಪೋಸ್ ಮಾಡುತ್ತಾ ಇರುವಾಗ ಆತನ ಹುಡುಗಿ ಯೋಚನೆ ಮಾಡುತ್ತಾಳೆ. ಇದೇನಪ್ಪಾ ಹೂವ ಮಾತ್ರ ತಂದಿದ್ದಾನೆ. ನನಗಾಗಿ ಏನು ಮಾಡಿಲ್ಲವಲ್ಲ. ಏನಾದರೂ, ಗಿಫ್ಟ್ ಆದರೂ ಕೊಡಬಹುದಾ ಎಂದು ಯೋಚನೆ ಮಾಡುತ್ತಾ ಇರುವಾಗ ಆತ ಮೊಬೈಲ್ ಗಿಫ್ಟ್ ಕೊಡುತ್ತಾನೆ. ಇದನ್ನು ನೋಡಿದ ಆತನ ಗರ್ಲ್ ಫ್ರೆಂಡ್ ಮತ್ತಷ್ಟು ಖುಷಿ ಆಗುತ್ತದೆ.

More from Filmibeat

English summary
Puttakkana Makkalu serial February 16th Episode Update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X