ಮುರಳಿ ಮೇಷ್ಟ್ರಿನ ಮೇಲಿರೋ ಪ್ರೀತಿನ ಹೊರ ಹಾಕುತ್ತಾಳಾ ಸಹನಾ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದೆ. ಅದರಲ್ಲೂ ಸಹನಾ, ಮುರಳಿ ಮೇಷ್ಟ್ರ ಲವ್ ಸ್ಟೋರಿ ನೋಡಲು ಚೆನ್ನಾಗಿದೆ. ಸಹನಾ, ದೀಪ ಇಡುವ ಬಳಿ ಜಾರಿ ಬೀಳುತ್ತಿರುವಾಗ ಅವಳನ್ನು ಬೀಳದಂತೆ ಬಾಚಿ ತಬ್ಬಿಕೊಂಡು ರಕ್ಷಣೆ ಮಾಡುತ್ತಾರೆ ಮೇಷ್ಟ್ರು. ಇದನ್ನು ಕಂಡ ಸಹನಾ ನಾಚಿ ನೀರಾಗುತ್ತಾಳೆ.
ಬಳಿಕ ಅಲ್ಲಿಂದ ಹೊರಡಲು ಅನುವಾಗುತ್ತಾಳೆ, ಆಗ ಮುರಳಿ ಮೇಷ್ಟ್ರು ಹೇಳುತ್ತಾರೆ ಏನ್ರೀ ನೀವು? ಕಾಲು ಜಾರಿ ಬಿಳೋರನ್ನು ಕೈ ಹಿಡಿದು ಕಾಪಾಡಿದ್ದೀನಿ. ಅಲ್ಲಾ ಒಂದು ಸಣ್ಣ ಥಾಂಕ್ಸ್ ಹೇಳದೆ ಹೋಗುತ್ತಿದ್ದೀರಿ' ಎಂದಾಗ ಸಹನಾ ಅಲ್ಲಿಯೇ ಪಕ್ಕ ದೀಪಗಳನ್ನು ಇಡುತ್ತಾಳೆ. ಬಳಿಕ ಮುರಳಿ ಮಾತು ಮುಂದುವರೆಸುತ್ತಾನೆ ನೀವು ಥಾಂಕ್ಸ್ ಹೇಳೋದಿರಲಿ ನಾನು ಹೇಳೊ ಥಾಂಕ್ಸ್ ಅನ್ನು ಕೆಲಿಸಿಕೊಳ್ಳದೆ ಹೋಗೊರಲ್ವಾ ನೀವು. ಹೂ ನೀವೆ ನಾನು ಊರಿಗೆ ಬರೋ ಸಂದರ್ಭದಲ್ಲಿ ನೀವು ನಿಮಗೋಸ್ಕರ ಇಟ್ಟುಕೊಂಡಿರೋ ತಿಂಡಿನ ನಂಗೆ ಕೊಟ್ರಿ. ಹಸಿವೆಗೆ ಕಣ್ಣಿಲ್ಲ ಎಂದು ಕೊಂಡು ಅದನ್ನು ಗಬ ಗಬ ಅಂತ ತಿಂದು ಬಿಟ್ಟೆ ಬಳಿಕ ಕೈ ತೊಳೆದು ರೂಮ್ ಗೆ ಹೋದಾಗ ರೂಮ್ ಪ್ರೆಶ್ ನರ್ ಹೊಡೆದ ಹಾಗೆ ರೂಮ್ ತುಂಬಾ ನಿಮ್ಮದೇ ಘಮ'' ಎಂದು ಮಾತನಾಡಲು ಆರಂಭಿಸುತ್ತಾರೆ ಮೇಷ್ಟ್ರು.

ಕೈರುಚಿ ಹೊಗಳುವ ಮೇಷ್ಟ್ರು
ಬಳಿಕ ನಗುತ್ತಾ, ಅಂದ್ರೆ ನಿಮ್ಮ ಕೈ ರುಚಿಯದ್ದು ಅದೆಷ್ಟು ಬಾರಿ ನನ್ನ ಕೈ ನ ಮುಖದ ಬಳಿ ತರುತ್ತಿದ್ದೇನೋ ನನಗೆ ಗೊತ್ತಿಲ್ಲ. ಬಳಿಕ ತನ್ನ ಕೈಯನ್ನು ಮುಖದ ಬಳಿ ತಗೊಂಡು ಬಂದು ವಾಸನೆ ನೋಡಿ ಬಳಿಕ ಹೇಳುತ್ತಾನೆ ಈಗಲೂ ನಿಮ್ಮ ಕೈ ರುಚಿಯದ್ದೆ ಘಮ ಬರುತ್ತಿದೆ. ಎಂದಾಗ ಸಹನಾ ನಾಚಿಕೊಳ್ಳುತ್ತಾಳೆ. ಅಂದ್ರೆ ನಿಮ್ಮ ಕೈ ಹಿಡಿದು ಕೊಂಡೆನಲ್ಲ ಅದಕ್ಕೆ ಹೇಳಿದೆ ಎಂದಾಗಲೂ ಸಹನಾ ಮೌನ ವಹಿಸಿದ್ದನ್ನು ನೋಡಿ ಹೇಳುತ್ತಾನೆ ಛೇ ಛೇ ನೀವು ತಪ್ಪು ತಿಳಿದುಕೊಳ್ಳಬೇಡಿ ಕೆಲವೊಂದು ಬಾರಿ ತಮಾಷೆಗೆ ಮಾತನಾಡಲು ಹೋಗಿ ಏನೇನೋ ಮಾತನಾಡಿ ಬಿಡುತ್ತೇನೆ. ತಪ್ಪಾಯಿತು ಎನ್ನುತ್ತಾರೆ ಮೇಷ್ಟ್ರು.

ಮೇಷ್ಟ್ರ ಮಾತಿಗೆ ಸಹನಾ ನಗು
ಹಾಗೆ ಹೇಳಬೇಕಾದರೆ ಸಹನಾ ಸ್ವಲ್ಪ ಮುಂದೆ ಹೋಗಿ ಜೋರಾಗಿ ನಗುತ್ತಾಳೆ. ಸಹನಾ ಮುಂದೆ ಹೋಗಿದನ್ನು ನೋಡಿ ಮುರಳಿ ಮೇಷ್ಟ್ರಿಗೆ ಏನು ಅಂತ ಅರ್ಥ ಆಗದೆ ವಾಪಸ್ ನೋಡಿದಾಗ ಸಹನಾ ನಗುತ್ತಿದ್ದಳು ಇದನ್ನು ನೋಡಿದ ಮುರಳಿ ಹೇಳುತ್ತಾನೆ ಸಹನಾ ಅವರೇ ನೀವು ನಗುತ್ತಿದ್ದಿರಾ ಸಡನ್ ಆಗಿ 500 ದೀಪ ಒಟ್ಟಿಗೆ ಬೇಳಗುತ್ತಲ್ಲಾ ಹಾಗೆ ಹೊಳಿತಿದೆ ರೀ.. ಎಲ್ಲಾ ಎಂದು ಹೊಗಳುತ್ತಾನೆ.

ಮೇಷ್ಟ್ರಿಗೆ ಥ್ಯಾಂಕ್ಸ್ ಹೇಳುವ ಸಹನಾ
ಸಹನಾ ಅವರೇ ನೀವು ನಿಜವಾಗಿಯೂ ನಗುತ್ತಿದ್ದಿರಾ ಎಂದಾಗ ಸಹನಾ ಮುಸಿ ಮುಸಿ ನಗುತ್ತಾಳೆ. ಅದಕ್ಕೆ ಮೇಷ್ಟ್ರು ಹೇಳುತ್ತಾರೆ ನನಗೆ ತಮಾಷೆಯಾಗಿ ಅಷ್ಟೂ ನೀಟಾಗಿ ಮಾತನಾಡಲು ಬರುವುದಿಲ್ಲ. ಆದ್ರೂ ನಿಮ್ಮ ನಗುನ ನನಗೆ ಪ್ರಶಸ್ತಿ ಆಗಿ ಕೊಟ್ಟಿದ್ದಕ್ಕೆ ಥಾಂಕ್ಸ್ ರಿ ಎಂದು ಹೇಳುತ್ತಾನೆ. ಈಗಲೂ ನೋಡಿ ನಾನು ನಿಮ್ಮನ್ನು ಕೈ ಹಿಡಿದು ಕಾಪಾಡಿದರು ನಾನೇ ನಿಮಗೆ ಥ್ಯಾಂಕ್ಸ್ ಹೇಳುತ್ತಿದ್ದೇನೆ. ಎಂದಾಗ ಮುರಳಿ ಬಳಿಗೆ ಸಹನಾ ಬರುತ್ತಾಳೆ ಬಳಿಕ ಥಾಂಕ್ಸ್ ಎಂದು ಹೇಳುತ್ತಾಳೆ.

ಮುರಳಿಗೆ ನಂಬಲಾಗುತ್ತಿಲ್ಲ
ಆಗ ಮುರಳಿ ಹೇಳುತ್ತಾನೆ ಸಹನಾ ಅವರೇ ನೀವೇನೋ ಅಂದ್ರಿ ಥಾಂಕ್ಸ್ ಹೇಳಿದ್ರಾ ಎಂದು ಆಶ್ಚರ್ಯದಿಂದ ಕೇಳುತ್ತಾನೆ. ಅದಕ್ಕೆ ಸಹನಾ ಹೌದು ಎಂದು ತಲೆಯಾಡಿಸುತ್ತಾಳೆ. ಅದಕ್ಕೆ ಮುರಳಿ ಪುನಃ ಹೇಳುತ್ತಾನೆ ಯಪ್ಪಾ ಥಾಂಕ್ಸ್ ಎಂದು ಬಿಟ್ರಾ ದೇವರು ನಿಜವಾಗಲೂ ಇದ್ದಾನೆ. ಈಗ 5೦೦ ಅಲ್ಲಾ ಸಾವಿರ ಎಂದಾಗ ಸಹನಾ ಕೇಳುತ್ತಾಳೆ ಎನು ಎಂದು ಅದಕ್ಕೆ ಮುರಳಿ ಹೇಳುತ್ತಾರೆ ಸಹನಾ ದೀಪಗಳು ಒಟ್ಟಿಗೆ ಸಾವಿರ ದೀಪಗಳು ಹಚ್ಚಿದ ಹಾಗೆ ಕಾಣುತ್ತದೆ ಎಂದು ಹೇಳುತ್ತಾನೆ.


Click it and Unblock the Notifications











