Puttakkana Makkalu:ನಂಜಮ್ಮನ ಮನೆಗೆ ಬಂಗಾರಮ್ಮ ಎಂಟ್ರಿ; ಮುಂದೇನಗುತ್ತೋ ಏನೋ?
ನಂಜಮ್ಮನ ಮನೆಯಲ್ಲಿ ವಸುಗೆ ಅದ್ದೂರಿ ಸೀಮಂತ ಶಾಸ್ತ್ರ ನಡೆಯುತ್ತಿದೆ. ಮನೆ ಮಂದಿ ಎಲ್ಲಾ ಬಹಳ ಖುಷಿಯಾಗಿ ಇದ್ದಾರೆ. ವಸುಗೆ ತನ್ನ ತಾಯಿ ಬರುತ್ತಾರಾ ಎನ್ನುವ ಸಣ್ಣ ಅಳುಕು ಇತ್ತು. ಏನಾಗುತ್ತೋ ಏನೋ. ತನ್ನ ತಾಯಿಯ ಮನಸ್ಥಿತಿ ಹೇಗಿರುತ್ತೋ ಏನೋ ಎನ್ನುವ ಆಲೋಚನೆ ಇರುತ್ತದೆ. ಗರ್ಭಿಣಿಯಾಗಿರುವ ಎಲ್ಲಾ ಮಹಿಳೆಯರಿಗೆ ತನ್ನ ತಾಯಿಯೇ ಬಹಳ ದೊಡ್ಡ ಆಸ್ತಿ ಎಂದು ಕೊಂಡಿರುತ್ತಾರೆ.
ಆದರೆ, ತನ್ನ ತಾಯಿ ಅತ್ತೆಯ ಜೊತೆ ಜಗಳ ಮಾಡಿಕೊಂಡು ತನ್ನ ಸೀಮಂತ ಶಾಸ್ತ್ರಕ್ಕೆ ಆಕೆ ಬರುವುದಿಲ್ಲ ಎನ್ನುವ ಬೇಸರವಿರುತ್ತೆ. ಈ ಕಾರಣಕ್ಕೆ ಅಮ್ಮನಿಗಾಗಿ ಮನೆಯ ದಾರಿಯನ್ನೇ ನೋಡುತ್ತಾ ಇರುತ್ತಾರೆ. ಇನ್ನೂ ಚಂದ್ರುಗೆ ತನ್ನ ತಾಯಿಯ ಮಾತೇ ಮುಖ್ಯ. ವಸು ಮಾತು ಕೇಳುವ ತಾಳ್ಮೆ ಆತನಿಗೆ ಇರುವುದಿಲ್ಲ. ವಸು ಸೀಮಂತ ಶಾಸ್ತ್ರ ನಡೆಯುವ ದಿನ ಸ್ನೇಹಾ ಹಾಗೂ ಬಂಗಾರಮ್ಮನನ್ನು ಬಿಟ್ಟು ಉಳಿದ ಜನರೆಲ್ಲರೂ ಬರುತ್ತಾರೆ. ರಾಧಾಗೆ ಅತ್ತೆ ಸೀಮಂತ ಶಾಸ್ತ್ರಕ್ಕೆ ಬರಬಾರದು ಎನ್ನುವ ಉದ್ದೇಶ.

ಬಂಗಾರಮ್ಮಗೆ ತನ್ನ ಮಗಳ ಸೀಮಂತ ಶಾಸ್ತ್ರ ಮಾಡಲು ಬರಲು ಆಗಲಿಲ್ಲ ಎನ್ನುವ ಕೊರಗು ಆಕೆಗೆ ಬರಬೇಕು ಎನ್ನುವ ಉದ್ದೇಶ. ತನ್ನ ತಾಯಿ ಶಶಿಕಲಾ ಅದೆಷ್ಟು ಕಷ್ಟ ಪಟ್ಟಿದ್ದಾರೆ. ಆಕೆಯ ಕಷ್ಟವನ್ನು ನೋಡಿ ಯಾರಿಗೂ ಕನಿಕರ ಎನ್ನುವುದೇ ಹುಟ್ಟುತ್ತಿಲ್ಲ. ಆದರೆ, ಇದೀಗ ನಾನು ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂದು ರಾಧಾ ಯೋಚನೆ. ಇತ್ತ ಪುಟ್ಟಕ್ಕ ಕೂಡ ನಂಜಮ್ಮನ ಮನೆಗೆ ಬಂದಿರುತ್ತಾಳೆ.
ನಂಜಮ್ಮನ ಮನೆಗೆ ಆಗಮಿಸಿದ ರಾಧಾ, ಕಂಠಿ
ನಂಜಮ್ಮನ ಮನೆಯಲ್ಲಿ ಮಾತ್ರ ಹಬ್ಬದ ಕಳೆ ಬಂದಿದೆ. ರಾಧಾ ಹಾಗೂ ಕಂಠಿ ನಂಜಮ್ಮನ ಮನೆಗೆ ಹೂವು ಹಣ್ಣು ಹಂಪಲು ಎಂದೆಲ್ಲ ತವರು ಮನೆಯಿಂದ ಬರಬೇಕಾದ ಎಲ್ಲದನ್ನೂ ತೆಗೆದುಕೊಂಡು ಬರುತ್ತಾರೆ. ಬಂಗಾರ ನೀನು ಇಲ್ಲಿಗೆ ಬರುತ್ತೀಯಾ ಎಂದು ಮನೆಯ ಹೊರಗೆ ಕಾಯುತ್ತಾ ಇರುತ್ತಾಳೆ. ಆಕೆ ಅಂದುಕೊಂಡ ಹಾಗೆಯೇ ಬಂಗಾರಮ್ಮ ಬರುವುದಿಲ್ಲ. ರಾಧಾ ಹಾಗೂ ಕಂಠಿಯನ್ನು ನೋಡಿದ ನಂಜಮ್ಮ ಹೇಳುತ್ತಾರೆ. ಯಾಕೆ ಬಂಗಾರಮ್ಮ ಅವರು ಬರಲಿಲ್ಲ ಎಂದು ಕೇಳಿದಾಗ ಕಂಠಿ ಏನು ಮಾತೇ ಆಡುವುದು ಇಲ್ಲ.

ಎಲ್ಲರಲ್ಲೂ ಕುತೂಹಲ ಮೂಡಿಸಿದ ಪುಟ್ಟಕ್ಕನ ಮಾತು
ಇನ್ನೂ ವಸುವನ್ನು ನೋಡಿ ಕಂಠಿಗೆ ಬಹಳ ಖುಷಿ ಆಗುತ್ತದೆ. ವಸು ಅಣ್ಣನ ಬಳಿ ಬಂದು "ಅಣ್ಣ, ಅಮ್ಮ ಎಲ್ಲಿ?" ಎಂದು ಕೇಳಿದಾಗ, ಅಮ್ಮ ಬರಲಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ವಸುಗೆ ಬಹಳ ನೋವು ಆಗುತ್ತದೆ . ಚಂದ್ರು ಕೂಡ ಈ ಬಗ್ಗೆ ಹೆಚ್ಚು ಕೇಳುವುದು ಇಲ್ಲ. ಆದರೆ, ಪುಟ್ಟಕ್ಕಗೆ ಮಾತ್ರ ಬಂಗಾರಮ್ಮ ಬಂದೇ ಬರುತ್ತಾರೆ ಎನ್ನುವ ನಂಬಿಕೆ ಇತ್ತು. ಅದಕ್ಕಾಗಿ "ಬಂಗಾರಮ್ಮ ಅವರು ಬಂದೆ ಬರುತ್ತಾರೆ" ಎಂದು ಹೇಳಿದ್ದರು.
ರಾಧಾ ಮಾತಿಗೆ ಸೊಪ್ಪು ಹಾಕದ ಪುಟ್ಟಕ್ಕ
"ಅದು ಹೇಗೆ ನೀವು ಬಂಗಾರತ್ತೆ ಬಂದೆ ಬರುತ್ತಾರೆ ಎಂದು ಹೇಳುತ್ತೀರಿ. ಅವರು ಮಾತನಾಡಿದ ರೀತಿ ನನಗೆ ಯಾಕೋ ಬಂಗಾರತ್ತೆ ಬರುತ್ತಾರೆ ಎಂದು ಅನ್ನಿಸುತ್ತಿಲ್ಲ" ಎಂದಾಗ ವಸು ಮುಖ ಇನ್ನಷ್ಟು ಸಣ್ಣ ಆಗುತ್ತದೆ. ಹಾಗೆಯೇ ಅವರಿಬ್ಬರೂ ವಾದ ಪ್ರತಿವಾದ ಮಾಡುತ್ತಿರುತ್ತಾರೆ. ಆಗಲೇ ಮನೆಯ ಹೊರಗಿನಿಂದ ಕಾರಿನ ಹಾರ್ನ್ ಕೇಳಿಸುತ್ತದೆ. ಕಾರು ಬಂದಿದೆಯಲ್ಲ ಎಂದು ಎಲ್ಲರೂ ನೋಡಿದಾಗ ಅದರಿಂದ ಸ್ನೇಹಾ ಹಾಗೂ ಬಂಗಾರಮ್ಮ ಇಳಿಯುತ್ತಾರೆ. ಬಂಗಾರಮ್ಮನನ್ನು ನೋಡಿ ರಾಧಾ ಶಾಕ್‌ನಲ್ಲಿ ಇರುತ್ತಾಳೆ. ನಂಜಮ್ಮಗೂ ಬಹಳ ಶಾಕ್ ಆಗುತ್ತೆ. ಏನಪ್ಪಾ ಇದೆಲ್ಲ ಆಶ್ಚರ್ಯ ಆಗುತ್ತಿದೆ. ಬಂಗಾರಮ್ಮ ನನ್ನ ಮನೆಗೆ ಬಂದ್ಲ ಎಂದು ನಂಜಮ್ಮ ಆಲೋಚನೆ ಮಾಡುತ್ತಿರುತ್ತಾಳೆ. ಬಂಗಾರಮ್ಮ ಮಗಳ ಮನೆಗೆ ಬಹಳ ಖುಷಿಯಿಂದ ಬರುತ್ತಾಳೆ.


Click it and Unblock the Notifications











