Puttakkana Makkalu:ಸ್ನೇಹಾ ಆಸೆಗೆ ಬಲ ತುಂಬಿದ ಅತ್ತೆ; ಕಂಬನಿ ಮಿಡಿದ ಸ್ನೇಹಾ

By ಪೂರ್ವ

ಪುಟ್ಟಕ್ಕ ತನ್ನ ಮಕ್ಕಳಿಗೆ ಒಳ್ಳೆಯ ಬುದ್ದಿಯ ಜೊತೆ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಕಳಿಸಿದ್ದಾರೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿ ಆಕೆಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾಳೆ. ಇತ್ತ ಸುಮಾಗೆ ಮಾತ್ರ ಕಾಲೇಜಿನಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಇದ್ದಾಳೆ. ಆದರೆ ಸಹ ಗೆಳತಿಯ ಮಾತಿಗೆ ಆಕೆಯ ಮನಸ್ಸು ಬಹಳ ನೊಂದುಕೊಂಡು ಇದೆ. ಇತ್ತ ಬಂಗಾರಮ್ಮನ ಮನೆಯಲ್ಲಿ ಮಗಳ ಸೀಮಂತ ಶಾಸ್ತ್ರದ ಸಂಭ್ರಮ ಮನೆ ಮಾಡಿದೆ. ಮಗಳ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಬೇಕು ಎನ್ನುವುದು ಬಂಗಾರಮ್ಮನ ಮನೆಯವರಿಗೆ ಆಸೆ.

ಗಂಡನ ಮನೆಗೆ ಹೋದ ಮಗಳು ತವರಿಗೆ ಬರಲೇ ಇಲ್ಲ. ವಸು ಹೇಗಿದ್ದಾಳೋ ಏನೋ ಎನ್ನುವ ಆತಂಕ ಎಲ್ಲರಲ್ಲೂ ಇದೆ. ಯಾಕೆಂದರೆ, ಆಕೆಯ ಜೊತೆ ಇರುವುದು ನಂಜಮ್ಮ. ನಂಜಮ್ಮಗೆ ಬಂಗಾರಮ್ಮ ಎಂದರೆ ಬಹಳ ಸಿಟ್ಟು. ಮಗಳ ಕಾರಣದಿಂದಾಗಿ ನಂಜಮ್ಮ ಮೇಲೆ ಅದೆಷ್ಟೇ ಸಿಟ್ಟು ಇದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳದೆ, ಮಗಳ ಸೀಮಂತ ಶಾಸ್ತ್ರದ ಬಗ್ಗೆ ಬಂಗಾರಮ್ಮ ಯೋಚನೆ ಮಾಡುತ್ತಿರುತ್ತಾರೆ. ಯಾರನ್ನೆಲ್ಲ ಈ ಸೀಮಂತ ಶಾಸ್ತ್ರಕ್ಕೆ ಕರೆಯಬೇಕು ಎಂದು ಯೋಚನೆ ಮಾಡುತ್ತಾಳೆ. ವಸು ಗೆಳತಿಯರನ್ನು ಕರೆಯಬೇಕು. ಬಂದು ಮಿತ್ರರನ್ನು ಕರೆಯಬೇಕು. ಹಾಗೆಯೇ ಬಹಳ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ.

Puttakkana Makkalu serial June 11th episode update

ಇತ್ತ ರಾಧಾ ಮಾತ್ರ ಬಂಗಾರಮ್ಮ ಅವರನ್ನು ಹೇಗಾದರೂ ಮಾಡಿ ಸ್ನೇಹಾ ವಿರುದ್ದ ಎತ್ತಿಕಟ್ಟಬೇಕು. ಆಕೆಯನ್ನು ಅವರಾಗಿಯೇ ಮನೆಬಿಟ್ಟು ಹೋಗುವ ಹಾಗೆ ಮಾಡಬೇಕು. ಇಲ್ಲವಾದರೆ ಮುಂದೊಂದು ದಿನ ನನಗೆ ಸ್ನೇಹಾ ತೊಡಕಾಗುವುದು ಗ್ಯಾರಂಟಿ ಎಂದು ಆಲೋಚನೆ ಮಾಡುತ್ತಾರೆ. ಬಂಗಾರಮ್ಮಗೆ ಸ್ನೇಹಾ ಮೇಲೆ ಕೆಟ್ಟ ಅಭಿಪ್ರಾಯ ಬರುವ ಹಾಗೆ ಮಾಡಬೇಕು ಅವರನ್ನು ಮನೆಯಿಂದ ಹೊರ ಹಾಕಿದ ಬಳಿಕ ನಾನು ಈ ಮನೆಗೆ ಸೊಸೆ ಆಗಬೇಕು ಎಂದು ಆಲೋಚನೆ ಮಾಡುತ್ತಾಳೆ. ಈ ವಿಚಾರವನ್ನು ಪ್ರತಿಬಾರಿ ಕೂಡ ಸ್ನೇಹಾ ಬಳಿ ಹೇಳುತ್ತಿರುತ್ತಾರೆ. ಆದರೆ, ಸ್ನೇಹಾ ಮಾತ್ರ ಆ ಕಡೆ ಅಷ್ಟಾಗಿ ಗಮನ ಹರಿಸುವುದು ಇಲ್ಲ.

ರಾಧಾಗೆ ಬುದ್ದಿ ಹೇಳಿದ ಸ್ನೇಹಾ

"ರಾಧಾ ನೀನು ಹಗಲು ಕನಸು ಕಾಣುವುದನ್ನು ಮೊದಲು ಬಿಡು. ಅದು ಬಿಟ್ಟರೆ ನೀನು ಜೀವನದಲ್ಲಿ ಮುಂದೆ ಬರುತ್ತೀಯಾ" ಎಂದು ಸ್ನೇಹ ಹೇಳುತ್ತಾಳೆ. ಇನ್ನೂ ಬಂಗಾರಮ್ಮ ತನ್ನ ಸೊಸೆಗೆ ಮುಂದಕ್ಕೆ ಇನ್ನೂ ಹೆಚ್ಚು ಗುರಿಯನ್ನು ನೀನು ಸಾಧಿಸಿಕೊ, ಮುಂದೊಂದು ದಿನ ನಿನಗೆ ಓದಬೇಕು ಎಂದಾದರೆ ಆಗ ಓದಲು ಆಗುವುದು ಇಲ್ಲ ಎಂದಾಗ ಸ್ನೇಹಾ "ಅತ್ತೆ ನಾನು ಈ ಮನೆಗೆ ಸೊಸೆಯಾಗಿ ಬಂದಿದ್ದೇನೆ. ಅಂದ ಮೇಲೆ ನಿಮ್ಮ ಇಷ್ಟ ಕಷ್ಟಗಳಿಗೆ ನಾನು ಬೆಲೆ ಕೊಡಬೇಕು. ನನ್ನ ಕರ್ತವ್ಯವನ್ನು ಮಾಡಬೇಕು" ಎಂದು ಸ್ನೇಹ ಹೇಳುತ್ತಾಳೆ.

Puttakkana Makkalu serial June 11th episode update

ಅತ್ತೆಯ ಮಾತಿಗೆ ಮೌನಿಯಾದ ಸ್ನೇಹಾ

"ನಿನ್ನ ಕರ್ತವ್ಯವನ್ನು ಯಾವತ್ತೂ ಪೂರೈಸಿಕೊಳ್ಳಬಹುದು. ಅದಕ್ಕೆ ಯಾಕೆ ನೀನು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದಿಯಾ? ಅದಕ್ಕೆಲ್ಲ ನೀನು ಟೆನ್ಶನ್ ಮಾಡಬೇಡ. ಎಲ್ಲಾ ಸರಿ ಹೋಗುತ್ತದೆ. ನೀನು ನಿನ್ನ ಉನ್ನತ ವ್ಯಾಸಂಗವನ್ನು ಮಾಡು. ಎಲ್ಲಾ ವ್ಯವಸ್ಥೆಯನ್ನು ನಾನು ಮಾಡುತ್ತೇನೆ" ಎಂದು ಹೇಳಿದಾಗ ಅತ್ತೆಯ ಮಾತಿಗೆ ಸ್ನೇಹಾಗೆ ಮಾತೇ ಬಾರದ ಹಾಗೆ ಆಗುತ್ತದೆ.

ಸ್ನೇಹಾ ಓದನ್ನು ನೆನಪಿದ ಪುಟ್ಟಕ್ಕ

ಬಂಗಾರಮ್ಮ ಪುಟ್ಟಕ್ಕನ ಮನೆಗೆ ಹೋದಾಗ ಸುಮಾ ಮತ್ತು ಪುಟ್ಟಕ್ಕ ಇಬ್ಬರೂ "ಸ್ನೇಹಾ ಇನ್ನೂ ಓದಬೇಕು ಎನ್ನುವ ಆಸೆಯನ್ನು ಬಂಗಾರಮ್ಮ ಅವರ ಮುಂದೆ ಇಟ್ಟಿರುತ್ತಾರೆ. ಮಗಳು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾಳೆ. ಆದರೆ ತನ್ನ ಕನಸುಗಳನ್ನು ಆಕೆ ಮರೆತುಬಿಟ್ಟಿದ್ದಾರೆ. ಅದಕ್ಕೆ ಆಕೆಯ ಕನಸನ್ನು ನನಸು ಮಾಡಿ ಅಮ್ಮಾವರೇ ಎಂದು ಬೇಡಿಕೊಳ್ಳುತ್ತಾಳೆ.

More from Filmibeat

English summary
Puttakkana Makkalu serial June 11th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X