Puttakkana Makkalu:ಬಂಗಾರಮ್ಮನ ನಡವಳಿಕೆಯಲ್ಲಿ ಬದಲಾವಣೆ; ನಿಜ ತಿಳಿದುಕೊಳ್ಳುತ್ತಾಳಾ ನಂಜಮ್ಮ?

By ಪೂರ್ವ

ಬಂಗಾರಮ್ಮನ ಮನೆಗೆ ಬಂದ ಸಿಂಗಾರಮ್ಮಗೆ ಏನು ಮಾಡಬೇಕು? ಏನು ಮಾತನಾಡಬೇಕು ಎನ್ನುವ ಅರಿವು ಇರುವುದಿಲ್ಲ. ಮೊದ ಮೊದಲಿಗೆ ಬಹಳ ಕೋಪಗೊಂಡು ತನ್ನ ನಿಜ ರೂಪ ತೋರಿಸಿ ಬಿಡುತ್ತಾಳೆ. ಆದರೆ, ಆಮೇಲೆ ಆಕೆಗೆ ಇಷ್ಟು ಬೇಗ ನಾನು ಸಿಂಗಾರಮ್ಮ ಎಂದು ತಿಳಿದರೆ, ಬಂಗಾರಮ್ಮನ ಕುಟುಂಬವನ್ನು ದಾರಿ ತಪ್ಪಿಸುವುದು ಕೊಂಚ ಕಷ್ಟ ಆಗುತ್ತದೆ. ಇವರನ್ನೆಲ್ಲ ಬಂಗಾರಮ್ಮ ಎಂದೇ ನಂಬಿಸಬೇಕು ಎನ್ನುವ ನಿಟ್ಟಿನಲ್ಲಿ ನಾನು ಆಡಿದ್ದು ನಾಟಕ ಎನ್ನುವ ಹಾಗೆ ಮಾಡುತ್ತಲೇ ಇದೀಗ ಸಿಂಗಾರಮ್ಮ ವಸು ಇದ್ದ ರೂಮ್ ಕಡೆಗೆ ಬರುತ್ತಾರೆ. ಎಲ್ಲರೂ ಖುಷಿಯಾಗಿ ಇದ್ದ ಸಮಯದಲ್ಲಿ ಸಿಂಗಾರಮ್ಮ ಮಾತ್ರ ಮೆತ್ತಗೆ ಹೆಜ್ಜೆ ಇಡುತ್ತ ಬರುತ್ತಾಳೆ.

ಸ್ನೇಹಾ, ವಸು ರೂಮ್‌ಗೆ ಬಂದು ಆಕೆಯ ಮಗುವನ್ನು ನೋಡುತ್ತಾಳೆ. ವಸು ಅತ್ತಿಗೆ ನೀವು ಕಂಡಿದ್ದ ಕನಸು ಮನಸಾಗಿ ಇದೀಗ ನಿಮ್ಮ ಮಡಿಲು ಸೇರಿದೆ ಎಂದು ಹೇಳಿದಾಗ, ವಸು ಖುಷಿಗೆ ಪಾರವೇ ಇಲ್ಲದಾಗುತ್ತದೆ. ಇನ್ನೂ ಕಂಠಿ ಮಾತ್ರ ಮಗುವನ್ನು ಓಡಿ ಬಂದು ಎತ್ತಿಕೊಳ್ಳುವ ತವಕದಲ್ಲಿ ಇರುತ್ತಾನೆ. ಆದರೆ ಸ್ನೇಹಾ ಕಂಠಿ ಬಳಿ "ನೀವು ಮಗುವನ್ನು ಹಾಗೆ ಮುಟ್ಟಬಾರದು. ಕೈ ಕಾಲು ತೊಳೆದುಕೊಂಡು ಬಂದು ಮುಟ್ಟಬೇಕು. ಮಗುವಿನ ಚರ್ಮ ಬಹಳ ಸೂಕ್ಷ್ಮವಾಗಿ ಇರುತ್ತದೆ" ಎಂದು ಮನವರಿಕೆ ಮಾಡಿಕೊಡುತ್ತಾಳೆ.

Puttakkana Makkalu serial July 16th episode Update

ಆದರೆ, ನಂಜಮ್ಮಗೆ ಕೊಂಚ ಅನುಮಾನ ಶುರು ಆಗುತ್ತದೆ. ಬಂದಾಗಿನಿಂದ ಬಂಗಾರಮ್ಮ ಒಂದು ಮಾತು ಆಡುತ್ತಿಲ್ಲ. ಯಾಕೆ ಅಂತಹದ್ದು ಏನಾಯಿತು ಎಂದು ಆಯೋಚನೆ ಮಾಡುತ್ತಿರುತ್ತಾಳೆ. ಇನ್ನೂ ಸಿಂಗಾರಮ್ಮನ ಬಳಿ ಬಂದು ನಂಜಮ್ಮ "ಯಾಕೆ ಬಂಗಾರಮ್ಮ ನೀನು ಮಗುವನ್ನು ಎತ್ತಿಕೊಳ್ಳುವುದಿಲ್ವಾ? ನಿನಗೆ ಖುಷಿ ಆಗಿಲ್ವ? ಎಂದಾಗ ವಸು "ನಾನೇ ಸಣ್ಣ ಮಗು ಆಗಿದ್ದೆ ಅಲ್ವಾ. ಇದೀಗ ನನಗೂ ಒಂದು ಸಣ್ಣ ಮಗು ಆಗಿದೆ. ಇದನ್ನು ನೋಡಿ ಅವರಿಗೆ ಖುಷಿಯಲ್ಲಿ ಮಾತೇ ಬರುತ್ತಿಲ್ಲ" ಎಂದು ಹೇಳುತ್ತಾಳೆ. ಆಗಲೂ ಸಿಂಗಾರಮ್ಮ ಮೌನವಿರುತ್ತಾಳೆ.

ಸಿಂಗಾರಮ್ಮನ ಕಂಡು ತಲೆ ತಗ್ಗಿಸಿದ ರಾಧಾ

ಇನ್ನೂ ಸಿಂಗಾರಮ್ಮನನ್ನು ನೋಡಿ ಶಶಿಕಲಾ ಹಾಗೂ ರಾಧಾ ಭಯದಲ್ಲಿ ನಡುಗುತ್ತಿರುತ್ತಾರೆ. ಎಲ್ಲಿ ನಾವು ಮಾಡಿದ ಕೆಲಸ ಹೊರಗಡೆ ಬರುತ್ತದೋ ಎನ್ನುವ ಅಳುಕಿನಲ್ಲಿರುತ್ತಾರೆ. ಇನ್ನೂ ಸಿಂಗಾರಮ್ಮ ರೂಮ್‌ಗೆ ಬಂದು ಸಿಗರೇಟ್ ಸೇದುತ್ತಿರುವಾಗ ಸ್ನೇಹಾ ಆಕೆಗಾಗಿ ಹಾಲು ತೆಗೆದುಕೊಂಡು ರೂಮ್‌ಗೆ ಬರುತ್ತಾಳೆ. ಆದರೆ ಡೋರ್ ಲಾಕ್ ಆಗಿ ಇರುತ್ತದೆ. ಸ್ನೇಹಾ ಅತ್ತೆ ಅತ್ತೆ ಎಂದು ಕರೆದಾಗ ಸಿಂಗಾರಮ್ಮ ಸಿಗರೇಟ್ ಅನ್ನು ಎಸೆದು ಬಿಡುತ್ತಾಳೆ.

Puttakkana Makkalu serial July 16th episode Update

ಅತ್ತೆಯ ರೂಮ್ ಕೆಟ್ಟ ವಾಸನೆ ಎಂದ ಸ್ನೇಹಾ

ಬಳಿಕ ರೂಮ್ ಡೋರ್ ಓಪನ್ ಮಾಡುತ್ತಾಳೆ. ರೂಮ್‌ನೊಳಗೆ ಬಂದ ಸ್ನೇಹಾಗೆ ಕೆಟ್ಟವಾಸನೆ ಬರುತ್ತದೆ. ಇದೇನಾತ್ತೆ ರೂಮ್ ಎಲ್ಲಾ ಬಹಳ ಕೆಟ್ಟ ವಾಸನೆ ಬರುತ್ತಿದೆ ಎಂದಾಗ ಸಿಂಗಾರಮ್ಮಗೆ ಏನು ಹೇಳಬೇಕು ತಿಳಿಯದೇ ಸುಮ್ಮನೆ ನಿಂತಿರುತ್ತಾಳೆ. ಇನ್ನೂ ಸ್ನೇಹಾಗೆ ಕೂಡ ಅತ್ತೆಯ ನಡವಳಿಕೆಯ ಬಗ್ಗೆ ಬಹಳಷ್ಟು ಅನುಮಾನ ಮೂಡುತ್ತದೆ. ಆದರೆ, ಆಕೆ ಅದನ್ನು ಯಾರ ಜೊತೆಯೂ ಹೇಳಿಕೊಳ್ಳುವುದು ಇಲ್ಲ.

ಅವ್ವನ ನೆನಪಿನಲ್ಲಿ ಸಹನಾ

ಇನ್ನೂ ಸಹನಾಗೆ ಅವ್ವನದ್ದೆ ನೆನಪು. ಆಕೆ ಮಾಡುವ ಪ್ರತಿ ಕೆಲಸದಲ್ಲೂ ತನ್ನ ಅವ್ವನನ್ನು ನೆನಪು ಮಾಡಿಕೊಂಡು ಇರುತ್ತಾಳೆ. ಆಕೆ ಅವ್ವ ಎಂದರೆ ಅಚ್ಚುಮೆಚ್ಚು. ತನ್ನ ನೆನಪಿನಲ್ಲಿ ಅವ್ವ ಇದ್ದಾಳೆ ಎನ್ನುವುದು ಗೊತ್ತಾದ ಮೇಲೆ ಆಕೆಗೆ ಬಹಳಷ್ಟು ನೋವು ಆಗುತ್ತದೆ ಇನ್ನೂ ಇದೇನು ಮಾಡುವುದು ಎಂದು ದಿಕ್ಕೇ ತೋಚದಂತಾಗುತ್ತೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X