Puttakkana Makkalu:ವಸು ಮಗು ಜೀವಪಾಯದಿಂದ ಪಾರು; ಮಗುವಿಗೆ ವಿಷ ಕೊಟ್ಟಿದ್ಯಾರು?
ಪುಟ್ಟಕ್ಕನ ಮೇಲೆ ಬಹಳ ನಂಬಿಕೆ ಇಟ್ಟವನು ಕಂಠಿ. ಪುಟ್ಟಕ್ಕನ ಸ್ವಂತ ಮಗಳು ಸ್ನೇಹವೇ ಅವ್ವ ವಿರುದ್ದ ತಿರುಗಿಬಿದ್ದಿದ್ದಳು. ಯಾಕೆ ಹೀಗೆ ಮಾಡಿದೆ ಅವ್ವ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಸ್ನೇಹಾ ಕೆಂಗಣ್ಣಿಗೆ ಪುಟ್ಟಕ್ಕ ಗುರಿ ಆಗಿದ್ದಳು. ಆದರೆ, ಇದೀಗ ವಸು ಮಗು ಆರೋಗ್ಯವಾಗಿದೆ. ಆಕೆಯ ಮಗಳು ಜೀವಾಪಾಯಾದಿಂದ ಪಾರಾಗಿದೆ. ಇದಕ್ಕೆ ಮುಖ್ಯ ಕಾರಣ ಪುಟ್ಟಕ್ಕ.
ಕಂಠಿ ಅತ್ತೆಯ ಜೊತೆ ಮದ್ದು ತೆಗೆದುಕೊಂಡು ಹೋಗಿ ವಸುಗೆ ಕೊಡುತ್ತಾನೆ. ಸ್ನೇಹಾ ಜೊತೆ ಈ ವಿಚಾರ ಹೇಳಿದರೆ ಮಗುವಿಗೆ ಖಂಡಿತವಾಗಿಯೂ ಔಷಧಿ ಕೊಡಲು ಆಕೆ ಬಿಡುವುದಿಲ್ಲ ಎಂದು ತಿಳಿದ ಕಂಠಿ ಆಕೆಯ ಜೊತೆ ಏನು ಹೇಳದೆ ವಸುಗೆ ಮಗುವಿಗೆ ಔಷಧಿ ಕೊಡಲು ಹೇಳುತ್ತಾನೆ. ಆಗ ಅಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು. ಮಗು ದಿನೇ ದಿನೆ ಚೇತರಿಸಿಕೊಳ್ಳಲು ಶುರು ಮಾಡಿತು. ಇದನ್ನು ನೋಡಿ ವಸುಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ.

ಸ್ನೇಹಾಗೆ ಆಶ್ಚರ್ಯ ಆಯಿತು. ಅರೆ ಡಾಕ್ಟರ್‌ನಿಂದ ಸಾಧ್ಯವಾಗದ ಕೆಲಸ ಹೇಗೆ ಸಾಧ್ಯವಾಯಿತು ಎಂದು ಯೋಚನೆ ಮಾಡುತ್ತಾಳೆ. ಬಳಿಕ ವಸು ಜೊತೆ ಡಾಕ್ಟರ್ ಮದ್ದಿನಿಂದ ಇಷ್ಟೆಲ್ಲ ಸುಧಾರಣೆ ಆಯಿತು ಎಂದು ಹೇಳಿದಾಗ ಕಂಠಿ ಹೇಳುತ್ತಾನೆ. "ಇದೆಲ್ಲ ಡಾಕ್ಟರ್‌ನಿಂದ ಆದ ಚಮತ್ಕಾರ ಅಲ್ಲ. ಇದೆಲ್ಲ ಅವ್ವ ಮಾಡಿದ ಔಷಧಿಯ ಪ್ರಭಾವ. ಇದರಿಂದಲೇ ಮಗು ಬದುಕಿ ಉಳಿದಿದೆ" ಎಂದಾಗ ಸ್ನೇಹಾಗೆ ಖುಷಿ ಜೊತೆಗೆ ನೋವು ಕೂಡ ಆಗುತ್ತೆ.
ಬೇಸರಪಟ್ಟುಕೊಂಡ ಸ್ನೇಹಾ
ನನ್ನ ತಾಯಿಗೆ ನಾನು ಏನೇನೆಲ್ಲ ಅಂದುಬಿಟ್ಟೆ ಅಲ್ವಾ ಎಂದು ಮನಸ್ಸಿನಲ್ಲಿ ನೊಂದುಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿ ನರ್ಸ್ ಒಬ್ಬಳು ಸ್ನೇಹಾಳನ್ನು ಕರೆದು ಹೇಳುತ್ತಾರೆ. "ಸ್ನೇಹಾ ಅವರೇ ನಿಜ ವಿಚಾರವನ್ನು ಡಾಕ್ಟರ್ ನಿಮ್ಮಿಂದ ಮುಚ್ಚಿಡುತ್ತಿದ್ದಾರೆ. ಯಾಕೆ ಮುಚ್ಚಿಡುತ್ತಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ. ಮಗುವಿಗೆ ನಂಜು ಏರಿ ಹುಷಾರು ತಪ್ಪಿದ್ದಲ್ಲ" ಎನ್ನುತ್ತಾರೆ.

ನರ್ಸ್ ಮಾತು ಕೇಳಿ ಶಾಕ್ ಆದ ಸ್ನೇಹಾ
"ಮಗುವಿಗೆ ಬೇರೆ ಯಾರೋ ವಿಷ ಎಂಜೆಕ್ಟ್ ಮಾಡಿದ್ದಾರೆ. ಆ ಕಾರಣದಿಂದ ಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು" ಎಂದು ನರ್ಸ್ ಹೇಳುತ್ತಾರೆ. ಇದನ್ನು ಕೇಳಿ ಸ್ನೇಹಾಗೆ ಬಹಳ ಶಾಕ್ ಆಗುತ್ತದೆ. ಇನ್ನೂ ಪುಟ್ಟಕ್ಕ ದೇವರ ಬಳಿ ಮಗು ಹುಷಾರಾಗಿ ಬರಲಿ ಎಂದು ಕೇಳಿಕೊಳ್ಳುತ್ತಾರೆ. ಆಗ ವಸು, ಪುಟ್ಟಕ್ಕನ ಮಡಿಲಿನಲ್ಲಿ ಮಗುವನ್ನು ಮಲಗಿಸುತ್ತಾರೆ. "ಅವ್ವ ನಿನ್ನಿಂದಾಗಿ ಮಗು ಸುರಕ್ಷಿತವಾಗಿ ಉಳಿದಿದೆ. ಇಲ್ಲದಿದ್ದರೆ ಮಗುವಿಗೆ ಏನಾದರು ತೊಂದರೆ ಆಗುತ್ತಿತ್ತು" ಎಂದು ಹೇಳಿ ಅಳುತ್ತಾಳೆ.
ಮಗುವನ್ನು ಮುದ್ದಾಡಿದ ಪುಟ್ಟಕ್ಕ
"ಪುಟ್ಟಕ್ಕ ಅಳಬೇಡ ಮಗು ಜೀವಾಪಾಯಾದಿಂದ ಆಚೆ ಬಂದಿರುವುದೇ ದೊಡ್ಡ ವಿಚಾರ" ಎಂದು ಹೇಳುತ್ತಾರೆ. ಮಗುವನ್ನು ಎತ್ತಿಕೊಳ್ಳುತ್ತಾರೆ ಮುದ್ದಿಸುತ್ತಾಲೆ ಇರುತ್ತಾರೆ. ಇದೆಲ್ಲವನ್ನೂ ನೋಡಿದ ಕಂಠಿಗೆ ಖುಷಿ ಆಗುತ್ತೆ. ಪುಟ್ಟಕ್ಕನ ಮೇಲೆ ಬಂದಿದ್ದ ಬಹುದೊಡ್ಡ ಆಪಾಧನೆ ಮಂಜಿನಂತೆ ಕರಗಿ ಹೋಗಿದೆ.


Click it and Unblock the Notifications











