Puttakkana Makkalu: ಧರ್ಮ ಸಂಕಟದಲ್ಲಿ ಸಿಲುಕಿದ ಪುಟ್ಟಕ್ಕ.. ತೀರ್ಪು ಯಾವ ಕಡೆಗೆ?
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವೀಕ್ಷಕರ ನೆಚ್ಚಿನ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಈ ಧಾರಾವಾಹಿಯಲ್ಲಿ ಒಂದೊಂದು ಎಪಿಸೋಡ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಸದ್ಯಕ್ಕೀಗ ಪುಟ್ಟಕ್ಕ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಇತ್ತ ಬಂಗಾರಮ್ಮನ ಪರವಾಗಿಯೂ ನಿಲ್ಲಲು ಆಗುತ್ತಿಲ್ಲ. ಅತ್ತ ನಂಜಮ್ಮನ ಪರವಾಗಿ ಮಾತನಾಡಲು ಆಗದ ಸಂದಿಗ್ಧ ಪರಿಸ್ಥಿತಿ.
ಬಂಗಾರಮ್ಮ ಒಬ್ಬ ತಾಯಿಯಾಗಿ ತನ್ನ ಮಗಳಿಗೆ ಏನು ಆಗಬಾರದು. ಆಕೆ ಚೆನ್ನಾಗಿ ಇರಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಅದರಲ್ಲೂ ವಸು ಬೇರೆ ಗರ್ಭಿಣಿ. ಆ ಕಾರಣಕ್ಕೆ ಪುಟ್ಟಕ್ಕ ಅವರ ಮನೆಯಲ್ಲಿ ವಸು ಇದ್ದರೂ ಏನು ತೊಂದರೆ ಇಲ್ಲ. ಆಕೆ ಚೆನ್ನಾಗಿ ಇರುತ್ತಾಳೆ ಎನ್ನುವುದು ಬಂಗಾರಮ್ಮ ಉದ್ದೇಶ. ಆದರೆ, ಈ ಉದ್ದೇಶ ಮಗಳಿಗೆ ಕೂಡ ಅರ್ಥ ಆಗುತ್ತಿಲ್ಲ. ಅಳಿಯನಿಗೆ ಕೂಡ ಅರ್ಥ ಆಗುತ್ತಿಲ್ಲ.

ಇನ್ನೊಂದು ಕಡೆ ಕೌಸಲ್ಯ ಹೇಗಾದರೂ ಮಾಡಿ ಸಹನಾಳನ್ನು ಮನೆಯಿಂದ ಓಡಿಸಿ, ಮುರಳಿಗೆ ಇನ್ನೊಂದು ಮದುವೆ ಮಾಡಬೇಕು ಎಂಬ ಆಲೋಚನೆಯಲ್ಲಿ ಇರುತ್ತಾಳೆ. ಆದರೆ, ಮುರಳಿಗೆ ಮಾತ್ರ ಸತ್ಯವೇನು ಅನ್ನೋದು ಅರ್ಥವಾಗುತ್ತಿಲ್ಲ. ಪುಟ್ಟಕ್ಕ, ಕೌಸಲ್ಯಾಗೆ ಹೊಡೆದದ್ದು ಬಹಳ ದೊಡ್ಡದು ಎಂದು ಪಂಚಾಯಿತಿಯಲ್ಲಿ ಹೇಳುತ್ತಾನೆ. ಆಗ ಪುಟ್ಟಕ್ಕಗೆ ತನ್ನ ಅಳಿಯನ ಮೇಲೆ ಬೇಸರ ಬರುತ್ತದೆ. ಕಟ್ಟಿಕೊಂಡವಳ ಮಾತನ್ನು ಸ್ವಲ್ಪವಾದರೂ ಕೇಳುಸಿಕೊಂಡರೆ, ಇಂತಹ ಯಾವುದು ತೊಂದರೆ ಆಗುತ್ತಿರಲಿಲ್ಲ ಎಂದು ಆಲೋಚನೆ ಮಾಡುತ್ತಾಳೆ.
ಪಂಚಾಯಿತಿ ಕಟ್ಟೆಯಿಂದ ಇಳಿದ ಬಂಗಾರಮ್ಮ
ಇನ್ನೂ ನಂಜಮ್ಮ ಪಂಚಾಯಿತಿ ಕಟ್ಟೆ ಸ್ಥಾನದಿಂದ ಬಂಗಾರಮ್ಮನನ್ನು ಇಳಿಸಿ, ಪುಟ್ಟಕ್ಕನನ್ನೂ ಕೂರಿಸುತ್ತಾರೆ. ಆದರೆ, ಪುಟ್ಟಕ್ಕ "ನಾನು ಈ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ. ಇದು ಅಮ್ಮವರು ಕುಳಿತುಕೊಳ್ಳುವ ಸ್ಥಾನ. ನನಗದು ಬೇಡ. ನಾನು ಹೀಗೆಯೇ ನಿಮಗೆ ನ್ಯಾಯ ಹೇಳುತ್ತೇನೆ" ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಮೇಲೆ ಅಲ್ಲಿ ನೆರೆದವರು ಹಾಗೇ ಬಂಗಾರಮ್ಮ ಕೂಡ ಖುಷಿ ಪಡುತ್ತಾರೆ. ನಂಜಮ್ಮ ಹಾಗೂ ಬಂಗಾರಮ್ಮ ನಡುವೆ ಸಾಕಷ್ಟು ಜಗಳಗಳು ನಡೆಯಿತು. ಹಾಗೆಯೇ ಇದನ್ನೆಲ್ಲ ಪುಟ್ಟಕ್ಕ ಕೇಳಿಕೊಳ್ಳುತ್ತಾರೆ. ಕೊನೆಗೆ ಚಂದ್ರು ಅಭಿಪ್ರಾಯವನ್ನು ಕೇಳುತ್ತಾರೆ.

ಅಮ್ಮನ ಮನೆಗೆ ಹೋಗುವುದಾಗಿ ಚಂದ್ರು ಪಟ್ಟು
ಆಗ ಚಂದ್ರು "ನನ್ನ ತಾಯಿ ಮೊದಲು ಕೆಟ್ಟವಳು ಆಗಿದ್ದಳು ನಿಜ. ಆದರೆ, ಇದೀಗ ಒಳ್ಳೆಯವರು. ನನ್ನ ಅಮ್ಮ ಕೂಡ ಒಂಟಿಯಾಗಿ ಜೀವನ ನಡೆಸುತ್ತಾ ಇದ್ದಾಳೆ. ಆಕೆಗೆ ಆಧಾರ ಆಗಿರುವವರು ನಾವು. ಆದ ಕಾರಣ ನಾನು ನನ್ನ ಅಮ್ಮನ ಮನೆಗೆ ಹೋಗಬೇಕು ಎಂದುಕೊಂಡು ಇದ್ದೇವೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ, ವಸು ಬಳಿಯೂ ಒಂದು ಮಾತು ಕೇಳುತ್ತಾರೆ. "ವಸು ಇದಕ್ಕೆ ನೀವೇನು ಹೇಳುತ್ತೀರಾ" ಎಂದಾಗ "ನನ್ನ ಗಂಡ ಎನು ಹೇಳುತ್ತಾರೋ ಅದೆಯೇ ನನ್ನ ಉತ್ತರ" ಎಂದು ಹೇಳಿದಾಗ ಬಂಗಾರಮ್ಮಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತೆ. ಇತ್ತ ನಂಜಮ್ಮ ಬಹಳ ಖುಷಿಯಾಗುತ್ತಾರೆ.
ಬಂಗಾರಮ್ಮ, ಪುಟ್ಟಕ್ಕ ಗೆಳೆತನ ಹಾಳಗುತ್ತಾ?
ಪುಟ್ಟಕ್ಕಗೆ ಈಗ ಏನು ಮಾಡಬೇಕು? ಯಾವ ರೀತಿ ತೀರ್ಪು ನೀಡಬೇಕು ಎಂಬ ಸಂಕಷ್ಟದಲ್ಲಿ ಇದ್ದಾರೆ. ಇತ್ತ ರಾಜೇಶ್ವರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಪುಟ್ಟಕ್ಕ ಏನೇ ಮಾಡಿದರೂ ಆಕೆಗೆ ತಿರುಗಿ ಬೀಳುವ ಎಲ್ಲಾ ಲಕ್ಷಣ ಇದೆ. ಆದ ಕಾರಣ ರಾಜೇಶ್ವರಿ ಮಾತ್ರ ಬಹಳ ಕುತೂಹಲದಿಂದ ಮುಂದೇನು ಆಗುತ್ತದೆ ಎಂದು ಕಾದು ಕುಳಿತಿದ್ದಾಳೆ.


Click it and Unblock the Notifications











