Puttakkana Makkalu: ರಾಧಾಗೆ ಖಡಕ್ ವಾರ್ನಿಂಗ್ ಕೊಟ್ಟ ಸ್ನೇಹಾ; ವಿದೇಶಿಗನ ಮೇಲೆ ರೇಗಾಡಿದ ಸಹನಾ
ಸ್ನೇಹಾಗೆ ರಾಧಾ ಮೇಲೆ ಫುಲ್ ಡೌಟ್ . ನಾನು ಪರೀಕ್ಷೆ ಬರೆದು ಎಲ್ಲಿ ಡಿಸಿ ಆಗಿ ಬಿಡುತ್ತೇನೆ ಎನ್ನುವ ಭಯ ಆಕೆಗೆ. ಇದರಿಂದಾಗಿ ಅತ್ತೆ ಕಾರು ಬ್ರೇಕ್ ಫೇಲ್ ಮಾಡಿದ್ದಾಳೆ ಈ ರಾಧಾ ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನೂ ರಾಧಾ ಬಳಿಗೆ ಅದೇ ಕೋಪದಿಂದ ಸ್ನೇಹಾ ಬರುತ್ತಾಳೆ. ಆ ವೇಳೆ ರಾಧಾ ಯಾರಿಗೋ ಕರೆ ಮಾಡಿ ಏನೇನೋ ಬಡ ಬಡಾಯಿಸುತ್ತಿರುತ್ತಾಳೆ.
ಆಗ ಸ್ನೇಹಾ, ರಾಧಾ ಬಳಿಗೆ ಬರುತ್ತಾಳೆ. ರಾಧಾ ಕುತಂತ್ರಿ ಎಂದು ಸ್ನೇಹಾಗೆ ತಿಳಿದಿತ್ತು. ಆದರೆ, ಇಬ್ಬರ ಜೀವ ತೆಗೆಯುವಷ್ಟು ಕ್ರೂರಿ ಅಲ್ಲ ಎಂದುಕೊಂಡಿದ್ದಳು. ಬಂಗಾರಮ್ಮ ಅವರ ತಲೆಗೆ ಏಟಾಗಿ ಬಹಳ ನೋವಾಗಿದ್ದರೂ, ಮಗಳಂತಹ ಮನೆ ಸೊಸೆ ಪರೀಕ್ಷೆ ಬರೆಯಲು ಬೇಕು ಎಂದು ಪರೀಕ್ಷೆಯ ಹಾಲ್ ತನಕ ಬಂದು ಆಕೆಯ ಜೊತೆ ಪರೀಕ್ಷೆ ಆಗುವವರೆಗೆ ಇದ್ದು ಆಕೆಯ ಜೊತೆ ಆಸ್ಪತ್ರೆಗೆ ಹೋಗಿ ಟ್ರೀಟ್‌ಮೆಂಟನ್ನು ಪಡೆದುಕೊಂಡು ಮನೆಗೆ ಹೋಗುತ್ತಾಳೆ.

ರಾಧಾಗೆ ಸ್ನೇಹಾಳನ್ನು ನೋಡಿ ಬಹಳ ಶಾಕ್ ಆಗುತ್ತದೆ. ಸ್ನೇಹಾ ನೀನು ಇಲ್ಲಿ ಎಂದು ಕೇಳಿದಾಗ "ಯಾಕೆ ನಾನು ಇಲ್ಲಿಗೆ ಬರಬಾರದಾ. ನಿನಗೆ ಸಕ್ಕರೆ ತಿಂದಷ್ಟು ಖುಷಿ ಆಗಿರಬಹುದು ಅಲ್ವಾ?" ಎಂದು ಸ್ನೇಹ ಹೇಳಿದಾಗ ರಾಧಾಗೆ ಶಾಕ್ ಆಗುತ್ತದೆ. ಸುಮ್ಮನೆ ಮಾತು ಮರೆಸುತ್ತಾಳೆ. "ನನಗೆ ಏನು ಅರ್ಥ ಆಗುತ್ತಿಲ್ಲ. ನಾನು ಅಂತಹ ತಪ್ಪು ಕೆಲಸ ನಾನೇನು ಮಾಡಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡು" ಎಂದಾಗ "ನನಗೆ ಎಲ್ಲದೂ ಗೊತ್ತಿದೆ" ಎಂದು ಸ್ನೇಹಾ ಹೇಳುತ್ತಾಳೆ.
ಸ್ನೇಹಾ ಮಾತಿಗೆ ನಡುಗಿದ ರಾಧಾ
"ನೀನು ಯಾಕೆ ಹೀಗೆಲ್ಲ ಮಾಡುತ್ತಿದ್ದೀಯಾ? ಇದರಿಂದ ನಿನಗೆ ಏನು ಲಾಭ? ಎಂದು ನನಗೆ ಚೆನ್ನಾಗಿಯೇ ಗೊತ್ತಿದೆ" ಎಂದು ಸ್ನೇಹಾ ಹೇಳುತ್ತಾಳೆ. ಆದರೆ, ಇನ್ಮೇಲೆ ಇದೆಲ್ಲ ನಡೆಯುವುದಿಲ್ಲ. ಹೀಗೆಲ್ಲ ನೀನು ಮಾಡಬಾರದು . ಮತ್ತೂ ನೀನು ಹೀಗೆ ಮಾಡಿದರೆ, ನಾನು ಸುಮ್ಮನೆ ಇರುವುದು ಇಲ್ಲ. ಡಿಸಿ ಆಗಿ ನಿಮಗೆ ನಾನು ವಾರ್ನಿಂಗ್ ಮಾಡುತ್ತೇನೆ ರಾಧಾ" ಎಂದು ಹೇಳಿದಾಗ ರಾಧಾಗೆ ಬಹಳ ಕೋಪ ಬರುತ್ತದೆ. ಇನ್ನೂ ರಾಧಾಗೆ ತಾನು ಮಾಡಿದ ಪ್ಲಾನ್ ಪ್ಲಾಪ್ ಆಗಿರುವುದು ನೋಡಿ ಬಹಳ ಕೋಪ ಬರುತ್ತದೆ.

ಸಹನಾ ಕೋಪಕ್ಕೆ ವಿದೇಶಿಗ ತತ್ತರ
ಇನ್ನೂ ಸಹನಾ ಮಾಡುತ್ತಿರುವ ಅಡುಗೆಯನ್ನು ವಿದೇಶಿಗನೊಬ್ಬ ವಿಡಿಯೋ ಮಾಡುತ್ತಾ ಇರುತ್ತಾನೆ. ಇದನ್ನೆಲ್ಲ ನೋಡಿದ ಸಹನಾಗೆ ಬಹಳ ಕೋಪ ಬರುತ್ತದೆ. "ನಾನು ಮಾಡಿದ ಅಡುಗೆಯನ್ನು ನೀನು ಇಲ್ಲಿಗೆಲ್ಲ ಬಂದು ವಿಡಿಯೋ ಮಾಡುತ್ತಿರುವುದು ಯಾಕೆ" ಎಂದು ಬಹಳ ಕೋಪದಿಂದ ಹೇಳುತ್ತಾಳೆ. ಇದನ್ನು ಕೇಳಿದ ವಿದೇಶಿಗನಿಗೆ ಬಹಳ ಬೇಸರ ಆಗುತ್ತದೆ.
ಮೆಸ್‌ನಲ್ಲಿ ಕಾಲ ಕಳೆಯುತ್ತಿರುವ ಪುಟ್ಟಕ್ಕ
ಇನ್ನೂ ಪುಟ್ಟಕ್ಕ ಅದು ಹೇಗೋ ಸಹನಾಳನ್ನು ಕೊಂಚ ಮರೆತ ಹಾಗೆ ಅನಿಸುತ್ತದೆ. ಯಾಕೆಂದರೆ, ಹೆಚ್ಚು ಕಾಲ ಮೆಸ್‌ನಲ್ಲಿಯೇ ಕಾಲ ಕಳೆಯಲು ಶುರು ಮಾಡಿದ್ದಾಳೆ. ಪುಟ್ಟಕ್ಕಗೆ ಮೆಸ್ ಎಂದರೆ ಬಹಳ ಪ್ರೀತಿ. ಹಾಗೆಯೇ ಪುಟ್ಟಕ್ಕನ ಜೊತೆ ಗೋಪಾಲಯ್ಯ ಕೂಡ ಸಾಥ್ ನೀಡಿದ್ದಾನೆ.


Click it and Unblock the Notifications











