Puttakkana Makkalu: ದೇವಿಪುರವನ್ನು ತೊರೆದ ಸಹನಾ; ತಡೆಯಲಾಗದೆ ಕೈ ಚೆಲ್ಲಿ ಕುಳಿತ ಕಾಳಿ
ಪುಟ್ಟಕ್ಕ ಗೆ ಸಹನಾ ಎಲ್ಲಿ ಭಾರ ಆಗಿ ಬಿಡುತ್ತಾಳೆ ಎನ್ನುವ ಭಯ. ಸಹನಾ ಗಂಡನ ಮನೆಯಲ್ಲಿ ಹಾಯಾಗಿ ಇರಬೇಕು. ಆಕೆ ಜೀವನದಲ್ಲಿ ಬಹಳ ಖುಷಿಯಾಗಿರಬೇಕು. ಮುರಳಿಯ ಜೊತೆ ಸುಖವಾದ ಸಂಸಾರವನ್ನು ನಡೆಸಬೇಕೆಂದು ಪುಟ್ಟಕ್ಕ ತನ್ನ ಕನಸನ್ನು ಹಂಚಿಕೊಂಡಿದ್ದರು.
ಆದರೆ ಆ ಕನಸುಗಳೆಲ್ಲ ಇದೀಗ ನುಚ್ಚು ನೂರಾಗುತ್ತಿದೆ. ಪುಟ್ಟಕ್ಕಗೆ ತನ್ನ ಮಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಕೂಡ ಆಗುತ್ತಿಲ್ಲ. ಸಹನಾ ಮನಸ್ಸಲ್ಲಿ ಏನೆಲ್ಲಾ ಓಡಾಡುತ್ತಿದೆ ಎನ್ನುವುದು ಕೂಡ ಪುಟ್ಟಕ್ಕನಿಗೆ ಅರ್ಥ ಆಗುತ್ತಿಲ್ಲ. ಆದರೆ, ಸಹನಾ ಮಾತ್ರ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.

"ಏನೇ ಆಗಲಿ ತವರು ಮನೆಗೆ ಭಾರವಾಗಿ ನಾನು ಬದುಕಲಾರೆ. ನಾನು ಏನಾದರೂ ಸಾಧಿಸಿ ತೋರಿಸುತ್ತೇನೆ. ಅಮ್ಮ ನನ್ನನ್ನು ದಯವಿಟ್ಟು ಕ್ಷಮಿಸು" ಎಂದು ಸಹನಾ ಮನಸ್ಸಿನಲ್ಲಿಯೇ ಕೇಳಿಕೊಳ್ಳುತ್ತಾಳೆ. ಪುಟ್ಟಕ್ಕ, ಸಹನಾಳನ್ನು ಹೇಗಾದರೂ ಮನವೊಲಿಸಿ ಆಕೆಯ ಜೀವನವನ್ನು ಸರಿಪಡಿಸಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆದರೆ, ಅದಕ್ಕೆ ಮಾತ್ರ ಸಹನಾ ಒಪ್ಪುತ್ತಿಲ್ಲ. ಯಾವುದೇ ಕಾರಣಕ್ಕೂ ನಾನು ಮರಳಿ ಜೊತೆ ಬದುಕುವುದಿಲ್ಲ. ಆತ ನನ್ನ ನೋಡಿಕೊಂಡಿರುವ ರೀತಿ, ನಾನು ಇದ್ದು ಸತ್ತಂತೆ. ಬದುಕಿದ ನನ್ನ ಪಾಡು ಇದೆಲ್ಲವನ್ನು ನೋಡಿದಾಗ ನಾನು ಯಾಕೆ ಒಬ್ಬಂಟಿಯಾಗಿ ಬದುಕಬಾರದು ಎನ್ನುವುದು ಸಹನ ವಾದ.
ಇನ್ನೂ ಸಹನಾ ಅಳುತ್ತಾ ಪುಟ್ಟಕ್ಕನ ಮನೆಯ ತೊರೆಯುತ್ತಾಳೆ. ಪುಟ್ಟಕ್ಕನಿಗೆ ಸಹನಾ ಮನೆ ಬಿಟ್ಟು ಹೋಗುತ್ತಾಳೆ ಎನ್ನುವ ಪರಿವೇ ಇಲ್ಲದೆ ಗಾಢವಾದ ನಿದ್ದೆಗೆ ಜಾರಿರುತ್ತಾರೆ. ಇಂತಹ ಸಮಯದಲ್ಲಿ ನೇರವಾಗಿ ಬಸ್ ಸ್ಟ್ಯಾಂಡಿಗೆ ಹೋಗುತ್ತಾಳೆ. ಅಲ್ಲಿ ಬಸ್‌ಗಾಗಿ ಕಾಯುತ್ತಿರುವಾಗ ಕಂಠಿ, ರಸ್ತೆಯಲ್ಲಿಯೇ ಪಾಸ್ ಆಗುತ್ತಾರೆ. ಕಂಠಿಯನ್ನು ನೋಡಿದ ಸಹನಾ ಒಂದು ಮರದ ಬದಿಗೆ ಬಂದು ಅವಿತು ಕುಳಿತುಕೊಳ್ಳುತ್ತಾಳೆ. ಆಕೆಗೆ ಕಂಠಿಯನ್ನು ನೋಡಿ ಬಹಳ ಅಳು ಬರುತ್ತದೆ. ನನ್ನನ್ನು ಕ್ಷಮಿಸಿಬಿಡಿ ಎಂದು ಜೋರಾಗಿ ಅಳುತ್ತಾಳೆ. ಆ ವೇಳೆಗೆ ಅಲ್ಲಿಗೆ ಕಾಳಿ ಬರುತ್ತಾನೆ. ಆತನಿಗೆ ತನ್ನ ಮೇಲೆ ಸ್ಥಿಮಿತ ಇರುವುದಿಲ್ಲ.
ಅಳುತ್ತಾ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ ಸಹನಾ
ಬಸ್ ಸ್ಟ್ಯಾಂಡಿನಲ್ಲಿ ಸಹನಾ ಅಳುತ್ತಾ ನಿಂತಿರುವುದನ್ನ ನೋಡಿ ಇದೇನಪ್ಪಾ ಸಹನಾ ಇಲ್ಲಿ ನಿಂತಿದ್ದಾಳೆ ಎಂದು ಆಲೋಚನೆ ಮಾಡುತ್ತಾನೆ. ಪುನಃ ಪುನಃ ಸಹನಾ ನೋಡಿ, ಇದು ಬೇರೆ ಯಾರು ಅಲ್ಲ ಸಹನಾನೇ ಎಂದು ಅವಳ ಬಳಿಗೆ ಹೋಗುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಸ್ ಬರುತ್ತದೆ. ಸಹನಾ ಆ ಬಸ್ ಅನ್ನು ಹತ್ತುತ್ತಾಳೆ.
ಸಹನಾಳನ್ನು ನೋಡಿ ತಬ್ಬಿಬ್ಬಾದ ಕಾಳಿ
ಸಹನಾಗೆ ಬಸ್ ಹತ್ತಿವಾಗ ಬಹಳ ಬೇಸರ ಆಗುತ್ತದೆ. ಯಾಕೆ, ಮತ್ತೊಂದು ದೇವಿಪುರಕ್ಕೆ ಬರುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಸ್ಸನ್ನ ಏರಿ, ಅಲ್ಲಿಂದ ಹೊರಟು ಹೋಗುತ್ತಾಳೆ. ಇದೆಲ್ಲವನ್ನು ನೋಡಿದ ಕಾಳಿ ಮಾತ್ರ ಸಹನಾ ಎಲ್ಲಿಗೆ ಹೋಗುತ್ತಿರುವುದು ಎಂದು ಮನಸ್ಸಿನೊಳಗೆ ಪ್ರಶ್ನೆ ಮಾಡುತ್ತಾಳೆ.
ಸ್ನೇಹಾಗೆ ಅಕ್ಕನದ್ದೇ ಚಿಂತೆ
ಸ್ನೇಹಾಗೆ ತನ್ನ ಅಕ್ಕನದ್ದೇ ಚಿಂತೆ. ನನ್ನ ಅಕ್ಕ ಎಲ್ಲರ ಹಾಗೆ ಖುಷಿಯಾಗಿ ಇರಬೇಕು ಎನ್ನುವ ಆಸೆ. ಆದರೆ, ಆ ಆಸೆಗೆ ಇದೀಗ ತಣ್ಣೀರು ಎರಚಿದ ಹಾಗೆ ಆಗಿದೆ. ಸಹನಾ ಎಲ್ಲರನ್ನೂ ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಸಹನಾಗೆ ಏನಾದರೂ ಸಾಧಿಸಬೇಕು ಎನ್ನುವ ಛಲ. ಇದನ್ನು ನೋಡಿದ ವೀಕ್ಷಕರು ಮಾತ್ರ ಸಹನಾ ಬೆಂಬಲಕ್ಕೆ ನಿಂತಿದ್ದಾರೆ.


Click it and Unblock the Notifications











