Puttakkana Makkalu:ನಂಜಮ್ಮನ ಮನೆಗೆ ಬರಲು ಒಪ್ಪದ ಬಂಗಾರಮ್ಮ; ಅಮ್ಮನಿಗಾಗಿ ಕಾಯುತ್ತಿರುವ ವಸು
ಕಂಠಿ ಹಾಗೂ ಸ್ನೇಹಾ ಕೇಕ್ ಹಿಡಿದುಕೊಂಡು ಪುಟ್ಟಕ್ಕನ ಮನೆಗೆ ಹೋಗುತ್ತಾರೆ. ಎಲ್ಲರೂ ಅಪ್ಪಂದಿರ ದಿನಾಚರಣೆಯ ಸಂಭ್ರಮದಲ್ಲಿ ಇರುತ್ತಾರೆ. ಪುಟ್ಟಕ್ಕನ ಮಕ್ಕಳಿಗೆ ಪುಟ್ಟಕ್ಕ ಎಲ್ಲವೂ ಆಗಿದ್ದಾಳೆ. ಹೆತ್ತ ತಂದೆ ಕೊಡದ ಪ್ರೀತಿಯನ್ನು ಮಕ್ಕಳಿಗೆ ನೀಡಿ ಬೆಳೆಸಿದ್ದಾಳೆ. ನನ್ನ ಜೀವನದಲ್ಲಿ ನನಗೆ ಎಲ್ಲವೂ ನೀನೇ ಅಮ್ಮ ಎಂದು ತಾಯಿಯ ಬಳಿ ಕೇಕ್ ಕಟ್ ಮಾಡಿಸುತ್ತಾಳೆ. ಇದನ್ನು ನೋಡಿದ ಗೋಪಾಲಯ್ಯನಿಗೆ ಖುಷಿ ಆಗುತ್ತದೆ. ಪುರುಷೋತ್ತಮ ತನ್ನ ತಂದೆಗೆ ಬಂದು ವಿಶ್ ಮಾಡುತ್ತಾನೆ.
ಹಾಗೆಯೇ ಉಳಿದ ಪುಟ್ಟಕ್ಕನ ಇಬ್ಬರು ಪುತ್ರಿಯರು ಅಮ್ಮನ ಹೆಗಲಾಗಿ ನಿಂತಿರುತ್ತಾರೆ. ವಸು ಸೀಮಂತ ಸಂಭ್ರಮಾಚರಣೆಯಲ್ಲಿ ಎಲ್ಲರೂ ಇರುತ್ತಾರೆ. ಎಲ್ಲರ ಮುಖದಲ್ಲಿ ಕೂಡ ಖುಷಿ ಇರುತ್ತದೆ. ಆದರೆ, ಮುಖ್ಯವಾಗಿ ವಸು ಮುಖದಲ್ಲಿ ಬಹಳ ಆತಂಕ ಮನೆ ಮಾಡಿತ್ತು. ವಸುಗೆ ಆಕೆಯ ಅಮ್ಮನದ್ದೆ ಚಿಂತೆ. ಅಮ್ಮ ನಮ್ಮ ಮನೆಗೆ ಬರುತ್ತಾಳೋ ಅಥವಾ ಇಲ್ಲವೋ ಎಂಬು ಗೊಂದಲದಲ್ಲಿದ್ದಾಳೆ.

ಆಕೆಗೆ ಏನು ಮಾಡಬೇಕು ಎಂದು ತಿಳಿಯದೇ ಅತ್ತಿಂದ ಇತ್ತ ಓಡಾಟ ಮಾಡುತ್ತಿರುವಾಗ ನಂಜಮ್ಮ ವಸುಗೆ ಕೇಳುತ್ತಾರೆ. "ಯಾಕೆ ವಸು ಏನಾಯಿತು? ನೀನು ಯಾಕೆ ತುಂಬಾ ಟೆನ್ಶನ್‌ನಲ್ಲಿ ಇದ್ದೀಯಾ? ಎಂದು ಕೇಳುತ್ತಾರೆ. ಆಗ "ಅಮ್ಮ ಬರುತ್ತಾರಾ ಅಥವಾ ಇಲ್ವಾ ಎಂದು ಟೆನ್ಶನ್‌ನಲ್ಲಿ ಇದ್ದೇನೆ. ಮನೆಯಲ್ಲಿ ಸೀಮಂತ ಕಾರ್ಯ ಮಾಡುವುದರಿಂದ ಅಮ್ಮ ಮನೆಗೆ ಬರುತ್ತಾರೆ ಎಂದು ಹೇಳಲು ಆಗುವುದು ಇಲ್ಲ. ಅದು ಬೇರೆ ಸ್ನೇಹಾ ಕೂಡ ಚಂದ್ರುಗೆ ಕರೆ ಮಾಡಿದ್ದಳಂತೆ. ಎಲ್ಲಾದರೂ ಚೌಟ್ರಿಲಿ ಸೀಮಂತ ಶಾಸ್ತ್ರ ಮಾಡಬಹುದು ಅಲ್ವಾ? ಎಂದಾಗ ಚಂದ್ರು ಕೂಡ ಮನೆಯಲ್ಲಿ ಸೀಮಂತ ಶಾಸ್ತ್ರ ಮಾಡಬೇಕು ಎಂದು ಹೇಳಿಬಿಟ್ಟಿದ್ದಾರೆ" ಎನ್ನುತ್ತಾಳೆ.
ನಂಜಮ್ಮನ ಮನಸ್ಸಲ್ಲಿ ನಂಜಿನ ನಗು
ಆದರೆ, ಇದೀಗ ಅಮ್ಮ ಬರುತ್ತಾರೋ ಅಥವಾ ಇಲ್ವೋ ಎನ್ನುವ ರೀತಿ ಆಗಿದೆ. ಈ ಮಾತನ್ನು ಕೇಳಿದ ನಂಜಮ್ಮ "ಪರವಾಗಿಲ್ಲ, ಚಂದ್ರು ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ಇದ್ದಾನೆ. ಆತನ ಬಳಿ ನಾನು ಅದಾಗಲೇ ಇದು ನಮ್ಮ ಮನೆಯಲ್ಲಿ ನಡೆಯುವ ಮೊದಲ ಶುಭ ಕಾರ್ಯ ಎಂದು ಹೇಳಿದ್ದೆ. ಅದನ್ನು ನೆನಪಲ್ಲಿ ಇಟ್ಟುಕೊಂಡು ಇದ್ದಾನೆ" ಅಂದುಕೊಳ್ಳುತ್ತಾಳೆ.

ಟೆನ್ಶನ್‌ನಲ್ಲಿ ಇರುವ ವಸು
"ಇದು ನಿನಗೆ ಟೆನ್ಶನ್ ಕೊಟ್ಟಿತು ಅಲ್ವಾ?" ಎಂದಾಗ ವಸು ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇತ್ತ ಮನೆಯಲ್ಲಿ ಎಲ್ಲರೂ ಸೀಮಂತ ಶಾಸ್ತ್ರಲ್ಲಿ ಭಾಗಿ ಆಗಲು ಹೊರಟು ನಿಂತಾಗ ಬಂಗಾರಮ್ಮ "ನಾನು ನಂಜಮ್ಮನ ಮನೆಗೆ ಬರುವುದಿಲ್ಲ. ನೀವೆಲ್ಲ ಹೋಗಿ ಬನ್ನಿ" ಎನ್ನುತ್ತಾರೆ. ಆಗ ರಾಧಾ, ಬಂಗಾರಮ್ಮನ ಮನ ಒಲಿಸಲು ಬರುತ್ತಾರೆ. ಆದರೆ, ಬಂಗಾರಮ್ಮಗೆ ಮಾತ್ರ ನಂಜಮ್ಮ ಆಡಿದ ಮಾತುಗಳೇ ನೆನಪಿಗೆ ಬರುತ್ತವೆ.
ಅತ್ತೆಯ ಜೊತೆ ಇರಲು ಮುಂದಾದ ಸ್ನೇಹಾ
ಇನ್ನೂ ನನ್ನ ಅತ್ತೆ ಸೀಮಂತ ಶಾಸ್ತ್ರ ಮಾಡಲು ಹೋಗುವುದಿಲ್ಲ. ಇನ್ನೂ ನಾನು ಯಾಕೆ ಹೋಗಲಿ ಎಂದು ಬೇಸರದಲ್ಲಿ ಇರುತ್ತಾಳೆ. ಸ್ನೇಹಾ ಕೂಡ ನಾನು ಬರುವುದಿಲ್ಲ ಎಂದು ಹೇಳಿದಾಗ ಕಂಠಿಗೆ ಏನು ಮಾಡಬೇಕೆಂದು ತಿಳಿಯದಾಗುತ್ತೆ.


Click it and Unblock the Notifications











