Puttakkana Makkalu: ಸುಮಾ ಮೇಲೆ ರೇಗಾಡಿದ ಪುಟ್ಟಕ್ಕಗೆ ಚಿಂತೆ ಕಾಡುತ್ತಿರುವುದು ಯಾಕೆ?

By ಪೂರ್ವ

ಪುಟ್ಟಕ್ಕಗೆ ಸುಮನದ್ದೆ ಚಿಂತೆ. ಸ್ನೇಹಾ ಆದರೆ ಇದೀಗ ಬಂಗಾರಮ್ಮ ಅವರ ಸೊಸೆ. ಆದರೆ ಆಕೆಗೆ ಎಲ್ಲಾ ಸವಲತ್ತು ಆಕೆಯ ಗಂಡನ ಮನೆಯಲ್ಲಿ ಸಿಗುತ್ತದೆ. ಆದರೆ ಸುಮಾಗೆ ಹಾಗಲ್ಲ ಇನ್ನೂ ಬಾಳಿ ಬದುಕಬೇಕಾದ ಹುಡುಗಿ. ಎಲ್ಲಾದರೂ ಎಲ್ಲೆ ಮೀರಿ ಆಕೆಯ ಬಾಳಲ್ಲಿ ದುರ್ಘಟನೆ ನಡೆದರೆ ನನ್ನಿಂದ ಅದೆಲ್ಲ ಸಹಿಸಲು ಆಗುವುದು ಇಲ್ಲ ಎಂದು ಪುಟ್ಟಕ್ಕ ಮನದಲ್ಲಿ ಅಂದುಕೊಂಡು ಇರುತ್ತಾಳೆ.

ಸುಮಾ ಕಾಲೇಜಿಗೆ ಹೋಗಿ ಮರಳಿ ಬಾರದೆ ಇರುವಾಗ ಆಕೆಗೆ ನಡುಕ ಉಂಟಾಗುತ್ತದೆ. ಏನು ಮಾಡಬೇಕು ಎಂದು ಮನದಲ್ಲಿ ಭಯ ಶುರು ಆಗುತ್ತದೆ. ಸುಮಾ ಎಲ್ಲಿಗೆ ಹೋಗುತ್ತಾಳೆ ಎನ್ನುವ ಭಯ ಆಕೆಗೆ. ಆಗ ಮನೆಗೆ ಬಂದ ಒಬ್ಬಾತ "ಗೋಪಾಲಣ್ಣ ನಿಮ್ಮ ಮಗ ಪುರುಷೋತ್ತಮ ಬಹಳ ವೇಗವಾಗಿ ಬೈಕ್ ಓಡಿಸುತ್ತಾನೆ. ನೀವು ಅವನಿಗೆ ಬುದ್ದಿ ಹೇಳಿ. ಇಲ್ಲವಾದರೆ ಖಂಡಿತವಾಗಿಯೂ ಆತ ಸರಿ ಹೋಗುವುದಿಲ್ಲ. ಏನಾದರು ಒಂದು ಅವಘಡಕ್ಕೆ ಕಾರಣ ಆಗಬಹುದು" ಎಂದಾಗ ಪುಟ್ಟಕ್ಕಗೆ ಇನ್ನಷ್ಟು ದಿಗಿಲು ಆಗುತ್ತದೆ.

Puttakkana Makkalu serial June 12th Episode Update

ಏನು ಮಾಡುವುದು ಇದೀಗ ಸುಮಾನೂ ಇಲ್ಲ ಪುರುಷೋತ್ತಮನ ಸುದ್ದಿಯೂ ಇಲ್ಲ. ಏನು ಮಾಡಲಿ ಎಂದು ಗೋಪಾಲನ ಮುಖ ನೋಡುತ್ತಲೇ ಇರುತ್ತಾಳೆ. ಗೋಪಾಲ "ಸುಮಾ ಫೋನ್ ಸ್ವಿಚ್ ಆಫ್ ಆಗಿದೆ. ಏನು ಮಾಡಲಿ ಎಂದು ಯೋಚನೆ ಮಾಡುತ್ತಿದ್ದೇನೆ." ಎಂದು ಹೇಳುತ್ತಾನೆ. ಇತ್ತ ಸುಮಾ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಆಕೆಗೆ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾಳೆ. ಇನ್ನೂ ಸುಮಾ ದಾರಿ ಕಾಯುತ್ತಿದ್ದ ಪುಟ್ಟಕ್ಕಗೆ ಸುಮಾ ಬರುತ್ತಿರುವುದು ಕಾಣಿಸುತ್ತದೆ.

ಸುಮಾ ಬಳಿ ಪ್ರಶ್ನೆ ಮಾಡಿದ ಪುಟ್ಟಕ್ಕ

"ಯಾಕೆ ಇಷ್ಟು ಲೇಟ್ ಆಗಿ ನೀನು ಮನೆಗೆ ಬಂದೆ" ಎಂದು ಕೇಳಿದಾಗ ಸುಮಾಗೆ ಏನು ಹೇಳಬೇಕು ಅಂತಾನೇ ಗೊತ್ತಾಗಲ್ಲ. ಪುಟ್ಟಕ್ಕಗೆ ಇನ್ನಷ್ಟು ಕೋಪ ಹೆಚ್ಚಾಗುತ್ತದೆ. ಯಾಕೆ ನೀನು ಲೇಟ್ ಆಗಿ ಬಂದೆ . ಲೇಟ್ ಆಗಿ ಬರಲು ಕಾರಣ ಏನು ಎಂದು ಕೇಳುತ್ತಾರೆ. ಇದನ್ನೂ ಕೇಳಿದ ಪುರುಷೋತ್ತಮ "ಸ್ವಲ್ಪ ಲೇಟ್ ಆಯಿತು ದೊಡ್ಡಮ್ಮ" ಎಂದು ಹೇಳುತ್ತಾನೆ.

Puttakkana Makkalu serial June 12th Episode Update

ಪುರುಷೋತ್ತಮನ ಮಾತಿಗೆ ಮನ್ನಣೆ ಕೊಡದ ಪುಟ್ಟಕ್ಕ

"ಪುರುಷೋತ್ತಮ ನೀನು ಗಂಡು ಹುಡುಗ. ನೀನು ಎಲ್ಲಿ ಹೋದರೂ, ಯಾರು ಕೇಳುವುದು ಇಲ್ಲ. ಆದರೆ ಸುಮಾನ ಬಗ್ಗೆ ಏನೇನೋ ಮಾತನಾಡುತ್ತಾರೆ. ಸುಮಾ ನೀನು ಆ ಹುಡುಗನನ್ನು ಭೇಟಿ ಆಗಲು ಹೋಗಿದ್ದೆ ಎಂದು ಹೇಳು. ನನಗೆ ಎಲ್ಲವೂ ತಿಳಿದಿದೆ. ನೀನು ಯಾಕೆ ಹೋಗಿದ್ದೆ ಎನ್ನುವುದು. ಆದರೆ ನೀನು ನನ್ನ ಜೊತೆ ಹೇಳಿ ಹೋಗಬಹುದಿತ್ತಲ್ಲ" ಎಂದು ಪುಟ್ಟಕ್ಕ ಹೇಳುತ್ತಾರೆ. ಆಗ ಸುಮಾ "ನೀನು ಆತನ ಕಪಾಳಕ್ಕೆ ಹೊಡೆದಿದ್ದಕ್ಕೆ ನಾನು ಆತನ ಜೊತೆ ಕ್ಷಮೆ ಕೇಳಲು ಹೋಗಿದ್ದೆ" ಎಂದು ಹೇಳುತ್ತಾಳೆ.

ಅಮ್ಮನ ಮಾತು ಕೇಳಿ ಸುಮ್ಮನಾದ ಸುಮಾ

ಇದನ್ನು ಕೇಳಿದ ಪುಟ್ಟಕ್ಕ "ನೀನು ಯಾಕೆ ಕ್ಷಮೆ ಕೇಳುವುದು? ನಾನು ಕ್ಷಮೆ ಕೇಳುತ್ತೇನೆ" ಎಂದು ಹೇಳಿದಾಗ ಸುಮಾ ಏನು ಮಾತನಾಡುವುದಿಲ್ಲ. "ಆತ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿ. ಆತನ ಮೇಲೆ ಕೈ ಮಾಡಿ ಆತ ಏನಾದರು ಹೆಚ್ಚು ಕಮ್ಮಿ ಮಾಡಿಕೊಂಡರೆ ಎನ್ನುವ ಭಯ ಇತ್ತು ನನಗೆ. ಅದಕ್ಕೆ ಹಾಗೆ ಮಾಡಿದೆ." ಎನ್ನುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ "ಸುಮಾ ನನಗೆ ನಿನ್ನ ಮೇಲೆ ನಂಬಿಕೆ ಇದೆ. ಆದರೆ ನೀನು ಹೋದರೆ ವಾಪಸ್ ಬರುತ್ತೀಯಾ ಎನ್ನುವ ನಂಬಿಕೆ ನನಗೆ ಇಲ್ಲ" ಎಂದು ಹೇಳುತ್ತಾರೆ.

More from Filmibeat

English summary
Puttakkana Makkalu serial June 12th Episode Update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X