ಮಗಳಿಗೆ ನ್ಯಾಯ ಕೊಡಿಸಲು ಬೆಂಗಳೂರಿಗೆ ಹೋರಾಟ ಪುಟ್ಟಕ್ಕ? ದಿಟ್ಟ ನಿರ್ಧಾರಕ್ಕೆ ಏನಂದ್ರು ಮಕ್ಕಳು?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಮೊದಲು ಸ್ನೇಹಾ ಪಾತ್ರಧಾರಿಯಾಗಿದ್ದ ಸಂಜನಾ ಬರ್ಲಿ ಧಾರಾವಾಹಿಯಿಂದ ಹೊರ ನಡೆದಿದ್ದರು. ಅಲ್ಲಿಂದ ಸ್ನೇಹಾ ಪಾತ್ರ ಧಾರಾವಾಹಿಯಿಂದ ಕಣ್ಮರೆಯಾಗಿತ್ತು. ಈ ಬೆಳವಣಿಗೆ ಅಭಿಮಾನಿಗಳಿಗೂ ಬೇಸರವಾಗಿತ್ತು. ಸ್ನೇಹಾ ಹಾಗೂ ಕಂಠಿ ಜೋಡಿ ಸಖತ್ ಸೆಟ್ಟಾಗಿತ್ತು. ಆದರೆ ಅದ್ಯಾಕೋ ಅಭಿಮಾನಿಗಳಿಗೆ ಸಂಜನಾ ಬುರ್ಲಿ ಬಹಳಷ್ಟು ಇಷ್ಟ ಆಗಿದ್ದರು. ಬಹಳ ಜನ ನಿರ್ದೇಶಕರನ್ನು, ಕಥೆಗಾರರನ್ನು ಬಯ್ಯುತ್ತಿದ್ದರು. ಆದರೆ, ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ಅಧ್ಯಾಯವನ್ನು ಬರೆಯುವತ್ತ ಮುನ್ನುಡಿ ಹಾಡುತ್ತಿದೆ.

ಪುಟ್ಟಕ್ಕನ ಮಗಳು ಸ್ನೇಹಾ ಸತ್ತು ಹೋಗಿದ್ದಾಳೆ. ಆದರೆ, ಆಕೆಗೆ ಇದೀಗ ಮೋಸಗಾತಿ ಎನ್ನುವ ಪಟ್ಟ ಸಿಕ್ಕಿದೆ. ಪುಟ್ಟಕ್ಕಗೆ ಇದಕ್ಕಿಂತ ಬೇಜಾರು ಬೇರೆ ಯಾವುದು ಇಲ್ಲ. ತನ್ನ ಮಗಳು ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾಳೆ. ಆದರೆ ಆಕೆಯನ್ನು ಹೊಗಳುವುದು ಬಿಟ್ಟು. ಬೇರೆಯವರ ಹುಚ್ಚಾಟಕ್ಕೆ ಆಕೆಯನ್ನು ಬಲಿ ಮಾಡುತ್ತಿದ್ದಾರೆ ಎನ್ನುವುದು ಬೇಸರ ಮೂಡಿಸುತ್ತಿದೆ. ಪುಟ್ಟಕ್ಕ ಆಕೆಯ ಮಕ್ಕಳನ್ನು ಬಹಳ ಕಷ್ಟಪಟ್ಟು ಬೆಳೆಸಿದ್ದಳು. ಮೂವರು ಹೆಣ್ಣು ಮಕ್ಕಳೇ ಆಗಿದ್ದರಿಂದ ಗಂಡ ಬೇರೆ ಮದುವೆಯಾಗಿ ಬಿಡುತ್ತಾನೆ.

Puttakkana Makkalu serial February 18th episode about Puttakka moving to Bengaluru

ಇದರಿಂದ ಪುಟ್ಟಕ್ಕಗೆ ಬದುಕಿನಲ್ಲಿ ಸಾಕಷ್ಟು ನೋವನ್ನು ಅನುಭವಿಸಬೇಕಾಯ್ತು. ಎಲ್ಲವನ್ನೂ ತನ್ನೊಡಲಲ್ಲಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಳು. ಮಕ್ಕಳನ್ನು ಮದುವೆ ಮಾಡಿಕೊಟ್ಟರೂ ಪುಟ್ಟಕ್ಕಗೆ ತೊಂದರೆ ತಪ್ಪಲಿಲ್ಲ. ಒಬ್ಬಳು ಗಂಡ ಬಿಟ್ಟು ಬಂದರೆ ಮತ್ತೊಬ್ಬಳು ಇಹ ಲೋಕ ತ್ಯಜಿಸಿದ್ದಾಳೆ. ಇನ್ನು ಕಿರಿಯವಳು ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇದೀಗ ಸ್ನೇಹಾ ಮೇಲೆ ಬಹಳ ದೊಡ್ಡ ಆಪಾದನೆ ಬಂದಿದೆ. ಆ ಆಪಾದನೆಯನ್ನು ಹೇಗಾದರೂ ಹೊಗಲಾಡಿಸಲೇಬೇಕು ಎಂದು ಪುಟ್ಟಕ್ಕ ಪಣ ತೊಟ್ಟಿದ್ದಾಳೆ.

ಪ್ರತಿಭಟನೆ ಹಾದಿ ಹಿಡಿದ ಪುಟ್ಟಕ್ಕ

ಪುಟ್ಟಕ್ಕ ದಿಟ್ಟ ತನದಿಂದ ಬಂದ ಸವಾಲನ್ನು ಸ್ವೀಕಾರ ಮಾಡುತ್ತಾಳೆ. ಹೇಗಾದರೂ ಸರಿ ಏನಾದರೂ ಸರಿ. ನಾನು ಮಾತ್ರ ಯಾರನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಮಗಳು ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾಳೆ ಹೊರತು ಯಾರಿಗೂ ಕೇಡು ಬಯಸಿದವಳಲ್ಲ. ಆದರೂ ಆಕೆ ಸತ್ತ ಮೇಲೂ ಆಕೆಯ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಐಎಎಸ್ ಆಗಿ ದೇಶದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಸ್ನೇಹಾಗೆ ಅವಮಾನ ಆಗಿದೆ. ಸ್ನೇಹಾ ಸತ್ತ ದಿನ ನನ್ನ ದೇಶದ ಬಾವುಟದ ಬಟ್ಟೆ ಕೊಟ್ಟಿದ್ದರು. ಆದರೆ ಅದನ್ನು ಮತ್ತೆ ಕಸಿದುಕೊಂಡು ಹೋದರು. ಇಷ್ಟೆಲ್ಲ ಆದರೂ ಪ್ರತಿಭಟನೆ ನಿಲ್ಲುತ್ತಿಲ್ಲ ಎಂದುಕೊಂಡ ಪುಟ್ಟಕ್ಕ ತಾನೇ ಹೋರಾಟದ ಹಾದಿ ಹಿಡಿದು ಇದಕ್ಕೆಲ್ಲ ಫುಲ್ ಸ್ಟಾಪ್ ಇಡಲು ಮುಂದಾಗುತ್ತಾಳೆ.

ಅಮ್ಮನ ಮಾತು ಕೇಳಿ ನಿಟ್ಟುಸಿರು ಬಿಟ್ಟ ಮಕ್ಕಳು

ದೇವರ ಮುಂದೆ ನಿಂತು ಪುಟ್ಟಕ್ಕ ಪ್ರತಿಜ್ಞೆ ಮಾಡುತ್ತಾಳೆ. ಸ್ನೇಹಾ ಬಗೆಗಿನ ಕಪ್ಪು ಮಸಿಯನ್ನು ನಾನು ಹೋಗಲಾಡಿಸುತ್ತೇನೆ. ಅಷ್ಟರವರೆಗೆ ನಾನು ಈ ಮನೆಯ ಹೊಸಿಲು ತುಳಿಯಲ್ಲ ಎಂದು ಬಹಳ ಕೋಪದಿಂದ ದುಷ್ಟರನ್ನು ಹೆಡೆಮುರಿ ಕಟ್ಟಲು ನೋಡುತ್ತಿದ್ದಾಳೆ. ಅಮ್ಮನ ಕೋಪವನ್ನು ನೋಡಿ ಮಕ್ಕಳಿಬ್ಬರೂ ಕಂಗಾಲಾಗುತ್ತಾರೆ. ಬಳಿಕ ಪುಟ್ಟಕ್ಕ ಸಹನಾ ಹಾಗೂ ಸುಮಾ ಬಳಿ ಬೇಸರದಿಂದ ಹೇಳುತ್ತಾಳೆ. ನಾವೆಲ್ಲರೂ ಒಟ್ಟಿಗೆ ಪ್ರತಿಭಟನೆ ಮಾಡೋಣ. ನಮ್ಮ ಪ್ರತಿಭಟನೆ ಎಲ್ಲಿಯವರೆಗೂ ಎಂದರೆ ನಮ್ಮ ಸ್ನೇಹಾಗೆ ಜಯ ಸಿಗುವವರೆಗೆ ಎಂದು ಪುಟ್ಟಕ್ಕ ಗಟ್ಟಿಯಾಗಿ ಹೇಳುತ್ತಾಳೆ.

ಬಂಗಾರಮ್ಮನ ಬಳಿ ಓಡೋಡಿ ಬಂದ ಪತ್ರಕರ್ತರು

ತಾಯಿಯ ಮಾತಿನ ಪ್ರಕಾರ ಪ್ರತಿಭಟನೆ ಮಾಡಲು ತೆರಳುತ್ತಾರೆ. ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿದ ವರದಿಗಾರರು ಬಂಗಾರಮ್ಮನ ಬಳಿಗೆ ಬರುತ್ತಾರೆ. ಬಂಗಾರಮ್ಮಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ. ಪುಟ್ಟಕ್ಕ ಮಾತ್ರ ಏನೋ ಒಳಗೊಳಗೇ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ನೀವೇನು ಹೇಳುತ್ತೀರಾ ಎಂದು ಬಂಗಾರಮ್ಮನ ಬಳಿ ಪ್ರಶ್ನೆ ಮಾಡುತ್ತಾರೆ. ಇದರಿಂದ ಪತ್ರಕರ್ತರ ವಿರುದ್ಧ ಬಂಗಾರಮ್ಮ ಕೋಪ ಮಾಡಿಕೊಂಡಿದ್ದಾರೆ.

More from Filmibeat

English summary
Puttakkana Makkalu serial February 18th episode about Puttakka moving to Bengaluru:
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X