ಕನ್ನಡ ಸೀರಿಯಲ್‌ಗಳು: ಪುಟ್ಟಕ್ಕನ ಮಕ್ಕಳಿಗೆ ಮೊದಲ ಸ್ಥಾನ!
ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳು ಜನಮನ ಗೆದ್ದಿದೆ. ಕೆಲವು ಧಾರಾವಾಹಿಗಳನ್ನು ಬಿಡದೇ ಜನ ನೋಡುತ್ತಾರೆ. ಹಾಗೆ ಹೆಚ್ಚು ಇಷ್ಟ ಪಟ್ಟು ನೋಡುತ್ತಿರುವ ಸೀರಿಯಲ್ ಯಾವುದು ಎನ್ನುವುದು ರೇಟಿಂಗ್ ಮೇಲೆ ಅಳೆಯಲಾಗುತ್ತದೆ. ಸದ್ಯ ಇಡೀ ಕನ್ನಡ ಕಿರುತೆಯಲ್ಲಿ ನಂಬರ್ 1 ಸ್ಥಾನದಲ್ಲಿ ಇರುವ ಧಾರಾವಾಹಿಯ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಸದ್ಯ ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಸದ್ದು ಮಾಡ್ತಿರೋ ಧಾರಾವಾಹಿ ಎಂದರೆ ಅದು 'ಪುಟ್ಟಕ್ಕನ ಮಕ್ಕಳು'.ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಗೆ ಜನರು ಹೆಚ್ಚಿನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಧಾರಾವಾಹಿ ಶುರುವಾದ ಮೊದಲ ವಾರದಿಂದ ಅಧಿಕ ಟಿಆರ್‌ಪಿ ಗಳಿಸಿ ಮೊದಲ ಸ್ಥಾನದಲ್ಲಿಯೇ ಇದೆ. ಶುರುವಾದ ಮೊದಲ ವಾರದಿಂದಲೇ ದಾಖಲೆ ಬರೆಯೋಕೆ ಆರಂಭ ಮಾಡಿದೆ.
ಈ ಪುಟ್ಟಕ್ಕನ ಮಕ್ಕಳ ಜೊತೆಗೆ ಯಾವೆಲ್ಲಾ ಧಾರಾವಾಹಿಗಳು ಜನಪ್ರಿಯ ಲಿಸ್ಟ್‌ನಲ್ಲಿ ಇವೆ. ಯಾವ, ಯಾವ ಧಾರಾವಾಹಿಗಳನ್ನು ಜನ ಇಷ್ಟ ಪಟ್ಟು ನೋಡುತ್ತಾರೆ. ಹಾಗೆ ನೋಡಲು ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ....

ಮೊದಲ ಸ್ಥಾನ ಬಿಟ್ಟು ಕೊಡದ ಪುಟ್ಟಕ್ಕನ ಮಕ್ಕಳು!
ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲಿನಿಂದಲೂ ಮೊದಲ ಸ್ಥಾನವನ್ನೇ ಕಾಯ್ದು ಕೊಂಡು ಬಂದಿದೆ. ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡು ದಾಖಲೆ ಮಾಡಿದೆ. ಮಾಹಿತಿ ಪ್ರಕಾರ ಈ ಧಾರಾವಾಹಿ ಒರೊಬ್ಬರಿ 12.8 ಟಿವಿಆರ್ ಪಡೆದುಕೊಂಡಿದೆ ಎಂದು ವರದಿ ಆಗಿದೆ. ಈ ಧಾರಾವಾಹಿಯಲ್ಲಿ ಮೂರು ಮಕ್ಕಳ ತಾಯಿ ಆಗಿ ಕಿರುತೆರೆ ಮೂಲಕ ಮತ್ತೆ ಉಮಾಶ್ರೀ ಅವರು ಕಮ್ಬ್ಯಾಕ್ ಮಾಡಿದ್ದಾರೆ. ಅವರಿಗೂ ಕೂಡ ಮೊದಲ ಹೆಜ್ಜೆಯಲ್ಲೇ ದೊಡ್ಡ ಯಶಸ್ಸು ಸಿಕ್ಕಿದಂತೆ ಆಗಿದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಉಮಾಶ್ರೀ ಜತೆ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅಭಿನಯಿಸಿದ್ದಾರೆ.

3 ತಿರುವುಗಳಲ್ಲಿ ಸಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಒಂದು ಕಡೆ ಸ್ನೇಹ ಕಂಠಿ ಪ್ರೀತಿ, ಮತ್ತೊಂದು ಕಡೆ ಕಂಠಿ ತಾಯಿ, ಪುಟ್ಟಕ್ಕ ಮಾಡುತ್ತಿರುವ ಸರ್ಕಸ್ ಜೊತೆಗೆ ಪುಟ್ಟಕ್ಕನ ಮನೆ ಖಾಲಿ ಮಾಡಿಸಲು ಪತಿ ಮಾಡುತ್ತಿರುವ ತಂತ್ರಗಳು. ಹೀಗೆ ನಾನಾ ರೋಚಕ ತಿರುವುಗಳು ಈ ಧಾರಾವಾಹಿಯಲ್ಲಿ ಒಟ್ಟಿ ಬರುತ್ತಿವೆ. ಹಾಗಾಗಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.

ಗಟ್ಟಿಮೇಳ ಧಾರಾವಾಹಿ ಕೂಡ ಜನಪ್ರಿಯ ಲಿಸ್ಟ್‌ನಲ್ಲಿ ಇವೆ!
ಇನ್ನು ರೇಟಿಂಗ್‌ನಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಳಿಕ ಗಟ್ಟಿಮೇಳ ದ್ವಿತೀಯ ಸ್ಥಾನದಲ್ಲಿ ಇದೆ. ಗಟ್ಟಿಮೇಳ ಧಾರಾವಾಹಿ ಹಲವು ತಿರುವುಗಳಲ್ಲಿ ಸಾಗುತ್ತಿದೆ. ಈ ಸೀರಿಯಲ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರುತ್ತಿವೆ. ಹಾಗಾಗಿ ಜನರಿಗೆ ಈ ಧಾರಾವಾಹಿ ಹತ್ತಿರ ಆಗಿದೆ. ವೇದಾಂತ್ ಮನೆಗೆ ತಾಯಿ ವೈದೇಹಿ ಆಗಮನವಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ವೈದೇಹಿ ಅಮ್ಮನಿಗೆ ಮಕ್ಕಳು ದಿನೇ ದಿನೇ ಹತ್ತಿರವಾಗ್ತಿದ್ದಾರೆ. ವೈದೇಹಿಯೇ ನಿಜವಾದ ತಾಯಿ ಅನ್ನೋ ಸತ್ಯ ತಿಳಿಯದ ಮಕ್ಕಳು ತಾಯಿ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾರೆ. ಹಾಗಾಗಿ ಯಾವ ಸಮಯದಲ್ಲಿ ಬೇಕಾದರೂ ನಿಜ ತಿಳಿಯಬಹುದು. ಅದಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಜನ ಮೆಚ್ಚಿದ ಸೀರಿಯಲ್‌ಗಳಲ್ಲಿ ಸತ್ಯ ಮತ್ತು ಮಂಗಳ ಗೌರಿ!
ಜೀ ಕನ್ನಡದಲ್ಲಿ ಪ್ರಸಾರವಾಗೋ ಸತ್ಯ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಸತ್ಯ ಅಕ್ಕ ಮದುವೆ ತ್ಯಜಿಸುವ ಯೋಚನೆಯಲ್ಲಿ ಇದ್ದಾಳೆ. ಹಾಗಾಗಿ ಸತ್ಯಗೆ ತಾನು ಪ್ರೀತಿಸಿ ಕಾರ್ತಿಕ್ ಸಿಗುವ ಸೂಚನೆಗಳು ದಟ್ಟವಾಗಿವೆ. ಈ ಧಾರಾವಾಹಿಯಲ್ಲಿ ಈ ಮದುವೆಯೇ ಹೆಚ್ಚು ಮುಖ್ಯವಾದ ಹಂತ. ಸತ್ಯ ಧಾರಾವಾಹಿ ಬಳಿಕ ಮುಂದಿನ ಹಂತದಲ್ಲಿ ಇರುವ ಧಾರಾವಾಹಿ ಎಂದರೆ ಅದು ಮಂಗಳ ಗೌರಿ ಮದುವೆ. ಈ ಸೀರಿಯಲ್‌ನ ಟಿಆರ್‌ಪಿ ಮೊದಲಿಗಿಂತೂ ಕಡಿಮೆ ಆಗಿದ್ದು, ಕೊನೆಯ ಸ್ಥಾನ ಪಡೆದುಕೊಂಡಿದೆ ಮಂಗಳಗೌರಿ ಮದುವೆ.


Click it and Unblock the Notifications











