Puttakkana Makkalu: ರಾಜಿಗೆ ತಾಳಿ ಮಹತ್ವ ತಿಳಿಸಿದ ಪುಟ್ಟಕ್ಕ; ಈಗಲಾದರೂ ರಾಜಿಗೆ ಬುದ್ದಿ ಬರುತ್ತಾ?
ಪುಟ್ಟಕ್ಕನ ಮನೆಗೆ ಬಂದ ರಾಜಿ ಭಯದಲ್ಲಿಯೇ ಇರುತ್ತಾಳೆ. ಆಕೆಗೆ ಸಹನಾ ಎಂದರೆ ಬಹಳ ಭಯ. ಆಕೆ ಎಲ್ಲಿ ನನ್ನನ್ನು ಸಾಯಿಸಿ ಬಿಡುತ್ತಾಳೆ ಎನ್ನುವ ಭಯ. ಸಹನಾ ಕೈಗೆ ಇನ್ಮೇಲೆ ನಾನು ಸಿಕ್ಕಿ ಹಾಕಿಕೊಂಡರೆ ನನ್ನ ಕಥೆ ಅಷ್ಟೇ ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಸಹನಾಗೆ ತನ್ನ ತಾಯಿ ಅಂದರೆ ಜೀವ. ಆದರೆ, ತಾಯಿಗೆ ಕಾಟ ಕೊಡುವ ರಾಜಿಯನ್ನು ನೋಡಿದರೆ ಅದ್ಯಾಕೋ ಸಿಟ್ಟು.ಯಾಕೆಂದರೆ ಪುಟ್ಟಕ್ಕಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಳು. ಆದ ಕಾರಣ ಸಹನಾ, ರಾಜಿಗೆ ಕಾಟ ಕೊಡುತ್ತಿದ್ದಾಳೆ.
ಇತ್ತ ರಾಜಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಾಳೆ ಪುಟ್ಟಕ್ಕ. ಊಟವನ್ನೇ ಮಾಡಿರದ ರಾಜಿ ಗಬಗಬನೆ ಊಟ ಮಾಡಿ ಮುಗಿಸುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕಗೆ ಅಯ್ಯೋ ಪಾಪ ಅನಿಸುತ್ತೆ. ರಾಜಿ ಬಳಿ ಪುಟ್ಟಕ್ಕ "ರಾಜವ್ವ ನೀನು ನನ್ನ ಸವತಿ ಎಂದು ಹೇಳುತ್ತಿಯಾ. ನೀನು ನಿನ್ನ ಮನಸಾಕ್ಷಿಯನ್ನು ಮುಟ್ಟಿ ಹೇಳು. ಯಾರು ಯಾರಿಗೆ ಸವತಿ" ಎಂದಾಗ ರಾಜಿ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ.

ಇನ್ನೂ ರಾಜಿಗೆ ತಾಳಿಯ ಮಹತ್ವವನ್ನು ತಿಳಿ ಹೇಳುತ್ತಾಳೆ. ಹಾಗೆ "ರಾಜವ್ವ ನೀನು ಯಾಕೆ ಹೀಗೆ, ಸಿಡಿಸಿಡಿ ಎಂದು ಸಿಡುಕುತ್ತಿರುತ್ತಿಯಾ? ಯಾಕೆ ಹೀಗೆಲ್ಲ ಮಾಡುತ್ತಿಯಾ? ನೀನು ಯಾಕೆ ಇಷ್ಟೆಲ್ಲಾ ಕೋಪ ಮಾಡಿಕೊಳ್ಳುತ್ತೀಯಾ?" ಎಂದು ಕೇಳಿದಾಗ ರಾಜಿಗೆ ಮಾತೇ ಹೊರಡದ ಹಾಗೆ ಆಗುತ್ತದೆ. ಇನ್ನೂ ರಾಜಿ "ಪುಟ್ಟಕ್ಕ ನಿನಗೆ ಈ ಗೋಪಾಲಯ್ಯ ಬರುವ ಮುಂಚೆ ಯಾವುದೇ ಪ್ರಾಬ್ಲಂ ಇರಲಿಲ್ಲ. ಆದರೆ ಇದೀಗ ಗೋಪಾಲಯ್ಯ ಬಂದ ಬಳಿಕ ನಿನಗೆ ಎಷ್ಟೆಲ್ಲ ಪ್ರಾಬ್ಲಂ. ಮೊದಲು ಈತನನ್ನು ನಿನ್ನ ಮನೆಯಿಂದ ಹೊರಗೆ ಹಾಕು" ಎನ್ನುತ್ತಾಳೆ.
ಗಂಡನ ಬಗ್ಗೆ ತುಚ್ಚವಾಗಿ ಮಾತನಾಡಿದ ರಾಜಿ
"ನಾನು ಆತನನ್ನು ಎಲ್ಲಿಗೆ ಕೂಡ ಕಳುಹಿಸುವುದಿಲ್ಲ. ಆತನ ತಪ್ಪು ಆತನಿಗೆ ಅರ್ಥ ಆಗಿದೆ" ಎಂದಾಗ ರಾಜಿ ಬಹಳ ತಾತ್ಸಾರದಿಂದ "ಈ ಜುಜುಬಿ ಚಿನ್ನದ ಸರ. ಇದಕ್ಕೆ ನೀನು ಇಷ್ಟು ಮರ್ಯಾದೆ ಕೊಡುತ್ತಿಯಾ?" ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕಗೆ ಬಹಳ ಕೋಪ ಬರುತ್ತದೆ. "ಈ ರೀತಿ ಮಾತು ಸರಿ ಅಲ್ಲ ರಜಾವ್ವ. ನಾನು ನನ್ನ ಗಂಡನಿಗೆ ಬೆಲೆ ಕೊಡುವುದು ಚಿನ್ನಕ್ಕಲ್ಲ" ಎಂದು ಪುಟ್ಟಕ್ಕ ಹೇಳುತ್ತಾರೆ. ಇದನ್ನು ಕೇಳಿದ ರಾಜಿ ಮುಖ ಸಪ್ಪಗಾಗುತ್ತೆ.
ದೇವಿ ಉತ್ಸವಕ್ಕೆ ಪ್ರಸಾದ ನೀಡುತ್ತಿದ್ದ ಸಹನಾ
ಇನ್ನೂ ಸಹನಾ ಇನ್ನೊಬ್ಬ ಹುಡುಗನನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾಳೆ. ಆತನಿಗೆ ಕೂಡ ಯಾರು ಇಲ್ಲ. ಇನ್ನೂ ದೇವಿಯ ಉತ್ಸವ ನಡೆಯುತ್ತಿರುತ್ತೆ. ಆ ವೇಳೆ ಸಹನಾ ಎಲ್ಲರಿಗೂ ಪ್ರಸಾದ ನೀಡುತ್ತಿರುತ್ತಾಳೆ. ಅಲ್ಲಿಗೆ ವಿದೇಶಿಗನೊಬ್ಬ ಬರುತ್ತಾನೆ. ಆತನಿಗೆ ಇದೆಲ್ಲ ಹೊಸತು. ಆತ ದೇವಿಯ ಉತ್ಸವದ ಫೋಟೋ ವಿಡಿಯೋ ಮಾಡಿಕೊಂಡಿದ್ದ. ಇತ್ತ ಸಹನಾ ಕೊಡುವ ಪ್ರಸಾದ ಸ್ವೀಕಾರ ಮಾಡುವ ಭರದಲ್ಲಿ ಕ್ಯಾಮರಾ ಹಾಗೂ ಪರ್ಸ್ ಒಂದು ಖುರ್ಚಿಯ ಮೇಲೆ ಇಟ್ಟು ಪ್ರಸಾದ ಸ್ವೀಕಾರ ಮಾಡುತ್ತಿರುವಾಗ ಕ್ಯಾಮರಾ ಹಾಗೂ ಪರ್ಸ್ ಅನ್ನು ಕಳ್ಳರು ಕದಿಯುತ್ತಾರೆ.

ಪೊಲೀಸ್ ಕಂಪ್ಲೇಂಟ್ ಕೊಟ್ಟ ವಿದೇಶಿಗ
ಕಳ್ಳರನ್ನು ಓಡಿಸಿಕೊಂಡು ವಿದೇಶಿಗ ಹೋಗುತ್ತಾನೆ. ಇದನ್ನು ನೋಡಿದ ಸಹನಾಗೆ ಶಾಕ್ ಆಗುತ್ತದೆ. ಕೊನೆಗೆ ಆತನನ್ನು ಕರೆದು ಆತನಿಗೆ ಊಟ ಕೊಡುತ್ತಾಳೆ. ಆಗ ಅಲ್ಲಿಗೆ ಪೋಲಿಸ್ ಬರುತ್ತಾರೆ. ಆತನ ಬಳಿ ಎಲ್ಲಾ ವಿವಾರಗಳನ್ನು ಪಡೆದುಕೊಳ್ಳುತ್ತಾರೆ. ಮುಂದೇನಾಗುತ್ತೆ ನೋಡಬೇಕು.


Click it and Unblock the Notifications











