Puttakkana Makkalu:ಮಗಳ ನೆನೆದು ಸಂಕಟ ಪಡ್ತಿರೋ ಪುಟ್ಟಕ್ಕ; ಅತ್ತ ಸಹನಾ ಒಂಟಿ ಹೋರಾಟ

By ಪೂರ್ವ

ಪುಟ್ಟಕ್ಕಗೆ ಆಕೆಯ ಮಗಳು ಸಹನಾದ್ದೆ ಜಪ. ನನ್ನ ಮಗಳು ನನ್ನ ಮನೆಗೆ ಬಂದೆ ಬರುತ್ತಾಳೆ ಎಂದು ಪುಟ್ಟಕ್ಕನ ಮನಸ್ಸು ಹೇಳುತ್ತಿರುತ್ತೆ. ಹಾಗೆಯೇ ನನ್ನ ಜೀವನದಲ್ಲಿ ನನ್ನ ಮಗಳೇ ಎಲ್ಲಾ ನನಗೆ. ಮೂವರು ಮಕ್ಕಳು ಸುಂದರವಾದ ಸಂಸಾರದಲ್ಲಿ ಅವರವರು ಚೆನ್ನಾಗಿ ಇರಬೇಕು ಎನ್ನುವುದೇ ಪುಟ್ಟಕ್ಕನ ಆಸೆ. ಪುಟ್ಟಕ್ಕ ಮಗಳು ಸತ್ತು ಹೋಗಿದ್ದಾಳೆ ಎಂದು ನಂಬಲು ಆಗದೆ ಕೊರಗುತ್ತಿರುತ್ತಾರೆ. ಪುಟ್ಟಕ್ಕಗೆ ತನ್ನ ಮಗಳು ಸುಮಾ ಚಿಂತೆ ಕೂಡ ಕಾಡುತ್ತಿದೆ.

ಸುಂದರವಾದ ಸಂಸಾರವನ್ನು ಮಾಡಲು ಏನಾದರು ತೊಡಕುಗಳು ಸಂಭವಿಸಬಹುದಾ? ಅನ್ನೋ ಆತಂಕ ಆಕೆಯ ಜೀವನ ಕೂಡ ಚೆನ್ನಾಗಿ ಇರಲಿ ಎನ್ನುವುದು ಪುಟ್ಟಕ್ಕ ಆಸೆ. ಓದು ಮುಗಿದ ಬಳಿಕ ಒಳ್ಳೆಯ ಮನೆಗೆ ಸೊಸೆಯಾಗಿ ಕಳುಹಿಸಬೇಕು. ನಾನು ಸಹನಾ ಜೀವನದಲ್ಲಿ ಈಗಾಗಲೇ ಎಡವಿದ್ದೇನೆ. ಇದೀಗ ಸುಮಾ ಜೀವನ ಕೂಡ ಹಾಳಾಗಬಾರದು. ಆಕೆಯ ಜೀವನ ಚೆನ್ನಾಗಿ ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಆಗಲೇ ಕೊರವಂಜಿ ಕರೆದ ಧ್ವನಿ ಕೇಳಿದ ಪುಟ್ಟಕ್ಕ, ಮನೆಯ ಒಳಗಿನಿಂದ ಹೊರ ಬರುತ್ತಾಳೆ. ಪುಟ್ಟಕ್ಕನ ಸಪ್ಪೆ ಮುಖ ನೋಡಿದಾಗಲೇ ಕೊರವಂಜಿ "ಸೋತ ಕಣ್ಣುಗಳಿಗೆ ಬೆಳಕಾಗಿ ನಿನ್ನ ಮಗಳು ಬಂದೆ ಬರುತ್ತಾಳೆ" ಎನ್ನುತ್ತಾರೆ.

Puttakkana Makkalu serial june 3rd episode update

"ನಾನು ಯಾವತ್ತೂ ಸುಳ್ಳು ಹೇಳುವುದಿಲ್ಲ. ತಾಯಿ ನನ್ನ ನಾಲಗೆಯಲ್ಲಿ ಇದನ್ನು ನುಡಿಸುತ್ತಾ ಇದ್ದಾಳೆ" ಎಂದು ಹೇಳಿದಾಗ ಪುಟ್ಟಕ್ಕಗೆ ಕೊಂಚ ನಿರಾಳ ಆಗುತ್ತದೆ. ಹಾಗೆಯೇ ಸುಮಾ ಬಗ್ಗೆ ಕೂಡ ಪುಟ್ಟಕ್ಕ ಪ್ರಶ್ನೆ ಮಾಡುತ್ತಾಳೆ. ಪುಟ್ಟಕ್ಕನನ್ನು ನೋಡಿದ ಕೊರವಂಜಿ "ನೀನು ಸುಮಾ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ಯಾವತ್ತೂ ಆಕೆಯ ಜೀವನದಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ. ಬಹಳ ನಾಜೂಕಾಗಿ ಕೆಲಸ ಮಾಡು" ಎಂದು ಎಚ್ಚರಿಕೆಯನ್ನು ನೀಡುತ್ತಾಳೆ.

ಸುಮಾ ವಿಚಾರದಲ್ಲಿ ಪುಟ್ಟಕ್ಕಗೆ ಆತಂಕ

ಆಕೆಯ ಮಾತು ಕೇಳಿದ ಪುಟ್ಟಕ್ಕ ಮಾತ್ರ ಆತಂಕಕ್ಕೆ ಒಳಗಾಗುತ್ತಾರೆ. ಇತ್ತ ಸಹನಾ ಎಲ್ಲರಿಗೂ ಉತ್ತಮವಾದ ಅಡುಗೆ ಮಾಡಿ ಕೊಡುತ್ತಾಳೆ. ಎಲ್ಲರ ಜೊತೆ ಬಹಳ ಉತ್ತಮವಾಗಿ ನಡೆದುಕೊಳ್ಳುತ್ತಾರೆ. ಆಕೆ ಮಾಡುವ ಅಡುಗೆಗೆ ಅನೇಕ ಜನ ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ಹಾಗೆಯೇ ಅಲ್ಲಿಗೆ ಬಂದು ಊಟ, ಪಲಾವ್ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ. ಇದನ್ನು ನೋಡಿದ ಸಹನಾಗೆ ಬಹಳ ಖುಷಿ ಆಗುತ್ತದೆ.

ಜನರ ಮಾತಿಗೆ ಕಿವಿ ಕೊಡದ ಸಹನಾ

"ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡಿ ಜೀವನ ಕಂಡುಕೊಳ್ಳುತ್ತಾರೆ. ಅದಕ್ಕಾಗಿ ಇಲ್ಲಿಯೇ ಇರುವ ಜನರಿಗೆ ಬೀದಿ ಬದಿಯ ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದುಕೊಂಡಿದ್ದೇವೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಹನಾ ಕೊಂಚ ಗಲಿಬಿಲಿ ಆಗುತ್ತಾಳೆ. ಆಕೆಗೆ ಏನು ಮಾಡಬೇಕು ತಿಳಿಯದಾಗಿತ್ತು. ಆಕೆಗೆ ಆಶ್ರಯ ಕೊಟ್ಟವರು ಇಲ್ಲದ ವೇಳೆ ಹೀಗೆ ಏಕಾಏಕಿ ಬಂದು ಬೀದಿ ಬದಿ ವ್ಯಾಪಾರ ಮಾಡಲು ಇಲ್ಲಿಗೆ ಬರುವುದು ಬೇಡ . ನಾಳೆಯಿಂದ ಈ ಕಡೆ ಬರಬಾರದು ಎಂದರೆ ಏನು ಮಾಡುವುದು ಎಂದು ಯೋಚನೆ ಮಾಡಿ ಬಂದವರ ಬಳಿ ಮಾತನಾಡಿದಾಗ ಸಹನಾ ಆಧಾರ್ ಕಾರ್ಡ್ ತೋರಿಸಲು ಹೇಳುತ್ತಾರೆ.

Puttakkana Makkalu serial june 3rd episode update

ಸಹನಾಗೆ ಇದೀಗ ಆತಂಕ ಶುರು

ಆದರೆ ಆಕೆಯ ಜೊತೆ ಆಧಾರ್ ಕಾರ್ಡ್ ಇಲ್ಲದನ್ನು ಕಂಡು ಇಲ್ಲಿಂದ ಜಾಗ ಕಾಲಿ ಮಾಡಬೇಕು ಎಂದು ಹೇಳುತ್ತಾರೆ. ಮುಂದೆ ಸಹನಾ ಏನು ಮಾಡುತ್ತಾಳೆ ಎನ್ನುವುದನ್ನು ಸದ್ಯಕ್ಕೆ ಕುತೂಹಲ.

More from Filmibeat

English summary
Puttakkana Makkalu serial june 3rd episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X