Puttakkana Makkalu: ಪುಟ್ಟಕ್ಕನಿಗೆ ಶುರುವಾಯ್ತು ಅನುಮಾನ; ವಸುಗೆ ಕಾವಲಾಗಿ ನಿಂತ ಕಂಠಿ, ಮುಂದೇನು?

By ಪೂರ್ವ

ಪುಟ್ಟಕ್ಕಗೆ ಇದೀಗ ಮನದಲ್ಲಿ ಬಹಳ ದೊಡ್ಡ ಅನುಮಾನ ಶುರುವಾಗಿದೆ. ಮಗುವಿಗೆ ನಂಜು ಹೇಗೆ ಏರಲು ಸಾಧ್ಯ? ಮನೆಯಲ್ಲಿ ಬಹಳ ಜಾಗ್ರತೆಯಾಗಿ ಬಾಣಂತಿ ಹಾಗೂ ಮಗುವನ್ನು ನೋಡಿಕೊಳ್ಳುತ್ತಿರುವ ವೇಳೆ ಏನಾದರು ಆಗಿದೆಯಾ ಎಂದು ಕಂಠಿ ಹಾಗೂ ಸ್ನೇಹಾ ಜೊತೆ ಪುಟ್ಟಕ್ಕ ಚರ್ಚೆ ಮಾಡುತ್ತಿರುತ್ತಾರೆ. ಸ್ನೇಹಾ ಯಾರ ಜೊತೆಯೂ ಕೂಡ ನರ್ಸ್ ಹೇಳಿದ ಮಾತು ಹೇಳಬಾರದು ಎಂದುಕೊಂಡು ಇರುತ್ತಾಳೆ. ಆದರೆ, ಅಮ್ಮನ ಮಾತು ಕೇಳಿ ಸ್ನೇಹಾ, ಪುಟ್ಟಕ್ಕನ ಬಳಿ ನಿಜ ವಿಚಾರವನ್ನು ಹೇಳುತ್ತಾಳೆ.

ವಸು ಅತ್ತಿಗೆಯ ಮಗುವಿಗೆ ನಿಜವಾಗಲೂ ನಂಜು ಏರಿದ್ದಲ್ಲ. ಆಕೆಯ ಮಗುವಿಗೆ ಯಾರೋ ವಿಷ ಇಂಜೆಕ್ಟ್ ಮಾಡಿದ್ದಾರೆ. ನಮ್ಮ ಅದೃಷ್ಟ ಮಗು ಬದುಕಿ ಉಳಿದಿದೆ. ಇಲ್ಲವಾದರೆ, ಅದನ್ನು ನೆನಪಿಸಿಕೊಳ್ಳಲು ಭಯ ಆಗುತ್ತಿದೆ ಎಂದು ಬೇಸರದಿಂದ ಹೇಳುತ್ತಾಳೆ. ಆದರೆ, ಇದ್ಯಾರು ಮಾಡಿದ್ದು? ಯಾಕೆ ಮಾಡಿದ್ದು? ಎನ್ನುವುದು ನನಗೆ ತಿಳಿದಿಲ್ಲ. ಡಾಕ್ಟರ್ ಕೂಡ ನಮ್ಮಿಂದ ನಿಜ ಮುಚ್ಚಿಟ್ಟಿದ್ದಾರೆ. ಯಾಕೆ ಹೀಗೆಲ್ಲ ಆಗುತ್ತಿದೆ ಎಂಬುವುದನ್ನು ನಾನು ಕಂಡು ಹಿಡಿಯಬೇಕಾಗಿದೆ.

Puttakkana Makkalu serial July 25th episode update

"ವಸು ಹಾಗೂ ಆಕೆಯ ಮಗುವಿನ ಮೇಲೆ ಯಾರು ದ್ವೇಷ ಸಾಧಿಸುತ್ತಿದ್ದಾರೆ ಎಂಬುವುದು ತಿಳಿಯಬೇಕಾಗಿದೆ" ಎಂದು ಪುಟ್ಟಕ್ಕನ ಜೊತೆ ಸ್ನೇಹಾ ಹೇಳಿದಾಗ ಪುಟ್ಟಕ್ಕಗೆ ಬಹಳ ಶಾಕ್ ಆಗುತ್ತೆ. ಕಂಠಿಗೆ ಸ್ನೇಹಾ ಮಾತು ಕೇಳಿ ಸಿಡಿಲೆರಿದ ಅನುಭವ ಆಗುತ್ತೆ. "ನನ್ನ ತಂಗಿ ಮಗುವಿಗೆ ಈ ರೀತಿ ಮಾಡಿದವರನ್ನು ನಾನು ಯಾವತ್ತೂ ಸುಮ್ಮನೆ ಬಿಡುವುದು ಇಲ್ಲ" ಎಂದು ಬಹಳ ಕೋಪದಿಂದ ಹೇಳುತ್ತಾನೆ. ಆತನ ಮಾತು ಕೇಳಿದ ಸ್ನೇಹಾ ಕೋಪವನ್ನು ತಡೆಯುತ್ತಾಳೆ.

ಕಂಠಿ ಮನೆಗೆ ಬಂದ ವಸು

ಹೆಚ್ಚು ಕೋಪಿಸಿಕೊಳ್ಳದೆ ಮುಂದೆ ಏನಾಗುತ್ತೆ ಎನ್ನುವುದನ್ನು ನಾವು ಗಮನಿಸಬೇಕು. ವಸು ಹಾಗೂ ಆಕೆಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ. ಇನ್ನೂ ವಸು ಹಾಗೂ ಕಂಠಿ ಮನೆಗೆ ಬರುತ್ತಾರೆ. ಆಗ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮ ಆಕೆಗೆ ಆರತಿ ಎತ್ತಬೇಕು ಎನ್ನುವಷ್ಟರಲ್ಲಿ ವಸು ಹೇಳುತ್ತಾಳೆ. "ಅವ್ವ ಇದೆಲ್ಲ ಯಾಕೆ? ಪುಟ್ಟಕ್ಕ ಒಮ್ಮೆ ಆರತಿ ಎತ್ತಿ ಒಳಗೆ ಕರೆದುಕೊಂಡರು. ಇದೀಗ ಮತ್ತೆ ಯಾಕೆ?" ಎಂದು ಕೇಳಿದೆ ಅಷ್ಟೇ ಎಂದು ಹೇಳುತ್ತಾರೆ.

ರಾಧಾ ಮಾತಿಗೆ ಕೋಪಗೊಂಡ ಕಂಠಿ

ಈ ಮಾತನ್ನು ಕೇಳಿ ರಾಧಾ ಹೇಳುತ್ತಾಳೆ "ನೀವು ಮೊದಲು ಯಾಕೆ ಪುಟ್ಟಕ್ಕನ ಮನೆಗೆ ಹೋಗಿದ್ದು? ನೇರವಾಗಿ ಮನೆಗೆ ಬರುವುದಲ್ಲ" ಎಂದಾಗ ಕಂಠಿ ಕೊಂಚ ಜೋರಾಗಿಯೇ ಗದರುತ್ತಾನೆ. ಆಗ ರಾಧಾ ಮಾತನಾಡದೆ ಮೌನವಾಗಿ ಇರುತ್ತಾಳೆ. "ಈ ಮನೆಯಲ್ಲಿ ಕೂಡ ಆರತಿ ಮಾಡುವ ಅದರಲ್ಲಿ ಏನಿದೆ?" ಎಂದು ಸಿಂಗಾರಮ್ಮ ಹೇಳಿದಾಗ, ರಾಧಾ ಮನಸ್ಸಿನಲ್ಲಿ ಕೋಪ ಇದ್ದರೂ ಎದುರಲ್ಲಿ ತೋರಿಸದೆ ವಸು ಹಾಗೂ ಅವರ ಮಗುವಿಗೆ ಆರತಿ ಬೆಳಗುತ್ತಾಳೆ. ಇನ್ನೂ ಕಂಠಿ ವಸು ಹಾಗೂ ಆಕೆಯ ಮಗುವಿಗೆ ಕಾವಲಾಗಿ ನಿಂತಿದ್ದಾನೆ.

Puttakkana Makkalu serial July 25th episode update

ಸಮಾಧಾನ ಪಟ್ಟುಕೊಂಡ ವಸು

ಅಣ್ಣನನ್ನು ನೋಡಿ ವಸು ಹೇಳುತ್ತಾಳೆ "ಯಾಕೆ ಅಣ್ಣ ನಿದ್ದೆ ಮಾಡಿಲ್ವ" ಎಂದಾಗ "ಇಲ್ಲಮ್ಮ ನಿನ್ನ ಮಗು ಹಾಗೂ ನಿನ್ನನ್ನು ನಾನು ಯಾವತ್ತೂ ಕಾವಲು ಕಾಯುತ್ತೇನೆ" ಎಂದು ಹೇಳಿದಾಗ ವಸುಗೆ ಖುಷಿ ಆಗುತ್ತದೆ. ಇನ್ನೂ ಸಹನಾ ತನ್ನ ತಾಯಿ ತಂಗಿಯಂದಿರ ನೆನಪಲ್ಲಿ ದಿನ ಕಳೆಯುತ್ತಿದ್ದಾಳೆ. ಆಕೆಗೆ ತಾನು ಉತ್ತಮ ಸ್ಥಾನಕ್ಕೆ ಏರಬೇಕು. ಹಾಗೆಯೇ ಅವ್ವನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನದಲ್ಲಿ ಆಲೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Puttakkana Makkalu serial July 25th episode update:
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X