Puttakkana Makkalu: ಆಧಾರ್ ಕಾರ್ಡ್ ತರಲು ಊರಿಗೆ ಹೋಗ್ತಾಳಾ ಸಹನಾ? ಅಂಗಡಿ ಉಳಿಯುತ್ತಾ?
ಸಹನಾ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಆಕೆಗೆ ಊರಿಗೆ ಹೋಗುವ ಹಾಗೂ ಇಲ್ಲ. ಹೋಗದೆ ಇರುವ ಹಾಗೆ ಕೂಡ ಇಲ್ಲ. ಅಂಗಡಿಯನ್ನು ಉಳಿಸಿಕೊಳ್ಳಬೇಕಾದರೆ ಆಕೆ ಊರಿಗೆ ಹೋಗಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರಬೇಕು. ಇಲ್ಲವಾದರೆ ಅಂಗಡಿಯನ್ನು ಮುಚ್ಚಿ ಬಿಡುತ್ತಾರೆ. ಮತ್ತೆಂದೂ ತೆರೆಯದ ಹಾಗೆ ಮಾಡುತ್ತಾರೆ.
ಸಹನಾ ಎಂದಿನಂತೆ ಎಲ್ಲರಿಗೆ ಕೂಡ ಊಟದ ವ್ಯವಸ್ಥೆ ಮಾಡಿರುತ್ತಾರೆ. ಆಕೆ ಮಾಡುವ ಅಡುಗೆ ಎಲ್ಲರಿಗೆ ಬಹಳ ಅಚ್ಚುಮೆಚ್ಚು. ಹಾಗೆಯೇ ಅಂಗಡಿಯ ಬಳಿ ಸಾಕಷ್ಟು ಜನ ಬರುತ್ತಾರೆ. ಅವರಿಗೆಲ್ಲ ತಿಂಡಿ ನೀಡುತ್ತಾ ಇರುತ್ತಾಳೆ. ಆಗ ಅಲ್ಲಿಗೆ ಬಂದ ಅಂಗಡಿ ವ್ಯಾಪಾರ ಮಾಡುವವರ ಸಂಘದ ಅಧ್ಯಕ್ಷರು ಆಧಾರ್ ಕಾರ್ಡ್ ತರುವಂತೆ ಹೇಳಿರುತ್ತಾರೆ. ಈಗ ಮತ್ತೆ ಬಂದು ಕೇಳುತ್ತಾರೆ.

"ನಿನ್ನದು ಆಧಾರ್ ಕಾರ್ಡ್ ಕೊಡಮ್ಮ. ಮೊನ್ನೆ ತಾನೆ ನಿನಗೆ ನಾನು ಹೇಳಿ ಹೋಗಿದ್ದೇನೆ. ಆಧಾರ್ ಕಾರ್ಡ್ ಬೇಕೆ ಬೇಕು ಇಲ್ಲವಾದರೆ ಅಂಗಡಿ ಮುಚ್ಚಬೇಕಾಗುತ್ತದೆ" ಎಂದು ಹೇಳಿದಾಗ ಸಹನಾ ಹಿಂದೂ ಮುಂದೆ ನೋಡುತ್ತಾಳೆ. ಹಾಗೆಯೇ ಅವರ ಬಳಿ "ನನಗೆ ಸ್ವಲ್ಪ ಸಮಯ ಕೊಡಿ" ಎಂದು ಅಂಗಲಾಚುತ್ತಾಳೆ. ಆಗಲೇ ಅಲ್ಲಿಗೆ ಬಂದ ಪೊಲೀಸ್ ಒಬ್ಬರು ಏನಾಯಿತಮ್ಮ ಎಂದು ಕೇಳಿದಾಗ ಆತ "ಸರ್ ನಾನು ನಿಮ್ಮ ಎದುರೇ ಮೊನ್ನೆ ಇವರಿಗೆ ವಾರ್ನಿಂಗ್ ಮಾಡಿ ಹೋಗಿದ್ದೆ. ಆದರೆ ಇವರು ಎಷ್ಟು ಹೇಳಿದರೂ ನನ್ನ ಮಾತು ಕೇಳುತ್ತಿಲ್ಲ. ಇನ್ನೂ ಒಂದು ವಾರ ಟೈಮ್ ಕೊಡುತ್ತೇವೆ. ಅಷ್ಟರೊಳಗೆ ಆಧಾರ್ ಕಾರ್ಡ್ ತರಬೇಕು. ಇಲ್ಲವಾದರೆ ಖಂಡಿತವಾಗಿ ಈ ಅಂಗಡಿ ಮುಚ್ಚಬೇಕಾಗುತ್ತದೆ" ಎಂದು ಹೇಳುತ್ತಾರೆ.
ಇಂತಹ ಸ್ಥಿತಿಯಲ್ಲಿ ಸಹನಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತೆ. ಆಗ ಪೊಲೀಸರು "ನಾನು ಹೇಳುವುದು ಏನೆಂದರೆ, ನೀವು ಊರಿಗೆ ಹೋಗಿ ಆಧಾರ್ ಕಾರ್ಡ್ ಎಲ್ಲಾ ತೆಗೆದುಕೊಂಡು ಬನ್ನಿ" ಎಂದು ಹೇಳಿ ಆ ಪೊಲೀಸ್ ತಿಂಡಿಗೆ ಆರ್ಡರ್ ಮಾಡುತ್ತಾರೆ. ಇತ್ತ ಪುಟ್ಟಕ್ಕ ಮನೆಗೆ ಬಂಗಾರಮ್ಮ ಬರುತ್ತಾರೆ. ಬಂಗಾರಮ್ಮನನ್ನು ನೋಡಿ ಇದೀಗ ಪುಟ್ಟಕ್ಕ ಖುಷಿ ಪಡಲು ಆಗದೆ. ಅವರನ್ನು ಸ್ವಾಗತಿಸಲು ಆಗದೆ ಮೌನಿಯಾಗಿ ಇರುತ್ತಾರೆ.
ಪುಟ್ಟಕ್ಕನ ಮನೆಗೆ ಬಂದ ಬಂಗಾರಮ್ಮ
ಬಂಗಾರಮ್ಮ ಪುಟ್ಟಕ್ಕ ಬಳಿ ಬುಡು ಬುಡಿಕೆಯವರು ಹೇಳಿದ ಮಾತನ್ನು ಹೇಳಿದಾಗ ಪುಟ್ಟಕ್ಕಗೆ ಬಹಳ ಖುಷಿ ಆಗುತ್ತದೆ. ನಮ್ಮ ಮನೆಗೆ ಸಣ್ಣ ನಗು ಬರುತ್ತದೆ ಎಂದರೆ ಯಾರಿಗೆ ತಾನೆ ಖುಷಿ ಆಗುವುದಿಲ್ಲ ಎಂದಾಗ ಸುಮಾಗೆ ಮಾತ್ರ ಬಹಳ ಖುಷಿ ಆಗುತ್ತದೆ. ನಾನು ಚಿಕ್ಕಮ್ಮ ಆಗುವುದು ಖಚಿತ ನನಗೆ ಅಭಿನಂದನೆ ಹೇಳಕ್ಕ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಆಗ ಕೊಂಚ ನಗುತ್ತಾರೆ. ಹಾಗೆಯೇ ಸುಮಾ, ಸ್ನೇಹಾಗೆ ಐಎಎಸ್ ಮಾಡುವ ಗುರಿಯನ್ನು ನೆನಪು ಮಾಡುತ್ತಾಳೆ. ಪುಟ್ಟಕ್ಕ ಕೂಡ ತನ್ನ ಮಗಳಿಗೆ ಅದನ್ನೇ ಹೇಳುತ್ತಾಳೆ .

ಅಕ್ಕನ ಗುರಿಯನ್ನು ನೆನಪಿಸಿದ ಸುಮಾ
ನಿನ್ನ ಗುರಿಯನ್ನು ನೀನು ಮರೆತಿರುವೆ ಮೊದಲು ಅತ್ತ ಗಮನ ಹರಿಸುವುದು ಒಳ್ಳೆಯದು ಎಂದು ಹೇಳಿದಾಗ ಬಂಗಾರಮ್ಮ ಕೂಡ ತನ್ನ ಸೊಸೆಯತ್ತ ನೋಡಿ ನಗುಮುಖ ಬಿಡುತ್ತಾರೆ. ಸ್ನೇಹಾ ತನ್ನ ಅತ್ತೆ ನನ್ನ ಗುರಿಯನ್ನು ತಲುಪಲು ಸಹಾಯ ಮಾಡುತ್ತಾರೋ ಅಥವಾ ಇಲ್ಲವೋ ಎಂಬುವುದು ಮಾತ್ರ ಆಕೆಗೆ ತಿಳಿಯದಾಗಿದೆ .
ಅವ್ವನಿಗಾಗಿ ಕನಸು ಬದಿಗೊತ್ತಿದ ಸ್ನೇಹಾ
ಸ್ನೇಹಾ ಬಂಗಾರಮ್ಮ ಸೊಸೆಯಾಗಿ ಮಾತ್ರ ಇದೀಗ ಯೋಚನೆ ಮಾಡುತ್ತಿದ್ದಾಳೆ. ತನ್ನ ಅವ್ವನಿಗಾಗಿ ತನ್ನ ಕನಸುಗಳನ್ನು ಬಲಿಕೊಡುತ್ತಿದ್ದಾಳೆ ಸ್ನೇಹಾ . ತನ್ನ ಅವ್ವ ಹೇಳಿದ ಹಾಗೆ ನಾನು ಕೇಳುತ್ತೇನೆ. ಆಕೆ ಯಾವತ್ತೂ ಚೆನ್ನಾಗಿ ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿರುತ್ತಾಳೆ.


Click it and Unblock the Notifications











