Puttakkana Makkalu:ಬಂಗಾರಮ್ಮ ತದ್ರೂಪಿ ಸಿಂಗಾರಮ್ಮ ಪ್ರತ್ಯಕ್ಷ; ಮುಂದೆ ಧಾರಾವಾಹಿ ಇನ್ನೂ ರೋಚಕ

By ಪೂರ್ವ

ಸಹನಾಗೆ ಸಹಾಯ ಆಗಬಹುದು ಎನ್ನುವ ನಿಟ್ಟಿನಲ್ಲಿ ಮ್ಯಾಕ್ಸ್ ವೆಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಮಾಡಿಕೊಂಡು ಸಹನಾ ಕ್ಯಾಂಟೀನ್ ಬಗ್ಗೆ ಹೊಗಳುತ್ತಾ ಇರುತ್ತಾನೆ. ಸಹನಾ ಎಂದರೆ ಎಲ್ಲರಿಗೂ ಡೌಟ್ ಬಂದೆ ಬರುತ್ತದೆ ಎಂದು ತನ್ನ ಹೆಸರನ್ನು ಸಾಧನ ಎಂದು ಬದಲಾಯಿಸಿಕೊಂಡಿರುತ್ತಾಳೆ. ಸಹನಾಗೆ ಇದೆಲ್ಲ ನೋಡಿ ಬಹಳ ಕಿರಿ ಕಿರಿಯಾಗುತ್ತದೆ. ವಿದೇಶಿಗನ ಮಾತು ನಿಜವಾಗಲೂ ಸಹನಾಗೆ ಅರ್ಥ ಆಗುತ್ತಿಲ್ಲ. ಆತ ವಿಡಿಯೋ ಮಾಡುತ್ತಿರುವುದನ್ನು ನೋಡಿ ಜೋರಾಗಿ ಬಯ್ಯುತ್ತಲೆ ಇರುತ್ತಾಳೆ.

ಸಹನಾ ಮಾತು ಕೇಳಿ ಊಟ ಮಾಡಲು ಬಂದಿದ್ದ ಅನೇಕರು ಮ್ಯಾಕ್ಸ್ ದ್ದು ತಪ್ಪು ಎನ್ನುವ ಹಾಗೆ ಮಾತನಾಡುತ್ತಾರೆ. ಆದರೆ, ವಿದೇಶಿಗ ಸಾಧನಾ ಹೋಟೆಲ್ ಇನ್ನಷ್ಟು ಫೇಮಸ್ ಆಗಲಿ. ಸಾಧನಾ ಕೈ ರುಚಿ ಇನ್ನಷ್ಟು ಜನರಿಗೆ ತಿನ್ನುವ ಭಾಗ್ಯ ಸಿಗಲಿ ಎನ್ನುವ ನಿಟ್ಟಿನಲ್ಲಿ ವಿಡಿಯೋ ಮಾಡುತ್ತಾನೆ. ಸಹನಾ ಬೈದಿದ್ದಕ್ಕೆ ವಿದೇಶಿಗ ಸಪ್ಪೆ ಮುಖ ಮಾಡಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ಇತ್ತ ಸ್ನೇಹಾ ಹಾಗೂ ರಾಧಾ ಮಧ್ಯೆ ಆಗಾಗ ಜಟಾಪಟಿ ನಡೆಯುತ್ತಲೇ ಇರುತ್ತದೆ. ಸ್ನೇಹಾಗೆ ರಾಧಾ ಮೇಲೆ ಸ್ವಲ್ಪವಾದರೂ ಕನಿಕರ ಇದೆ. ಆದರೆ, ರಾಧಾ ಮಾಡುವ ನೀಚ ಕೆಲಸಕ್ಕೆ ಸ್ನೇಹಾ ಇನ್ನಷ್ಟು ಕೋಪ ಮಾಡಿಕೊಂಡು ಇರುವುದಂತೂ ಸತ್ಯ.

Puttakkana Makkalu serial July 2nd Episode Update

ಏನೇ ಮಾಡಲು ಹೋದರೂ, ರಾಧಾ ಅಡ್ಡಗಾಲು ಹಾಕುತ್ತಾಳೆ. ಆಕೆಗೆ ಬಂಗಾರಮ್ಮನ ಹಾಗೂ ಸ್ನೇಹಾ ಮೇಲಿರುವ ದ್ವೇಷ ಇಮ್ಮಡಿ ಆಗುತ್ತಲೇ ಇದೆ . ಕಂಠಿಯನ್ನು ಮದುವೆ ಆಗಿ ಈ ಮನೆಗೆ ಸರ್ವಾಧಿಕಾರಿ ಆಗಬೇಕು ಎನ್ನುವ ಆಸೆ ರಾಧಾಗೆ ಇತ್ತು. ಆದರೆ ಅದು ಸಾಧ್ಯ ಆಗದೆ ಇರುವುದರಿಂದ ಹೇಗಾದರೂ ಮಾಡಿ ಸ್ನೇಹಾಳನ್ನು ಮನೆಯಿಂದ ಓಡಿಸಬೇಕು ಎಂದು ಸಂಚು ರೂಪಿಸುತ್ತಾ ಇರುತ್ತಾಳೆ. ಇನ್ನೂ ಬಂಗಾರಮ್ಮಗೆ ಕೂಡ ತಂಗಿ ಇದ್ದಾಳೆ ಎನ್ನುವುದು ಈಗ ಬಯಲಾಗಿದೆ.

ಬಂಗಾರಮ್ಮನ ಸಹೋದರಿ ಸಿಂಗಾರಮ್ಮ

ಬಂಗಾರಮ್ಮನ ಹಾಗೆ ತದ್ರೂಪಿಯಾಗಿರುವ, ರಗಡ್ ಸ್ವಭಾವದ ತಂಗಿಯೊಬ್ಬಳು ಇದ್ದಾಳೆ. ಬಂಗಾರಮ್ಮ ಅದೆಷ್ಟು ಒಳ್ಳೆಯವರು ಆಗಿದ್ದಾರೋ, ಅದರ ಹತ್ತು ಪಟ್ಟು ಆಕೆ ಕೆಟ್ಟವಳು. ಆದರೆ, ಇದೀಗ ಆಕೆ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಜೈಲಿನಲ್ಲಿ ಇದ್ದರೂ ತನ್ನ ಧಿಮಾಕಿ ಏನೂ ಕಡಿಮೆ ಆಗಿಲ್ಲ. ಅಂದ್ಹಾಗೆ ಆಕೆಯ ಹೆಸರು ಸಿಂಗಾರಮ್ಮ.

Puttakkana Makkalu serial July 2nd Episode Update

ಮಗಳ ನೆನಪಿನಲ್ಲಿ ಅಮ್ಮ

ಆಕೆ ಬದುಕಿದ್ದಾಳೋ ಅಥವಾ ಸತ್ಯಿದ್ದಾಳೋ ನನಗೆ ಇನ್ನೂ ಕೂಡ ಗೊತ್ತಿಲ್ಲ. ನೀವಿಬ್ಬರೂ ಕೂಡ ರೂಪದಲ್ಲಿ ಒಂದೇ ಇದ್ದರೂ, ಗುಣದಲ್ಲಿ ಇಬ್ಬರು ಕೂಡ ಬೇರೆ ಬೇರೆ. ಆಕೆ ಹೋಗ್ತಾ ಒಂದು ಮಾತು ಹೇಳಿದ್ದಳು. "ನಾನು ತಿರುಗಿ ವಾಪಸ್ ಬಂದರೆ, ನಾನು ನಿಮ್ಮನ್ನು ಮಾತ್ರ ಬಿಡುವುದಿಲ್ಲ ಎಂದು ಹೇಳಿದ್ದಾಳೆ" ಎಂದು ಬಂಗಾರಮ್ಮನವರ ತಾಯಿ ಮಗಳ ಬಳಿ ಹೇಳಿಕೊಂಡಿದ್ದಾಳೆ.

ಅಮ್ಮನಿಗೆ ಸಮಾಧಾನ ಹೇಳಿದ ಬಂಗಾರಮ್ಮ

ಅಮ್ಮನ ಸ್ಥಿತಿ ನೋಡಿ ಬಂಗಾರಮ್ಮಗೆ ಬಹಳ ನೋವು ಆಗುತ್ತದೆ. ಅಮ್ಮನನ್ನು ಸಮಾಧಾನ ಮಾಡುತ್ತಾಳೆ. "ಹಾಗೆಲ್ಲ ಏನು ಆಗುವುದು ಇಲ್ಲ. ನೀವೇನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆಕೆ ಎಲ್ಲಿದ್ದಾಳೆ? ಎನ್ನುವ ಕ್ಲಾರಿಟಿ ಇದೂವರೆಗೆ ಕೂಡ ಗೊತ್ತಿಲ್ಲ. ಅಂದ ಮೇಲೆ ನೀವು ಯಾಕೆ ಆಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದ. ಆಕೆ ಒಂದು ವೇಳೆ ಬಂದರು ಕೂಡ ಆಕೆಗೆ ನಮ್ಮನ್ನು ಏನು ಮಾಡಲಾಗದು" ಎಂದು ತಾಯಿಗೆ ಸಮಾಧಾನ ಮಾಡುತ್ತಾಳೆ ಬಂಗಾರಮ್ಮ.

More from Filmibeat

English summary
Puttakkana Makkalu serial July 2nd Episode Update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X