ಮತ್ತಷ್ಟು ಹತ್ತಿರವಾದ ಕಂಠಿ-ಸ್ನೇಹಾ: ತೆರೆಮರೆಯಲ್ಲಿ ರೊಮ್ಯಾನ್ಸ್ ನೋಡಿದ ರಾಧಾಗೆ ಹೊಟ್ಟೆ ಉರಿ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ತಂಡದಿಂದ ಅದ್ಭುತವಾಗಿ ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಇನ್ನು ಕಂಠಿ ಹಾಗೂ ಸ್ನೇಹಾ ಮುನಿಸು ಮರೆತು ಒಂದಾಗಿ ಇರುವುದು ರಾಧಾಗೆ ಬಹಳ ಕೋಪ ತರಿಸಿದೆ. ಕಂಠಿ ಹಾಗೂ ಸ್ನೇಹವನ್ನು ಆದಷ್ಟು ಬೇಗ ದೂರ ಮಾಡಬೇಕು. ಅವರಿಬ್ಬರೂ ಒಂದಾಗಿ ಇರಬಾರದು ಎಂದು ರಾಧಾ ಸ್ಕೆಚ್ ಹಾಕಿದ್ದಾಳೆ. ಆದರೆ, ರಾಧಾ ಅಂದುಕೊಂಡಿದ್ದೆ ಒಂದು. ಆದರೆ ಆಗುತ್ತಿರೋದೇ ಇನ್ನೊಂದು. ಕಂಠಿ- ಸ್ನೇಹಾ ವ್ಯಾಲೆಂಟೈನ್ಸ್ ಡೇ ಅನ್ನು ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಿ ಮನೆಗೆ ಬರುತ್ತಾರೆ.
ಆ ವೇಳೆ ರಾಧಾ ಮೆತ್ತಗೆ ಕಿಟಕಿಯಿಂದ ಇಬ್ಬರ ನಡವಳಿಕೆಯನ್ನು ಪತ್ತೆ ಮಾಡುತ್ತಿರುತ್ತಾಳೆ. ಕಂಠಿ ಹಾಗೂ ಸ್ನೇಹಾರನ್ನ ದೂರ ಮಾಡಬೇಕು ಎನ್ನುವುದು ರಾಧಾ ಪ್ಲಾನ್. ಆದರೆ, ಅದ್ಯಾವುದೂ ಸ್ನೇಹಾ ಹಾಗೂ ಕಂಠಿ ಮಧ್ಯೆ ನಡೆಯುವುದು ಇಲ್ಲ. ಶಶಿಕಲಾ ಹಾಗೂ ರಾಧಾ ಅದೆಷ್ಟೇ ಸ್ನೇಹಾಳನ್ನು ಮನೆಯಲ್ಲಿ ಕೆಟ್ಟವಳನ್ನಾಗಿ ಮಾಡಲು ನೋಡಿದರೂ ಆ ಪ್ಲಾನ್ ಎಲ್ಲಾ ಉಲ್ಟಾ ಹೊಡೆಯುತ್ತಿದೆ. ಸ್ನೇಹಾ ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ..

ಆದರೆ ವಸು ಗರ್ಭಿಣಿ ಎನ್ನುವ ವಿಚಾರ ಮಾತ್ರ ನಂಜಮ್ಮಗೆ ಹೇಗೆ ತಿಳಿಯಿತು ಎನ್ನುವ ವಿಚಾರ ಮಾತ್ರ ಸ್ನೇಹಾ ಅನುಮಾನಕ್ಕೆ ಕಾರಣ ಆಗುತ್ತಿದೆ. ಮನೆಗೆ ಬಂದ ಕಂಠಿ ಸ್ನೇಹಾ ಸಖತ್ ರೋಮ್ಯಾಂಟಿಕ್ ಆಗಿ ಇರುತ್ತಾರೆ. ಕಂಠಿ ಮೆತ್ತಗೆ ಹೇಳುತ್ತಾನೆ. ಪ್ರೇಮಿಗಳ ನಡುವೆ ನನ್ನ ಮನಸನ್ನು ನೀವು ಮತ್ತೆ ಕದ್ದು ಬಿಟ್ಟಿದ್ದಿರಾ? ಎಂದಾಗ ಸ್ನೇಹಾ ಮೆತ್ತಗೆ ಹೇಳುತ್ತಾಳೆ ಹೃದಯ ಕದ್ದಿರುವುದು ನಾನಲ್ಲ. ಅದು ನೀವು ಎಂದು ನಗುತ್ತಾ ಹೇಳುತ್ತಾಳೆ ..
ಒಡೆದ ಮನಸ್ಸುಗಳನ್ನು ಒಂದಾಗಿಸಿದ ಪ್ರೇಮಿಗಳ ದಿನ
ಇದನ್ನು ಕೇಳಿಸಿಕೊಂಡ ಕಂಠಿ ಮಾತ್ರ ಏನು ಮಾತನಾಡದೆ ನಸು ನಗುತ್ತಾನೆ. ಹಾಗೆಯೇ ಸ್ನೇಹಾಳನ್ನು ಹತ್ತಿರ ಎಳೆದುಕೊಳ್ಳುತ್ತಾನೆ . ಇದನ್ನು ನೋಡಿದ ಸ್ನೇಹಾ ಮೆತ್ತಗೆ ಹೇಳುತ್ತಾಳೆ. "ಶ್ರೀ ನೀವು ನನ್ನ ಕೈ ಬಿಡಿ" ಎಂದಾಗ ಕಂಠಿ ಮಾತ್ರ ಸ್ನೇಹಾ ಕೈ ಬಿಡದೆ. "ನನ್ನ ಹೆಂಡತಿ ಕೈ ನಾನು ಹಿಡಿದರೆ ತಪ್ಪೇನು" ಎಂದು ಹೇಳುತ್ತಾನೆ. ಆಗ ಸ್ನೇಹಾ ನಿಲ್ಲಿ ನಾನು ನಿಮ್ಮ ಕಿವಿಯಲ್ಲಿ ಏನೋ ಹೇಳಬೇಕು ಎಂದು ಹೇಳಿ ನಾಟಕವಾಡಿ ಸಿಹಿ ಮುತ್ತನ್ನು ಕೊಡುತ್ತಾಳೆ. ಆ ಕೂಡಲೇ ಅಲ್ಲಿಂದ ಓಡಿ ಹೋಗುತ್ತಾಳೆ .

ಕಂಠಿಗೆ ಸಿಹಿ ಮುತ್ತು ನೀಡಿದ ಸ್ನೇಹಾ
ಇದನ್ನೆಲ್ಲ ನೋಡಿದ ರಾಧಾಗೆ ಮಾತ್ರ ಬಹಳ ಕೋಪ ಬರುತ್ತದೆ. ಕಂಠಿ ಹಾಗೂ ಸ್ನೇಹಾ ಯಾವತ್ತೂ ಒಂದಾಗಿ ಇರಬಾರದು ಎಂದು ಆಕೆ ಅಂದುಕೊಂಡು ಇರುತ್ತಾರೆ. ಆದರೆ, ಇದೀಗ ಮತ್ತಷ್ಟು ಹತ್ತಿರ ಆಗಿರುವುದು ರಾಧಾ ಹಾಗೂ ಶಶಿಕಲಾ ಕಣ್ಣು ಕೆಂಪಾಗಿಸಿದೆ. ಇನ್ನು ಸಹನಾ ಹಾಗೂ ಆಕೆಯ ಅತ್ತೆಯ ನಡುವೆ ಸಮರ ನಡೆಯುತ್ತಲೇ ಇದೆ.
ಅತ್ತೆಯ ವಿರುದ್ದ ಸಿಡಿದೆದ್ದ ಸಹನಾ
ಸಹನಾಳನ್ನು ಮನೆಯಿಂದ ದೂರ ಮಾಡಬೇಕು. ವಿನುತಳನ್ನು ಮನೆ ಸೊಸೆಯಾಗಿ ಮಾಡಿಕೊಳ್ಳಬೇಕು ಎನ್ನುವುದು ಕೌಸಲ್ಯ ಆಸೆ. ಆದರೆ, ಈ ವಿಚಾರ ಸಹನಾ ಕಿವಿಗೆ ಬಿದ್ದಿದೆ. ಇದರಿಂದ ಕೌಸಲ್ಯ ವಿರುದ್ದ ತಿರುಗಿ ಬಿದ್ದ ಸಹನಾ ಬಹಳ ಜೋರಾಗಿ ಅತ್ತೆಯ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾಳೆ. ಇದನ್ನೆಲ್ಲ ದೂರದಿಂದ ಕೇಳಿಸಿಕೊಂಡ ಮುರಳಿ, ಸಹನಾಗೆ ಬಹಳ ಜೋರಾಗಿ ಗದರುತ್ತಾರೆ. ಸಹನಾ ಯಾಕೆ ಹೀಗೆ ಮಾತನಾಡುತ್ತಾ ಇದ್ದೀಯಾ ಎಂದು ಕೇಳುತ್ತಾರೆ. ಮುರಳಿ ಮಾತು ಕೇಳಿದ ಸಹನಾ "ನಿಮ್ಮ ತಾಯಿ ವಿನುತಾ ಜೊತೆ ಮದುವೆ ಮಾಡಲು ಹೊರಟಿದ್ದಾರೆ" ಎಂದು ಕೊಂಚ ಜೋರಾಗಿ ಅಳುತ್ತಾ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕೌಸಲ್ಯಾಗೆ ಕೊಂಚ ಶಾಕ್ ಆಗುತ್ತದೆ.


Click it and Unblock the Notifications











