Puttakkana Makkalu:ಸಚಿನ್-ಸುಮಾ ನಡುವೆ ಪ್ರೀತಿ; ಸುಮಂಗೆ ಲವ್ ಆಗ್ತಿದೆ ಫ್ರೆಂಡ್ಸ್ ಎಂದು ಕಾಲೆಳೆದ ನೆಟ್ಟಿಗರು

By ಪೂರ್ವ

ಸುಮಾ ಡ್ರೆಸ್ ಚೇಂಜ್ ಮಾಡುತ್ತಿರುವಾಗ ವಿಡಿಯೋ ಮಾಡಿದ್ದು ಪ್ರದೀಪ್. ಆದರೆ, ಅದರ ಆಪಾದನೆ ಬಂದಿದ್ದು ಸಚಿನ್ ಮೇಲೆ. ಇದೆಲ್ಲ ಮಾಡಿದ್ದು ಪುರುಷೋತ್ತಮನ ಮಾಜಿ ಗರ್ಲ್ ಫ್ರೆಂಡ್. ಆಕೆಗೆ ಸುಮಾಳನ್ನು ಕಂಡರೆ ಆಗುವುದೇ ಇಲ್ಲ. ಅದಲ್ಲದೆ ಸುಮಾ ಯಾವತ್ತೂ ಕ್ಲಾಸ್‌ಗೆ ಕೂಡ ಟಾಪರ್. ಆಕೆ ಎಲ್ಲಾದರೂ ಸಚಿನ್‌ಗೆ ಮತ್ತಷ್ಟು ಹತ್ತಿರ ಆದರೆ, ಸಚಿನ್ ಎಲ್ಲಿ ತನ್ನಿಂದ ದೂರ ಆಗುತ್ತಾನೋ ಎನ್ನುವ ಭಯ ಆಕೆಗೆ.

ಇದನ್ನು ಮೊಳಕೆಯಿಂದಲೆ ಸರಿ ಮಾಡಬೇಕು. ಇಲ್ಲವಾದರೆ, ಆತ ನನ್ನ ಕೈ ತಪ್ಪಿ ಬಿಡುತ್ತಾನೆ ಎನ್ನುವುದು ಸುಮಾ ಗೆಳತಿಯ ಆತಂಕ. ಆ ಕಾರಣಕ್ಕೆ ಸುಮಾ ವಾಶ್ ರೂಮ್‌ನಲ್ಲಿ ಬಟ್ಟೆ ಬದಲಾಯಿಸುವ ವಿಡಿಯೋವನ್ನು ಪ್ರದೀಪ್ ಕೈನಲ್ಲಿ ಮಾಡಿಸಿ ಬಿಡುತ್ತಾಳೆ. ಹಾಗೆಯೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ಆದರೆ, ಇದರಲ್ಲಿ ಸಚಿನ್ ಪಾತ್ರ ಏನು ಇಲ್ಲ. ಸಚಿನ್ ಮಾಮೂಲು ಆಗಿಯೇ ಕಾಲೇಜಿನಲ್ಲಿ ವಿಡಿಯೋ ಮಾಡಿಕೊಂಡು ಒಂದು ಒಂದು ಮೆಮೋರಿಯನ್ನು ಆತ ಎಂಜಾಯ್ ಮಾಡುತ್ತಿದ್ದ.

Puttakkana Makkalu serial July 3rd episode update

ಆದರೆ, ಸುಮಾ ಡ್ರೆಸ್ ಚೇಂಜ್ ಮಾಡುತ್ತಿರುವ ವಿಡಿಯೋ ನೋಡಿ ಬಹಳ ಗಾಬರಿಗೊಳ್ಳುತ್ತಾರೆ. ಇದೆಲ್ಲ ಯಾರು ಮಾಡಿದರು ಎಂದು ಹೇಳಿದಾಗ ಮೊದಲು ಇದೇ ಸರಿಯಾದ ಸಮಯ ಎಂದು ಶಿವಾನಿ, ಪ್ರದೀಪ್ ಕಡೆಯಿಂದ ಇದೆಲ್ಲ ಸಚಿನ್ ಮಾಡಿಸಿದ್ದು ಎಂದು ಹೇಳ ಛೂ ಬಿಡುತ್ತಾಳೆ. ಪ್ರದೀಪ್, ಸುಮಾ ಬಳಿಗೆ ಬಂದು ಇದೆಲ್ಲ ಮಾಡಿದ್ದು ಸಚಿನ್ ಎಂದು ಹೇಳಿದ್ದೆ ತಡ ಸುಮಾಗೆ ಕೋಪ ಉಕ್ಕಿ ಹರಿಯುತ್ತದೆ. ಸುಮಾಗೆ ಸಚಿನ್‌ಗೆ ಬಹಳ ಒಳ್ಳೆಯ ಅಭಿಪ್ರಾಯ ಇರುತ್ತದೆ. ಆದರೆ, ಸಚಿನ್ ಈ ರೀತಿ ಮಾಡಿದ ಎಂದು ತಿಳಿದ ಕೂಡಲೇ ಸುಮಾ ಏನು ಎತ್ತ ವಿಚಾರ ಮಾಡದೇ ಎಲ್ಲರ ಎದುರು ಸಚಿನ್‌ಗೆ ಅವಮಾನ ಮಾಡುತ್ತಾಳೆ.

ಸಚಿನ್‌ಗೆ ಕ್ಷಮೆ ಕೇಳಿದ ಸುಮಾ

ಆದರೆ, ಸಚಿನ್‌ಗೆ ಇದೆಲ್ಲ ಏನು ಎಂದು ತಿಳಿದಿರುವುದಿಲ್ಲ. ಆತ ನನ್ನದೇನೂ ತಪ್ಪು ಇಲ್ಲ ಎಂದು ಎಲ್ಲರ ಮುಂದೆ ಹೇಳದೆ ಸುಮ್ಮನೆ ಇರುತ್ತಾನೆ. ಇನ್ನೂ ಬೇರೆಯವರ ಕಡೆಯಿಂದ ಆ ವಿಡಿಯೋ ಮಾಡಿದ್ದು ಸಚಿನ್ ಅಲ್ಲ ಎನ್ನುವ ಮಾತು ಕೇಳಿ ಸುಮಾಗೆ ಇನ್ನೂ ಬೇಸರ ಆಗುತ್ತದೆ. "ಅರೆರೆ ನಾನೇನು ಮಾಡಿ ಬಿಟ್ಟೆ. ಸಚಿನ್‌ನನ್ನು ತಪ್ಪು ತಿಳಿದುಕೊಂಡು ಬಿಟ್ಟೆ. ಆತನಿಗೆ ಒಂದು ಮಾತು ಆಡಲು ನಾನು ಚಾನ್ಸ್ ಕೊಟ್ಟಿಲ್ಲ. ಯಾಕೆ ಹೀಗೆಲ್ಲ ಆಯಿತು ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ.

Puttakkana Makkalu serial July 3rd episode update

ಸಚಿನ್‌ಗೆ ಕರೆ ಮಾಡಿದ ಸುಮಾ

ಆ ಕೂಡಲೇ ಸಚಿನ್‌ಗೆ ಸುಮಾ ಕರೆ ಮಾಡುತ್ತಾಳೆ. "ಸಚಿನ್ ನೀನು ನಾನು ಡ್ರೆಸ್ ಚೇಂಜ್ ಮಾಡುತ್ತಿರುವ ವಿಡಿಯೋ ಮಾಡಿದ್ದೆ ಎಂದು ತಪ್ಪು ತಿಳಿದುಕೊಂಡು ಬಿಟ್ಟೆ. ನಿನಗೆ ಒಂದು ಮಾತು ಆಡಲು ನಾನು ಅವಕಾಶ ಕೊಡದೆ ಎಲ್ಲರ ಮುಂದೆ ಬಾಯಿಗೆ ಬಂದ ಹಾಗೆ ಬೈದು ಬಿಟ್ಟೆ. ನನ್ನನ್ನು ಕ್ಷಮಿಸಿ ಬಿಡು" ಎಂದು ಬಹಳ ಬೇಸರದಲ್ಲಿ ಹೇಳಿಕೊಳ್ಳುತ್ತಾಳೆ. ಇದನ್ನು ಕೇಳಿದ ಸಚಿನ್ ಹೇಳುತ್ತಾನೆ. "ಇದೆಲ್ಲ ಮಾಡಿಸಿದ್ದು ಪ್ರದೀಪ್. ನಾನು ಎಲ್ಲಾದರೂ ಎಲ್ಲರ ಮುಂದೆ ಏನಾದರು ಈ ಬಗ್ಗೆ ಹೇಳಿದರೆ ನೀನು ಮತ್ತಷ್ಟು ಚೀಪ್ ಆಗಿ ಬಿಡುತ್ತಿಯಾ ಎನ್ನುವ ಕಾರಣದಿಂದಾಗಿ ನಾನು ಈ ಬಗ್ಗೆ ಹೇಳಿಲ್ಲ" ಎಂದಾಗ ಸುಮಾಗೆ ತನ್ನ ಬಗ್ಗೆ ತನಗೆ ನಾಚಿಗೆ ಆಗುತ್ತದೆ.

ಸುಮಾ ಮನೆ ಬಳಿ ಬಂದ ಸಚಿನ್

ಸುಮಾಗೆ ಬಹಳ ಬೇಸರ ಆಗುತ್ತದೆ. ಈ ವೇಳೆ ಸುಮಾ "ನೀನು ಇಲ್ಲಿ ಇದ್ದಿದ್ದರೆ. ನಿನ್ನ ಬಳಿ ಸ್ವಲ್ಪ ಮಾತನಾಡಬಹುದಾಗಿತ್ತು" ಎಂದು ಸುಮಾ ಹೇಳಿದಾಗ, ಸಚಿನ್ "ನಾನು ನಿಮ್ಮ ಮನೆಯ ಎದುರಿಗೆ ಇದ್ದೇನೆ. ಇಷ್ಟ ಇದ್ದರೆ ನೀನು ಬಂದು ನೋಡಬಹುದು" ಎಂದಾಗ ಸುಮಾಗೆ ಬಹಳ ಖುಷಿ ಆಗುತ್ತದೆ. ಸುಮಾ ಮನೆಯ ಹೊರಗೆ ಬಂದು ಸಚಿನ್ ಜೊತೆ ಮಾತನಾಡಲು ಶುರು ಮಾಡುತ್ತಾಳೆ. "ನೀನು ಯಾಕೆ ಇಷ್ಟು ರಾತ್ರಿ ಇಲ್ಲಿಗೆ ಬರಲು ಹೋದೆ. ಅಮ್ಮನ ಕೈಗೆ ಇನ್ನೊಮ್ಮೆ ಸಿಕ್ಕಿ ಬೀಳಬೇಕು ಅಂದುಕೊಂಡಿದ್ದೇಯಾ?" ಎಂದಾಗ ಆತ ನಗುತ್ತಾನೆ. "ಹಾಗಲ್ಲ ಸುಮಾ ನನ್ನ ಬೈಕ್ ಗ್ಯಾರೇಜ್‌ನಲ್ಲಿ ಇದೆ. ಅದನ್ನು ತೆಗೆದುಕೊಂಡು ಹೋಗಲು ಬಂದೆ. ನೀನೇನೂ ಇಮ್ಯಾಜಿನ್ ಮಾಡಿಕೊಳ್ಳಬೇಡ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಮಾಗೆ ನಾಚಿಗೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಸುಮಾ ಹಾಗೂ ಸಚಿನ್ ನಡುವೆ ಪ್ರೀತಿ ಚಿಗುರೊಡೆಯುತ್ತಿರುವುದಂತು ನಿಜ.

More from Filmibeat

English summary
Puttakkana Makkalu serial July 3rd episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X