Puttakkana Makkalu: ಪುಟ್ಟಕ್ಕ ಮತ್ತು ಬಂಗಾರಮ್ಮನ ನಡುವೆ ತಂದಿಡಲು ಮುಂದಾದ ನಂಜಮ್ಮ
ವಸುವಿನ ಮಗುವಿಗೆ ನಂಜಮ್ಮ ಮಾಡಿದ ಪಿತೂರಿಯಿಂದಾಗಿ ದೊಡ್ಡ ಅಪಾಯವೇ ಎದುರಾಗಿದೆ. ಇದೀಗ ವಸು ಆಕೆಯ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾಳೆ. ಮನೆಯಲ್ಲಿ ಹೆರಿಗೆಯಾದ ಕಾರಣ ತಾಯಿ, ಮಗು ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ, ರಾಧಾ ಮಾಡಿದ ಕಿತಾಪತಿಯಿಂದಾಗಿ ಮಗುವಿಗೆ ನಂಜು ಹೆಚ್ಚಾಗಿದೆ. ಇದರಿಂದ ಮಗುವಿನ ಜೀವಕ್ಕೆ ಅಪಾಯವಾಗಿದೆ. ಇದೀಗ ವಸುಗೆ ಬಹಳ ಆತಂಕ ಆಗುತ್ತಿದ್ದು, ಏನು ಮಾಡಬೇಕೆಂದು ತಿಳಿಯದೆ ಬಹಳ ಆತಂಕದಲ್ಲಿ ಇರುತ್ತಾಳೆ.
ಇತ್ತ ಮಗು ಜೋರಾಗಿ ಅಳುತ್ತಿರುತ್ತದೆ. ಅಮ್ಮನ ಬಳಿಗೆ ಬಂದ ವಸು "ಅವ್ವ ನನ್ನ ಮಗಳು ಹಾಲು ಕುಡಿಯಲು ಕೇಳುತ್ತಿಲ್ಲ. ಪಾಪು ಅಳುತ್ತಲೇ ಇದೆ. ಆದರೆ ಕಾರಣ ಏನು ಅನ್ನೋದೇ ತಿಳಿಯುತ್ತಿಲ್ಲ" ಎಂದು ಹೇಳಿದಾಗ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಹಾಗೆಯೇ ಮನದಲ್ಲಿ ಈ ಮಗುಗೆ ಟಿಕೆಟ್ ಸಿಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ ಎಂದು ಆಲೋಚನೆ ಮಾಡುತ್ತಾಳೆ. ಆದರೆ ವಸುವಿಗೆ ಈಕೆ ನನ್ನ ತಾಯಿಯಲ್ಲ. ಈಕೆಯ ಮನಸ್ಸು ಹೀಗಿಲ್ಲ. ಮೊಮ್ಮಗುವಿಗಾಗಿ ನನ್ನ ತಾಯಿ ಯಾವತ್ತೂ ಮಿಡಿಯುತ್ತಿದ್ದಳು. ಆದರೆ ಇದೀಗ ಸಡನ್ ಆಗಿ ನನ್ನ ಅವ್ವ ಏನು ಮಾತನಾಡದೆ ಇರುವುದನ್ನು ನೋಡಿ ಬಹಳ ಆಶ್ಚರ್ಯ ಆಗುತ್ತೆ.

"ವಸು ಅಳುತ್ತಲೇ ಅವ್ವ ನೀವು ಕೂಡ ನನ್ನ ಜೊತೆ ಬನ್ನಿ ಆಸ್ಪತ್ರೆಗೆ ಹೋಗೋಣ. ನೀವಿದ್ದರೆ ನನಗೊಂದು ಬಲ" ಎಂದು ಹೇಳುತ್ತಾಳೆ. ಆದರೆ ಬಂಗಾರಮ್ಮನ ರೂಪದಲ್ಲಿ ಇರುವ ಸಿಂಗಾರಮ್ಮ ನೇರವಾಗಿ ಹೋಗಿ ರೂಮಿನ ಬಾಗಿಲು ಹಾಕಿಕೊಳ್ಳುತ್ತಾಳೆ. ಇದನ್ನು ನೋಡಿದ ವಸುಗೆ ಬಹಳ ನೋವಾಗುತ್ತದೆ. ಇನ್ನು ಸ್ನೇಹಾ "ಅತ್ತಿಗೆ ಟೈಮ್ ವೇಸ್ಟ್ ಮಾಡುವುದು ಬೇಡ. ನಾವು ಆಸ್ಪತ್ರೆಗೆ ಹೋಗೋಣ" ಎಂದು ವಸುವನ್ನು ಹಾಗೂ ಆಕೆಯ ಮಗಳನ್ನು ಇಬ್ಬರನ್ನು ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ.
ಅವ್ವನ ಬಳಿ ಅಳಲು ತೋಡಿಕೊಂಡ ವಸು
"ಮನೆಯಲ್ಲೇ ಹೆರಿಗೆಯಾಗಿದ್ದರೂ ಕೂಡ ಮಗುವನ್ನು ಒಮ್ಮೆಯಾದರೂ ಆಸ್ಪತ್ರೆಗೆ ಬಂದು ಚೆಕಪ್ ಮಾಡಿಸಬೇಕಾಗಿತ್ತು. ಆದರೆ ನೀವು ಆ ಕೆಲಸವನ್ನು ಯಾಕೆ ಮಾಡಲಿಲ್ಲ. ನೀವು ಆ ರೀತಿ ಮಾಡದಿರುವುದು ಬಹಳ ದೊಡ್ಡ ತಪ್ಪು. ಇದೀಗ ಮಗುವಿನ ಸ್ಥಿತಿ ಬಹಳ ಗಂಭೀರವಾಗಿದೆ" ಎಂದು ವೈದ್ಯರು ಹೇಳಿದಾಗ, ವಸುಗೆ ಮತ್ತಷ್ಟು ಆತಂಕ ಹೆಚ್ಚಾಗುತ್ತದೆ. ಆಕೆ ಜೋರಾಗಿ ಅಳಲು ಶುರು ಮಾಡುತ್ತಾಳೆ.
ವಸು ಅಳುವಿಗೆ ಮರುಕ ಪಟ್ಟ ಸ್ನೇಹಾ
"ನೀವು ಅಳುವ ಅಗತ್ಯ ಇಲ್ಲ. ನೀವು ಯಾವುದಕ್ಕೂ ಕೂಡ ಹೆದರಬೇಡಿ" ಎಂದು ವೈದ್ಯರು ಹೇಳುತ್ತಾರೆ. ಇದನ್ನು ಕೇಳಿ ವಸುಗೆ ಬಹಳ ದುಃಖ ಹೆಚ್ಚಾಗುತ್ತದೆ. ಇತ್ತ ನಂಜಮ್ಮ, ಪುಟ್ಟಕ್ಕನ ಮನೆಗೆ ಬಂದು ಗಲಾಟೆ ಮಾಡಲು ಶುರು ಮಾಡುತ್ತಾಳೆ. ಪುಟ್ಟಕ್ಕ ಎಂದು ಜೋರಾಗಿ ಕರೆದ ನಂಜಮ್ಮನನ್ನು ನೋಡಿದ ಗೋಪಾಲ ಕೊಂಚ ಜೋರಾಗಿಯೇ ಹೇಳುತ್ತಾನೆ. "ಯಾಕೆ ನಂಜಮ್ಮ ಇಷ್ಟು ಜೋರಾಗಿ ಕಿರುಚುತ್ತಿಯಾ? ಯಾಕೆ ಹೀಗೆಲ್ಲ ಮಾಡುತ್ತಿದ್ದಿಯಾ? ನೀವು ಮಾತಾಡುವುದು ಸರಿಯಲ್ಲ" ಎಂದಾಗ ಗೋಪಾಲನ ಮೇಲೆ ನಂಜಮ್ಮ ಹರಿಹಾಯುತ್ತಾಳೆ. ನಂಜಮ್ಮನ ಧ್ವನಿ ಕೇಳಿದ ಪುಟ್ಟಕ್ಕ ಮಾತ್ರ ಮೆತ್ತಗೆ ಬರುತ್ತಾಳೆ.

ನಂಜಮ್ಮನ ಮಾತು ಕೇಳಿ ಪುಟ್ಟಕ್ಕ ಶಾಕ್
"ಏನು ನಂಜಮ್ಮ ನನ್ನ ಬಳಿ ಏನು ನಿನ್ನ ಮಾತು" ಎಂದು ಹೇಳಿದಾಗ, ನಂಜಮ್ಮ ಕೊಂಚ ಜೋರಾಗಿಯೇ ಮಾತನಾಡುತ್ತಾಳೆ. ತನ್ನ ಮೊಮ್ಮಗುವಿಗೆ ಆಗಿರುವ ಅಪಾಯದ ಬಗ್ಗೆ ವಿವರಣೆ ನೀಡುತ್ತಾಳೆ. ಹಾಗೆಯೇ ಹೇಗಾದರೂ ಮಾಡಿ ಬಂಗಾರಮ್ಮ ಹಾಗೂ ಪುಟ್ಟಕ್ಕಗೆ ತಂದಿಡಬೇಕು ಎಂದು ಆಲೋಚನೆ ಮಾಡುತ್ತಾರೆ.


Click it and Unblock the Notifications











