Puttakkana Makkalu:ಸೊಸೆಯ ಆರೈಕೆಯಲ್ಲಿ ಕಂಠಿ; ರಾಧಾ ಕೋಪಗೊಂಡಿದ್ದೇಕೆ?

By ಪೂರ್ವ

ಕಂಠಿ, ವಸು ಮಗುವಿಗೆ ಆದ ಆಪತ್ತನ್ನು ನೆನೆದು ಬಹಳ ಆತಂಕಕ್ಕೆ ಒಳಗಾಗಿದ್ದಾನೆ. ಎಲ್ಲಿ ನನ್ನ ಸೊಸೆಗೆ ಏನಾದರು ಅನಾಹುತ ಆಗುತ್ತದೆಯೋ ಎಂದು ಸಾಕಷ್ಟು ಭಯ ಪಡುತ್ತಾನೆ. ಹಾಗೆಯೇ ಇದೀಗ ಮಗುವಿನ ಆರೈಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಚೌಡವ್ವಗೆ ಇಬ್ಬರು ಮಕ್ಕಳಿರುವ ವಿಚಾರ ಕಂಠಿಗೆ ತಿಳಿದಿರುವುದಿಲ್ಲ. ಆತ ಸಿಂಗಾರಮ್ಮನನ್ನು ನೋಡಿ ನನ್ನ ತಾಯಿ ಎಂದೇ ತಿಳಿದುಕೊಂಡಿದ್ದಾರೆ.

ಆದರೆ, ಸಿಂಗಾರಮ್ಮ ಮಾತ್ರ ದ್ವೇಷದಿಂದ ಒಳಗೊಳಗೆ ಕುದಿಯುತ್ತಿದ್ದಾಳೆ. ಹೇಗಾದರೂ ಮಾಡಿ ಬಂಗಾರಮ್ಮನ ಇಡೀ ಆಸ್ತಿಯನ್ನು ತನ್ನ ಕೈವಶ ಮಾಡಿಕೊಳ್ಳಬೇಕು ಎನ್ನುವುದು ಸಿಂಗಾರಮ್ಮನ ತಂತ್ರ. ವಸು ಮಗುವನ್ನು ಬಹಳ ಜಾಗರೂಕತೆಯಿಂದ ಕಂಠಿ ನೋಡಿಕೊಳ್ಳುತ್ತಾನೆ. ಕಂಠಿಗೆ ಆತನ ಅಜ್ಜಿ ಚೌಡವ್ವ ಸಹಾಯವನ್ನು ಮಾಡುತ್ತಾಳೆ. ಹೇಗೆ ಮಗುವನ್ನು ನೋಡಿಕೊಳ್ಳಬೇಕು ಯಾವ ರೀತಿ ಮಗು ಜೊತೆ ಬೆರೆಯಬೇಕು? ಹೇಗೆ ಮಗುವಿನ ಆರೈಕೆ ಮಾಡಬೇಕು? ಎನ್ನುವುದನ್ನು ಚೌಡವ್ವ ಕಂಠಿಗೆ ಹೇಳಿ ಕೊಡುತ್ತಿರುತ್ತಾರೆ. ವಸುವಿನ ಮಗುವಿಗೆ ಎಣ್ಣೆ ಹಚ್ಚುವುದರಿಂದ ಸ್ನಾನ ಮಾಡಿಸುವವರೆಗೂ ಎಲ್ಲಾ ಕೆಲಸವನ್ನು ಕಂಠಿ ಮಾಡುತ್ತಾನೆ.

Puttakkana Makkalu serial July 29th episode update

ಇದನ್ನು ನೋಡಿದ ವಸುಗೆ ಕಣ್ತುಂಬಿ ಬರುತ್ತದೆ. ತನ್ನ ಅಣ್ಣ ತನ್ನ ಮಗುವಿಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ? ತನ್ನ ಮಗುವಿನ ಆರೈಕೆ ಮಾಡುತ್ತಿದ್ದಾನೆ. ಇದನ್ನು ನಾನು ನೋಡಲು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಎಲ್ಲರ ಮುಂದೆ ಹೇಳಿದಾಗ ಎಲ್ಲರಿಗೂ ಖುಷಿಯಾಗುತ್ತದೆ. ಸಿಂಗಾರಮ್ಮ ಯಾರಿಗೂ ಅನುಮಾನ ಬಾರದ ಹಾಗೆ ನೋಡಿಕೊಳ್ಳುತ್ತಾಳೆ. ಆದರೆ, ಚೌಡವ್ವಗೆ ಈಕೆ ಬಂಗಾರಮ್ಮ ಅಥವಾ ಸಿಂಗಾರಮ್ಮನ ಎಂದು ತಿಳಿದುಕೊಳ್ಳಲು ಒಂದೇ ಒಂದು ದಾರಿ ಇರುತ್ತದೆ ಬಂಗಾರಮ್ಮನ ಕುತ್ತಿಗೆಯ ಬಳಿ ಒಂದು ಮಚ್ಚೆ ಇರುತ್ತದೆ.

ಬಂಗಾರಮ್ಮನ ನಡವಳಿಕೆಯಲ್ಲಿ ಬದಲಾವಣೆ

ಆ ಮಚ್ಚೆ ಸಿಂಗಾರಮ್ಮನ ಕುತ್ತಿಗೆಯ ಬಳಿ ಇರುವುದಿಲ್ಲ. ಇದರಿಂದ ಬಂಗಾರಮ್ಮ ಯಾರು? ಸಿಂಗಾರಮ್ಮ ಯಾರು? ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಚೌಡವ್ವ ಮೊದಲು ನೋಡುವುದು ಬಂಗಾರಮ್ಮನ ಕುತ್ತಿಗೆಯ ಭಾಗವನ್ನು. ಆ ಭಾಗದಲ್ಲಿ ಮಚ್ಚೆ ಇದ್ದರೆ, ಆಕೆ ಬಂಗಾರಮ್ಮನೆ ಎಂದು ಆಕೆಯ ನಂಬಿಕೆ. ಆದರೆ ಸಿಂಗಾರಮ್ಮ, ಬಂಗಾರಮ್ಮನ ರೂಪದಲ್ಲಿದ್ದುಕೊಂಡೆ ಅಮ್ಮನ ಕಣ್ಣಿಗೆ ಮಣ್ಣೆರಚುತ್ತಿದ್ದಾಳೆ. ಕುತ್ತಿಗೆಯ ಭಾಗಕ್ಕೆ ಕಾಡಿಗೆಯನ್ನು ಹಚ್ಚಿ ಮಚ್ಚೆ ಇರುವ ಹಾಗೆ ಬಿಂಬಿಸುತ್ತಾಳೆ.

ಕಷ್ಟದ ಪರಿಸ್ಥಿತಿಯಲ್ಲಿ ಬಂಗಾರಮ್ಮ

ಬಂಗಾರಮ್ಮ ಬಹಳ ಕಷ್ಟದ ಸ್ಥಿತಿಯಲ್ಲಿರುತ್ತಾಳೆ . ಆಕೆಗೆ ತನ್ನ ಮಗ ನನ್ನನ್ನು ಉಳಿಸಿಕೊಂಡೇ ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ. ಯಾವತ್ತಾದರೂ ನನ್ನ ಮಗನಿಗೆ ಸತ್ಯದ ಅರಿವಾಗಿ ಖಂಡಿತವಾಗಿಯು ನನ್ನ ಹುಡುಕಿಕೊಂಡು ಬರುತ್ತಾರೆ ಎಂದು ಮನದಲ್ಲಿ ಹೇಳುತ್ತಾರೆ. ಇತ್ತ ಸಹನಾ ಅವ್ವನ ನೆನಪಲ್ಲೇ ಕಾಲ ಕಳೆಯುತ್ತಿದ್ದಾರೆ. ನಾನು ತುಂಬಾ ಕಷ್ಟಪಟ್ಟು ಒಳ್ಳೆಯ ಸ್ಥಾನಕ್ಕೆ ಬರಬೇಕು. ತನ್ನ ಅವ್ವನನ್ನು ಜೋಪಾನವಾಗಿ ಸಾಕಬೇಕು, ಯಾವತ್ತೂ ಆಕೆಯ ಕಣ್ಣಲ್ಲಿ ನೀರು ತರಬಾರದು ಎಂದೆಲ್ಲ ಆಲೋಚನೆ ಮಾಡುತ್ತಿರುತ್ತಾಳೆ.

Puttakkana Makkalu serial July 29th episode update

ಅವ್ವನ ನೆನಪಲ್ಲಿ ಸಹನಾ

ಆದರೆ ಅದಕ್ಕೆಲ್ಲ ಕಾಲ ಕೂಡಿ ಬರಬೇಕಾಗಿದೆ. ತನ್ನ ಅವ್ವ ಖಂಡಿತವಾಗಿಯೂ ಚೆನ್ನಾಗಿ ಇರುತ್ತಾಳೆ ಎನ್ನುವ ನಂಬಿಕೆ ಆಕೆಗೆ ಇರುತ್ತದೆ. ಇನ್ನೂ ಪುಟ್ಟಕ್ಕ ಎಲ್ಲಾ ದೋಷಗಳಿಂದ ಮುಕ್ತಾವಾಗಿದ್ದಾಳೆ. ಆಕೆಗೆ ಬಹಳ ಬೇಸರ ಇದೆ. ಸಹನಾ ಇದ್ದಿದ್ದರೆ ಇನ್ನೂ ಚೆನ್ನಾಗಿ ಜೀವನ ಮಾಡಬಹುದಿತ್ತೆನೋ ಎನ್ನುವ ಆಸೆ ಆಕೆಗೆ ಇರುತ್ತದೆ.

More from Filmibeat

English summary
Puttakkana Makkalu serial July 29th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X