Puttakkana Makkalu: ಸಹನಾ ಬಗ್ಗೆ ತುಚ್ಚವಾಗಿ ಮಾತನಾಡಿದ ರಾಜಿ; ಅಕ್ಕನ ಮೇಲೆ ಕೈ ಮಾಡಲು ಮುಂದಾದ ಕಾಳಿ
ಪುಟ್ಟಕ್ಕ ಅದು ಹೇಗೋ ಸಹಿಸಿಕೊಂಡು ಸಹನಾ ತಿಥಿ ಕಾರ್ಯ ಮಾಡುತ್ತಿದ್ದಾಳೆ. ಅಮ್ಮನ ಒದ್ದಾಟವನ್ನು ಕಂಡ ಸಹನಾ ಬಹಳ ದೂರದಿಂದ ಒದ್ದಾಡುತ್ತಿದ್ದಾಳೆ. ಸಹನಾಗೆ ಅದ್ಯಾಕೋ ಬಹಳ ನೋವು. ಅಮ್ಮನ ಜೊತೆ ನಾನು ಎಷ್ಟೆಲ್ಲ ಖುಷಿಯಲ್ಲಿ ಇದ್ದೆ. ಆದರೆ, ಅಮ್ಮನ ಪಾಲಿಗೆ ಇದೀಗ ನಾನು ಸತ್ತು ಹೋಗಿದ್ದೇನೆ. ಆಕೆಯ ಒದ್ದಾಟ ನಿಜವಾಗಲೂ ನನ್ನ ಕೈಯಿಂದ ನೋಡಲು ಆಗುತ್ತಿಲ್ಲ ಎಂದು ಸಹನಾ ಇನ್ನೇನು ಮಾಸ್ಕ್ ತೆಗೆದು ಅಮ್ಮನ ಬಳಿ ಬಂದು ಆಕೆಗೆ ಸಮಾಧಾನ ಮಾಡಬೇಕು ಎಂದುಕೊಂಡಿರುತ್ತಾಳೆ. ಆಗಲೇ ಅಲ್ಲಿಗೆ ರಾಜೀ ಬರುತ್ತಾಳೆ.
ರಾಜಿ, ಪುಟ್ಟಕ್ಕನ ಬಗ್ಗೆ ಬಹಳ ಚುಚ್ಚಿ ಮಾತನಾಡುತ್ತಾಳೆ. ಇದನ್ನು ನೋಡಿದ ಸಹನಾ ಮತ್ತೆ ಮುಖ ಮುಚ್ಚಿಕೊಂಡು ಮರದ ಹಿಂದೆ ನಿಂತುಕೊಂಡು ಇರುತ್ತಾಳೆ. ರಾಜಿ ಜೋರಾಗಿಯೇ ಹೇಳುತ್ತಾಳೆ "ಅಯ್ಯಯ್ಯೋ ಇದೇನಿದು. ನಿಮ್ಮ ಗೋಳಿನ ಕಥೆ ಇನ್ನೂ ಕೂಡ ಮುಗಿದಿಲ್ವ? ಮಗಳು ಮನೆ ಬಿಟ್ಟು ಹೋಗಿ ಇಪ್ಪತ್ತು ದಿನ ಆಗೊಯ್ತಾ? ಇನ್ನೂ ಕೂಡ ನೀವು ಅಳುವುದು ನಿಲ್ಲಿಸಿಲ್ಲ. ಅವಳು ಸತ್ತು 15 ದಿನ ಆಗಿದೆ ಅಲ್ವಾ? ಇನ್ನೂ ನಿಮ್ಮ ಕಣ್ಣಲ್ಲಿ ನೀರು ಬರುತ್ತಿದೆ ಅಂದರೆ ಎಲ್ಲಾ ಸೇರಿ ಏನು ಮಾಡುತ್ತಿದ್ದೀರಾ? ಪುಟ್ಟಕ್ಕ ನೀನು ಅಳಬೇಡ. ನೀನು ಅತ್ತರೆ ಜನರಿಗೆ ಬಹಳ ಬೇಸರ ಆಗುತ್ತದೆ" ಎಂದಾಗ ಗೋಪಾಲ ಕೊಂಚ ಜೋರಾಗಿಯೇ ರಾಜಿ ಬಳಿ ಹೇಳುತ್ತಾನೆ

"ರಾಜಿ ಇಲ್ಲಿ ಏನು ನಡೆಯುತ್ತಿದೆ ಎನ್ನುವ ಸಣ್ಣ ಅರಿವು ನಿನಗೆ ಇದೆಯಾ?" ಎಂದು ಕೇಳುತ್ತಾನೆ. ಇದನ್ನು ಕೇಳಿದ ರಾಜಿ ಮೌನ ವಹಿಸುತ್ತಾರೆ. ಪುರುಷೋತ್ತಮ, ರಾಜಿ ಬಳಿ "ಅಮ್ಮ ನಿನ್ನನ್ನು ಇಲ್ಲಿಗೆ ಯಾರು ಕರೆದರು? ನೀನು ಯಾಕೆ ಇಲ್ಲಿಗೆ ಬಂದೆ?" ಎಂದಾಗ ರಾಜೀ ಜೋರಾಗಿಯೇ "ನೀನು ಸುಮ್ಮನೆ ಕುಳಿತುಕೋ" ಎಂದು ಹೇಳುತ್ತಾಳೆ. ಮತ್ತೆ ಜೋರಾಗಿ ಹೇಳುತ್ತಾಳೆ.
ಸಹನಾಳನ್ನು ದೂಷಿಸಿದ ರಾಜಿ
"ನೀವೆಲ್ಲ ಆಕೆಗಾಗಿ ಯಾಕೆ ಅಳುತ್ತಿರಾ? ಗಂಡನ ಮನೆಯವರನ್ನೆಲ್ಲ ಜೈಲಿಗೆ ಹಾಕಿದವಳು. ಹಾಗೆಯೇ ಗಂಡನ ಮನೆ ಬಿಟ್ಟು ತವರಿಗೆ ಬಂದಿದ್ದಳು. ಮಧ್ಯ ರಾತ್ರಿ ಯಾರಿಗೂ ಹೇಳದೆ ಆಕೆ ಓಡಿ ಹೋದಳು. ಆಕೆಗೆ ಯಾಕೆ ಅಳಲಿ" ಎಂದಾಗ. ಕಾಳಿ ಕೊಂಚ ಜೋರಾಗಿಯೇ ಅಕ್ಕ ಎಂದು ಕಿರುಚುತ್ತಾ ಇರುತ್ತಾನೆ. ಇದನ್ನು ಕೇಳಿಸಿಕೊಂಡ ಕಾಳಿ ಮಾತ್ರ ಸಹನಾ ಬಗ್ಗೆ ಇರುವ ಕಾಳಜಿಗಾಗಿ, ಆಕೆಯ ಮೇಲಿನ ಪ್ರೀತಿಗಾಗಿ ಅಕ್ಕನ ಮೇಲೆ ಬಹಳ ಸಿಟ್ಟು ಬಂದು ಬಿಡುತ್ತದೆ.
ರಾಜಿ ಮಾತಿಗೆ ಕೋಪಗೊಂಡ ಕಾಳಿ
ಇನ್ನೂ ರಾಜಿ ಮಾತು ಮುಂದುವರೆಸುತ್ತಾ "ಮನೆ ಬಿಟ್ಟು ಹೋದವರ ಮೇಲೆ ನಿನಗೆ ಯಾಕೆ ಇಷ್ಟು ಕಾಳಜಿ" ಎಂದಾಗ ಕಾಳಿ "ಅಕ್ಕ ಇಲ್ಲಿ ತಿಥಿ ಕಾರ್ಯ ನಡೆಯುತ್ತಿದೆ. ಏನೇ ಮಾತನಾಡೋದು ಇದ್ದರೂ ಮನೆಯಲ್ಲಿ ಮಾತನಾಡೋಣ" ಎಂದಾಗ ರಾಜಿ "ಮನೆಯಲ್ಲಿ ಮಾತನಾಡುವಷ್ಟು ದೊಡ್ಡ ಗರತಿ ಅಲ್ಲ ಆಕೆ. ರಾತ್ರೋ ರಾತ್ರಿ ಯಾರ ಜೊತೆನೋ ಓಡಿ ಹೋದವಳು. ಅದಕ್ಕೆ ಆ ದೇವರು ಅವಳ ಮುಖವನ್ನೇ ನೋಡದ ಹಾಗೆ ಮಾಡಿಬಿಟ್ಟ" ಎಂದಾಗ ಬಹಳ ಕೋಪಗೊಂಡ ಕಾಳಿ ಅಕ್ಕನ ಮೇಲೆ ಕೈ ಮಾಡಲು ಮುಂದಾಗುತ್ತಾನೆ . ಇದನ್ನು ನೋಡಿ ರಾಜಿಗೆ ಶಾಕ್ ಆಗುತ್ತದೆ. "ಇನ್ನೂ ಒಂದು ಮಾತು ಆಡಿದರೆ, ಇಲ್ಲಿ ನಡೆಯುವುದು ಸಹನಾ ಕಾರ್ಯ ಅಲ್ಲ. ನಿನ್ನ ಕಾರ್ಯ" ಎಂದು ಕಾಳಿ ಹೇಳುತ್ತಾನೆ.

ರಾಜಿ ಮಾತಿಗೆ ಅತ್ತ ಪುಟ್ಟಕ್ಕ
ಇನ್ನೂ ಪುಟ್ಟಕ್ಕ ಜೊತೆ ರಾಜೇಶ್ವರಿ ಮಾತನಾಡುತ್ತಾಳೆ. ಪುಟ್ಟಕ್ಕ ಬಹಳ ದುಃಖದಿಂದ ಹೇಳುತ್ತಾಳೆ. "ಸಹನಾಳನ್ನು ಕಳೆದುಕೊಂಡು ನಾವು ಬಹಳ ದುಃಖ ಅನುಭವಿಸುತ್ತಾ ಇದ್ದೇವೆ. ದಯವಿಟ್ಟು ಆಕೆಯ ಕಾರ್ಯ ಮಾಡಲು ಬಿಡು. ಇಲ್ಲಿಂದ ಹೊರಟು ಹೋಗು ತಾಯಿ" ಎಂದು ಹೇಳುತ್ತಾಳೆ. ಬಳಿಕ ರಾಜಿ ಕಾಳಿಯತ್ತ ಕೋಪದಿಂದ ನೋಡಿ ಅಲ್ಲಿಂದ ಹೊರಟು ಹೋಗುತ್ತಾಳೆ.


Click it and Unblock the Notifications











