'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿ ಖ್ಯಾತಿಯ ಧನುಷ್ ನಟಿಸಿದ ಶಾರ್ಟ್‌ ಫಿಲ್ಮ್ಸ್ ಯಾವುದು ಗೊತ್ತೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯೂ ಒಂದು. ಇತ್ತೀಚೆಗಷ್ಟೇ ಯಶಸ್ವಿ 800 ಸಂಚಿಕೆ ಪೂರೈಸಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕ ಕಂಠಿ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಧನುಷ್ ಎನ್. ಎಸ್.

ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಧನುಷ್ ಜನಪ್ರಿಯ ನಾಟಕ ನಟ ಕೂಡ ಹೌದು. ಈ ವರ್ಷದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಅದರಲ್ಲಿ ಜೀ 5 ಜನಪ್ರಿಯ ನಾಯಕ ನಟ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದರು.

Puttakkana makkalu serial Kanthi fame Dhanush acted in short films and video albums

"ಜೀ 5 ಜನಪ್ರಿಯ ನಾಯಕ ನಟ ಪ್ರಶಸ್ತಿ ದೊರಕಿದೆ. ನನಗಂತೂ ತುಂಬಾ ಖುಷಿಯಾಗುತ್ತಿದೆ. ಯಾರೆಲ್ಲ ಪ್ರೀತಿಯಿಟ್ಟು, ಪ್ರೋತ್ಸಾಹ ಮಾಡಿ ವೋಟ್ ಮಾಡಿದ್ದಾರೋ ಅವರಿಗೆಲ್ಲಾ ಪ್ರತಿಯೊಬ್ಬರಿಗೂ ಕೂಡಾ ಥ್ಯಾಂಕ್ಸ್. ನಿಮ್ಮ ಪ್ರೀತಿ ಸದಾ ಕಾಲ ಹೀಗೆಯೇ ಇರಬೇಕು" ಎಂದು ಹಂಚಿಕೊಂಡಿದ್ದಾರೆ.

ಧನುಷ್ ಅವರು ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಇದು ಮೊದಲನೇ ಬಾರಿಯೇನಲ್ಲ. ಕಳೆದ ವರ್ಷ ನಡೆದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಧನುಷ್ ಅವರು ಬೆಸ್ಟ್ ಮಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅಂದ ಹಾಗೇ ಕಂಠಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಧನುಷ್ ಗೌಡ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಧನುಷ್ ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿನ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Puttakkana makkalu serial Kanthi fame Dhanush acted in short films and video albums

ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿರುವ ಧನುಷ್ ರಗಡ್ ಲುಕ್ ಮೂಲಕ ವೀಕ್ಷಕರ ಮನ ಸೆಳೆದಿರುವ ಹುಡುಗ. ಅನಕ್ಷರಸ್ಥ ಹುಡುಗನಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಈತ ರೌಡಿಯಾಗಿ ಅಭಿನಯಿಸಿದರೂ ನಟನೆಯ ಮೂಲಕ ಗುರುತಿಸಿಕೊಂಡವರು. ಅಂದ ಹಾಗೇ ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಧನುಷ್ ಅವರಿಗೆ ಇದು ಮೊದಲ ಆಡಿಶನ್ ಆಗಿರಲಿಲ್ಲ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಧನುಷ್ ಈ ಹಿಂದೆ ಒಂದಷ್ಟು ಆಡಿಶನ್‌ಗಳಲ್ಲಿ ಭಾಗವಹಿಸಿದ್ದರು. ಆದರೆ, ಯಾವೊಂದಕ್ಕೂ ಆಯ್ಕೆಯಾಗದ ಅವರು ರಿಜೆಕ್ಟ್ ಆಗುತ್ತಿದ್ದರು. ಮುಂದೆ ಕಂಠಿಯ ಪಾತ್ರಕ್ಕೆ ಆಯ್ಕೆಯಾದ ಧನುಷ್ ಇದೀಗ ವೀಕ್ಷಕರ ಮನ ಸೆಳೆಯುವುದು ಮಾತ್ರವಲ್ಲದೇ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಮನೆ ಮಗನೂ ಹೌದು.

ಕಿರುತೆರೆಯ ಹೊರತಾಗಿ ಧನುಷ್ ಅವರು ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ. ಹೌದು, 'ಅನಿರೀಕ್ಷಿತ', '18+2' ಎಂಬ ಕಿರುಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಇವರು ವಿಡಿಯೋ ಆಲ್ಬಂಗಳಲ್ಲೂ ಮೋಡಿ ಮಾಡಿದ್ದಾರೆ. 'ನನ್ನ ನಗು' ಹಾಗೂ 'ಮನಸ್ಸೆಲ್ಲಾ ನೀನೆ' ವಿಡಿಯೋ ಆಲ್ಬಂಗಳಲ್ಲಿಯೂ ಬಣ್ಣ ಹಚ್ಚಿರುವ ಧನುಷ್ ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡರೆ ಆಶ್ವರ್ಯವಿಲ್ಲ.

More from Filmibeat

English summary
Puttakkana makkalu serial Kanthi fame Dhanush acted in short films and video albums;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X