Puttakkana Makkalu:ಸಹನಾ ಕಾಟ ತಾಳಲಾರದೇ ಪುಟ್ಟಕ್ಕನ ಮನೆಗೆ ಓಡಿದ ರಾಜಿ; ಪುಟ್ಟಕ್ಕನಿಗೆ ಶಾಕ್
ನಂಜಮ್ಮನ ಮನಸ್ಸಿನಲ್ಲಿ ಅದೆಷ್ಟೇ ದ್ವೇಷ ಇದ್ದರೂ, ಆಕೆ ಅದನ್ನು ತೋರಿಸಿಕೊಳ್ಳದೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡುತ್ತಾಳೆ. ಆಕೆಗೆ ಸೀಮಂತ ಶಾಸ್ತ್ರ ಮಾಡುವ ಸಂದರ್ಭ ಬಂಗಾರಮ್ಮ ಬರಬೇಕು. ಆಕೆಗೆ ನಾನು ಅವಮಾನ ಮಾಡಬೇಕು ಅನ್ನೋ ಆಲೋಚನೆ ಇರುತ್ತೆ. ಆದರೆ, ಬಂಗಾರಮ್ಮ ನಂಜಮ್ಮನ ಮನೆಗೆ ಬಂದು ನಾನು ನಿನ್ನ ಮುಂದೆ ಸೋತಿದ್ದೇನೆ. ಯಾಕೆಂದರೆ ನನ್ನ ಮಕ್ಕಳಿಗಾಗಿ ಆದರೂ ನಾನು ಸೋಲುತ್ತಾನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ನಂಜಮ್ಮ ಮಾತ್ರ ಏನೂ ಹೇಳಲಾರದೆ ಸುಮ್ಮನಾಗ ಬೇಕಾಗುತ್ತೆ.
ಇತ್ತ ವಸುಗೆ ಅಮ್ಮ ಸೀಮಂತ ಶಾಸ್ತ್ರಕ್ಕೆ ಬಂದಿರುವುದಕ್ಕೆ ಬಹಳಷ್ಟು ಖುಷಿ ಆಗುತ್ತದೆ. ನನ್ನ ಜೊತೆ ಯಾರೂ, ಇಲ್ಲದಾಗ ನನ್ನ ತಾಯಿ ನನ್ನ ಜೊತೆ ನಿಲ್ಲುತ್ತಾರೆ ಎನ್ನುವ ಭರವಸೆ ಆಕೆಗೆ. ಅದೇ ರೀತಿ ಕಂಠಿ ಕೂಡ ಅಮ್ಮ ನಂಜಮ್ಮನ ಮನೆಗೆ ಬರುವುದೇ ಇಲ್ಲ ಎಂದುಕೊಂಡಿದ್ದ. ಆದರೆ, ವಸುಗೋಸ್ಕರ ಅಮ್ಮ ತೆಗೆದುಕೊಂಡ ನಿರ್ಧಾರಕ್ಕೆ ಕಂಠಿ ಬಹಳ ಖುಷಿ ಪಡುತ್ತಾನೆ. ಇನ್ನೂ ಇತ್ತ ರಾಜೇಶ್ವರಿಗೆ ಸಹನಾ ಕಾಟ. ಇದ್ದ ಬದ್ದ ಮಂತ್ರವಾದಿಗಳು ಮಂತ್ರಿಸಿ ಕೊಟ್ಟರೂ ಸಹನಾ ನನ್ನ ಕಣ್ಣಿಗೆ ಕಾಣಿಸುತ್ತಿದ್ದಾಳೆ ಎಂದು ರಾಜಿ ಭಯದಲ್ಲಿ ನಡುಗುತ್ತಿದ್ದಾಳೆ.

ಸಹನಾ ಉಸಿರು ಗಟ್ಟಿಸಿ ಸಾಯಿಸುವ ಹಾಗೆಲ್ಲ ಆಕೆಗೆ ಅನ್ನಿಸುತ್ತದೆ. ಆದರೆ ರಾಜಿಗೆ ಕಾಟ ಕೊಡುತ್ತಿರುವುದು ದೆವ್ವ ಆಲ್ಲ. ಸ್ವತ: ಸಹನ ಆಕೆ ಇನ್ನೂ ಜೀವಂತವಾಗಿದ್ದಾಳೆ ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ. ಇತ್ತ ರಾಜಿ ನೇರವಾಗಿ ಪುಟ್ಟಕ್ಕನ ಮನೆಗೆ ಓಡೋಡಿ ಬರುತ್ತಾಳೆ. ಮೊದಲಿಗೆ ಪುಟ್ಟಕ್ಕನನ್ನು ಎಕವಚನದಿಂದ ಕರೆಯುತ್ತಾಳೆ. ಆ ಕೂಡಲೇ ರಾಜಿಗೆ ಸಹನಾ ನೆನಪಾಗಿ ಪುಟ್ಟಕ್ಕ.. ಪುಟ್ಟಕ್ಕ ಎಂದು ಬಹಳ ವಿನಯದಿಂದ ಕರೆಯುತ್ತಾಳೆ. ರಾಜಿ ಮಾತು ಕೇಳಿ ಓಡಿ ಬಂದ ಪುಟ್ಟಕ್ಕ ಯಾರು ಎಂದು ಕೇಳುತ್ತಾರೆ. ರಾಜಿಯ ಅವತಾರ ನೋಡಿ ಪುಟ್ಟಕ್ಕ ಬೆಚ್ಚಿ ಬೀಳುತ್ತಾರೆ. ಇದೇನಪ್ಪಾ ರಾಜಿಗೆ ಏನಾಯಿತು? ನಿಂಬೆ ಹೆಣ್ಣು ಮಾಲೆ ಹಾಕಿಕೊಂಡಿದ್ದಾರೆ ಎಂದು ಪುಟ್ಟಕ್ಕ ನೋಡಿದಾಗ, ರಾಜಿ ಸ್ವಲ್ಪ ಕೋಪದಿಂದ ಹೇಳುತ್ತಾಳೆ.
ರಾಜಿ ಮಾತಿಗೆ ಕೋಪಗೊಂಡ ಗೋಪಾಲ
"ಪುಟ್ಟಕ್ಕ ನನಗೆ ನಿನ್ನಿಂದ ಆಗಿಯೇ ಈ ಸ್ಥಿತಿ ಬಂದಿರುವುದು. ನಾನು ಎಷ್ಟು ಚೆನ್ನಾಗಿ ಇದ್ದೆ. ಮೊದಲು ನನ್ನ ಗಂಡನನ್ನು ಮಾಟ, ಮಂತ್ರ ಮಾಡಿ ನನ್ನಿಂದ ಕಿತ್ತುಕೊಂಡೆ. ಇದೀಗ ನನ್ನ ವಿರುದ್ದ ನಿನ್ನ ಮಗಳು ಸಹನಾಳನ್ನು ಛೂ ಬಿಟ್ಟಿದ್ದಿಯಾ" ಎಂದಾಗ ಪುಟ್ಟಕ್ಕಗೆ ಏನು ಅರ್ಥ ಆಗಲಿಲ್ಲ. "ರಾಜವ್ವ ನೀನು ಯಾಕೆ ಹೀಗೆ ಮಾತನಾಡುತ್ತಿರುವೆ. ನನ್ನಿಂದ ಏನಾಯಿತು?" ಎಂದಾಗ ಗೋಪಾಲ ಒಳಗಡೆಯಿಂದ ಬಂದು ರಾಜಿಗೆ ಧಮಕಿ ಹಾಕುತ್ತಾನೆ.
ಗೋಪಾಲನನ್ನು ಶಪಿಸಿದ ರಾಜಿ
"ನೀನು ಇಲ್ಲಿಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿಕೊಂಡು ಬರುವ ಅಗತ್ಯ ಇಲ್ಲ . ಅಷ್ಟಕ್ಕೂ ಇಲ್ಲಿಗೆ ನೀನು ಬಂದ ಉದ್ದೇಶ ಏನು" ಅಂತ ಕೇಳುತ್ತಾನೆ. ಆದರೆ, ರಾಜಿ ಮಾತ್ರ ಗೋಪಾಲನನ್ನು ಶಪಿಸುತ್ತಾಳೆ. ಸಹನಾ ಮನೆ ಒಳಗೆಲ್ಲ ಬಂದು ಕಷ್ಟ ಕೊಡುತ್ತಾಳೆ. ನನ್ನನ್ನು ಮಲಗಲು ಬಿಡುವುದಿಲ್ಲ. ಊಟ ಮಾಡಲು ಬಿಡುವುದಿಲ್ಲ. ನೋಡು ನನ್ನ ಕಣ್ಣೆಲ್ಲ ಎಷ್ಟು ಊದಿಕೊಂಡಿದೆ. ನನಗೆ ಬಹಳಷ್ಟು ಸುಸ್ತು ಆಗಿದೆ" ಎಂದಾಗ ಪುಟ್ಟಕ್ಕ "ಇದೆಲ್ಲ ನಿನ್ನ ಭ್ರಮೆ ರಾಜವ್ವ. ನೀನು ಯಾಕೆ ಹೀಗೆಲ್ಲ ಅಂದುಕೊಂಡಿದ್ದೀಯಾ? ಇದಕ್ಕೆಲ್ಲ ನೀನು ತಲೆ ಕೆಡಿಸಿಕೊಳ್ಳಬೇಡ" ಎಂದರೂ ರಾಜಿ ಮಾತ್ರ ಪುಟ್ಟಕ್ಕ ಮೇಲೆಯೇ ಆರೋಪ ಮಾಡುತ್ತಾರೆ.

ಪುಟ್ಟಕ್ಕನ ಕಾಲಿಗೆ ಬಿದ್ದ ರಾಜಿ
ಇದನ್ನೆಲ್ಲ ನೋಡಿ ಪುಟ್ಟಕ್ಕ ಮಾತ್ರ ಏನೂ ಮಾತನಾಡದೆ ಸುಮ್ಮನೆ ಇರುತ್ತಾಳೆ. ಪುಟ್ಟಕ್ಕನ ಬಳಿ ಬಂದು ಗೋಪಾಲ "ಪುಟ್ಟಕ್ಕ ನೀನು ಒಳಗಡೆ ಬಾ.. ಈ ರಾಜಿ ಗೋಳು ಇದ್ದಿದ್ದೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕ ಮನೆಯ ಒಳಗೆ ಹೋಗಲು ಮುಂದಾಗುತ್ತಾಳೆ. ಇದನ್ನು ನೋಡಿ ರಾಜಿ, ಪುಟ್ಟಕ್ಕನ ಕಾಲಿಗೆ ಬೀಳುತ್ತಾಳೆ. "ಪುಟ್ಟಕ್ಕ ನನಗೆ ರಾತ್ರಿ ಇಡೀ ನಿದ್ದೆ ಮಾಡಲು ಆಗುತ್ತಿಲ್ಲ. ನನಗೆ ಬಹಳ ಭಯ ಆಗುತ್ತದೆ" ಎಂದು ಹೇಳುತ್ತಾಳೆ. ಕೂಡಲೇ ಪುಟ್ಟಕ್ಕ ಆಕೆಯನ್ನು ಮೇಲಕ್ಕೆ ಎತ್ತುತ್ತಾಳೆ. ಆಗ ರಾಜಿ ಅಲ್ಲಿಯೇ ಮೂರ್ಛೆ ಹೋಗುತ್ತಾಳೆ.


Click it and Unblock the Notifications











