ಪುಟ್ಟಕ್ಕನ ಮನೆಯಲ್ಲಿ ನಂಜಮ್ಮ ಬಂಗಾರಮ್ಮ ಮುಖಾಮುಖಿ; ಬಂಗಾರಮ್ಮನ ಮುಂದಿನ ನಿರ್ಧಾರವೇನು?

By ಪೂರ್ವ

ಪುಟ್ಟಕ್ಕ ಬಂಗಾರಮ್ಮನ ಮಗಳನ್ನು ತನ್ನ ಸ್ವಂತ ಮಗಳು ಎನ್ನುವ ಹಾಗೆ ಆಕೆಯ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಇದನ್ನೇ ಬಂಗರಮ್ಮ ಬಳಿ ಕೂಡ ಪುಟ್ಟಕ್ಕ ಹೇಳಿಕೊಂಡು ಇರುತ್ತಾಳೆ. ಇದನ್ನೆಲ್ಲ ಕೇಳಿದ ಬಂಗಾರಮ್ಮ, "ಪುಟ್ಟಕ್ಕ ನಿನ್ನ ಬಳಿ ನನ್ನ ಮಗಳು ಇದ್ದಾಳೆ ಎಂದರೆ ಅದೊಂದು ಧೈರ್ಯ ನನಗೆ. ನೀನು ಆಕೆಯನ್ನು ಚೆನ್ನಾಗಿ ನೋಡಿಕೊಂಡಿದ್ದೀಯ ಅನ್ನುವುದು ನನಗೆ ತಿಳಿದಿದೆ" ಎನ್ನುತ್ತಾರೆ.

ಆಗ ಮಾದೆಗೌಡರು "ಬಂಗಾರ ನಮ್ಮ ಮಗಳನ್ನು ನೋಡಬೇಕು ಎಂದು ನನಗೆ ಅನಿಸಿದೆ. ದಯವಿಟ್ಟು ಹಠ ಮಾಡಬೇಡ" ಎಂದಾಗ ಬಂಗಾರಮ್ಮ "ನನ್ನ ಮಗಳನ್ನು ನೋಡಲು ನನಗೆ ಆಸೆ. ಆದರೆ ಇದೀಗ ನಾನು ಅಲ್ಲಿಗೆ ಬಂದರೆ, ವಸು ನನ್ನ ಬಗ್ಗೆ ತಪ್ಪಾಗಿ ತಿಳಿಯಬಹುದು ಅಲ್ವಾ?" ಎಂದು ಮನದ ಮಾತನ್ನು ಪುಟ್ಟಕ್ಕನ ಬಳಿ ಹೋಗುವಂತೆ ಬಂಗಾರಮ್ಮನವರ ಮನವೊಲಿಕೆ ಮಾಡುತ್ತಾರೆ.

Puttakkana Makkalu serial March 4th update on bangaramma nanjamma

ಬಳಿಕ ಎಲ್ಲರೂ ಪುಟ್ಟಕ್ಕನ ಮನೆಗೆ ಹೋಗುತ್ತಾರೆ. ನಂಜಮ್ಮ ಪುಟ್ಟಕ್ಕ ಮನೆಯಲ್ಲಿ ಇಲ್ಲದೆ ಇರುವ ವೇಳೆ ಆಕೆಯ ಮನೆಗೆ ಕಾಲು ಇಡುತ್ತಾಳೆ. ಆಕೆ ವಸುಗೆ ಏನೇನೋ ಮಾತುಗಳಿಂದ ನಿಂದನೆ ಮಾಡಬೇಕೆಂದುಕೊಂಡು ಬರುತ್ತಾರೆ. ಆ ವೇಳೆಗೆ ವಸು ಹಾಗೂ ಚಂದ್ರು ಇಬ್ಬರು ಮಾತನಾಡುತ್ತಾ ಇರುತ್ತಾರೆ. ಆ ವೇಳೆ ಅಲ್ಲಿಗೆ ಬಂದ ನಂಜಮ್ಮನನ್ನು ನೋಡಿ ಶಾಕ್ ಆಗುತ್ತಾರೆ.
ನಂಜಮ್ಮ ನಯವಾದ ಮಾತುಕತೆಗೆ ವಸು ಮಾತ್ರ ಅತ್ತೆ ಬದಲಾದರೂ ಏನೋ ಎಂದುಕೊಂಡು ಮನದಲ್ಲಿ ಖುಷಿ ಪಡುತ್ತಾಳೆ. ಹಾಗೆಯೇ ಚಂದ್ರು ಜೊತೆ ಅಮ್ಮನ ಬಳಿ ಮಾತನಾಡುವಂತೆ ಹೇಳುತ್ತಾಳೆ. ಇನ್ನೂ ನಂಜಮ್ಮ ವಸುಗಾಗಿ ಆಕೆಗೆ ಹಿಡಿಸುವ ಎಲ್ಲಾ ರೀತಿಯ ಅಡುಗೆ ಮಾಡಿಕೊಂಡು ಬಂದಿರುತ್ತಾಳೆ. ಪುಟ್ಟಕ್ಕನ ಮನೆ ಬಾಗಿಲ ಬಳಿ ಕಾರಿನಿಂದ ಎಲ್ಲರೂ ಇಳಿಯುವ ವೇಳೆ ಊರಿನ ಹಿರಿಯರೊಬ್ಬರು ಏನು ಪುಟ್ಟಕ್ಕ ಈಗ ಬಂದ್ರಾ? ಇದೀಗ ನಿಮ್ಮ ಮನೆಗೆ ನಂಜಮ್ಮ ಬಂದಿದ್ದಾರೆ. ಅವರ ಕೈಯಲ್ಲಿ ಊಟದ ಕ್ಯಾರಿಯರ್ ಬೇರೆ ಇತ್ತು ಎಂದು ಹೇಳುತ್ತಾರೆ.

ಆತಂಕದಿಂದ ಓಡೋಡಿ ಮನೆಗೆ ಬಂದ ಬಂಗಾರಮ್ಮ

ಇದನ್ನು ಕೇಳಿಸಿಕೊಂಡ ಪುಟ್ಟಕ್ಕಗೆ ಆತಂಕ ಆಗುತ್ತದೆ. ಬಂಗಾರಮ್ಮ ಓಡೋಡಿ ಮನೆ ಒಳಗೆ ಬರುತ್ತಾ ಇರುವಾಗ ಮಗಳಿಗೆ ನಂಜಮ್ಮ ತಿನ್ನಿಸುತ್ತಿದ್ದ ಊಟವನ್ನು ನೋಡಿ ವಸು ಬಾಯಿಗೆ ಇಡುವಾಗಲೇ ಡಬ್ಬಿಯನ್ನು ಚೆಲ್ಲಿ ಬಿಡುತ್ತಾಳೆ ಬಂಗಾರಮ್ಮ. ಇನ್ನೂ ಸಹನಾಗೆ ಮಾನಸಿಕ ಕಾಯಿಲೆ ಬಂದಿದೆ. ಆದ ಕಾರಣ ಸಹನಾ ಹೀಗೆ ಆಡುತ್ತಾ ಇರಬಹುದು ಎಂದು ಊಹಿಸಿ ಮನೋರೋಗ ತಜ್ಞರನ್ನು ಮುರಳಿ ಮನೆಗೆ ಕರೆಯಿಸುತ್ತಾನೆ.

ಮುರಳಿ ವರ್ತನೆಯಿಂದ ಶಾಕ್ ಆದ ಸಹನಾ

ಆದರೆ, ಸಹನಾಗೆ ಪರಿಚಯ ಮಾಡುವ ವೇಳೆ ಈಕೆ ನನ್ನ ಗೆಳತಿ ಎಂದು ಪರಿಚಯ ಮಾಡಿಸುತ್ತಾರೆ. ಡಾಕ್ಟರ್ ಸಹನಾ ಬಳಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೇ ಆಕೆಯ ಕೈ ರುಚಿ ಸವಿದು ಅಲ್ಲಿಂದ ಹೋಗುತ್ತಾರೆ. ಆದರೆ, ಡಾಕ್ಟರ್ ಅನ್ನು ಮುರಳಿ ಮನೆಗೆ ಕರೆದಿದ್ದಾನೆ ಎನ್ನುವುದು ಕೌಸಲ್ಯಗೆ ತಿಳಿದಿದೆ. ಮನೆಗೆ ಬಂದ ಮುರಳಿ ತನ್ನ ಸಹೋದ್ಯೋಗಿಗಳ ಬಳಿ ಕೌಸಲ್ಯ ಹೇಳುತ್ತಿದ್ದ ಮಾತುಗಳನ್ನು ಕೇಳಿ ಸಹನಾಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಹಾಗೆಯೇ ನಾನು ಸುಮ್ಮನೆ ಇದ್ದೇನೆ ಎಂದು ನೀವು ಹೀಗೆ ಹೇಳುವುದು ಸರಿ ಅಲ್ಲ ಎಂದಾಗ ಮುರಳಿ ಕರೆದುಕೊಂಡು ಬಂದ ಡಾಕ್ಟರ್ ಫುಲ್ ಹೆಸರು ಹೇಳಿ ಸರ್ಚ್ ಮಾಡುವಂತೆ ಹೇಳುತ್ತಾಳೆ.

Puttakkana Makkalu serial March 4th update on bangaramma nanjamma

ಮುರಳಿ ಮೇಲೆ ನಂಬಿಕೆ ಕಳೆದುಕೊಂಡ ಸಹನಾ

ಇನ್ನೂ ಸಹನಾ ಅಳುತ್ತಾ ರೂಮ್‌ನತ್ತ ಬರುತ್ತಾಳೆ. ಅತ್ತೆ ಹೇಳಿದ ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಅತ್ತೆ ಹೇಳಿದ ಹೆಸರನ್ನು ಹುಡುಕುತ್ತಾರೆ. ಮುರಳಿ ಕರೆದುಕೊಂಡು ಬಂದಿರುವುದು ಡಾಕ್ಟರ್ ಎಂಬ ವಿಚಾರ ತಿಳಿದಾಗ ಸಹನಾ ಬಹಳ ಬೇಸರಗೊಂಡು ಬಿಡುತ್ತಾಳೆ.

More from Filmibeat

English summary
Puttakkana Makkalu serial March 4th update on Bangaramma Nanjamma
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X