Puttakkana Makkalu:ಮಗಳ ಚಿಂತೆಯಲ್ಲಿರೋ ಪುಟ್ಟಕ್ಕಗೆ ಸಮಾಧಾನ ಮಾಡೋದಾದ್ರೂ ಹೇಗೆ?

By ಪೂರ್ವ

ಮುರಳಿ ತನ್ನ ಬಾಳ ಸಂಗಾತಿಯನ್ನು ಕಳೆದುಕೊಂಡ ದುಃಖದಲ್ಲಿ ಇದ್ದಾನೆ. ಆತನಿಗೆ ಸಹನಾ ಜೊತೆ ಇರಬೇಕಾದರೆ ಆಕೆಯ ಬೆಲೆ ತಿಳಿಯಲಿಲ್ಲ. ಆದರೆ, ಇದೀಗ ಸಹನಾ ಬೇಕು ಎಂದು ಇದ್ದರೂ ಆಕೆ ಇಲ್ಲ. ಸಹನಾಗೆ ಮುರಳಿ ಎಂದರೆ ಬಹಳ ಇಷ್ಟ. ಆದರೂ ಇದೀಗ ಮುರಳಿಯನ್ನು ಒಬ್ಬೊಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಸಹನಾಗೆ ಮುರಳಿ ಮೇಲೆ ತುಂಬಾನೇ ಬೇಸರವಿದೆ. ಆದರೆ, ಯಾವುದನ್ನೂ ಯಾರ ಜೊತೆಯೂ ಹೇಳಿಕೊಳ್ಳುವುದು ಇಲ್ಲ. ಅದರ ಜೊತೆ ಜೊತೆಗೆ ಪ್ರೀತಿಯೂ ಇದೆ.

ಮುರಳಿ, ಸಹನಾ ಎದುರಲ್ಲಿಯೇ ಹೇಳಿದ್ದ "ನಾನು ವಿನುತಳನ್ನು ಮದುವೆ ಆಗಬೇಕು ಎಂದುಕೊಂಡಿದ್ದೇನೆ. ನನಗೆ ವಿಚ್ಛೇದನ ಬೇಕು" ಎಂದು ಮುರಳಿ ಹೇಳಿದ್ದ. ಮುರಳಿಯ ಈ ವರ್ತನೆಯಿಂದ ಕೊಂಚ ಮಟ್ಟಿಗೆ ಸಹನಾ ಬೇಸರ ಪಟ್ಟುಕೊಂಡಿದ್ದಳು. ಆಕೆಗೆ ಚಿಕ್ಕ ವಯಸ್ಸಿನಿಂದಲೂ ನೋವನ್ನುಂಡು ಬೆಳೆದಿರುತ್ತಾಳೆ. ತನ್ನ ತಂಗಿಯರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾಳೆ. ಆದರೆ, ಅತಿಯಾಗಿ ಕಾಳಜಿ ಮಾಡಿದ ಗಂಡನೇ ದೂರ ಮಾಡಿದರೆ ? ಆದರೂ ತನ್ನ ನೋವನ್ನು ಯಾರ ಜೊತೆಯೂ ಹೇಳದೆ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆ.

Puttakkana Makkalu serial May 14th episode update

ಇನ್ನೂ ಮುರಳಿ, ಸಹನಾ ಇಲ್ಲದೆ ಕುಡಿತದ ಚಟಕ್ಕೆ ಬಿದ್ದಿರುತ್ತಾನೆ. ಆತನಿಗೆ ಸಹನಾ ಏನು ಎಂಬುವುದು ಇದೀಗ ಅರ್ಥ ಆಗುತ್ತಿದೆ. ಮುರಳಿಯ ಸ್ಥಿತಿ ಕಂಡ ಸ್ನೇಹಾ ಹಾಗೂ ಕಂಠಿ ಆತನ ಬಳಿಗೆ ಬಂದು ಸಮಾಧಾನ ಮಾಡುತ್ತಾರೆ. ಮುರಳಿ ಬಳಿ ಬಂದು ಕಂಠಿ "ಮೇಷ್ಟ್ರೇ ನೀವು ಇತ್ತೀಚೆಗಿನ ದಿನಗಳಲ್ಲಿ ಅತಿಯಾಗಿ ಮಧ್ಯ ಸೇವನೆ ಮಾಡುತ್ತಿದ್ದೀರಿ. ಇದನ್ನು ಕೊಂಚ ಕಡಿಮೆ ಮಾಡಿ" ಎಂದು ಹೇಳುತ್ತಾನೆ.

ಸಹನಾ ಮಾತನ್ನು ನೆನೆದು ಮುರಳಿ ಕಣ್ಣೀರು

"ಸಹನಾ ಹೋದ ಬಳಿಕ ನನ್ನ ಜೀವನ ನಶ್ವರವಾಗಿ ಆಗಿ ಬಿಟ್ಟಿದೆ. ಜೀವನದಲ್ಲಿ ನಾನು ಬಹಳ ನೊಂದಿದ್ದೇನೆ. ನನ್ನ ಹೆತ್ತವರೇ ನನಗೆ ಮೋಸ ಮಾಡಿದರು. ನನ್ನ ಹೆಂಡತಿ ಆಕೆಗೆ ಆಗುತ್ತಿದ್ದ ಕಷ್ಟ ಬಂದು ಹೇಳುತ್ತಿದ್ದಳು. ಆದರೆ ನಾನು ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಸುಮ್ಮನಿರುತ್ತಿದೆ. ಕಂಠಿ, ಸ್ನೇಹಾ ನೀವು ಕೂಡ ಪ್ರೀತಿ ಮಾಡಿ ಮದುವೆ ಆದವರು. ಹಾಗೆಯೇ ನಾನು ಸಹನಾ ಅವರನ್ನು ಪ್ರೀತಿ ಮಾಡಿ ಮದುವೆ ಮಾಡಿಕೊಂಡೆ. ಆದರೆ, ಆಕೆಗೆ ನಾನು ಬರೀ ನೋವು ಮಾತ್ರ ಕೊಟ್ಟೆ. ನನ್ನದು ನಿಜವಾದ ಪ್ರೀತಿ ಅಲ್ಲ. ನಿಮ್ಮದು ನಿಜವಾದ ಪ್ರೀತಿ" ಎಂದು ಕಣ್ಣೀರು ಇಡುತ್ತಾನೆ.

Puttakkana Makkalu serial May 14th episode update

ಮುರಳಿಗೆ ಸಮಾಧಾನ ಮಾಡಿದ ಕಂಠಿ

ದೇವಿಪುರದಲ್ಲಿ ಬಹಳ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಸಹನಾ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಂಧನದಲ್ಲಿ ಇಟ್ಟ ಹಾಗೆ ಆಗಿತ್ತು. ನಾನು ತಪ್ಪು ಮಾಡಿಬಿಟ್ಟೆ ಎಂದು ಬಹಳ ಜೋರಾಗಿ ಅಳುತ್ತಾರೆ. ಇದನ್ನೆಲ್ಲ ನೋಡಿದ ಕಂಠಿ ಸಮಾಧಾನ ಹೇಳುತ್ತಾನೆ. ಆದರೆ, ಎಷ್ಟೇ ಸಮಾಧಾನ ಹೇಳಿದರು ಮುರಳಿಗೆ ಮಾತ್ರ ತನ್ನ ಸಹನಾ ನೆನಪು ಇನ್ನಷ್ಟು ಕಾಡುತ್ತಿದೆ. ಆಕೆಯ ಬರುವಿಕೆಗಾಗಿ ಹಂಬಲಿಸುತ್ತಿದ್ದಾರೆ.

ಪುಟ್ಟಕ್ಕನ ಗೋಳು ಹೇಳತೀರದು?

ಇನ್ನೂ ಪುಟ್ಟಕ್ಕ ಮಾತ್ರ ಸಹನಾ ಎಂದು ಕೂಗಿ ಕೂಗಿ ಸೋತು ಹೋಗಿದ್ದಾರೆ. ನನ್ನ ಮಗಳು ಖಂಡಿತವಾಗಿಯೂ ಬಂದೆ ಬರುತ್ತಾಳೆ. ಆಕೆ ನನ್ನನ್ನು ಕರೆದ ಹಾಗಾಯಿತು ಆಕೆಯನ್ನು ನಾನು ಹುಡುಕುತ್ತೇನೆ ಎಂದು ಮಗಳನ್ನು ಹುಡುಕಿಕೊಂಡು ಹೋಗುತ್ತಾಳೆ. ಆದರೆ, ಸಹನಾ ಎಲ್ಲಿಯೂ ಕಾಣಿಸುವುದಿಲ್ಲ. ಪುಟ್ಟಕ್ಕ ಹೋಗುವ ಹಾದಿಯಲ್ಲಿ ಬಂಗಾರಮ್ಮ ಸಿಗುತ್ತಾರೆ. ಬಂಗಾರಮ್ಮನವರು ಪುಟ್ಟಕ್ಕಗೆ ಸಮಾಧಾನ ಮಾಡುವ ಎಲ್ಲಾ ಪ್ರಯತ್ನ ಮಾಡುತ್ತಾರೆ. ಆದರೆ ಪುಟ್ಟಕ್ಕಗೆ ಸಹನಾ ಬೇಕು. ಆಕೆಗೆ ಏನು ಆಗಿಲ್ಲ ಎಂದು ಜೋರಾಗಿ ಚೀರ ತೊಡಗುತ್ತಾಳೆ. ಇದನ್ನು ನೋಡಿದ ಬಂಗಾರಮ್ಮ ಜೋರಾಗಿಯೇ ಪುಟ್ಟಕ್ಕ ಎಂದು ಕರೆಯುತ್ತಾರೆ. ಆದರೆ ಪುಟ್ಟಕ್ಕ ಮಾತ್ರ ಅದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

More from Filmibeat

English summary
Puttakkana Makkalu serial May 14th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X