Puttakkana Makkalu: ಒಂದಾದ ಪುಟ್ಟಕ್ಕ , ಸ್ನೇಹಾ , ಬಂಗಾರಮ್ಮ; ಮತ್ತೆ ರಾಧಾಳ ಪಿತೂರಿ ಶುರು!

By ಪೂರ್ವ

ಪುಟ್ಟಕ್ಕನಿಗೆ ಬಂಗಾರಮ್ಮ ತಿಳಿ ಹೇಳುತ್ತಾರೆ. ಸ್ನೇಹಾ ನಿನ್ನ ಬಗ್ಗೆ ಜೀವವನ್ನೇ ಇಟ್ಟುಕೊಂಡು ಇದ್ದಾಳೆ. ಆಕೆಗೆ ನೀನೆಂದರೆ ಬಹಳ ಪ್ರೀತಿ. ಆದರೆ ನೀನು ಆಕೆಗೆ ಬಹಳ ನೋವು ಮಾಡಿದ್ದೀಯಾ. ಆ ನೋವಿನಲ್ಲಿ ಇರುವ ಸ್ನೇಹಾ ಮನೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಳು. ಹಾಗೆಯೇ ನನ್ನ ತಾಯಿ ಏನೇ ಹೇಳಿದರೂ ಅದನ್ನು ಕೇಳಿಕೊಂಡು ಇರುತ್ತೇನೆ ಎಂದು ಹೇಳಿದ್ದಳು. ನಿನಗೆ ನೋವು ಆಗಬಾರದು ಎಂದು ಎಲ್ಲರ ಜೊತೆಗೆ ಬಹಳ ಖುಷಿಯಿಂದ ಇರಲು ಪ್ರಯತ್ನ ಮಾಡುತ್ತಿದ್ದಾಳೆ ಎಂದು ಪುಟ್ಟಕ್ಕಗೆ ಬಂಗಾರಮ್ಮ ಹೇಳುತ್ತಾರೆ.

ಪುಟ್ಟಕ್ಕ, ಸಹನಾ ಬಗ್ಗೆ ಎಷ್ಟೇ ಯೋಚನೆ ಮಾಡಿದರು ಆಕೆ ಇನ್ನೂ ಬರುವುದಿಲ್ಲ. ಸಹನಾ ಬಗ್ಗೆ ಯೋಚನೆ ಮಾಡುವುದಕ್ಕಿಂತ ಇನ್ನೂ ಇಬ್ಬರ ಬಗ್ಗೆ ಯೋಚನೆ ಮಾಡುವುದು ಸರಿ ಅಲ್ವಾ. ಎಂದೆಲ್ಲ ಸಮಾಧಾನ ಮಾಡಿದಾಗ ಸ್ನೇಹಾಗೆ ಹೇಳಿದ ಮಾತುಗಳು ಪುಟ್ಟಕ್ಕಗೆ ನೆನಪಾಗಿ ಕಾಡುತ್ತದೆ. ಇನ್ನೂ ಬಂಗಾರಮ್ಮ ಮನೆಗೆ ಹೋದ ಬಳಿಕ ಪುಟ್ಟಕ್ಕ ಮನೆಯ ಕಡೆಗೆ ಹೆಜ್ಜೆ ಹಾಕುತ್ತಾರೆ. ಅಲ್ಲಿ ಸ್ನೇಹಾ ಮೆಸ್ ಅನ್ನು ಕ್ಲೀನ್ ಮಾಡಿ ಇಟ್ಟಿರುತ್ತಾರೆ. ಪುಟ್ಟಕ್ಕಗೆ ಮೆಸ್ ಎಂದರೆ ಪಂಚ ಪ್ರಾಣ.

Puttakkana Makkalu serial May 16th episode update

ಮೆಸ್‌ನಲ್ಲಿ ಇದ್ದರೆ, ಆಕೆಗೆ ಯಾವ ಯೋಚನೆಯೂ ಬರುವುದಿಲ್ಲ. ಆಕೆಗೆ ಇನ್ನೂ ಮುಂದೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಿರುತ್ತಾಳೆ. ಹಾಗೆಯೇ ಸಹನಾ ಅಕ್ಕನ ಸ್ಥಾನವನ್ನು ಇನ್ನೂ ಮುಂದೆ ನಾನೇ ತುಂಬಬೇಕು. ಅವ್ವನಿಗೆ ನೋವು ಆಗದ ರೀತಿ ಆಕೆಯನ್ನು ನೋಡಿಕೊಳ್ಳಬೇಕು. ಆಕೆ ಯಾವತ್ತಿದ್ದರೂ ನಗುತ್ತಿರಬೇಕು ಎಂದಾಗ ಸುಮಾ ಹೇಳುತ್ತಾಳೆ. ಅವ್ವ ನೆಮ್ಮದಿಯಾಗಿ ಇರುವುದನ್ನು ನಾನು ನೋಡಿಲ್ಲ. ಆಕೆಗೆ ಪದೇ ಪದೆ ಕಷ್ಟಗಳೇ ಎದುರು ಬರುತ್ತಿದ್ದವು. ಆಗ ನಾನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ಅಮ್ಮನಿಗೆ ಮೆಸ್‌ನಲ್ಲಿಯೇ ಹೆಚ್ಚಾಗಿ ಖುಷಿ ಸಿಗುವುದು ಎಂದು ಈಗಲೇ ನನಗೆ ತಿಳಿಯಿತು ಎಂದು ಹೇಳುತ್ತಿರುವಾಗ ಅಲ್ಲಿಗೆ ಬಂದ ಪುಟ್ಟಕ್ಕ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿರುತ್ತಾರೆ.

ಎಲ್ಲಾ ಮರೆತು ಅಮ್ಮನನ್ನು ಅಪ್ಪಿಕೊಂಡ ಸ್ನೇಹಾ

ಅವ್ವನನ್ನು ನೋಡಿದ ಸ್ನೇಹಾ, ನನ್ನನ್ನು ನೋಡಿದರೆ ಅಮ್ಮನಿಗೆ ಇನ್ನಷ್ಟು ಸಿಟ್ಟು ಬರುತ್ತದೆ ಎಂದು ಕೊಂಡು ಸುಮಾ ನಾನು ಆಚೆ ಇರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗಲು ಮುಂದಾಗುತ್ತಾಳೆ. ಆಗ ಪುಟ್ಟಕ್ಕ ಸ್ನೇಹಾನನ್ನು ನಿಲ್ಲಿಸಿ ಮಾತನಾಡುತ್ತಾಳೆ. ಸ್ನೇಹಾ ನಾನು ಮಾತನಾಡಿರುವುದು ನಿನಗೆ ನೋವಾಗಿದೆ ಎಂದು ನನಗೆ ತಿಳಿದಿದೆ. ಆದರೆ, ನಾನು ಇದ್ದ ಪರಿಸ್ಥಿತಿಯಲ್ಲಿ ನನ್ನ ಜೊತೆ ಆ ಮಾತು ಆಡಿಸಿಬಿಟ್ಟಿತು ಎಂದು ಹೇಳಿ ಜೋರಾಗಿ ಅತ್ತು ಬಿಡುತ್ತಾಳೆ. ಸ್ನೇಹಾ ಆಕೆಯ ತಾಯಿಯನ್ನು ಬಿಗಿದಪ್ಪಿ ಅಳುತ್ತಾಳೆ.

Puttakkana Makkalu serial May 16th episode update

ಅವ್ವನ ಮಾತಿಗೆ ಕಣ್ಣೀರಿಟ್ಟ ಸ್ನೇಹಾ

ಹಾಗೆಯೇ ಸ್ನೇಹಾ ಜೊತೆ ಹೇಳುತ್ತಾಳೆ. ನನ್ನನ್ನು ಕ್ಷಮಿಸಿ ಬಿಡು ಸ್ನೇಹಾ. ಸಹನಾ ವಿಷಯದಲ್ಲಿ ನಾನು ನಿನ್ನನ್ನು ಬಹಳ ಬೈದು ಬಿಟ್ಟಿದ್ದೇನೆ. ಎಲ್ಲದಕ್ಕೂ ನೀನೇ ಕಾರಣ ಅಂತ ನಿನ್ನ ಮನಸ್ಸು ನೋಯಿಸಿ ಬಿಟ್ಟೆ ಎಂದಾಗ ಸ್ನೇಹಾ ಅಳುತ್ತಾ ಹೇಳುತ್ತಾಳೆ. "ಅವ್ವ ನಾನು ನಿನಗೆ ಬಹಳ ನೋವು ಮಾಡಿಬಿಟ್ಟೆ. ನಿನ್ನ ಮಾತು ಕೇಳದೆ ನಾನು ನಿನಗೆ ನೋವು ಮಾಡಿದೆ. ನನ್ನನ್ನು ನೀನು ಕ್ಷಮಿಸು" ಎಂದು ಅಳುತ್ತಾಳೆ. "ಅಮ್ಮ ನಿನ್ನನ್ನು ಈ ಪರಿಸ್ಥಿತಿಯಲ್ಲಿ ನೋಡಲು ನನ್ನಿಂದ ಸಾಧ್ಯ ಆಗುತ್ತಿಲ್ಲ. ನನಗೆ ನೀನು ಬೇಕು. ನಮ್ಮನ್ನು ನೀನು ಬಿಟ್ಟು ಹೋಗಬೇಡ. ನನಗೆ ಇರುವುದು ನಿನೊಬ್ಬಳೇ ಅವ್ವ" ಎಂದು ಸುಮಾ ಹೇಳುತ್ತಾಳೆ.

ಅಮ್ಮನ ಮಾತಿಗೆ ಸ್ನೇಹ ಸಮಾಧಾನ

ನಾನು ನಿಮ್ಮನ್ನು ಬಿಟ್ಟು ಇನ್ನೂ ಮೇಲೆ ಎಲ್ಲಿಗೂ ಹೋಗುವುದು ಇಲ್ಲ ಎಂದು ಜೋರಾಗಿ ಅಳುತ್ತಾರೆ. ಇತ್ತ ರಾಧಾ ರಾಜೇಶ್ವರಿ ಮಾತು ಕೇಳಿ ಪಿತೂರಿ ಮಾಡಲು ಶುರು ಮಾಡುತ್ತಾಳೆ. ಸ್ನೇಹಾ ವಿರುದ್ದ ಬಂಗಾರಮ್ಮನನ್ನು ಎತ್ತಿಕಟ್ಟಲು ಇದೀಗ ಶುರುವಾಗಿದೆ. ಇನ್ಮೇಲೆ ಸ್ನೇಹಾ ಈ ಮನೆಗೆ ಬರಬಾರದು ಹಾಗೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇದೆಲ್ಲ ಬಂಗಾರಮ್ಮನ ತಾಯಿಗೆ ತಿಳಿಯುತ್ತದೆ. ರಾಧಾ ಮಾಡುತ್ತಿರುವ ಕಿತಾಪತಿಯಿಂದ ಸ್ನೇಹಾ ಬೆಲೆ ಕಟ್ಟುವ ಹಾಗೆ ಆಗುತ್ತಿದೆ.

More from Filmibeat

English summary
Puttakkana Makkalu serial May 16th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X