Puttakkana Makkalu:ವಸು ಜೀವ ಉಳಿಸಲು ಬಂದ ಪುಟ್ಟಕ್ಕ; ರಾಧಾಗೆ ಫುಲ್ ಟೆನ್ಶನ್

By ಪೂರ್ವ

ಸಹನಾ ತಾಯಿಯನ್ನು ನೋಡಲು ದೂರದ ಬೆಂಗಳೂರಿನಿಂದ ಬರುತ್ತಾಳೆ. ಎಲ್ಲರೂ ಮಲಗಿರುವ ಹೊತ್ತಿನಲ್ಲಿ ಅಮ್ಮನ ಬಳಿ ಬಂದ ಸಹನಾಗೆ ಜೋರಾಗಿ ಅಳು ಬರುತ್ತದೆ. ಅಮ್ಮ ಎಂದಾಗ ಮಲಗಿರುವ ಪುಟ್ಟಕ್ಕ ಹೋಗು ಸಹನಾ ಊಟ ಮಾಡು ಎಂದು ಹೇಳಿದ್ದನ್ನು ಕೇಳಿಯಂತು ಬಹಳ ನೋವು ಆಗುತ್ತೆ. ಆ ಬಳಿಕ ಎದ್ದ ಪುಟ್ಟಕ್ಕಗೆ ಸರ್ಪ್ರೈಸ್ ಕಾದಿರುತ್ತದೆ. ಸಹನಾ ಎದುರಿಗೆ ಇರುವುದನ್ನು ನೋಡಿದ ಪುಟ್ಟಕ್ಕಗೆ ಸ್ವರ್ಗವೇ ಧರೆಗಿಳಿದು ಬಂದ ಅನುಭವ ಆಗುತ್ತದೆ. ಸಹನಾ ಜೊತೆ ಬಹಳ ಹೊತ್ತು ಮಾತನಾಡಿದ ಪುಟ್ಟಕ್ಕ ಊಟ ತರಲೆಂದು ಹೋಗುತ್ತಾಳೆ.

ಅವ್ವ ಊಟ ತರುವುದರ ಒಳಗೆ ಹೋಗಿ ಬಿಡಬೇಕು ಎಂದು ಸಹನಾ ನಿಶ್ಚಯ ಮಾಡಿಕೊಂಡು ಇರುತ್ತಾಳೆ. ಆದರೆ, ಹಠಾತ್ ಆಗಿ ಪುಟ್ಟಕ್ಕ ಬರುತ್ತಾಳೆ. ಸಹನಾ ನೀನು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸಹನಾ "ನಾನು ಇವತ್ತು ಹೋಗುತ್ತೇನೆ. ನಾಳೆ ಇದೆ ಸಮಯಕ್ಕೆ ನಿನ್ನ ಬಳಿಗೆ ಬರುತ್ತೇನೆ" ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

Puttakkana Makkalu serial July 10th episode update

ಕೆಟ್ಟ ಆಲೋಚನೆಯಲ್ಲಿ ಮುಳುಗಿರುವ ವಸು

ಇನ್ನೂ ರಾಧಾ ಹೇಗಾದರೂ ಮಾಡಿ ವಸುವನ್ನು, ಹಾಗೆಯೇ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಸಾಯಿಸಿ ಬಿಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಹೇಗೂ ಇದನ್ನೆಲ್ಲ ಕೇಳಲು ಅತ್ತೆ ಇಲ್ಲ. ಸ್ನೇಹಾನೂ ಇಲ್ಲ. ತಾನು ಆಡಿದ್ದೆ ಆಟ ಎನ್ನುವ ಹಾಗೆ ಇರುತ್ತಾಳೆ. ಇನ್ನೂ ವಸುಗೆ ಜೋರಾಗಿಯೇ ಹೊಟ್ಟೆ ನೋವು ಶುರುವಾಗಿ ಬಿಡುತ್ತದೆ. ರಾಧಾ ಅಷ್ಟೊತ್ತಿಗೆ ಎಲ್ಲೋ ಹೊರಗಡೆ ಹೋಗಲು ರೆಡಿ ಆಗಿರುತ್ತಾಳೆ.

ವಸು ನೋಡಿ ರಾಧಾಗೆ ಮನದಲ್ಲಿ ನಗು

ವಸುಗೆ ಹೊಟ್ಟೆ ನೋವು ತಡೆಯದೆ ರಾಧಾ ಬಳಿಗೆ ಬಂದು "ನನಗೆ ಬಹಳ ಹೊಟ್ಟೆ ನೋವು ಆಗುತ್ತಿದೆ. ಆಸ್ಪತ್ರೆಗೆ ಹೋಗೋಣ ಎಂದಾಗ ಇಲ್ಲ ವಸು ಅತ್ತಿಗೆ ನಾನು ಹೋಗಿ ಡಾಕ್ಟರನ್ನು ಕರೆದುಕೊಂಡು ಬರುತ್ತೇನೆ. ಅಷ್ಟರವರೆಗೆ ಸ್ವಲ್ಪ ತಡೆದುಕೊಂಡಿರಿ" ಎಂದು ಹೇಳಿ ಆಸ್ಪತ್ರೆಗೆ ಹೊರಡಲು ಮುಂದಾಗುತ್ತಾಳೆ. ಆಗ "ವಸು ನಾನು ಬರುತ್ತೇನೆ. ನನ್ನನ್ನು ಕರೆದುಕೊಂಡು ಹೋಗು" ಎಂದು ಹೇಳುತ್ತಾಳೆ. ಇನ್ನೂ ವಸುವನ್ನು ಸೋಫಾದ ಮೇಲೆ ಕೂರಿಸಿ, ರಾಧಾ ಆಸ್ಪತ್ರೆಗೆ ಹೋಗಲು ಮುಂದಾಗುತ್ತಾಳೆ. ಇನ್ನೂ ಪುಟ್ಟಕ್ಕ ಬಂಗಾರಮ್ಮನವರ ಮನೆಗೆ ಬರುತ್ತಾರೆ.

Puttakkana Makkalu serial July 10th episode update

ವಸುಗೆ ಸಮಾಧಾನ ಹೇಳಿದ ಪುಟ್ಟಕ್ಕ

ಮನೆಯಲ್ಲಿ ಯಾರೂ ಇಲ್ಲ. ಹೇಗಪ್ಪಾ ವಸು ಇದ್ದಾಳೆ ಎಂದು ತಿಳಿದುಕೊಳ್ಳೋಣ ಎಂದಾಗ ರಾಧಾ ಎದುರಿಗೆ ಸಿಗುತ್ತಾಳೆ. ರಾಧಾ ಏನೂ ಆಗಿಲ್ಲ ಎಂಬಂತೆ ಪುಟ್ಟಕ್ಕನ ಬಳಿ ಮಾತನಾಡುವಾಗ ವಸು ಬಾಗಿಲ ಬಳಿ ಬಂದು ಅರಚಾಡುತ್ತಾರೆ. ಇದನ್ನು ನೋಡಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಆಕೆ ಓಡಿ ಬಂದು ವಸುವನ್ನು ಹಿಡಿದುಕೊಳ್ಳುತ್ತಾರೆ. ಆ ಬಳಿಕ ವಸುವನ್ನು ರೂಮ್‌ಗೆ ಕರೆದುಕೊಂಡು ಬಂದು ಹೆರಿಗೆ ಮಾಡಲು ಮುಂದಾಗುತ್ತಾಳೆ. ಆದರೆ ಇದನ್ನು ನೋಡಿದ ರಾಧಾಗೆ ಕೋಪ ಬರುತ್ತದೆ. ಈಕೆಗೆ ಬಿಪಿ ಬೇರೆ ಇದೆ. ಈಕೆ ಬೇರೆ ಮನೆ ಬಿಟ್ಟು ಬರಲು ಬಿಡುವುದು ಇಲ್ಲ. ಏನು ಮಾಡುವುದು ಎಂದೆಲ್ಲ ಯೋಚನೆ ಮಾಡುತ್ತಾಳೆ. ರಾಧಾಗೆ ಬಹಳ ಬೇಸರ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಹೋಗುತ್ತಾಳೆ.

ಇನ್ನೂ ಪುಟ್ಟಕ್ಕ ವಸುಗೆ ಧೈರ್ಯ ಹೇಳುತ್ತಾಳೆ. ಮೊದಲಿಗೆ ವಸು ನೋವು ತಾಳಲಾಗದೆ ಪ್ರಜ್ಞೆ ತಪ್ಪುತ್ತಾಳೆ. ಆದರೆ, ಅದಾದ ಬಳಿಕ ಪ್ರಜ್ಞೆ ಹಿಂತಿರುಗಿ ಬರುತ್ತದೆ. ಪುಟ್ಟಕ್ಕ ದೇವರ ಮೇಲೆ ಭಾರ ಹಾಕಿ ಬಿಡುತ್ತಾಳೆ. "ವಸು ಹಾಗೂ ಆಕೆಯ ಮಗುವಿಗೆ ಏನು ತೊಂದರೆ ಆಗದಂತೆ ಡೆಲಿವರಿ ಮಾಡಿಸಪ್ಪ" ಎಂದು ಕೇಳಿಕೊಳ್ಳುತ್ತಾರೆ. ಇನ್ನೂ ಬಂಗಾರಮ್ಮ ಹಾಗೂ ಸಿಂಗಾರಮ್ಮ ಇಬ್ಬರು ಮುಖ ಮುಖಿಯಾಗುತ್ತಾರೆ. ಸಿಂಗಾರಮ್ಮಗೆ ಬಂಗಾರ ಮ್ಮನ ಮೇಲೆ ದ್ವೇಷ. ಆದರೆ, ಬಂಗಾರಮ್ಮಗೆ ಸಿಂಗಾರಮ್ಮ ಕಂಡರೆ ಬಹಳ ಪ್ರೀತಿ. ಮುಂದೆ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಥೆ ಹೇಗೆ ಸಾಗುತ್ತದೆ ಎಂಬುವುದು ಕುತೂಹಲ ಘಟ್ಟದಲ್ಲಿದೆ.

More from Filmibeat

English summary
Puttakkana Makkalu serial July 10th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X