Puttakkana Makkalu:ದೇವಿಪುರಕ್ಕೆ ಬಂದ ಪುಟ್ಟಕ್ಕ; ಅಮ್ಮನ ಸ್ಥಿತಿ ಕಂಡು ಸಹನಾ ಕಂಗಾಲು
ಪುಟ್ಟಕ್ಕ ಹಾಗೂ ಮನೆಯವರು ಬಹಳ ಭಾರವಾದ ಮನಸ್ಸಿನಿಂದ ಸಹನಾ ತಿಥಿ ಕಾರ್ಯ ಮಾಡುತ್ತಿದ್ದಾರೆ. ಆದರೆ, ತಿಥಿ ಕಾರ್ಯ ಮಾಡಲು ಮಾತ್ರ ಮುರಳಿ ಮೇಷ್ಟ್ರು ಬರಲೆ ಇಲ್ಲ. ಪುಟ್ಟಕ್ಕಗೆ ಮಾತ್ರ ಅಂದುಕೊಂಡ ದಿನ ತಿಥಿ ಕಾರ್ಯ ಮಾಡಿ ಮುಗಿಸಿದರೆ ಸಹನಾ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲವಾದರೆ ಸಹನಾ ಆತ್ಮಕ್ಕೆ ಶಾಂತಿ ಸಿಗದೆ ಆಕೆ ಒದ್ದಾಟ ಮಾಡುತ್ತಾಳೆ ಎಂದು ಪುಟ್ಟಕ್ಕ ತಿಥಿ ಮಾಡಲು ಮುಂದಾಗುತ್ತಾರೆ.
ತನ್ನ ಮಗಳು ಬದುಕಿ ಇದ್ದಾಳೆ. ಆಕೆಗೆ ಏನೂ ಆಗಿಲ್ಲ ಎಂದು ಜೋರಾಗಿ ಅತ್ತು ಹುಷಾರು ತಪ್ಪಿರುತ್ತದೆ. ಆದರೆ ಈ ಬಾರಿ ಹಾಗೆ ಆಗಬಾರದು ಎಂದು ಸ್ನೇಹಾ ನಿಗ ಇಡುತ್ತಾಳೆ. ಅಮ್ಮನನ್ನು ಆದಷ್ಟು ಪ್ರೀತಿಯಿಂದ ಆಕೆಗೆ ನೋವು ಆಗದೆ ಇರುವ ಹಾಗೆ ಮಾಡಿಕೊಳ್ಳುತ್ತಾಳೆ. ಸಹನಾ ಆದಾರ್ ಕಾರ್ಡ್ ತೆಗೆದುಕೊಳ್ಳಲು ಊರಿಗೆ ಬರಲೆಬೇಕಾಗಿದೆ. ಊರಿಗೆ ಬಂದ ಬಳಿಕ ತನ್ನ ಅವ್ವ ಹೇಗಿದ್ದಾರೆ ಎಂದು ತಿಳಿದುಕೊಳ್ಳಬೇಕು ಎನ್ನುವ ಕಾತರ ಆಕೆಗೆ ಬಹಳ ಹೆಚ್ಚಾಗುತ್ತದೆ. ಇನ್ನೂ ಊರಿನ ದಾರಿ ಹಿಡಿದು ಮನೆಯ ಬಳಿ ಬರುತ್ತಾಳೆ.

ಅವ್ವ ಏನು ಮಾಡುತ್ತಿದ್ದಾಳೆ? ಅಪ್ಪಯ್ಯ, ಅವ್ವ ಸುಮಾನನ್ನು ನೋಡಬೇಕು ಅನ್ನಿಸುತ್ತಿದೆ ಎಂದು ಮನದಲ್ಲಿಯೇ ಅಂದುಕೊಂಡು ಮನೆಯ ಬಳಿಗೆ ಹೋದರೆ ಅಲ್ಲಿ ಯಾರೂ ಇರುವುದು ಇಲ್ಲ. ಸಹನಾ ಮೆತ್ತಗೆ ಮನೆಯ ಒಳಗೆ ಬಂದು ನೋಡಿದಾಗ ಸಹನಾಗೆ ಬಿಗ್ ಶಾಕ್ ಕಾದಿರುತ್ತದೆ. ಸಹನಾ ತಿಥಿ ಕಾರ್ಯ ನಡೆಯುತ್ತಿರುತ್ತದೆ. ಆದರೆ, ಮುರಳಿ ಆ ಕ್ಷಣಕ್ಕೆ ಬಾರದೆ ಇದ್ದರೂ, ಗೋಪಾಲ ಅತ್ತುಕೊಂಡೆ ಹೇಳುತ್ತಾನೆ. ಸಹನಾ ನೀನು ಚಿಕ್ಕ ವಯಸ್ಸಿನಿಂದಲೂ ಬಹಳ ಶಾಂತ ರೀತಿಯಲ್ಲಿ ಇದ್ದೀಯಾ. ಆದರೆ ಇದೀಗ ನಮ್ಮನ್ನು ಬಿಟ್ಟು ಹೋಗಿ ಬಿಟ್ಟೆ. ನನಗೆ ಬೇರೆ ವಿಧಿ ಇಲ್ಲ. ನಿನ್ನ ತಿಥಿ ಕಾರ್ಯ ಮಾಡಬೇಕಾಗಿದೆ ಎನ್ನುತ್ತಾರೆ.
ಮಗಳನ್ನು ನೆನೆದು ಆಳುತ್ತಿರುವ ಪುಟ್ಟಕ್ಕ
ಆಡಿಸಿ ಬೆಳೆಸಿದ ಕೈಯಿಂದ ಮಗಳ ತಿಥಿ ಕಾರ್ಯ ಮಾಡಬೇಕಾಗಿದೆ ಎಂದು ಅಳುತ್ತಾರೆ. ಇದನ್ನು ನೋಡಿದ ಸಹನಾಗೆ ಬೇಸರ ಆಗುತ್ತದೆ. ಇದೇನು ಮಾಡುತ್ತಿದ್ದಾರೆ. ನಾನು ಬದುಕಿ ಇರುವಾಗಲೇ ನನ್ನನ್ನು ಸಾಯಿಸಿ ಬಿಟ್ಟರೆ? ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಪುಟ್ಟಕ್ಕನನ್ನು ನೋಡಿದ ಮೇಲೆ ಅವ್ವ ಯಾಕಿಷ್ಟು ಸೊರಗಿ ಹೋಗಿದ್ದಾಳೆ. ಆಕೆಗೆ ಹೇಗೆ ನಾನು ಸಮಾಧಾನ ಮಾಡಲಿ ಎಂದು ಬೇಸರ ಮಾಡಿಕೊಂಡು ಇರುತ್ತಾಳೆ. ಆಕೆಗೆ ನಾನು ಈ ಭೂಮಿ ಮೇಲೆಯೇ ಇಲ್ಲ ಎಂದುಕೊಂಡು ಇದ್ದಾಳೆ. ಆದರೆ, ಇದೀಗ ನಾನು ಹೋದರೆ ಅವ್ವ ಅದನ್ನು ಹೇಗೆ ಸ್ವೀಕಾರ ಮಾಡುತ್ತಾಳೆ ಎಂದು ಕದ್ದು ಎಲ್ಲಾದನ್ನು ನೋಡುತ್ತಾಳೆ.

ಊರವರ ಮಾತು ಕೇಳಿ ಸಹನಾ ಶಾಕ್
ಊರಿನ ಪಂಚಾಯಿತಿಗೆ ಹೋಗಿದ್ದ ಸಹನಾಗೆ ಅಲ್ಲಿ ಪುಟ್ಟಕ್ಕನ ಬಗ್ಗೆ ಎಲ್ಲರೂ ಮಾತನಾಡುತ್ತಾ ಇರುವಾಗ ಸಹನಾ ಏನು ಮಾತನಾಡುತ್ತಿದ್ದಾರೆ ಎಂದು ಗಮನವಿಟ್ಟು ಕೇಳುತ್ತಾಳೆ. "ಪುಟ್ಟಕ್ಕ ಯಾಕೋ ತಲೆ ತಿರುಗಿ ಬಿದ್ದಿದ್ದಾಳೆ. ಆಕೆಯ ಮಗಳನ್ನು ಕಳೆದುಕೊಂಡು ಬಹಳಷ್ಟು ನೋವು ಅನುಭವಿಸುತ್ತಾ ಇದಾರೆ. ಮೊದಲೇ ಹೃದಯ ಕಾಯಿಲೆ ಇದೆ ಅವಳಿಗೆ" ಎಂದಾಗ ಸಹಗೆ ಬಹಳ ನೋವು ಆಗುತ್ತದೆ.
ತಿಥಿ ಕಾರ್ಯ ನೋಡಿದ ಸಹನಾ ಅಚ್ಚರಿ
ಆದರೂ ಕೂಡ ಆಕೆಗೆ ಇಷ್ಟು ಕಷ್ಟ ಬರಬರದಾಗಿತ್ತು ಎಂದು ಅಲ್ಲಿದ್ದವರು ಹೇಳಿದಾಗ ಸಹನಾ ಅವ್ವನ ಮುಖ ಕೊಡಬೇಕು. ಆಕೆಯ ಜೊತೆ ಮಾತನಾಡಬೇಕು ಎಂದು ಅನ್ನಿಸಿತ್ತು. ಇದೀಗ ತನ್ನ ಮನೆಯಲ್ಲಿ ತನ್ನದೇ ತಿಥಿ ಕಾರ್ಯ ಮಾಡುತ್ತಿರುವುದನ್ನು ನೋಡಿ ಸಹನಾ ಕಣ್ಣೀರು ಇಟ್ಟಿದ್ದಾಳೆ.


Click it and Unblock the Notifications











