Puttakkana Makkalu:ರಾಜಿ ಮುಂದೆ ಬಂದ ಸಹನಾ; ಬಾಯಿ ಬಾಯಿ ಬಡ್ಕೊಂಡಿದ್ದೇಕೆ?

By ಪೂರ್ವ

ಪುಟ್ಟಕ್ಕ ಬಹಳ ನೋವಿನಿಂದಲೇ ಸಹನಾ ಕಾರ್ಯ ಮಾಡುತ್ತಾಳೆ . ಆಕೆಗೆ ತನ್ನ ಮಗಳನ್ನು ಕಳೆದುಕೊಂಡ ನೋವು ಒಂದು ಕಡೆ ಆದರೆ, ಊರವರೆಲ್ಲ ಸಹನಾ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮಾತ್ರ ಆಕೆಗೆ ಬಹಳ ನೋವು ತಂದಿತ್ತು. ಅದಲ್ಲದೆ ರಾಜಿ ಕೂಡ ಸಹನಾ ಬಗ್ಗೆ ಏನೇನೆಲ್ಲಾ ಮಾತುಗಳನ್ನು ಹೇಳಿದ್ದಳು. ಆದರೆ, ಅದೆಲ್ಲವನ್ನೂ ಕೇಳಿದ ಪುಟ್ಟಕ್ಕಗೆ ಏನು ಮಾಡಬೇಕು ಎಂದು ತಿಳಿಯದೇ ಕಣ್ಣೀರು ಹಾಕುತ್ತಾರೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸಹನಾ ಬಂದೇ ಬರುತ್ತಾಳೆ ಎಂದು ಪುಟ್ಟಕ್ಕ ಹೇಳುತ್ತಾರೆ

ಪುಟ್ಟಕ್ಕಗೆ ಇದೀಗ ಆಕೆ ಇನ್ನೂ ಮುಂದೆ ಬರುವುದೇ ಇಲ್ಲ ಎಂದು ತಿಳಿದು ಬಹಳ ನೋವು ಅನುಭವಿಸುತ್ತಿರುತ್ತಾಳೆ. ಇತ್ತ ಸ್ನೇಹಾ, ಚಂದ್ರುಗೆ ಕರೆ ಮಾಡುತ್ತಾಳೆ. ವಸು ಅತ್ತಿಗೆಯ ಸೀಮಂತ ಕಾರ್ಯ ಚೌಟ್ರಿಯಲ್ಲಿ ನಡೆಯಲಿ ಎನ್ನುವುದು ಆಕೆಯ ಆಸೆ. ಯಾಕೆಂದರೆ, "ಚೌಟ್ರಿಯಲ್ಲಿ ನಡೆದರೆ ಅತ್ತೆ ಕೂಡ ಬರಬಹುದು" ಎಂದಾಗ ಚಂದ್ರು ಮಾತ್ರ, "ವಸು ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ನನ್ನ ಮಗು. ಆ ಕಾರಣದಿಂದ ನನಗೆ ನನ್ನ ಮನೆಯಲ್ಲಿ ವಸು ಸೀಮಂತ ಆಗಬೇಕು ಎನ್ನುವ ಆಸೆ" ಎಂದಿದ್ದಾನೆ.

Puttakkana Makkalu serial June 18th episode update

ಅದು ಅಮ್ಮನಿಗೆ ಕೂಡ ಆ ಆಸೆ ಇರುವುದು ಸತ್ಯ. ಆ ಕಾರಣದಿಂದಾಗಿ ಅಮ್ಮ ಕೂಡ ಮನೆಯಲ್ಲಿ ಸೀಮಂತ ಶಾಸ್ತ್ರ ನಡೆಯಲಿ ಎಂದು ಹೇಳುತ್ತಿದ್ದಾರೆ ಎಂದಾಗ ಸ್ನೇಹಾಗೆ ಏನು ಹೇಳಬೇಕು ತಿಳಿಯದೇ ಸರಿ ನನ್ನ ಅತ್ತೆಯ ಬಳಿ ನಾನು ಮಾತನಾಡಿಕೊಳ್ಳುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ. ಹಾಗೆಯೇ ತನ್ನ ಅತ್ತೆಯ ಬಳಿ ಚಂದ್ರು ಹೇಳಿದ ಮಾತು ಹೇಳಿದಾಗ ಬಂಗಾರಮ್ಮಗೆ ಬಹಳ ಬೇಸರ ಆಗುತ್ತದೆ. ಆದರೆ, ಏನು ಮಾಡಲು ಆಗುವುದು ಇಲ್ಲ. ಮಗಳನ್ನು ಮದುವೆ ಮಾಡಿ ಕೊಟ್ಟ ಬಳಿಕ ಅವರು ಹೇಳಿದ್ದೇ ನಡೆಯಬೇಕು.

ರಾಜಿ ಮೇಲೆ ಸಹನಾಗೆ ಸಿಟ್ಟು

ಇನ್ನೂ ಸಹನಾಗೆ ರಾಜಿ ಮೇಲೆ ಬಹಳ ಸಿಟ್ಟು ಬಂದಿರುತ್ತದೆ. ರಾಜಿಗೆ ಹೇಗಾದರೂ ಮಾಡಿ ಪಾಠ ಕೇಳಿಸಲೇಬೇಕು ಎಂದು ನಿರ್ಧಾರ ಮಾಡಿ, ಆಕೆಯ ಮನೆಗೆ ಹೋಗುತ್ತಾಳೆ. ರಾಜಿಯ ಮನೆ ಕದವನ್ನು ರಾತ್ರಿ ಯಾರೋ ತಟ್ಟಿದ ಹಾಗೆ ಆಗುತ್ತದೆ. ನಿದ್ದೆಯಲ್ಲಿ ಇದ್ದ ರಾಜಿ ಮನೆಯ ಹೊರಗೆ ಹೋಗಿ ನೋಡುತ್ತಾಳೆ. ಆದರೆ ಮನೆಯ ಹೊರಗೆ ಯಾರೂ ಇಲ್ಲದನ್ನು ನೋಡಿ ಮತ್ತೆ ಮನೆ ಒಳಗೆ ಹೋಗಿ ಮಲಗುತ್ತಾಳೆ.

Puttakkana Makkalu serial June 18th episode update

ಬಾಗಿಲು ತೆಗೆದು ಹೊರ ನಡೆದ ರಾಜಿ

ಮತ್ತೆ ಯಾರೋ ಬಾಗಿಲು ತಟ್ಟುತ್ತಾರೆ. ಈ ವೇಳೆ ಬಹಳ ಕೋಪದಿಂದ ಬಂದ ರಾಜಿ ಬಾಗಿಲು ತೆಗೆದು ಯಾರು ಎಂದು ಜೋರಾಗಿ ಕೂಗುತ್ತಲೇ ವಾಪಸ್ ಮನೆ ಒಳಗೆ ಹೋಗಬೇಕು ಎನ್ನುವಾಗ ಸಹನಾ, ರಾಜಿಯ ಜುಟ್ಟು ಹಿಡಿದು ಸರಿಯಾಗಿಯೇ ಹೊಡೆಯುತ್ತಾಳೆ. ಸಹನಾಳನ್ನು ನೋಡಿದ ರಾಜಿಗೆ ಮಾತೇ ಬಾರದ ಹಾಗೆ ಆಗುತ್ತದೆ. ಯಾಕೆಂದರೆ ರಾಜಿ ಎಂದರೆ ಅಷ್ಟು ಕೋಪ. ರಾಜಿಗೆ ಸಹನಾಳನ್ನು ನೋಡಿ ಶಾಕ್ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗುತ್ತಾಳೆ.

ಸಹನಾ ಬಳಿ ಬೇಡಿಕೊಂಡ ರಾಜಿ

"ಏನು ನಾನೇ ಸಹನಾ. ಯಾಕೆ ನೀನು ಇಷ್ಟೊಂದು ಕಾಟ ಕೊಡುತ್ತಿದ್ದಿಯಾ. ಯಾಕೆ ಹೀಗೆಲ್ಲ ಮಾಡುತ್ತಿರುವುದು ಸರಿಯಾ" ಎಂದು ಹೇಳಿದಾಗ ರಾಜಿ "ಇಲ್ಲ ಸಹನಾ ನಾನೇನೋ ತಪ್ಪು ಮಾಡಿಲ್ಲ. ಇನ್ನೂ ಮೇಲೆ ಪುಟ್ಟಕ್ಕನ ಸಹವಾಸಕ್ಕೆ ನಾನು ಹೋಗುವುದು ಇಲ್ಲ" ಎಂದು ಹೇಳುತ್ತಾಳೆ. ರಾಜಿಗೆ ಸಹನಾ ಸರಿಯಾಗಿಯೇ ಪಾಠ ಕಲಿಸಿದ್ದಾಳೆ. ಇನ್ನಾದರೂ ಪುಟ್ಟಕ್ಕಗೆ ರಾಜಿ ಕಾಟ ತಪ್ಪುತ್ತದೆಯೋ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.

More from Filmibeat

English summary
Puttakkana Makkalu serial June 18th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X