Puttakkana Makkalu:ಮಗಳಿಗಾಗಿ ದ್ವೇಷ ಮರೆತ ಬಂಗಾರಮ್ಮ; ಹುಟ್ಟದೆ ಇರುವ ಮಗುವಿಗೆ ಹೆಸರಿಟ್ಟ ವಸು

By ಪೂರ್ವ

ನಂಜಮ್ಮನ ಮನೆಗೆ ಬಂಗಾರಮ್ಮ ಆಗಮಿಸುತ್ತಿರುವುದನ್ನು ನೋಡಿದ ರಾಧಾಗೆ ಅಚ್ಚರಿ ಆಗುತ್ತೆ. ಅತ್ತೆ ನನ್ನ ಜೊತೆ ಸೀಮಂತ ಶಾಸ್ತ್ರಕ್ಕೆ ಬರುವುದು ಇಲ್ಲ ಎಂದು ಹೇಳಿ ಇದೀಗ ಸ್ನೇಹಾ ಜೊತೆ ಅತ್ತೆ ಕೂಡ ಆಗಮಿಸಿದ್ದಾರೆ ಎಂಬ ಶಾಕ್‌ನಿಂದ ಬಂಗಾರಮ್ಮ ಬರುವುದನ್ನೇ ನೋಡುತ್ತಿದ್ದಾಳೆ. ಆಕೆಗೆ ಬಂಗಾರಮ್ಮ ಸೀಮಂತ ಕಾರ್ಯಕ್ರಮ ಮಾಡಲು ಬರುವುದು ಇಲ್ಲ. ಇದರಿಂದ ಬಂಗಾರತ್ತೆ ಬಹಳ ನೋವು ಆಗುತ್ತೆ. ಶಶಿಕಲಾ ಕೂಡ ಬಂಗಾರಮ್ಮ ಬರುವುದಿಲ್ಲ ಎಂದುಕೊಂಡಿದ್ದರು. ಆದರೆ ಅವರಿಬ್ಬರ ಊಹೆ ತಪ್ಪಾಗಿತ್ತು.

ಹಾಗೆಯೇ ಅವರಿಬ್ಬರಿಗೂ ಇದು ಬಹಳ ಆಘಾತವನ್ನು ನೀಡಿತ್ತು . ಇನ್ನೂ ನಂಜಮ್ಮ ಮಾತ್ರ ಈ ಮನೆಗೆ ಬಂಗಾರಮ್ಮ ಕಾಲಿಟ್ಟ ಘಳಿಗೆಯಲ್ಲಿ ನಾನು ಗೆದ್ದೇ ಎಂದು ಬೀಗುತ್ತಾ ಇದ್ದಳು. ಆದರೆ, ಆ ವೇಳೆ ಬಂಗಾರಮ್ಮ "ನಂಜಮ್ಮ ನೀನು ಈ ಬಾರಿ ಗೆದ್ದು ಬಿಟ್ಟೆ. ನನಗೆ ಇದರಿಂದ ಯಾವ ನೋವು ಆಗುತ್ತಿಲ್ಲ. ಯಾಕೆಂದರೆ, ನಾನು ಬಂದಿದ್ದು ನನ್ನ ಮಗಳಿಗಾಗಿ. ಆಕೆಗಾಗಿ ನಾನು ಅದೆಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತೇನೆ" ಎಂದು ಬಂಗಾರಮ್ಮ ಹೇಳುತ್ತಾರೆ.

Puttakkana Makkalu serial June 24th episode update

ಇದನ್ನು ಕೇಳಿದ ವಸುಗೆ ಬಹಳ ಖುಷಿ ಆಗುತ್ತದೆ. ಅವ್ವ ನನಗಾಗಿ ಆದರೂ ಮನೆಗೆ ಬಂದಳಲ್ವಾ ಎಂದು ಬಹಳ ಖುಷಿ ಪಡುತ್ತಿರುತ್ತಾಳೆ. ಆ ವೇಳೆ ಅದು ಹೇಗೆ ಬಂಗಾರತ್ತೆ ಮನಸ್ಸನ್ನು ಕರಗಿಸಿದಳು. ಆಕೆ ಬರುವುದೇ ಇಲ್ಲ ಎಂದು ಖಡಾ ಖಂಡಿತವಾಗಿಯೂ ಹೇಳಿದ್ದರು. ಆದರೆ, ಆ ಬಳಿಕ ಸ್ನೇಹಾ ಏನು ಹೇಳಿರಬಹುದು ಎಂದು ಆಲೋಚನೆ ಮಾಡುತ್ತಿರುವಾಗಲೇ ಬಂಗಾರಮ್ಮ, ಸ್ನೇಹಾ ಮಾತನ್ನು ನೆನಪು ಮಾಡಿಕೊಳ್ಳುತ್ತಾರೆ. ವಸುಗೆ ಯಾರೇ ಸೀಮಂತ ಶಾಸ್ತ್ರ ಮಾಡಲು ಹೋದರೂ, ಆಕೆ ಖುಷಿಯಾಗಿ ಇರಲು ಸಾಧ್ಯ ಇಲ್ಲ. ಆಕೆಯ ಅಮ್ಮ ಆಕೆಯ ಜೊತೆಗೆ ಇದ್ದರೆ ನೂರಾನೆ ಬಲ ಬಂದ ಹಾಗೆ ಆಗುತ್ತದೆ.

ಬಂಗಾರಮ್ಮನಿಗೆ ವಿಷಯ ತಿಳಿಸಿದ ಸ್ನೇಹಾ

ವಸು ಅಕ್ಕ ಗರ್ಭವತಿ ಆದಾಗ ಹೇಳಿದ್ದರು. ನನಗೆ ಮಗು ಆದರೆ, ನನ್ನ ತಾಯಿ ಹಾಗೂ ನನ್ನ ಮಧ್ಯೆ ಕಂದಕ ಏರ್ಪಡುತ್ತದೆ. ಆದುದರಿಂದ ನನಗೆ ಈ ಮಗುವೇ ಬೇಡ ಎಂದು ಹೇಳಿದ್ದ ಮಾತನ್ನು ಬಂಗಾರಮ್ಮ ಅವರ ಬಳಿ ಸ್ನೇಹಾ ಹೇಳಿದಾಗ, ನಂಜಮ್ಮನ ಮನೆಗೆ ಹೋಗಲು ಬಂಗಾರಮ್ಮ ರೆಡಿ ಆಗುತ್ತಾರೆ. ನನ್ನ ಮಗಳು ನನ್ನ ಅಷ್ಟೆಲ್ಲ ಪ್ರೀತಿ ಮಾಡಬೇಕಾದರೆ, ಈ ದ್ವೇಷ ಇದೆಲ್ಲವನ್ನೂ ಬಿಟ್ಟು ಯಾಕೆ ನಾನು ಆಕೆಯ ಜೊತೆ ಖುಷಿಯಾಗಿ ಇರಬಾರದು ಅಂದುಕೊಳ್ಳುತ್ತಾರೆ.

ಕೋಪ ಮರೆತು ಬಂದ ಬಂಗಾರಮ್ಮ

ಇವತ್ತು ನನ್ನ ಮಗಳಿಗಾಗಿ ಅದೆಷ್ಟೇ ಕಷ್ಟ ಆದರೂ ಸರಿ ತನ್ನ ಮಗಳಿಗಾಗಿ ಸೀಮಂತ ಶಾಸ್ತ್ರಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ನಡೆದ ವಿಚಾರವನ್ನು ನೆನಪು ಮಾಡಿಕೊಳ್ಳುತ್ತಿರುತ್ತಾಳೆ. ಹಾಗೆಯೇ ಸೀಮಂತ ಶಾಸ್ತ್ರವು ಕೂಡ ಬಹಳ ಅದ್ದೂರಿಯಾಗಿ ನಡೆಯಿತು. ಎಲ್ಲರ ಜೊತೆ ಖುಷಿಯಲ್ಲಿ ತೇಲಾಡಿದಳು ವಸು. ಇನ್ನೂ ಹುಟ್ಟುವ ಮಗು ಹೆಣ್ಣಾಗಲೀ ಎಂದು ಹಲವರು ಬಯಸಿದರೆ, ನಂಜಮ್ಮ ಮಾತ್ರ "ಹುಟ್ಟುವ ಮೊದಲ ಮಗು ಗಂಡು ಆಗಬೇಕು ಅಲ್ವಾ?" ಪುಟ್ಟಕ್ಕ ಎಂದು ಹೇಳುತ್ತಾರೆ.

Puttakkana Makkalu serial June 24th episode update

ಹೆಣ್ಣು ಮಗುವಿನ ಪ್ರಾಮುಖ್ಯತೆ ತಿಳಿಸಿದ ಬಂಗಾರಮ್ಮ

"ಮೊದಲು ಮಗು ಗಂಡು ಆದರೆ, ನಮಗೆ ಮುಪ್ಪಾಗುವ ಸಂದರ್ಭದಲ್ಲಿ ಆತ ನಮ್ಮನ್ನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆ" ಎಂದಾಗ "ಹೆಣ್ಣಾದರು ನಿನ್ನ ಹಾಗೆಯೇ ಗಟ್ಟಿ ಮನಸಿನವರು ಆಗಿರುತ್ತಾರೆ. ಪುಟ್ಟಕ್ಕ ಮೂವರು ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಬೆಳೆಸಿದ್ದಿಯಾ. ಹೀಗೆಯೇ ಮೆಸ್ ಅನ್ನು ನಿಭಾಯಿಸಿಕೊಂಡು ನೀನು ನಿನ್ನ ಜೀವನವನ್ನು ನೋಡಿಕೊಳ್ಳುತ್ತಿದೆ. ಈಗಿನ ಜಮಾನದಲ್ಲಿ ಹೆಣ್ಣು ಮಕ್ಕಳು ಜೀವನವನ್ನು ಅದ್ಭುತವಾಗಿ ನಡೆಸುತ್ತಿರುತ್ತಾರೆ" ಎಂದು ಬಂಗಾರಮ್ಮ ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ "ನನ್ನದೇನೂ ಅಮ್ಮಾವರೇ ಎಲ್ಲರೂ ಆ ದೇವರು ಮಾಡಿಸಿದ್ದು" ಎಂದಾಗ ಎಲ್ಲರೂ ಸುಮ್ಮನಾಗುತ್ತಾರೆ.

ಹೆಣ್ಣು ಮಗುವಾಗಲೀ ಎಂದ ಚಂದ್ರು

ಇನ್ನೂ ಚಂದ್ರು, ವಸು ಬಳಿಗೆ ಬಂದು ವಸುವನ್ನೂ ಮುಟ್ಟಿ ನನಗೆ ಹೆಣ್ಣು ಬೇಕು ಎನ್ನುವ ಬಯಕೆಯನ್ನು ಹೊರ ಹಾಕುತ್ತಾನೆ. ಇದನ್ನು ನೋಡಿದ ನಂಜಮ್ಮ ಮೂಗು ಮುರಿದರೂ, ಉಳಿದವರೆಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ವಸು ಹೊಟ್ಟೆಯಲ್ಲಿ ಇರುವ ಮಗುವಿಗೆ ನಾಮಕರಣ ಮಾಡುತ್ತಾಳೆ. ಆಗ ವಸು "ನನ್ನ ಮಗು ಹೆಣ್ಣಾದರೆ, ನಾನು ಆಕೆಗೆ ಸಹನಾ ಎಂದು ಹೆಸರು ಇಡುತ್ತೇನೆ" ಎಂದಾಗ ಬಂಗಾರಮ್ಮ ಖುಷಿ ಪಟ್ಟರೆ, ಪುಟ್ಟಕ್ಕ ಮಾತ್ರ ಆಕೆಗೆ ನೋವಾದರೂ ಅದನ್ನು ಯಾರ ಜೊತೆಯೂ ತೋರ್ಪಡಿಸಿಕೊಳ್ಳದೆ ಸುಮ್ಮನೆ ಆಗುತ್ತಾನೆ.

More from Filmibeat

English summary
Puttakkana Makkalu serial June 24th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X