Puttakkana Makkalu:ಸ್ನೇಹಾಗೆ ಅವ್ವನ ಮಾತೇ ವೇದವಾಕ್ಯ; ಅತ್ತೆಯ ಮಾತಿನಂತೆ ನಡೆಯಲು ಸ್ನೇಹಾ ನಿರ್ಧಾರ

By ಪೂರ್ವ

ಸ್ನೇಹಾಗೆ ತನ್ನ ಅವ್ವನನ್ನು ಮೆಚ್ಚಿಸಬೇಕು ಎನ್ನುವ ಆಸೆ. ಈಗಾಗಲೇ ಸಹನಾ ಅಕ್ಕನ ವಿಚಾರದಲ್ಲಿ ಅವ್ವ ಬಹಳಷ್ಟು ನೊಂದಿದ್ದಾರೆ. ಆದರೆ ಆಕೆಗೆ ಇನ್ನಷ್ಟು ನೋವು ಕೊಡಲು ನನಗೆ ಇಷ್ಟ ಇಲ್ಲ. ನನ್ನ ತಾಯಿಗೆ ನಾನು ಇನ್ನಷ್ಟು ದುಃಖ ನೀಡಲಾರೇನು ಎಂದು ಮನದಲ್ಲಿ ದೃಢ ನಿರ್ಧಾರ ಮಾಡಿಕೊಂಡು ಗಂಡನ ಮನೆಗೆ ಬರುತ್ತಾಳೆ. ಅಲ್ಲಿ ಕೂಡ ರಾಧಾ ಸ್ನೇಹಾ ಗೆ ಚುಚ್ಚು ಮಾತುಗಳಿಂದ ನಿಂದನೆ ಮಾಡುತ್ತಾಳೆ.

ಇದನ್ನೆಲ್ಲ ನೋಡಿದ ಬಂಗಾರಮ್ಮ ಮಾತ್ರ ರಾಧಾಗೆ ಹೇಳುತ್ತಾರೆ "ರಾಧವ್ವ ನೀನು ಸ್ವಲ್ಪ ಸುಮ್ಮನೆ ಇರು. ಆಕೆ ಈಗಾಗಲೇ ಬಹಳಷ್ಟು ನೊಂದಿದ್ದಾರೆ. ನೀನು ಆಕೆಗೆ ಇನ್ನಷ್ಟು ನೋವು ಕೊಡುವುದು ಬೇಡ. ಆಕೆಯನ್ನು ಆಕೆಯ ಪಾಡಿಗೆ ಇರಲು ಬಿಡು" ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಧಾ ಏನೂ ಮಾತನಾಡದೆ ಅಲ್ಲಿಂದ ಹೋಗುತ್ತಾಳೆ. ರಾಧಾ ಮಾತಿಗೆ ಬಹಳ ನೊಂದುಕೊಂಡು ಇರುತ್ತಾಳೆ ಸ್ನೇಹಾ. ಸ್ನೇಹಾಗೆ ತನ್ನ ತವರಿನಲ್ಲಿ ಆಗುತ್ತಿರುವ ಕೋಲಾಹಲಕ್ಕೆ ನಾನೇ ಕಾರಣ ಎನ್ನುವ ಪಾಪ ಪ್ರಜ್ಞೆ ಆಕೆಗೆ ಬಂದಿದೆ. ಇದೀಗ ಅವ್ವ ಒಬ್ಬ ಮಗಳನ್ನು ಕಳೆದುಕೊಂಡು ಬಹಳಷ್ಟು ನೋವಿನಲ್ಲಿ ಇದ್ದಾಳೆ

Puttakkana Makkalu serial May 10th episode update

ಇದೀಗ ನಾನು ಕೂಡ ಹಾಗೆ ಮಾಡಿದರೆ ಹೇಗೆ ಎಂದು ಕೊಂಡು ಕಂಠಿ ಜೊತೆ ಮಾತನಾಡಲು ಶುರು ಮಾಡುತ್ತಾಳೆ. ಶ್ರೀ ಅವರೇ ನನ್ನ ಅಮ್ಮ ಬಹಳಷ್ಟು ಕೊಂಡುಕೊಂಡಿದ್ದಾರೆ. ಆಕೆಗೆ ನನ್ನ ಮೇಲೆ ಬಹಳಷ್ಟು ಕೋಪ ಇದೆ. ನಾನು ನನ್ನ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆ ಯಾವುದೇ ನೋವು ಆಗದ ಹಾಗೆ ನೋಡಿಕೊಳ್ಳಬೇಕು. ಇಲ್ಲವಾದರೆ ಅಮ್ಮನಿಗೆ ಬಹಳಷ್ಟು ಕೋಪ ಬರಬಹುದು. ಆಕೆಗೆ ನೋವು ಆಗಬಹುದು. ಆದ ಕಾರಣ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು . ನಾನು ಅತ್ತೆಗೆ ಇದೂವರೆಗೆ ಬಹಳ ಕಷ್ಟ ಕೊಟ್ಟಿದ್ದೇನೆ. ಆದರೆ ಇನ್ನಷ್ಟು ಕಷ್ಟ ನನ್ನಿಂದ ಆಗುವುದು ನನಗೆ ಇಷ್ಟ ಇಲ್ಲ ಎಂದು ಅಳುತ್ತಾ ಹೇಳುತ್ತಾಳೆ.

ಕಂಠಿ ಜೊತೆ ಅಳಲು ತೋಡಿಕೊಂಡ ಸ್ನೇಹಾ

ನಾನು ಇನ್ಮೇಲೆ ನನ್ನ ಅತ್ತೆಗೆ ಸರಿಯಾಗಿ ಬದುಕುತ್ತೇನೆ ಇದರಿಂದ ಎಲ್ಲರಿಗೂ ಒಲಿತಾಗಲಿದೆ ಎಂದು ಅಳುತ್ತಾ ಕಂಠಿಯನ್ನೂ ತಬ್ಬಿಕೊಳ್ಳುತ್ತಾಳೆ. ಕಂಠಿ, ಸ್ನೇಹಾ ದುಃಖ ನೋಡಲಾಗದೆ ಬಹಳ ನೋವು ಅನುಭವಿಸುತ್ತಾನೆ. ಇತ್ತ ಕಂಠಿಯ ಬಳಿ ಸ್ನೇಹಾ ಹೇಳುತ್ತಿರುವುದನ್ನು ಬಂಗಾರಮ್ಮ ಮರೆಯಲ್ಲಿ ಕುಳಿತು ಕೇಳಿಸಿಕೊಂಡು ಇರುತ್ತಾರೆ. ಬಂಗಾರಮ್ಮನಿಗೆ ಕೂಡ ಸ್ನೇಹಾ ಮೇಲೆ ನಿಧಾನವಾಗಿ ಪ್ರೀತಿ ಮೂಡುತ್ತಿದೆ.

ಸ್ನೇಹಾ ಮಾತನ್ನು ಕೇಳಿಸಿಕೊಂಡ ಬಂಗಾರಮ್ಮ

ಆಕೆಗೆ ಸ್ನೇಹಾ ಪರಿಸ್ಥಿತಿ ಅರ್ಥ ಆಗುತ್ತಿದೆ. ಇತ್ತ ಬೆಳಗ್ಗೆ ಎದ್ದ ಸ್ನೇಹಾ ರಂಗೋಲಿ ಹಾಕುತ್ತಿರುತ್ತಾಳೆ. ಆಕೆ ರಂಗೋಲಿ ಇಡುವ ವೇಳೆ ಬಂಗಾರಮ್ಮ ಮಹಡಿ ಮೇಲಿಂದ ನಿಂತು ನೋಡುತ್ತಾಳೆ. ಸ್ನೇಹಾನನ್ನು ನೋಡಿದ ಬಂಗಾರಮ್ಮಗೆ ಬಹಳ ಖುಷಿ ಆಗುತ್ತದೆ. ಎಲ್ಲರೂ ಊಟಕ್ಕೆ ಕುಳಿತಿರುವ ವೇಳೆ ಸ್ನೇಹಾ ರಾಧಾ ಜೊತೆ ಹೇಳುತ್ತಾಳೆ. ರಾಧಾ ನೀನೇ ಎಲ್ಲರಿಗೂ ಬಡಿಸು ಎಂದು ಹೇಳಿ ಅಲ್ಲಿಂದ ಹೋಗುವಾಗ ಬಂಗಾರಮ್ಮ ಹೇಳುತ್ತಾಳೆ. ಅದೇನೋ ಯಾವತ್ತೂ ರಾಧನೇ ಬಡಿಸಬೇಕ. ನಿನಗೆ ಬಡಿಸಲು ಆಗುವುದು ಇಲ್ವಾ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಅನ್ನ ಬಡಿಸಿ ಸಾರು ಬಡಿಸಬೇಕು ಎನ್ನುವಷ್ಟರಲ್ಲಿ ಬಂಗಾರಮ್ಮ ಅವರ ಕೈಯ ಮೇಲೆ ಸಾರು ಚೆಲ್ಲಿ ಬಿಡುತ್ತದೆ.

Puttakkana Makkalu serial May 10th episode update

ಸಹನಾಗೆ ಸಿಕ್ಕಿದೆ ಉತ್ತಮ ಅವಕಾಶ

ಸಹನಾಗೆ ಇದೀಗ ದೇವಾಲಯವೇ ಮನೆಯಾಗಿದೆ. ಆಕೆಗೆ ದೇವಾಲಯದಲ್ಲಿ ಒಂದು ಹೊತ್ತಿನ ಊಟ ಅಷ್ಟೇ. ಇದೀಗ ಒಂದು ಕಾರ್ಯಕ್ರಮಕ್ಕಾಗಿ ದೇವಾಲಯದ ಅರ್ಚಕರು 150 ಜನರಿಗೆ ಪ್ರಸಾದ ಮಾಡಲು ಕೆಲವು ಜನರಿಗೆ ಹೇಳಿದ್ದರು. ಆದರೆ, ಅವರು ಸಡನ್ ಆಗಿ ಬರುವುದಿಲ್ಲ ಎಂದು ಹೇಳಿದ್ದಾರೆ. ನಮಗೆ ಇದೀಗ ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎಂದು ಸಹನಾ ಬಳಿ ಅರ್ಚಕರು ಅಳಲು ತೋಡಿಕೊಳ್ಳುತ್ತಾ ಇರುತ್ತಾರೆ. ಇದನ್ನು ಕೇಳಿದ ಸಹನಾ ನಾನೇ ಮಾಡಿಕೊಡುವುದಾಗಿ ಒಪ್ಪಿಕೊಳ್ಳುತ್ತಾರೆ. ಸಹನಾಗೆ ಕೂಡ ಒಂದು ಕೆಲಸ ಸಿಕ್ಕಿದ ಹಾಗೆ ಆಗುತ್ತದೆ. ಆಕೆ ತಾನು ಏನಾದರು ಒಂದು ಸಾಧನೆ ಮಾಡಬೇಕು ಎಂದು ಬಹಳ ಆಸೆಪಟ್ಟಿದ್ದಾರೆ. ಆದರೆ, ಇದೀಗ ಆ ಆಸೆಗೆ ಜೀವ ಬಂತಾಗಿದೆ. ಪುಟ್ಟಕ್ಕ ಮಾತ್ರ ತನ್ನ ಮಗಳು ಇನ್ನೂ ಇಲ್ಲ ಎಂದೇ ಬಹಳ ನೋವು ತುಂಬಿಕೊಂಡು ಇರುತ್ತಾಳೆ. ಸಹನಾ ಇಲ್ಲದೆ ಹೇಗೆ ಬದುಕಲಿ ನಾನು ಎಂದು ಅಳುತ್ತಾರೆ.

More from Filmibeat

English summary
Puttakkana Makkalu serial May 10th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X