Puttakkana Makkalu: ಮಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಸುಮ್ಮನೆ ಇರುತ್ತಾಳಾ ಪುಟ್ಟಕ್ಕ?

By ಪೂರ್ವ

ರಾಧಾ ಮಾಡಿದ ಒಂದೇ ಒಂದು ತಪ್ಪು ಕೆಲಸದಿಂದ ಆಗಿ ಸ್ನೇಹಾ ಮೇಲೆ ಹಗೆ ಸಾಧಿಸುತ್ತಾ ಬಂಗಾರಮ್ಮ ಇದ್ದಾಳೆ. ಬಂಗಾರಮ್ಮಗೆ ತನ್ನಿಂದ ಮಗ ಹಾಗೂ ಮಗಳನ್ನು ತನ್ನ ಸೊಸೆಯೆ ದೂರ ಮಾಡಿರೋದು ಅಂತ ಸಿಟ್ಟಿದೆ. ಆಕೆಯಿಂದಲೆ ನನ್ನ ಸಂಸಾರ ಹೀಗೆ ಆಗಿರುವುದು ಅಂದುಕೊಂಡಿದ್ದಾಳೆ. ಆದರೆ, ಸ್ನೇಹಾ ಮಾತ್ರ ಅಗತ್ಯಕ್ಕಿಂತ ಮೀರಿ ತಲೆ ಕೆಡಿಸಿ ಕೊಳ್ಳುತ್ತಿದ್ದಾಳೆ. ತನ್ನ ಸಂಸಾರ ಯಾವತ್ತೂ ಹಳ್ಳ ಹಿಡಿಯಬಾರದು ಎಂದುಕೊಂಡಿದ್ದಾಳೆ.

ಗಂಡ ಕಂಠಿ ಜೊತೆ ಚೆನ್ನಾಗಿ ಇರಬೇಕು ಅಂತ ಅಂದುಕೊಳ್ಳುತ್ತಾಳೆ. ಆದರೆ, ಬಂಗಾರಮ್ಮಗೆ ಮಾತ್ರ ಸ್ನೇಹಾ ನೆರಳು ಕಂಡರೆ ಆಗುತ್ತಿಲ್ಲ. ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾಳೆ. ಇನ್ನೂ ಬಂಗಾರಮ್ಮನ ತಲೆಯನ್ನು ರಾಧಾ ಇನ್ನಷ್ಟು ಕೆಡಿಸಿದ್ದಾಳೆ. "ನೋಡಿ ಅತ್ತೆ ನಿಮ್ಮ ಮಗ ನಿಮ್ಮ ಜೊತೆಯೇ ಇದ್ದಾನೆ ಎಂದು ಎಷ್ಟೆಲ್ಲ ಸಂತಸ ಪಡುತ್ತಿದ್ದೀರಾ? ಆದರೆ, ನೀವು ಆಲೋಚನೆ ಮಾಡಿರುವುದು ಒಂದು.. ಆಗುತ್ತಾ ಇರುವುದೇ ಇನ್ನೊಂದು. ನಿಮ್ಮ ಬಗ್ಗೆ ತಪ್ಪಾಗಿ ಮಾತನಾಡಿದವರ ಹೆಡೆಮುರಿ ಕಟ್ಟಿದ್ದಾರೆ ಕಂಠಿ ಮಾವ" ಎಂದಿದ್ದಾರೆ.

Puttakkana Makkalu serial March 1st episode update

"ಇದೀಗ ಸ್ನೇಹಾ, ಕಂಠಿ ಮಾವನಿಗೆ ಪ್ರಶ್ನೆ ಮಾಡುತ್ತಾ ಇದ್ದಾಳೆ. ಯಾಕೆ ನೀವು ಯಾರ್ಯಾರ ಮೇಲೆ ಕೈ ಮಾಡುವುದು ಎಂದು ಹೇಳುತ್ತಿದ್ದಾರೆ. ಏನೋ ಅತ್ತೆ ನಿಮ್ಮಿಂದ ನಿಮ್ಮ ಮಗನನ್ನು ದೂರ ಮಾಡುವ ಎಲ್ಲಾ ಗಿಮಿಕ್ ನಡೆಯುತ್ತಿದೆ. ಇದನ್ನು ನಿಮ್ಮ ಬಳಿ ಹೇಳಬೇಕು ಅನ್ನಿಸಿತು ಅದಕ್ಕೆ ಹೇಳಿದೆ. ತಪ್ಪಿದ್ದರೆ ಕ್ಷಮೆ ಇರಲಿ" ಎಂದು ಹೇಳುತ್ತಾರೆ. ಇನ್ನೂ ಬಂಗಾರಮ್ಮನಿಗೆ ಸ್ನೇಹಾ ಅಂದರೆ ನಂಜಮ್ಮನ ಮಾತು ಕೇಳುವವಳು. ಆಕೆಯ ಜೊತೆ ಇರುವವಳು ಎಂದೆಲ್ಲ ಮಾತ್ರ ತಪ್ಪು ಗ್ರಹಿಕೆಯಿದೆ. ಆದರೆ ಸ್ನೇಹಾ ಯಾರ ಮಾತೂ ಕೇಳಿದವಳು ಅಲ್ಲ. ಆಕೆಗೆ ಯಾವುದು ಸರಿಯೋ ಅದನ್ನೇ ಮಾಡುವವಳು.

ಸಹನಾ ಬಗ್ಗೆ ತಪ್ಪು ತಿಳಿದುಕೊಂಡ ಮುರಳಿ

ಇನ್ನೂ ಮುರಳಿ ಮಾತ್ರ ಏನು ತಪ್ಪು ಇಲ್ಲದ ಸಹನಾಳನ್ನು ತಪ್ಪಾಗಿ ತಿಳಿದುಕೊಳ್ಳುತ್ತಾನೆ. ಆತನಿಗೆ ತನ್ನ ತಾಯಿಯನ್ನು ಬಿಟ್ಟು ಕೊಡಲು ಆಗುವುದು ಇಲ್ಲ. ತನ್ನ ಹೆಂಡತಿಯನ್ನು ಕೂಡ. ಆದರೆ, ಮುರಳಿ ಬಾವ ಸಹನಾ ಜೊತೆ ಬಹಳ ಕೆಟ್ಟದಾಗಿ ನಡೆದುಕೊಂಡ ವಿಚಾರ ಸಹನಾ ಹೇಳಿದ್ದೆ ತಪ್ಪು ಎನ್ನುವ ಹಾಗೆ ಎಲ್ಲರೂ ಮಾತನಾಡುತ್ತಾರೆ. ಸಹನಾ ಯಾರನ್ನು ಮನೆ ಬಿಟ್ಟು ಹೋಗಿ ಎಂದು ಹೇಳಿದವಳು ಅಲ್ಲ. ಅವರಾಗಿಯೇ ಮನೆ ಬಿಟ್ಟು ಹೋದರು ಅವರಾಗಿಯೇ ಬಂದರು. ಅದಕ್ಕೆ ಮುರಳಿ ಸಹನಾ ಜೊತೆ ಹೇಳುತ್ತಾನೆ.

Puttakkana Makkalu serial March 1st episode update

ಬಾವನಿಗೆ ಜೊತೆ ಕ್ಷಮೆ ಕೇಳುವಂತೆ ಒತ್ತಾಯ

ಬಾವನಿಗೆ ಕ್ಷಮೆ ಕೇಳು ಸಹನಾ ಎಂದು ಹೇಳುತ್ತಿರುತ್ತಾನೆ. ಆದರೆ, ಸಹನಾ ಏನು ಮಾಡುತ್ತಾಳೆ ಇನ್ನಷ್ಟೇ ಕಾದು ನೋಡಬೇಕಾಗಿದೆ. ಬಂಗಾರಮ್ಮ ದೇವಾಲಯಕ್ಕೆ ಬಂದಾಗ ಅಲ್ಲಿ ಪುಟ್ಟಕ್ಕ ಬಂಗಾರಮ್ಮಗೆ ಸಿಗುತ್ತಾರೆ . ಬಂಗಾರಮ್ಮ ಪುಟ್ಟಕ್ಕನ ಬಳಿ ಮಾತುಕತೆ ಶುರು ಮಾಡುತ್ತಾರೆ. ಬಂಗಾರಮ್ಮ ಸ್ನೇಹಾನನ್ನು ದೂರಿಯೆ ಮಾತನಾಡುತ್ತಾರೆ. "ಅದೆಷ್ಟು ಬಾರಿ ಸ್ನೇಹಾ ತಪ್ಪು ಮಾಡಿದ್ದಾಳೆ. ಆಕೆ ತಪ್ಪು ಮಾಡಿಲ್ಲ ಎಂದು ಹೇಳಿಲ್ಲ. ಆದರೆ, ತಿಳಿದು ತಿಳಿದು ಯಾವತ್ತೂ ಆಕೆ ತಪ್ಪು ಮಾಡಿದವಳು ಅಲ್ಲ" ಎಂದು ಪುಟ್ಟಕ್ಕ ಹೇಳುತ್ತಾಳೆ.

ಬಂಗಾರಮ್ಮನ ಮಾತಿಗೆ ಬೇಸರ ಪಟ್ಟುಕೊಂಡ ಪುಟ್ಟಕ್ಕ

ಬಂಗಾರಮ್ಮ ಆಕೆ ತಪ್ಪು ಮಾಡಿಲ್ಲ ಎಂದರೆ ಮತ್ಯಾರು ಎಂದು ಪುಟ್ಟಕ್ಕ ನ ಬಳಿಯೇ ತನ್ನ ನೋವನ್ನು ಹೇಳಿಕೊಳ್ಳುತ್ತಾ ಇರುತ್ತಾರೆ. ಇನ್ನೂ ಪುಟ್ಟಕ್ಕನ ಬಳಿ ನಂಜಮ್ಮ ಹೇಳುತ್ತಾರೆ. "ನಂಜಮ್ಮ ಏನು ಅಂತ ನನಿಗಿಂತ ನಿಂಗೆ ಚೆನ್ನಾಗಿ ಗೊತ್ತು. ಆದರೆ, ಆಕೆಯಿಂದ ಇನ್ನೇನೆಲ್ಲ ಆಗಬೇಕೋ ಎಂದು ಬಂಗಾರಮ್ಮ ತೀವ್ರ ನೊಂದುಕೊಂಡಿರುತ್ತಾಳೆ.

More from Filmibeat

English summary
Puttakkana Makkalu serial March 1st episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X