ಕಾಳಿಗೆ ಕಪಾಳಮೋಕ್ಷ ಮಾಡಿದ ಸಹನಾ; ನೇಣಿನ ಕುಣಿಕೆಗೆ ತಲೆಯೊಡ್ಡಿದ ಕಾಳಿ.. ರಾಜಿಗೆ ಆತಂಕ

By ಪೂರ್ವ

ಸಹನಾಗೆ ಕಾಳಿ ಮೇಲೆ ಸಿಕ್ಕಾಪಟ್ಟೆ ವಿಶ್ವಾಸ. ಆದರೆ, ಕಾಳಿಗೆ ಸಹನಾ ಮೇಲೆ ಜೀವಕ್ಕಿಂತ ಹೆಚ್ಚು ಪ್ರೀತಿ. ಸಹನಾ ಇಲ್ಲದೆ ತಾನು ಬದುಕಿರಲು ಸಾಧ್ಯ ಇಲ್ಲ ಎಂದುಕೊಂಡಿರುತ್ತಾನೆ. ಸಹನಾ ಅದೆಷ್ಟೇ ಕಷ್ಟದ ಸಮಯದಲ್ಲಿದ್ದರೂ ಕಾಳಿ ಆಕೆಗೆ ಸಹಾಯ ಮಾಡುತ್ತಿದ್ದ. ದೂರದ ಬೆಂಗಳೂರಿಗೆ ಹೋಗಿದ್ದ ಸಹನಾಗೆ ಕೊನೆಗಾಲದಲ್ಲಿ ಆಸರೆ ಆಗಿದ್ದೇ ಕಾಳಿ. ಹೀಗಾಗಿ ಸಹನಾ ಮನದಲ್ಲಿ ಕಾಳಿಯ ಬಗ್ಗೆ ಒಳ್ಳೆಯ ಆಲೋಚನೆಗಳು ಬರ ತೊಡಗಿತ್ತು. ಆತ ಒಳ್ಳೆಯ ಸ್ನೇಹಿತ ಎಂದು ಕೊಂಡಿದ್ದ ಸಹನಾಗೆ ಇದೀಗ ಬಹಳ ದೊಡ್ಡ ಆಶ್ಚರ್ಯ ಆಗಿದೆ. ಜೊತೆಗೆ ದೊಡ್ಡ ಶಾಕ್ ಕೂಡ ಆಗುತ್ತೆ. ಪಂಚಾಯತಿಯಲ್ಲಿ ಕಾಳಿಯ ಮಾತು ಕೇಳಿದ ಸಹನಾಗೆ ಬಹಳಷ್ಟು ನೋವಾಗಿದೆ.

ತಾನು ಯಾವತ್ತೂ ಕಾಳಿಯನ್ನು ಆ ರೀತಿ ಅಂದುಕೊಂಡವಳೇ ಅಲ್ಲ. ಆದರೆ ಕಾಳಿ ಯಾಕೆ ಈ ರೀತಿ ಅಂದುಕೊಳ್ಳುತ್ತಾನೆ ಎಂದು ಕುಸಿದು ಕುಳಿತುಕೊಳ್ಳುತ್ತಾಳೆ. ಮಗಳ ಸ್ಥಿತಿ ನೋಡಿದ ಪುಟ್ಟಕ್ಕಗೆ ಬಹಳಷ್ಟು ಬೇಸರ ಆಗುತ್ತೆ. ಆಕೆಗೆ ತಾನು ಏನು ಮಾಡಬೇಕು ಎಂದು ತಿಳಿಯಾದಾಗುತ್ತೆ. ಕಾಳಿಯ ಮುಖ ನೋಡಲು ಸಹನಾಗೆ ಆಗುವುದಿಲ್ಲ. ಪುಟ್ಟಕ್ಕ ಅಳುತ್ತಾ ನಿನ್ನ ಮೇಲೆ ಅದೆಷ್ಟು ಪ್ರೀತಿ ಇಟ್ಟುಕೊಂಡಿದ್ದಳು ನನ್ನ ಮಗಳು. ಅದೆಲ್ಲವನ್ನು ನೀನು ಹಾಳು ಮಾಡಿಬಿಟ್ಟೆ ಎಂದು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾಳೆ. ಸಹನಾಳನ್ನು ಕಾಳಿ ಚಿಕ್ಕ ವಯಸ್ಸಿನಿಂದಲೂ ಪ್ರೀತಿ ಮಾಡುತ್ತಿದ್ದ. ಆದರೆ ಸಹನಾಗೆ ಕಾಳಿ ಮೇಲೆ ಅಂತಹ ಯಾವುದೇ ಭಾವನೆ ಇರುವುದಿಲ್ಲ

Puttakkana Makkalu serial January 24th episode Sahana slapping Kaali

ಮೋದ ಮೊದಲು ಕಾಳಿ ತನ್ನ ಅಕ್ಕನ ಜೊತೆಗೂಡಿ ಬಹಳಷ್ಟು ಕುತಂತ್ರವನ್ನು ಮಾಡಿದ್ದಾನೆ. ಆದರೆ ಸಹನಾಗೆ ಯಾವತ್ತು ನೋವುಂಟು ಮಾಡಿರಲಿಲ್ಲ. ಗೊತ್ತೋ ಗೊತ್ತಿಲ್ಲದೆಯೋ ಸಾಧಾರಣ ಪ್ರೀತಿಯಲ್ಲಿ ಬಿದ್ದ ಕಾಳಿಗೆ ಮುರಳಿಯೇ ಅಡ್ಡಲಾಗಿ ನಿಲ್ಲುತ್ತಾನೆ. ಮುರಳಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾಳೆ. ಹಾಗೆ ಇದೀಗ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದಾಳೆ. ಅದಾದ ಬಳಿಕವು ಕಾಳಿಗೆ ಸಹನಾ ಮೇಲೆ ಕೊಂಚವು ಪ್ರೀತಿ ಕಡಿಮೆಯಾಗುವುದಿಲ್ಲ. ಸಹನಾ ಬೆಂಗಳೂರಲ್ಲಿ ಅದಷ್ಟೇ ಕಷ್ಟವನ್ನು ಅನುಭವಿಸಿದರು ಕೂಡ ಆಕೆಗೆ ಹೆಗಲಾಗಿದ್ದವನು ಕಾಳಿ.

ಸಹನಾಗೆ ಹೆಗಲಾಗಿದ್ದ ಕಾಳಿ

ಆದ್ರೀಗ ಸಹನಾ ಮಾತಿಗೆ ಕಾಳಿ ಬಹಳಷ್ಟು ಬೇಸರಪಟ್ಟುಕೊಂಡಿದ್ದಾನೆ. ಆದರೆ ಅಭಿಮಾನಿಗಳು ಮಾತ್ರ ಸಹನಾಗೆ ಕಾಳಿಯೇ ಉತ್ತಮ ಜೋಡಿ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳಿಗೆ ಸಹನಾ ಹಾಗೂ ಕಾಳಿ ಜೋಡಿ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಕಾಳಿ ಒಳ್ಳೆಯ ಮನಸ್ಸಿರುವವನು. ಸಹನಾಳನ್ನು ದೇವತೆಯ ಹಾಗೆ ನೋಡಿಕೊಳ್ಳುತ್ತಾನೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಾರೆ.

ಅಕ್ಕನ ವಿರುದ್ಧ ಹಲ್ಲು ಮಸೆದ ತಮ್ಮ

ಸಹನಾ ಬಳಿ ಬಹಳಷ್ಟು ಬೇಡಿಕೊಳ್ಳುತ್ತಾನೆ ಕಾಳಿ. ಆದರೆ ಕೊನೆಗೆ ಸಿಕ್ಕಿದ್ದು ಮಾತ್ರ ಸಹನಾ ಕೈಯಿಂದ ಕಪಾಳ ಮೋಕ್ಷ. ಕಾಳಿ ಬಹಳ ಬೇಸರದಿಂದ ಮನೆಗೆ ಓಡೋಡಿ ಬರುತ್ತಾನೆ. ಅಕ್ಕನನ್ನು ನೋಡಿದ ಕಾಳಿ ನಿನಗೆ ನಾನು ಹಾಗೂ ಸಹನಾ ಚೆನ್ನಾಗಿರುವುದು ನೋಡಲು ಆಗುವುದೇ ಇಲ್ಲ. ನಮ್ಮಿಬ್ಬರನ್ನೂ ದೂರ ಮಾಡಿದೆಯಲ್ಲ ಅಕ್ಕ. ನಾನು ನಿನ್ನನ್ನು ಜೈಲಿಗೆ ಕಳುಹಿಸದೆ ಬಿಡುವುದಿಲ್ಲ ಎಂದು ಹೇಳಿ ಮನೆಗೆ ಬಾಗಿಲು ಹಾಕಿಕೊಂಡು ನೇಣಿನ ಕುಣಿಕೆಗೆ ತಲೆ ಒಡ್ಡುತ್ತಾನೆ. ಮುಂದೇನಾಗುತ್ತೆ?

More from Filmibeat

English summary
Puttakkana Makkalu serial January 24th episode Sahana slapping Kaali
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X