Puttakkana Makkalu: ರಾಜೇಶ್ವರಿಗೆ ದೆವ್ವದ ಚಿಂತೆ? ನೆಟ್ಟಿಗರಿಗೆ ನಿಂಬೆ ಹಣ್ಣಿನದ್ದು ಚಿಂತೆ!

By ಪೂರ್ವ

ಬಂಗಾರಮ್ಮಗೆ ತನ್ನ ಮಗಳ ಸೀಮಂತ ಅದ್ದೂರಿಯಾಗಿ ಮಾಡಬೇಕು ಎನ್ನುವ ಬಯಕೆ. ಆದರೆ, ಚಂದ್ರು ಮನೆ ಕಡೆಯವರು ಸೀಮಂತ ಮಾತ್ರ ನಮ್ಮ ಮನೆಯಲ್ಲಿ ನಡೆಯಬೇಕು ಎಂದು ಹಠ ತೊಟ್ಟಿದ್ದಾರೆ. ಈ ವಿಷಯವನ್ನು ಸ್ನೇಹಾ ಬಳಿ ಹೇಳುತ್ತಾರೆ. ಸ್ನೇಹಾ, ಚಂದ್ರುವನ್ನು ಅದೆಷ್ಟೇ ಕನ್ವಿನ್ಸ್ ಮಾಡಲು ಹೊರಟರೂ, ಅವರು ಮಾತ್ರ ಪಟ್ಟು ಬಿಡುತ್ತಿಲ್ಲ.

"ಸ್ನೇಹಾ ನೀನು ನಿನ್ನ ಅತ್ತೆಯ ಸಲುವಾಗಿ ಮಾತನಾಡುತ್ತಿದ್ದಿಯಾ. ಆದರೆ, ನಾನು ನನ್ನ ಅವ್ವನ ಸಲುವಾಗಿ ಮಾತನಾಡಬೇಕಾಗಿದೆ. ನಮ್ಮ ಮನೆಯಲ್ಲಿ ಸೀಮಂತ ಕಾರ್ಯ ಮಾಡಬೇಕು ಎನ್ನುವ ಆಸೆ ಅವರದ್ದು" ಎಂದಾಗ ಸ್ನೇಹಾ ಏನು ಮಾತನಾಡದೆ ಸುಮ್ಮನೆ ಫೋನ್ ಇಡುತ್ತಾಳೆ.

Puttakkana Makkalu serial June 19th episode update

ಇನ್ನೂ ರಾಧಾ ಮಾತ್ರ ಮಾದೇಗೌಡರ ಬಳಿ ಅಟ್ಟಕ್ಕೇರಿಸುವ ಹಾಗೆ ಮಾತನಾಡುತ್ತಾಳೆ. ಮಾವಯ್ಯ "ನೀವು ನನಗೆ ತಂದೆಯ ಸ್ಥಾನವನ್ನು ತುಂಬಿದ್ದೀರಿ. ತಂದೆಯ ನೆನಪೇ ಬಾರದೆ ಇರುವ ಹಾಗೆ ನೋಡಿಕೊಂಡು ಇದ್ದೀರಿ. ನನಗೆ ಇದರಿಂದ ಬಹಳ ಖುಷಿ ಆಗಿದೆ" ಎಂದು ಹೇಳುತ್ತಾಳೆ. ಹಾಗೆಯೇ ವಸುಗೆ ಕರೆ ಮಾಡುತ್ತಾಳೆ.

ಒಂದಿಷ್ಟು ಮಾತುಕಥೆಯ ಬಳಿಕ ವಸು ತಂದೆಯತ್ತಾ ರಾಧಾ ಫೋನ್ ತಿರುಗಿಸುತ್ತಾಳೆ. ಅಪ್ಪನನ್ನು ಮಾತು ಕೇಳಿ ವಸುಗೆ ಖುಷಿ ಆಗುತ್ತೆ. "ಅಪ್ಪಯ್ಯ ನೀನು ಹೇಗಿದ್ದೀಯಾ? ಚೆನ್ನಾಗಿ ಇದ್ದೀಯಾ? ನಿನ್ನನ್ನು ನೋಡಬೇಕು ಅನ್ನಿಸುತ್ತಿದೆ" ಎಂದಾಗ ಮಾದೇಗೌಡರು "ನಾನು ಚೆನ್ನಾಗಿ ಇದ್ದೇನೆ. ಹಾಗೆಯೇ ಬಹಳ ಖುಷಿಯಲ್ಲಿ ಇದ್ದೇನೆ. ನನ್ನ ಮೊಮ್ಮಗು ಏನು ಮಾಡುತ್ತಿದೆ?" ಎಂದಾಗ ವಸು "ನಮ್ಮ ಮಗು ನಿಮ್ಮನ್ನೆಲ್ಲ ಕಾಣುವ ತವಕದಲ್ಲಿ ಇದೆ" ಎಂದು ಹೇಳಿದಾಗ, ಮಾದೇಗೌಡರು ಬಹಳ ಖುಷಿಯಲ್ಲಿ ಇರುತ್ತಾರೆ.

Puttakkana Makkalu serial June 19th episode update

ವಸು ನೋಡಿ ಖುಷಿ ಪಟ್ಟ ಬಂಗಾರಮ್ಮ

ಇನ್ನೂ ಸ್ನೇಹಾ ಹಾಗೂ ಕಂಠಿ ಅಲ್ಲಿಗೆ ಬರುತ್ತಾರೆ. ಅವರು ಕೂಡ ವಸುವನ್ನು ನೋಡಿ ಖುಷಿ ಪಡುತ್ತಾರೆ. ವಸು ಕ್ಷೇಮ ಸಮಾಚಾರ ವಿಚಾರಣೆ ಮಾಡುತ್ತಾರೆ. ಬಂಗಾರಮ್ಮ ಮಗಳ ಮುಖ ಜೋಡಿ ಬಹಳ ಆನಂದ ಪಡುತ್ತಾರೆ. "ಇದೀಗ ನೀನು ಗರ್ಭಿಣಿ. ಹೊತ್ತು ಹೊತ್ತಿಗೆ ಊಟ ತಿಂಡಿ ಮಾಡಬೇಕು" ಎಂದಾಗ ವಸು ಅಮ್ಮನ ಮಾತಿಗೆ ತಲೆ ಅಲ್ಲಾಡಿಸುತ್ತಾಳೆ.

ಸಹನಾ ನೆನೆದು ನಡುಗಿದ ಬಂಗಾರಮ್ಮ

ರಾಜೇಶ್ವರಿಗೆ ಸಹನಾ ದೆವ್ವ ರೂಪದಲ್ಲಿ ಕಾಡುತ್ತಿದ್ದಾಳೆ. ಇದೀಗ ಪುಟ್ಟಕ್ಕಗೆ ನಾನು ಕಾಟ ಕೊಟ್ಟಿದ್ದಕ್ಕಾಗಿ ಸಹನಾ ನನಗೆ ಕಾಟ ಕೊಡುತ್ತಿದ್ದಾಳೆ ಎಂದು ಭಯದಲ್ಲಿ ನಡುಗುತ್ತಲೇ ಇರುತ್ತಾಳೆ. ಅಮ್ಮನ ಸ್ಥಿತಿ ಕಂಡು ಪುರುಷೋತ್ತಮ ಅಮ್ಮ ಯಾಕೆ ಹೀಗೆ ಆಡುತ್ತಿದ್ದಾರೆ ಎಂದು ಅಂದುಕೊಂಡಿದ್ದಾನೆ. ಸಹನಾ ದೆವ್ವ ಆಗಿ ನನಗೆ ಕಾಟ ಕೊಡುತ್ತಿದ್ದಾಳೆ ಎಂದು ರಾಜಿ ಒಂದೇ ಸಮನೇ ಹೇಳುತ್ತಿದ್ದಾಳೆ.

ಅಕ್ಕನಿಗೆ ಬುದ್ದಿ ಹೇಳಿದ ಕಾಳಿ

ರಾಜಿ ವಿಚಿತ್ರವಾಗಿ ಆಡುತ್ತಿರುವುದನ್ನು ನೋಡಿ, ಕಾಳಿ ಹಾಗೂ ಪುರುಷೋತ್ತಮ ಇಬ್ಬರೂ "ನಿನಗೆ ಯಾಕೋ ಬ್ರಾಂತು" ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮುಂದೇನಾಗುತ್ತೆ ಅನ್ನೋದನ್ನು ನೋಡಬೇಕಿದೆ. ಸದ್ಯಕ್ಕೆ ರಾಜಿಯನ್ನು ನೆಟ್ಟಿಗರು "ನಿಂಬೆ ಹಣ್ಣಿನ ರೇಟ್ ನೋಡಿದ್ರೆ 20 ರೂಪಾಯಿಗೆ 3.. ಈ ರಾಜಿ ನೋಡಿದ್ರೆ, ಸರ ಮಾಡಿ ಹಾಕೊಂಡವ್ಳೆ" ಚಿಂತೆ ಮಾಡ್ತಿದ್ದಾರೆ.

More from Filmibeat

English summary
Puttakkana Makkalu serial June 19th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X