Puttakkana Makkalu:ಪಂಚಾಯ್ತಿಗೆ ಬರುತ್ತಾನಾ ಕಾಳಿ; ಸಹನಾಗೆ ನ್ಯಾಯ ಸಿಗುತ್ತಾ? ಇಲ್ವಾ?
ಪಂಚಾಯಿತಿಯಲ್ಲಿ ನಂಜಮ್ಮ ಪರವಾಗಿ ತೀರ್ಪು ಪ್ರಕಟ ಆಗುತ್ತದೆ. ಆದರೆ, ನಂಜಮ್ಮನಿಗೆ ಪುಟ್ಟಕ್ಕ ಒಂದು ಷರತ್ತು ವಿಧಿಸುತ್ತಾರೆ. ಗರ್ಭಿಣಿ ಆಗಿರುವ ವಸುವನ್ನು ಚೆನ್ನಾಗಿ ನೋಡಿಕೊಳ್ಳುವುದಾದರೆ ಮಾತ್ರ ಆಕೆಯನ್ನು ಕಳುಹಿಸುತ್ತೇವೆ. ಆಕೆಗೆ ಎಲ್ಲಾದರೂ ಒಂದು ಚೂರೂ ತೊಂದರೆ ಆದರೂ ಬಹಳ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತೀರ್ಪು ನೀಡುತ್ತಾರೆ.
ಪುಟ್ಟಕ್ಕ ಕೊಟ್ಟ ತೀರ್ಪು ಬಂಗಾರಮ್ಮನಿಗೆ ಬಹಳ ನೋವಾದರೂ, ಪುಟ್ಟಕ್ಕ ಕೊಟ್ಟ ತೀರ್ಪಿನಲ್ಲಿ ಕೂಡ ಒಂದು ನ್ಯಾಯ ಇದೆ ಎಂದು ಯೋಚನೆ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಕಂಠಿ ಹಾಗೂ ಸ್ನೇಹಾ ಓಡೋಡಿ ಬರುತ್ತಾರೆ. ಇನ್ನೂ ವಸು ಹಾಗೂ ಚಂದ್ರುವನ್ನು ನಂಜಮ್ಮ ಬಹಳ ಖುಷಿಯಿಂದ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇತ್ತ ಸಹನಾ ಹಾಗೂ ಮುರಳಿ ವಿಚಾರದಲ್ಲಿ ಪಂಚಾಯಿತಿ ನಡೆಯುತ್ತದೆ. ಬಂಗಾರಮ್ಮ ಪಂಚಾಯಿತಿ ಸ್ಥಾನದಲ್ಲಿ ಕುಳಿತುಕೊಂಡು ಇಬ್ಬರ ನಡುವಿನ ವಾದವನ್ನು ಕೇಳುತ್ತಾರೆ.

ಇತ್ತ ಕೌಸಲ್ಯಾ, ಸಹನಾ ಮೇಲೆ ಬಹು ದೊಡ್ಡ ಆರೋಪ ಮಾಡಿದ್ದಾಳೆ. "ಸಹನಾ ಮನೆಯಿಂದ ಹೊರ ಬರಲು ಆಕೆಗೆ ಇದ್ದ ಅಕ್ರಮ ಸಂಬಂಧವೇ ಬಹು ದೊಡ್ಡ ಕಾರಣ. ಅದರಿಂದಾಗಿಯೇ ಸಹನಾ ಹೀಗೆಲ್ಲ ಆಡುತ್ತಿದ್ದಾಳೆ. ಸಹನಾಗೆ ಕಾಳಿ ಜೊತೆ ಅಕ್ರಮ ಸಂಬಂಧ ಇದೆ. ಮುರಳಿಗೆ ಕರೆ ಮಾಡುವುದಕ್ಕಿಂತ ಹೆಚ್ಚಾಗಿ ಕಾಳಿಗೆ ಕರೆ ಮಾಡುತ್ತಾಳೆ. ಈ ವಿಚಾರ ನನಗೆ ಗೊತ್ತಾಗುತ್ತಿದ್ದ ಹಾಗೆ ಮನೆ ಬಿಟ್ಟು ಬಂದಿದ್ದಾಳೆ" ಎಂದಾಗ ಪುಟ್ಟಕ್ಕ ಹಾಗೂ ಗೋಪಲಾನಿಗೆ ಬಹಳ ಸಿಟ್ಟು ಬರುತ್ತದೆ.
ಸಹನಾ ಬಗ್ಗೆ ಕೌಸಲ್ಯಾ ಆರೋಪ
ಇಷ್ಟೆಲ್ಲ ಆರೋಪ ಮಾಡುತ್ತಿದ್ದರೂ, ಮುರಳಿ ಮಾತ್ರ ಇದ್ಯಾವುದನ್ನೂ ನಂಬುವುದು ಇಲ್ಲ. ಆತನಿಗೆ ಸಹನಾ ಎಂದರೆ ಬಹಳ ಪ್ರೀತಿ. ಸಹನಾ ಯಾವತ್ತೂ ಹಾಗೆಲ್ಲ ನಡೆದುಕೊಳ್ಳುವುದು ಇಲ್ಲ ಎಂದು ಮುರಳಿಗೆ ತಿಳಿದಿದೆ. ತನ್ನ ತಾಯಿ ಆಡಿದ ಮಾತಿಗೆ ಮುರಳಿ ತನ್ನ ತಾಯಿಯನ್ನೇ ಪ್ರಶ್ನೆ ಮಾಡುತ್ತಾನೆ. "ಏನಮ್ಮಾ ಈ ರೀತಿ ಮಾತಾಡುತ್ತೀಯಾ? ಸಹನಾ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ" ಎಂದು ಹೇಳುತ್ತಾನೆ. ಇತ್ತ ಪುಟ್ಟಕ್ಕ ಬಹಳ ಕೋಪದಲ್ಲಿ "ಕೌಸಲ್ಯಾ ಅವರ ಮನೆಗೆ ಹೋದಾಗ ಇದೆ ಮಾತನ್ನು ಹೇಳಿದ್ದರು. ಆ ಮಾತು ಕೇಳಿ ನನಗೆ ಬಹಳ ಸಿಟ್ಟು ಬಂತು. ಅದಕ್ಕೆ ನಾನು ಅವರ ಕೆನ್ನೆಗೆ ಹೊಡೆದು ಬಿಟ್ಟೆ" ಎಂದು ಹೇಳಿದಾಗ ಪಂಚಾಯಿತಿ ಕಟ್ಟೆಯಲ್ಲಿ ಕುಳಿತಿರುವವರು ಕೂಡ ಆದೆ ಮಾತು ಹೇಳುತ್ತಾರೆ.

ಕೌಸಲ್ಯಾ ಮಾತಿಗೆ ತಿರುಗೇಟು ಕೊಟ್ಟ ಪುಟ್ಟಕ್ಕ
"ದೇವತೆ ತರ ಇರುವ ಹುಡುಗಿ ಮೇಲೆ ಇಂತಹ ಆಪಾದನೆ ಮಾಡಿದರೆ ನಮಗೆ ಸಿಟ್ಟು ತಡೆಯಲು ಆಗುವುದು ಇಲ್ಲ. ಇನ್ನೂ ಪುಟ್ಟಕ್ಕ ಆದರೂ ಹೇಗೆ ತಡೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ." ಆದರೆ, ಕೌಸಲ್ಯಾ ಮಾತ್ರ ಹಿಡಿದಿದ್ದೆ ಹಠ. ಕಾಳಿಯನ್ನು ಪಂಚಾಯಿತಿಗೆ ಕರೆದುಕೊಂಡು ಬರಲು ಪಂಚಾಯಿತಿಯಲ್ಲಿ ಅನುಮತಿ ಕೇಳುತ್ತಾಳೆ. ಇನ್ನೂ ಕಾಳಿ ಪಂಚಾಯ್ತಿ ಮುಂದೆ ಏನು ಹೇಳುತ್ತಾನೋ ನೋಡಬೇಕಾಗಿದೆ.
ಕೌಸಲ್ಯ ತಂತ್ರಕ್ಕೆ ಪ್ರತಿ ತಂತ್ರ ಹೂಡುತ್ತಾನಾ ಕಾಳಿ?
ಒಟ್ಟಿನಲ್ಲಿ ಕೌಸಲ್ಯಾಗೆ ತನ್ನ ಮನೆಯಲ್ಲಿರುವ ಚಿನ್ನದಂತಹ ಸೊಸೆ ಬೇಡವಾಗಿ ಹೋಗಿದ್ದಾಳೆ. ಆಕೆಗೆ ಸಹನಾಳನ್ನು ಮುರಳಿ ಜೀವನದಿಂದ ಹೇಗಾದರೂ ಮಾಡಿ ಓಡಿಸಬೇಕು ಎನ್ನುವುದೇ ಬಹಳ ದೊಡ್ಡ ತಂತ್ರವಾಗಿದೆ.


Click it and Unblock the Notifications











