Puttakkana Makkalu:ಗೆಳತಿಯನ್ನು ಉರಿಸಲು ಫೋಟೋ ಹಾಕಿದ ಸುಮಾ; ಸಹನಾ ಲೈಕ್? ಸುಮಾ ಶಾಕ್?

By ಪೂರ್ವ

ಇತ್ತೀಚೆಗಿನ ದಿನಗಳಲ್ಲಿ ಸುಮಾ ಸಚಿನ್ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾಳೆ. ಸಚಿನ್ ಕಂಡ್ರೆ ಸ್ವಲ್ಪ ದೂರನೇ ಇರುತ್ತಿದ್ದ ಸುಮಾ ಇದೀಗ ಸಚಿನ್ ಬೆಸ್ಟ್ ಫ್ರೆಂಡ್ ಮಾಡಿಕೊಂಡಿದ್ದಾಳೆ. ಪುಟ್ಟಕ್ಕಗೆ ಸುಮಾ ಸಚಿನ್ ಜೊತೆ ಹೆಚ್ಚಾಗಿ ಕ್ಲೋಸ್ ಆಗಿರುವುದನ್ನು ನೋಡಿ ಬಹಳ ಆತಂಕ ಕೂಡ ಆಗುತ್ತದೆ. ತನ್ನ ಇಬ್ಬರು ಮಕ್ಕಳು ಪ್ರೀತಿಸಿ ಮದುವೆ ಆಗಿದ್ದಾರೆ. ಸುಮಾ ಕೂಡ ಹಾಗೆಯೇ ಮಾಡಿದರೆ ಅದು ಸರಿಯಲ್ಲ. ಆಕೆಗೆ ನಾನೇ ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು ಎನ್ನುವ ಆಸೆ ಆಕೆಗೆ ಇರುತ್ತದೆ. ಆದರೆ, ಸುಮಾ ಈಗಾಗಲೇ ಅವ್ವನಿಗೆ ಪ್ರಮಾಣ ಮಾಡಿರುತ್ತಾರೆ.

ಅವ್ವ ನಾನು ಯಾವುದೇ ಕಾರಣಕ್ಕೂ ಕೂಡ ಯಾರನ್ನು ಪ್ರೀತಿ ಮಾಡುವುದು ಇಲ್ಲ. ನೀನು ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಕೊಂಚ ನಿರಾಳ ಆಗುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸುಮಾ ಜೊತೆ ಸಚಿನ್ ಇರುವುದನ್ನು ನೋಡಿದ ಪುಟ್ಟಕ್ಕ ಕೊಂಚ ಗಾಬರಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ . ಇನ್ನೂ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮ ಮಾತ್ರ ದೇವಾಲಯದಲ್ಲಿ ಅಟ್ಯಾಕ್ ಮಾಡಿದ ಪುಡಿ ರೌಡಿಗಳನ್ನು ಕರೆದಿದ್ದಾಳೆ.

Puttakkana Makkalu serial July 30th episode update

ಆಕೆಗೆ ಆ ಅಟ್ಯಾಕ್ ಮಾಡಿದವರು ಯಾರೂ ಎನ್ನುವುದು ತಿಳಿಯಬೇಕಾಗಿತ್ತು. ಆ ಕಾರಣಕ್ಕೆ ಆಕೆ ಎಲ್ಲರನ್ನೂ ಕರೆದು ವಿಚಾರಣೆ ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಕಂಠಿ ಬರುತ್ತಾನೆ. "ಅರೆ ಏನಿದು ಅವ್ವ? ಇವರೇನು ಮಾಡಿದರು" ಎಂದಾಗ ದೇವಾಲಯಕ್ಕೆ ಹೋದಾಗ ಅಲ್ಲಿ ನಡೆದ ಘಟನೆ ಬಗ್ಗೆ ವಿವರಣೆ ಕೊಡುತ್ತಾಳೆ. ಆಕೆಯ ಮಾತು ಕೇಳಿದ ಕಂಠಿ ಅವ್ವ ಮಾಡುತ್ತಿರುವುದು ಸರಿಯಾಗಿದೆ" ಎಂದು ಮನದಲ್ಲಿ ಯೋಚನೆ ಮಾಡುತ್ತಾನೆ. ರಾಧಾಗೆ ಮಾತ್ರ ಫುಲ್ ಟೆನ್ಶನ್ ಅತ್ತೆಗೆ ಏನಾದರು ನಿಜ ವಿಚಾರ ತಿಳಿದರೆ ನನ್ನ ಜೀವಂತವಾಗಿ ಉಳಿಸುವುದೆ ಕಷ್ಟ ಅಷ್ಟೇ." ಎಂದು ಮನದಲ್ಲೆ ಭಯ ಪದುತ್ತಿರುತ್ತಾರೆ. ಸಿಂಗಾರಮ್ಮ ರೌಡಿಗಳಿಗೆ ಕೊಂಚ ಜೋರಾಗಿಯೇ ರೋಪ್ ಹಾಕುತ್ತಾಳೆ.

ಬಂಗಾರಮ್ಮ ಎಂದು ತಿಳಿದು ನಡುಕಪಟ್ಟ ರೌಡಿಗಳು

ಆಗ ಭಯದಿಂದ ರೌಡಿಗಳಿಗೆ ಮಾತೇ ನಿಂತು ಬಿಡುತ್ತದೆ. ಇನ್ನೂ ಸುಮಾ ಸಚಿನ್ ಜೊತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಆ ವೇಳೆ ಸುಮಾ ಸಚಿನ್ ಜೊತೆ ಫೋಟೋ ತೆಗೆಸಿಕೊಂಡು ಬಿಡುತ್ತಾಳೆ. ಇದನ್ನು ಫೇಸ್ ಬುಕ್‌ನಲ್ಲಿ ಅಪ್ಲೋಡ್ ಮಾಡುತ್ತಾಳೆ. ಸಹನಾಗೆ ಸುಮಾ ಫೋಟೋ ನೋಡಿ ಖುಷಿ ಪಟ್ಟು ಲೈಕ್ ಕೊಡುತ್ತಾಳೆ. ಆಗ ಸುಮಾಗೆ ಶಾಕ್ ಆಗುತ್ತದೆ.

ಶಿವಾನಿ ಮಾತಿನಿಂದ ಬೇಸರಗೊಂಡ ಸುಮಾ

ಸಚಿನ್ ಹಾಗೂ ಸುಮಾ ಕಾಫಿ ಶಾಪ್‌ನಲ್ಲಿ ಕುಳಿತಿರುತ್ತಾರೆ. ಶಿವಾನಿಯ ಇತ್ತೀಚೆಗಿನ ದಿನಗಳಲ್ಲಿ ಸುಮಾಗೆ ಬಹಳಷ್ಟು ಕಾಟ ಕೊಡುತ್ತಿರುತ್ತಾಳೆ. ಹೇಗಾದರೂ ಮಾಡಿ ಶಿವನಿಗೆ ಒಳ್ಳೆಯ ಪಾಠವನ್ನು ಕಲಿಸಬೇಕು ಎಂದು ಸುಮಾ ಮನದಲ್ಲಿ ಯೋಚನೆ ಮಾಡುತ್ತಿರುತ್ತಾಳೆ. ಇದುನ್ನು ನೋಡಿ ಸಚಿನ್ "ಯಾಕೆ ಸುಮಾ ಹೀಗೆ ಸುಮ್ಮನೆ ಕುಳಿತಿದ್ದೀಯಾ?" ಎಂದು ಹೇಳಿದಾಗ, "ಶಿವಾನಿ ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಕಾಟ ಕೊಡುತ್ತಿದ್ದಾಳೆ. ಯಾಕೆ ಎಂದು ಆಲೋಚನೆ ಮಾಡುತ್ತಿದ್ದೇವೆ" ಎಂದು ಸುಮಾ ಹೇಳುತ್ತಾಳೆ.

Puttakkana Makkalu serial July 30th episode update

ಅಚಾನಕ್ ಆಗಿ ಸಚಿನ್ ಜೊತೆ ಸೆಲ್ಫಿ

ಸುಮಾ ಅಚಾನಕ್ಕಾಗಿ ಸಚಿನ್ ಹತ್ತಿರ ಬಂದು ಒಂದು ಸೆಲ್ಫಿಯನ್ನು ತೆಗೆದುಕೊಳ್ಳುತ್ತಾಳೆ. ಆಗ ಸಚಿನ್ "ಸುಮಾ ಯಾಕೆ ಹೀಗೆ ಮಾಡುತ್ತಿದ್ದೀಯಾ?" ಎಂದು ಕೇಳಿದಾಗ "ನಾನು ನಿನ್ನ ಜೊತೆ ಒಂದು ಫೋಟೋ ತೆಗೆದುಕೊಂಡರೆ ಕೋಪ ಬರುತ್ತದೆ. ಆಕೆಯನ್ನು ಉರಿಸಬೇಕು. ಅದಕ್ಕಾಗಿ ನಿನ್ನ ಜೊತೆ ನಾನು ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ" ಎಂದು ಹೇಳುತ್ತಾಳೆ. ಆಗ ಸಚಿನ್‌ಗೆ ಆತಂಕವಾಗುತ್ತದೆ. ಸುಮಾ ಆ ಫೋಟೋವನ್ನು ಸೋಶಿಯಲ್ ಮೀಡಿಯಾದ ಅಪ್ಲೋಡ್ ಮಾಡಿದ ಕೂಡಲೇ ಆ ಫೋಟೋವನ್ನು ಸಹನಾ ನೋಡುತ್ತಾಳೆ. ತಂಗಿಯ ಫೋಟೋ ನೋಡಿದ ಖುಷಿಯಲ್ಲಿ ಸಹನಾ ಆ ಫೋಟೋಗೆ ಒಂದು ಲೈಕ್ ಕೂಡ ಕೊಡುತ್ತಾಳೆ. ಇನ್ನು ಸಹನಾ ಅಕ್ಕನ ಲೈಕ್ ನೋಡಿದ ಸುಮಾ ಶಾಕ್ ಆಗುತ್ತಾಳೆ. ಮುಂದೆ ಏನೆಲ್ಲ ನಡೆಯುತ್ತದೆ ಅನ್ನೋದನ್ನು ನೋಡಬೇಕಿದೆ.

More from Filmibeat

English summary
Puttakkana Makkalu serial July 30th episode update
Read more about: serial poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X