ದೇವರ ಮುಂದೆ ಪ್ರೇಮ ನಿವೇದನೆ ಮಾಡಿದ ಮುರಳಿ ಮೇಷ್ಟ್ರು

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಸಹನಾ ಮತ್ತು ಮುರಳಿ ಮೇಷ್ಟ್ರ ಪ್ರೇಮ ಸದ್ದಿಲ್ಲದೆ ನಡೆಯುತ್ತಿದೆ. ಇತ್ತ ಪುಟ್ಟಕ್ಕನ ಗಂಡ ಆತನ ಎರಡನೇ ಹೆಂಡತಿ ಬಳಿ ಮಾತನಾಡುತ್ತಿದ್ದಾನೆ ಆತ ರಾಜೀ ಬಳಿ ಹೇಳುತ್ತಿದ್ದಾನೆ ರಾಜೀ ಬೆಳಗ್ಗೆ ಎದ್ದು ಹೋದರೆ ನನ್ನ ಮರ್ಯಾದಿ ಹೋಗುತ್ತದೆ ಎನ್ನುತ್ತಾನೆ.

ಹಾಗ ಹಾಗಿದ್ರೆ ನನ್ನ ಹೆಸರನ್ನು ಸಾವಿರ ಸಲ ಹೇಳಿ ಎಂದಾಗ ಹೇಳುತ್ತಾನೆ ರಾಜೀ ಈಗ ಸಮಯ ಎರಡು ಗಂಟೆ ... ಯಾಕೆ ಸುಮ್ಮನೆ ಜಗಳ ಎಂದು ಹೇಳುತ್ತಾನೆ. ಅದಕ್ಕೆ ರಾಜೇಶ್ವರಿ ಹೇಳುತ್ತಾಳೆ ಮೈ ಮೇಲೆ ಪ್ರಜ್ಞೆ ಇಲ್ಲದೆ ಅವಳ ಹೆಸರು ಹೇಳುತ್ತಿದ್ದೆ. ಸುಮ್ಮನೆ ಈಗ ನನ್ನ ಹೆಸರು ಹೇಳು ಆಮೇಲೆ ಮಲಕ್ಕೊ ಎಂದು ಹೇಳುತ್ತಾಳೆ.

ಅದಕ್ಕೆ ಗಲಿಬಿಲಿ ಆದ ನೀಲಕಂಠ ಏನು ಇದೀಗ ಕುಂತುಕೊಂಡು ಹೇಳಬೇಕಾ ನಿಂತುಕೊಂಡು ಹೇಳಬೇಕಾ ಎಂದಾಗ ನಿಂತುಕೊಂಡು ಹೇಳು ಎಂದು ಹೇಳುತ್ತಾಳೆ. ಬಳಿಕ ನೀಲಕಂಠ ರಾಜೀ ರಾಜೀ ಎಂದು ಹೇಳುತ್ತಾನೆ. ಅದನ್ನು ರಾಜೇಶ್ವರಿ ಲೆಕ್ಕ ಮಾಡುತ್ತಾ ಮಲಗುತ್ತಾಳೆ. ಇದನ್ನು ಕಂಡ ನೀಲ ಕಂಟನು ಮಲಗುತ್ತಾನೆ.

ಇಬ್ಬರ ಲವ್‌ ಸ್ಟೋರಿ ಏನಾಗುತ್ತದೆ?

ಇಬ್ಬರ ಲವ್‌ ಸ್ಟೋರಿ ಏನಾಗುತ್ತದೆ?

ಇತ್ತ ಕಂಠಿ ಸ್ನೇಹಿತರು ಮಾತನಾಡಿಕೊಂಡು ಹೋಗುತ್ತಿರುತ್ತಾರೆ, ಆಗ ಒಬ್ಬಾತ ಹೇಳುತ್ತಾನೆ ನಮ್ಮ ಅಣ್ಣ ಯಾಕೋ ಅತ್ತಿಗೆಗೆ ಪ್ರಪೋಸ್ ಮಾಡುತ್ತಿಲ್ಲ ಎಂದಾಗ ಮತ್ತೊಬ್ಬ ಅಯ್ಯೋ ಬಡ್ಡೆತಾದೆ ಅಪಶಕುನ ನುಡಿಬೇಡ ಎಂದು ಹೇಳುತ್ತಾನೆ. ಆಗ ಸುಮಾ ಹಾಗೂ ಸಹನಾ ಗೆಳತಿ ಮಾತನಾಡುತ್ತಾ ಇರುತ್ತಾಳೆ. ಸುಮಾ ಹೇಳುತ್ತಾಳೆ ಇಬ್ಬರು ಒಟ್ಟಿಗೆ ಇರುತ್ತಾರೆ ಮಾತನಾಡಲಿ. ಇಬ್ಬರು ಲವ್ ಸ್ಟೋರಿ ಹೇಳಿಕೊಂಡರೆ ಸಾಕು ಇಲ್ಲವಾದರೆ ಇಬ್ಬರು ಬ್ರಹ್ಮಚಾರಿಯಾಗುತ್ತಾರೆ ಅಷ್ಟೇ ಎಂದು ಹೇಳುತ್ತಾಳೆ.

ಸಹನಾ ಗೆಳತಿ ಹಾಗೂ ಸುಮಾ ಮಾತುಕತೆ

ಸಹನಾ ಗೆಳತಿ ಹಾಗೂ ಸುಮಾ ಮಾತುಕತೆ

ಇತ್ತ ಕಂಠಿ ಸ್ನೇಹಿತರು ಹೇಳುತ್ತಾರೆ ಅಣ್ಣನಿಗೆ ಮದುವೆ ಆಗಬೇಕು ಮದುವೆ ಆದರೆ ನಮಗೂ ಕೂಡ ಜೀವನದಲ್ಲಿ ಒಳಿತಾಗುತ್ತದೆ..ಆಗ ಮತ್ತೊಬ್ಬತ ಹೇಳುತ್ತಾನೆ ಹೂ ಕಣೋ ಅಣ್ಣ ಅತ್ತಿಗೆ ಜೊತೆ ಪ್ರೀತಿ ಹೇಳಿದರೆ ಒಳ್ಳೆದಿತ್ತು ಕಣೋ ಅವನ ಜೀವನವು ಉತ್ತಮ ಆಗುತ್ತೆ ಎಂದು ಹೇಳುತ್ತಾನೆ. ಇತ್ತ ಸಹನಾ ಗೆಳತಿ ಹೇಳುತ್ತಾಳೆ ಸುಮಾ ನಿನಗೆ ಮೇಷ್ಟ್ರನ್ನು ನೋಡಿದರೆ ಪ್ರೀತಿ ಹೇಳುವ ಹಾಗೆ ಕಾಣುತ್ತದ ಎಂದಾಗ ಸುಮಾ ಹೇಳುತ್ತಾಳೆ ಏನೋ ಗೊತ್ತಿಲ್ಲ. ಆದರೆ ಭಯ ಪಟ್ಟುಕೊಂಡು ಏನೇನೋ ಮಾತಮಾಡುತ್ತಾ ಪ್ರೀತಿ ಹೇಳಬಹುದು ಅಂದುಕೊಂಡಿದ್ದೇನೆ ಎಂದು ಹೇಳುತ್ತಾರೆ.

ಮುರಳಿ ಮೇಷ್ಟ್ರೇ ಭಾವ ಆಗಬೇಕೆಂದು ಕೇಳಿಕೊಂಡ ಸುಮಾ

ಮುರಳಿ ಮೇಷ್ಟ್ರೇ ಭಾವ ಆಗಬೇಕೆಂದು ಕೇಳಿಕೊಂಡ ಸುಮಾ

ಇತ್ತ ಕಡೆ ಕಂಠಿ ಗೆಳೆಯರು ಹೇಳಿಕೊಳ್ಳುತ್ತಾರೆ ಎಲ್ಲಾ ನಾವು ಅಂದುಕೊಂಡ ಹಾಗೆ ಇರಲಿ ಅಣ್ಣ ಅತ್ತಿಗೆಗೆ ಪ್ರೀತಿ ಹೇಳಲಿ. ಅಣ್ಣಾ ಏನಾದರು ಉಲ್ಟಾ ಹೇಳಿದರೆ ಎಲ್ಲಾ ಉಲ್ಟಾ ಪಲ್ಟಾ ಆಗುತ್ತದೆ..ಬಾ ಹೋಗುವ ಎಂದು ಹೇಳುತ್ತಾನೆ. ಇತ್ತ ಸುಮಾ ದೇವರಲ್ಲಿ ಬೇಡಿಕೊಳ್ಳುತ್ತನೆ ಇರುತ್ತಾಳೆ. ದೇವರೇ ಮುರಳಿ ಮೇಷ್ಟ್ರೇ ಭಾವ ಆಗಿ ಸಿಗೋ ಅವಕಾಶ ಸಿಗಲಿ ಆ ಆಸೆನಾ ನೆರವೇರಿಸಪ್ಪ ಎಂದು ಕೇಳಿಕೊಳ್ಳುತ್ತಾಳೆ.

ಸಹನಾ ಹಾಗೂ ಮುರಳಿ ಮೇಷ್ಟ್ರ ಮಾತುಕತೆ

ಸಹನಾ ಹಾಗೂ ಮುರಳಿ ಮೇಷ್ಟ್ರ ಮಾತುಕತೆ

ಇನ್ನೂ ಮುರಳಿ ಮೇಷ್ಟ್ರು ಹಾಗೂ ಸಹನಾ ಮಾತನಾಡಿಕೊಳ್ಳುತ್ತಿರುತ್ತಾರೆ. ಸಹನಾ ಅವರೇ ನಿಮಗೆ ಗಂಡಿನ ಕಡೆಯವರು ನೋಡಲು ಬಂದಾಗ ನನ್ನ ಹಾರ್ಟ್ ಬಿಟ್ ಜಾಸ್ತಿ ಆಗಿತ್ತು. ಸಹನಾ ಅವರೇ ನಾನು ಸತ್ತು ಸತ್ತು ಬದುಕುತ್ತಿದ್ದೇನೆ. ಈಗ ನನ್ನ ಅದೃಷ್ಟ ಚೆನ್ನಾಗಿದೆ. ಈ ಅದೃಷ್ಟನ ಮಿಸ್ ಮಾಡಿಕೊಂಡರೆ ನನ್ನಷ್ಟು ದುರಾದೃಷ್ಟವಂತ ಬೇರೆ ಯಾರೂ ಇಲ್ಲ. ಎಂದಾಗ ಸಹನಾ ನಾಚಿಕೊಳುತ್ತಾಳೆ. ಬಳಿಕ ಹೇಳುತ್ತಾನೆ ಸಹನಾ ಅವರೇ ಎಲ್ಲಾ ದೇವರ ಸತ್ಯವಾಗಳೂ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದಾಗ ಸಹನಾಗೆ ಎನು ಹೇಳಬೇಕೋ ತಿಳಿಯದೇ ಸುಮ್ಮನಿರುತ್ತಾಳೆ.

More from Filmibeat

English summary
Puttakkana Makkalu Serial July 29th Episode Written Update. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X