Puttakkana Makkalu:ಬಂಗಾರಮ್ಮನ ಜಾಗಕ್ಕೆ ಸಿಂಗಾರಮ್ಮ ಎಂಟ್ರಿ; ರಾಧಾ ಮಾಸ್ಟರ್‌ಪ್ಲಾನ್ ಉಲ್ಟಾ ಹೊಡೆದಿದ್ದೇಗೆ?
ಮನೆದೇವರ ದರ್ಶನ ಮಾಡಿದ ಪುಟ್ಟಕ್ಕ ಹಾಗೂ ಆಕೆಯ ಕುಟುಂಬ ತಡ ರಾತ್ರಿಯಾದರೂ ಮನೆಗೆ ಹಿಂದಿರುಗಬೇಕು ಎನ್ನುವ ನಿಟ್ಟಿನಲ್ಲಿ ಲಘುಬಗೆಯಿಂದ ಮನೆಯ ಕಡೆ ಹೊರಟಿರುತ್ತಾರೆ. ಇದನ್ನು ನೋಡಿದ ರಾಧಾ ಒಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಳೆ. ಹೇಗಾದರೂ ಮಾಡಿ ಮಾವನನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನೆಲ್ಲ ಸಾಯಿಸುವ ಪ್ಲಾನ್ ಮಾಡುತ್ತಾಳೆ.
ರಾಧಾಗೆ ಬಂಗಾರಮ್ಮ, ಸ್ನೇಹಾ ಮಾವ ಈ ಮೂವರು ಸತ್ತು ಹೋದರೆ, ನನಗೆ ನನ್ನ ಮಾವ ಖಂಡಿತವಾಗಿಯೂ ಸಿಗುತ್ತಾರೆ ಎನ್ನುವ ಆಸೆ ಆಕೆಗೆ ಇರುತ್ತದೆ. ಮಾವನನ್ನು ಹೀಗಾದರೂ ಪಡೆದುಕೊಳ್ಳಬೇಕು. ಮಾವನನ್ನು ನನ್ನವನನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಆತುರದಲ್ಲಿ ಬಂಗಾರಮ್ಮನ ಕುಟುಂಬದ ಜೀವಕ್ಕೆ ರಾಧಾ ಸಂಚಕಾರ ತಂದಿದ್ದಾಳೆ. ರಾಧಾ ರೌಡಿಗಳನ್ನು ಆ ಕಾಡಿನ ಮಧ್ಯೆ ಇರುವಂತೆ ಮಾಡುತ್ತಾಳೆ. ಬಂಗಾರಮ್ಮನ ಕುಟುಂಬ ಆ ಕಾಡಿನ ಒಳಗಿಂದಲೇ ಬರಬೇಕು. ಅವರು ಬರುವವರೆಗೂ ಕಾದು ಅವರನ್ನು ಹೇಗಾದರೂ ಮಾಡಿ ಸಾಯಿಸಬೇಕು ಅನ್ನೋದು ಆಕೆಯ ಮಾಸ್ಟರ್‌ಪ್ಲಾನ್ ಆಗಿರುತ್ತೆ.

ಆದರೆ, ಇಬ್ಬರನ್ನೂ ಬಿಟ್ಟುಬಿಡಬೇಕು ಎಂದು ಹೇಳಿರುತ್ತಾಳೆ. ಇನ್ನೂ ಬಂಗಾರಮ್ಮನವರೂ ಕಾಡಿನ ಮಧ್ಯದಿಂದ ಬರಬೇಕಾದರೆ, ರೌಡಿಗಳು ಅವರನ್ನು ಅಡ್ಡಗಟ್ಟುತ್ತಾರೆ. ನೋಡ ನೋಡುತ್ತಲೇ ಬಂಗಾರಮ್ಮ ಯಾರೋ ಅದು ಎಂದು ಹೇಳಿದ ಕೂಡಲೇ ಆ ರೌಡಿಗಳು ಕಂಠಿಯನ್ನು ಹಿಡಿದು ಪ್ರಜ್ಞೆ ತಪ್ಪಿಸಿಬಿಡುತ್ತಾರೆ. ಇದನ್ನು ನೋಡಿ ಸ್ನೇಹಾಗೆ ಶಾಕ್‌ನಲ್ಲಿರುತ್ತಾಳೆ. ಏಯ್ ಏನು ಮಾಡಿಬಿಟ್ಟಿರಿ ಎಂದು ಓಡಿಕೊಂಡು ಬರುವ ವೇಳೆ ಆಕೆಯನ್ನು ಪ್ರಜ್ಞೆ ತಪ್ಪಿಸಿ ಬಿಡುತ್ತಾರೆ.
ಪ್ರಜ್ಞೆ ತಪ್ಪಿ ಬಿದ್ದ ಬಂಗಾರಮ್ಮ
ಜೊತೆಗೆ ಬಂಗಾರಮ್ಮ ಹಾಗೂ ಮಾದೇಗೌಡರ ಪ್ರಜ್ಞೆ ತಪ್ಪಿಸುತ್ತಾರೆ. ಆ ವೇಳೆ ರೌಡಿಗಳು ರಾಧಾಗೆ ಕರೆ ಮಾಡುತ್ತಾರೆ. "ನೀವು ಹೇಳಿದ ಹಾಗೆ ಮಾಡಿದ್ದೀವಿ ಮೇಡಂ. ಇನ್ನೂ ಈ ಮೂವರ ಜೀವವನ್ನು ತೆಗೆದು ಬಿಡುತ್ತೇವೆ. ನಿಮ್ಮ ಯಜಮಾನರು ನಿಮ್ಮ ಕೈ ಸೇರುತ್ತಾರೆ" ಎಂದಾಗ ರಾಧಾಗೆ ಆದ ಖುಷಿ ಅಷ್ಟಿಷ್ಟಲ್ಲ. ಅಷ್ಟು ಹೊತ್ತಿಗೆ ಅಲ್ಲಿಗೆ ಚಂದ್ರು ಬರುತ್ತಾನೆ. "ರಾಧಾ ನನಗೆ ಹಾಲು ಬೇಕಿತ್ತು. ವಸುಗೆ ಕೊಡಲು ಎಂದಾಗ ರಾಧಾಗೆ ಒಮ್ಮೆಲೆ ಬೆಚ್ಚಿ ಬೀಳುತ್ತಾಳೆ.
ಚಂದ್ರು ಧ್ವನಿ ಕೇಳಿ ರಾಧಾ ಶಾಕ್
ಇದೇನಿದು ಅಣ್ಣಯ್ಯ ಎಲ್ಲಿಂದ ಬಂದ ಇಷ್ಟು ಹೊತ್ತಿಗೆ ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನೂ ಚಂದ್ರು ಇಲ್ಲಿಯೇ ಇದ್ದರೆ ನನ್ನ ಪ್ಲಾನ್ ಉಲ್ಟಾ ಆಗಬಹುದು ಎಂದುಕೊಳ್ಳುತ್ತಾಳೆ. ಚಂದ್ರುಗೆ ಹಾಲು ಕೊಟ್ಟು ಕಳುಹಿಸುತ್ತಾಳೆ. ಇನ್ನೂ ವಸು "ರೀ ನೀವು ನನಗೆ ತಿನ್ನಿಸಿ, ತಿನ್ನಿಸಿ ಹೊಟ್ಟೆ ಫುಲ್ ಮಾಡಿದ್ದೀರಾ. ಹೇಗೆ ನಾನು ಇದನ್ನೆಲ್ಲ ಕುಡಿಯಲಿ" ಎಂದಾಗ "ಮಗುವಾಗುವವರೆಗೂ ನೀನು ಇದೆಲ್ಲವನ್ನೂ ತಿನ್ನಲೆ ಬೇಕು" ಎಂದು ಚಂದ್ರು ಹೇಳುತ್ತಾನೆ.
ರಾಧಾ ಮಾತು ಕೇಳಿ ಆಫೀಸ್‌ಗೆ ಹೊರಟ ಚಂದ್ರು
ಅದೇ ಸಮಯಕ್ಕೆ ರಾಧಾ "ಅಣ್ಣಯ್ಯ ನೀನು ಕೆಲಸಕ್ಕೆ ಹೋಗು. ನಾನು ಎಲ್ಲಾ ಕೆಲಸ ನೋಡಿಕೊಳ್ಳುತ್ತೇನೆ" ಎಂದು ಹೇಳಿದಾಗ "ಇಲ್ಲ ರಾಧಾ ನಾನು ಆಫೀಸ್‌ಗೆ ರಜೆ ಹಾಕಿದ್ದೇನೆ. ಡೆಲಿವರಿ ಆಗುವವರೆಗೆ ನನ್ನ ಹೆಂಡತಿ ಜೊತೆಗೆ ಇರುತ್ತೇನೆ" ಎಂದು ಚಂದ್ರು ಹೇಳುತ್ತಾನೆ. "ವಸುಗೆ ಡೆಲಿವರಿ ಪೆಯಿನ್ ಬಂದರೆ ನಾನೇ ನೋಡಿಕೊಳ್ಳುತ್ತೇನೆ. ನೀವು ಏನು ವರಿ ಮಾಡಬೇಡಿ. ವಸು ಅತ್ತಿಗೆ ಬಗ್ಗೆ ಯೋಚನೆ ಮಾಡಬೇಡಿ" ಎಂದು ರಾಧಾ ಹೇಳುತ್ತಾಳೆ. ಇದನ್ನು ಕೇಳಿದ ಚಂದ್ರು "ಸರಿ ನಾನು ಆಫೀಸ್‌ಗೆ ಹೋಗುತ್ತೇನೆ" ಎಂದು ಹೇಳಿ ಅಲ್ಲಿಂದ ಹೋಗಲು ಅನುವಾಗುತ್ತಾನೆ. ಇತ್ತ ಎಲ್ಲರೂ ಪ್ರಜ್ಞೆ ತಪ್ಪಿ ಬಿದ್ದ ವೇಳೆ ಅಲ್ಲಿಗೆ ಸಿಂಗಾರಮ್ಮ ಬರುತ್ತಾಳೆ. ಅಲ್ಲಿರುವ ರೌಡಿಗಳು ಆಕೆಯನ್ನು ನೋಡಿ ಶಾಕ್ ಆಗುತ್ತಾರೆ. ಸಿಂಗಾರಮ್ಮ ಬಹಳ ಜೋರಾಗಿಯೇ ರೌಡಿಗಳ ಜೊತೆ ಪೈಟ್ ಮಾಡುತ್ತಾಳೆ. ರೌಡಿಗಳ ಜೊತೆ ಪೈಟ್ ಮಾಡಿ ಅವರನ್ನು ಮೆಟ್ಟಿ ನಿಲ್ಲುತ್ತಾಳೆ. ಆ ಬಳಿಕ ಬಂಗಾರಮ್ಮನಲ್ಲಿಗೆ ಬಂದ ಸಿಂಗಾರಮ್ಮ ಹೇಳುತ್ತಾಳೆ. ಇದೂವರೆಗೆ "ನೀನು ಈ ಮನೆಯನ್ನು ಕಾಯುತ್ತಿದ್ದೆ. ಇನ್ಮೇಲೆ ಈ ಸಿಂಗಾರಮ್ಮದ್ದೆ ದರ್ಬಾರ್. ನಾನೇ ಎಲ್ಲದನ್ನೂ ನೋಡಿಕೊಳ್ಳುತ್ತೇನೆ. ನಿನ್ನದೆಲ್ಲ ವಸ್ತುಗಳು ನಂದೆ" ಎಂದು ಹೇಳುತ್ತಾಳೆ.


Click it and Unblock the Notifications











