Puttakkana Makkalu:ಸಂಕಷ್ಟದಲ್ಲಿರುವ ಬಂಗಾರಮ್ಮ; ಅಮ್ಮನನ್ನು ಕಾಪಾಡುತ್ತಾನಾ ಕಂಠಿ?

By ಪೂರ್ವ

ಬಂಗಾರಮ್ಮ, ಸಿಂಗಾರಮ್ಮನ ಕೈಗೆ ಸಿಕ್ಕಿ ಇದೀಗ ಬಹಳ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಯ ಜೀವಕ್ಕೆ ಇದೀಗ ಕಂಠಕ ಪರಿಣಮಿಸಿದೆ. ಸಿಂಗಾರಮ್ಮ ಬಂಗಾರಮ್ಮನ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾರೆ. ಇನ್ನೂ ಬಂಗಾರಮ್ಮ ನೋವಿನಲ್ಲಿ ಚೀರಾಡುತ್ತಿದ್ದಾಳೆ. ಆಕೆಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ನೋವಿನಲ್ಲಿ ಇರುತ್ತಾಳೆ. ತನ್ನ ಮಗ ಕಂಠಿಯನ್ನು ನೆನೆದುಕೊಂಡು ಕಣ್ಣೀರು ಇಡುತ್ತಾಳೆ. ಇನ್ನೂ ನೋವಿನಲ್ಲಿರುವ ಅಮ್ಮನ ನೆನಪು ಕಂಠಿಗೆ ಕಾಡುತ್ತದೆ.

ಮಧ್ಯರಾತ್ರಿ ಅವ್ವ ಎಂದು ಕಂಠಿ ಚೀರಾಡುತ್ತಾನೆ. ಅವ್ವನಿಗೆ ಏನೋ ಆಗಿದೆ ಎಂದು ಬಹಳ ಬೇಸರ ವ್ಯಕ್ತ ಪಡಿಸುತ್ತಾನೆ. ಇನ್ನೂ ಕಂಠಿ ಚೀರಾಡುತ್ತಿರುವುದನ್ನು ನೋಡಿದ ಕಂಠಿಗೆ ಸ್ನೇಹಾ ಹೇಳುತ್ತಾಳೆ. ಏನಾಯಿತು ಯಾಕೆ ಹೀಗೆಲ್ಲ ನೀವು ಕಿರುಚಾಡುತ್ತಿದ್ದಿರಾ? ಎಂದು ಕೇಳಿದಾಗ ಕಂಠಿ ಹೇಳುತ್ತಾನೆ ಅವ್ವನಿಗೆ ಏನೋ ಪ್ರಾಬ್ಲಂ ಆಗಿದೆ. ಆಕೆಗೆ ಏನೋ ಆಗಿದೆ ಎಂದು ಭಯದಲ್ಲಿರುವಾಗ ಸ್ನೇಹಾ, ಕಂಠಿಗೆ ಧೈರ್ಯ ತುಂಬುತ್ತಾರೆ. ಅತ್ತೆ ಮನೆಯಲ್ಲಿ ಇದ್ದಾರೆ. ನೀವು ಯಾಕೆ ಇದಕ್ಕೆಲ್ಲ ಟೆನ್ಶನ್ ಮಾಡಿಕೊಳ್ಳುತ್ತೀರಾ? ನೀವು ಯಾವುದಕ್ಕೂ ಟೆನ್ಶನ್ ಮಾಡುವ ಅಗತ್ಯ ಇಲ್ಲ ಎಂದು ಹೇಳುತ್ತಾರೆ.

Puttakkana Makkalu serial July 26th episode update

ಇದನ್ನು ಕೇಳಿದ ಕಂಠಿಗೆ ಕೊಂಚ ಸಮಾಧಾನ ಆಗುತ್ತದೆ. ಆತ ಏನು ಮಾತನಾಡದೆ ಸುಮ್ಮನಾಗುತ್ತಾರೆ. ಇನ್ನೂ ಬೆಳಗ್ಗೆ ಎದ್ದ ಕೂಡಲೇ ಕಂಠಿ ಹಾಗೂ ಸ್ನೇಹಾ ಆಸ್ಪತ್ರೆಗೆ ಹೋಗುತ್ತಾರೆ. ಮಗುವನ್ನು ಟ್ರೀಟ್ ಮಾಡಿದ ವೈದ್ಯರ ಬಳಿಗೆ ಹೋಗುತ್ತಾರೆ. ಆದರೆ, ಅಲ್ಲಿ ವೈದ್ಯರು ಇಲ್ಲದೆ ಇರುವುದನ್ನು ನೋಡಿದ ಕಂಠಿಗೆ ಶಾಕ್ ಆಗುತ್ತದೆ. ಆ ಬಳಿಕ ನರ್ಸ್ ಬಳಿ ವೈದ್ಯರ ಬಗ್ಗೆ ಕೇಳಿದಾಗ ಅವರು ಕೆಲಸ ಬಿಟ್ಟು ಹೋಗಿದ್ದಾರೆ ಎನ್ನುವ ವಿಚಾರ ಸ್ನೇಹಾ ಕಂಠಿಗೆ ತಿಳಿಯುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರ ವ್ಯಕ್ತ ಪಡಿಸುತ್ತಾರೆ.

ವಸು ಮಗುವಿನ ಯೋಗ ಕ್ಷೇಮ ವಿಚಾರಿಸಿದ ಕಂಠಿ

ಇನ್ನೂ ವಸು ಮಗುವಿಗೆ ನಾನು ಯಾವತ್ತೂ ಕಾವಲಾಗಿ ಇರಬೇಕು . ಆಕೆಯ ಮಗುವಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಆಗಾಗ ವಸು ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾನೆ. ಇನ್ನೂ ಇದೇ ವೇಳೆ ಮ್ಯಾಕ್ಸ್ ವೆಲ್ ಬೆಂಗಳೂರಿಗೆ ಬರುತ್ತಾನೆ. ಪುಟ್ಟಕ್ಕನ ಮನೆಗೆ ಹೋಗಿ ಅಲ್ಲಿ ಕೊಟ್ಟ ಆತಿಥ್ಯವನ್ನು ಸ್ವೀಕಾರ ಮಾಡುತ್ತಾನೆ. ಆತನಿಗೆ ಪುಟ್ಟಕ್ಕನ ಮನೆಯಲ್ಲಿ ಅಥಿತಿ ಸತ್ಕಾರ ನೋಡಿ ಮನಸ್ಸಿಗೆ ಬಹಳಷ್ಟು ಖುಷಿ ಆಗುತ್ತದೆ. ಆ ಖುಷಿಯಲ್ಲಿ ಏನು ಮಾಡಬೇಕು? ಏನು ಮಾತನಾಡಬೇಕು ಎಂದು ತಿಳಿಯದಾಗುತ್ತೆ.

Puttakkana Makkalu serial July 26th episode update

ಸಹನಾ ಅಂಗಡಿ ಬಳಿ ಬಂದ ವಿದೇಶಿಗ

ಇನ್ನೂ ಮಾರ್ಕ್ಸ್ ವೆಲ್, ಸಹನಾ ಅಂಗಡಿಯ ಬಳಿಗೆ ಬರುತ್ತಾನೆ. ಅಲ್ಲಿ ಪುಟ್ಟಕ್ಕನ ಬಗ್ಗೆ ಹಾಡಿ ಹೊಗಳುತ್ತಾನೆ. ಆದರೆ, ಸಹನಾಗೆ ಆತನ ಮಾತು ಕೇಳಿ ಬಹಳ ಖುಷಿ ಆಗುತ್ತದೆ. ಸಹನಾ, ಮಾರ್ಕ್ಸ್ ವೆಲ್ ಹತ್ರ ಕೇಳುತ್ತಾರೆ. "ಸುಮಾ ಊಟ ಬಡಿಸಿದ್ರಾ? ಅಡುಗೆ ಯಾರು ಮಾಡಿದರು? ಅವ್ವ ಮಾಡಿದ್ರಾ?" ಎಂದು ಕೇಳಿದಾಗ ಮಾರ್ಕ್ಸ್ ವೆಲ್ ಏನು ಮಾತನಾಡಬೇಕು ಎಂದು ತಿಳಿಯದೇ ಸುಮ್ಮನೆ ನಿಲ್ಲುತ್ತಾನೆ. ಸಹನಾ ಮಾತ್ರ ಬಹಳ ಖುಷಿ ಪಡುತ್ತಾಳೆ. ಆದರೆ ಸಹನಾ ಮಾತಿಗೆ ಮಾರ್ಕ್ಸ್ ವೆಲ್ ಮಾತ್ರ ಮೌನವಾಗಿ ಆಕೆಯ ಮುಖದ ಭಾವವನ್ನು ಗಮನಿಸುತ್ತಿರುತ್ತಾರೆ. ಸಹನಾ ಅವರು ಯಾರು? ಏನು? ಎಂಬುವುದು ಮಾರ್ಕ್ಸ್ ವೆಲ್‌ಗೆ ತಿಳಿಯಬೇಕಾಗಿದೆ.

ಸಹನಾ ಮಾತಿಗೆ ಕಾಯುತ್ತಿರುವ ಮಾರ್ಕ್ಸ್ ವೆಲ್

ಆತ ಪುಟ್ಟಕ್ಕನ ಮನೆಯಲ್ಲಿ ಸಹನಾ ಭಾವಚಿತ್ರ ನೋಡಿದ್ದಾರೆ. ಆದರೆ ಆ ಭಾವಚಿತ್ರ ನೋಡಿ ಕೊಂಚ ಸ್ತಬ್ಧವಾಗಿ ನಿಂತ ಮಾರ್ಕ್ಸ್ ವೆಲ್ ಆಕೆಯ ಬಾಯಿಯಿಂದಲೇ ಏನಾದರೂ ವಿಚಾರ ಹೊರ ಬರುತ್ತದಾ ಎನ್ನುವುದನ್ನು ಕಾದು ನೋಡುತ್ತಾನೆ. ಇನ್ನೂ ಮಾರ್ಕ್ಸ್ ವೆಲ್ ನೋಟಕ್ಕೆ ಸಹನಾಗೆ ತಿಳಿಯುತ್ತದೆ. ನಾನು ಇಲ್ಲಿ ಈ ರೀತಿ ಮಾತನಾಡಿರುವುದು ವಿದೇಶಿಗನಿಗೆ ಅನುಮಾನ ಹುಟ್ಟಿಸುತ್ತಿದೆ ಎನ್ನುವುದು ತಿಳಿದು ಕೊಂಚ ಆತಂಕ ವ್ಯಕ್ತ ಪಡಿಸುತ್ತಾರೆ ಇನ್ನೂ ಸಹನಾ ಈ ಎಲ್ಲಾ ವಿಚಾರವನ್ನು ಮಾರ್ಕ್ಸ್ ಜೊತೆ ಹಂಚಿಕೊಳ್ಳಬೇಕಾಗಿದೆ.

More from Filmibeat

English summary
Puttakkana Makkalu serial July 26th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X