Puttakkana Makkalu:ಸ್ನೇಹಾ ಮೇಲೆ ಕೈ ಮಾಡಲು ಹೋದ ರಾಜಿಗೆ ಪಾಠ ಕಲಿಸಿದ ಬಂಗಾರಮ್ಮ!

By ಪೂರ್ವ

ಪುಟ್ಟಕ್ಕನ ಮನೆಯಲ್ಲಿ ರಾಜೇಶ್ವರಿ ದರಬಾರು ಕೊಂಚ ಜೋರಾಗಿಯೇ ನಡೆಯುತ್ತಿದೆ. ಸಹನಾ ನಾನು ಯಾವುದೇ ಮನೆಯ ಪತ್ರವನ್ನು ಅಡ ಇಟ್ಟಿಲ್ಲ. ಹಾಗೆಯೇ ಯಾರ ಬಳಿಯೂ ಕೈ ಚಾಚಿ ಹಣವನ್ನು ಇದುವರೆಗೂ ಕೇಳಿಲ್ಲ. ಅದಲ್ಲದೆ ಅತ್ತೆಯ ಮನೆಯಲ್ಲಿರುವ ಆಸ್ತಿಯ ಪತ್ರ ಗಳನ್ನು ನಾನು ಯಾಕೆ ತೆಗೆದುಕೊಂಡು ಅಡ ಇಡಬೇಕು ಎಂದಾಗ, ರಾಜಿ ಬಹಳ ಕೋಪಗೊಳ್ಳುತ್ತಾಳೆ. ಆಗ ಪುಟ್ಟಕ್ಕನ ಮನೆಯೆಲ್ಲಾ ಜಾಲಾಡುತ್ತಾಳೆ. ಆಕೆಗೆ ಪುಟ್ಟಕ್ಕನ ಮನೆಯಲ್ಲಿ ಆಸ್ತಿ ಪತ್ರ ಇಟ್ಟಿರುವ ನೆನಪು. ಆದರೆ, ಆಕೆ ಇಟ್ಟಜಾಗದಲ್ಲಿ ಹುಡುಕಿದರೆ ಅಲ್ಲಿ ಆಸ್ತಿ ಪತ್ರ ಕಾಣಿಸುವುದು ಇಲ್ಲ.

ಇದರಿಂದ ಕುಪಿತಗೊಂಡ ರಾಜೇಶ್ವರಿ, ಮನೆ ಮಂದಿ ಎಲ್ಲಾ ಸೇರಿ ಆಸ್ತಿ ಪತ್ರವನ್ನು ಎಲ್ಲೋ ಒಂದು ಕಡೆ ಬಚ್ಚಿಟ್ಟಿದ್ದಾರೆ ಎಂದು ಜೋರಾಗಿ ಗೋಪಾಲನ ಬಳಿ ಕೂಗಾಡುತ್ತಾಳೆ. ಆದರೆ ಗೋಪಾಲ, ಈ ಮನೆಯಲ್ಲಿ ಆಸ್ತಿ ಪತ್ರ ಇದೆ ಎಂದು ಅಷ್ಟು ಖಡಾಖಂಡಿತವಾಗಿ ಹೇಳುತ್ತಿಯಾ ? ಅದು ಹೇಗೆ ನೀನು ಅಲ್ಲಿಯೇ ಇದೆ ಎಂದು ಹೇಳುತ್ತಿಯಾ? ಎಂದು ಕೊಂಚ ಅನುಮಾನದಿಂದ ಕೇಳುತ್ತಾರೆ. ಗೋಪಾಲನ ಮಾತಿಗೆ ರಾಜಿಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ. ಆಕೆ ಏನು ಮಾತನಾಡದೆ ಸುಮ್ಮನೆ ಆಗುತ್ತಾಳೆ.

Puttakkana Makkalu serial May 22nd episode update

ಅಮ್ಮಾವರೇ ಆಸ್ತಿ ಪತ್ರ ಎಲ್ಲಾ ಹುಡುಕಿದೆವು. ಆದರೆ, ಎಲ್ಲೂ ಕಾಣುತ್ತಿಲ್ಲ ಎಂದಾಗ, ಬಂಗಾರಮ್ಮ "ಹಾಗಾದರೆ ಅದು ಹೇಗೆ ನೀವು ಅಲ್ಲಿಯೇ ಇದೆ ಎಂದು ಹೇಳುತ್ತೀರಾ? ರಾಜೀ ನೀನು ನನ್ನ ಹಾಗೂ ಪುಟ್ಟಕ್ಕನ ವಿರುದ್ದ ಷಡ್ಯಂತ್ರ ಹೂಡುತ್ತಿದ್ದಿಯಾ? ನಾನು ಮತ್ತು ಪುಟ್ಟಕ್ಕ ಸ್ನೇಹಿತರು ಇಂತಹ ನೂರು ತಂತ್ರಗಳನ್ನು ನೀವು ಮಾಡಿದರು ನಮ್ಮ ಸ್ನೇಹಾ ಯಾವತ್ತೂ ಹೀಗೆಯೇ ಇರುತ್ತದೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಮಾತ್ರ ಬಹಳ ಖುಷಿ ಪಟ್ಟರೆ, ರಾಜೀ ಮಾತ್ರ ಒಳಗೊಳಗೇ ಕೋಪದಲ್ಲಿ ಇರುತ್ತಾಳೆ. ಬಂಗಾರಮ್ಮನ ಎದುರು ಸ್ನೇಹ ಬಗ್ಗೆ ಇಲ್ಲ ಸಲ್ಲದ್ದನ್ನೆಲ್ಲ ಮಾತನಾಡುತ್ತಾಳೆ.

ರಾಜಿಯ ಮಾತಿಗೆ ಸ್ನೇಹಾ ಉತ್ತರ

ಆಕೆಯ ಮಾತಿಗೆ ಕೋಪಗೊಂಡ ಬಂಗಾರಮ್ಮ ಏನು ಮಾಡದೇ ಇರುವುದನ್ನು ನೋಡಿದ ರಾಜೀ ಇನ್ನೂ ಸ್ನೇಹಾ ಮೇಲೆ ಹರಿಹಾಯುತ್ತಾರೆ. ಸ್ನೇಹಾಗೆ ಪುಟ್ಟಕ್ಕ ಎಂದರೆ ಬಹಳ ಪ್ರೀತಿ. ಇದೇ ವೇಳೆ ಪುಟ್ಟಕ್ಕ "ಯಾಕೆ ರಾಜವ್ವ ಹೀಗೆ ಮಾತನಾಡುತ್ತಿಯಾ? ಹೀಗೆ ಮಾತನಾಡಲು ನಿನಗೆ ಮನಸ್ಸು ಹೇಗೆ ಬರುತ್ತದೆ" ಎಂದು ಹೇಳುತ್ತಾರೆ. ಹಾಗೆಯೇ ಇವತ್ತು ನೀನು ಅದೇನೋ ಆಸ್ತಿ ಪತ್ರ ಇದೆ ಎಂದು ಹೇಳಲು ಬಂದಿದ್ದೀಯಾ? ಆದರೆ, ಅದು ಈಗ ಇಲ್ಲ. ಆದರೂ. ನೀನು ಹಠ ಮಾಡುತ್ತಿದ್ದೀರಾ? ಇಲ್ಲದ್ದನ್ನು ಹೇಗೆ ಹುಡುಕಿಕೊಡುವುದು" ಎಂದಾಗ ಪುಟ್ಟಕ್ಕ ಹೇಳುತ್ತಾರೆ.

ರಾಜೀ ಮಾತಿಗೆ ಕೋಪಗೊಂಡ ಸ್ನೇಹಾ

ಅರೆ ಪುಟ್ಟಕ್ಕ "ನೀನು ಅವರ ಪಾರ್ಟಿ ಸೇರಿಕೊಂಡಿಯ? ಇಷ್ಟರವರೆಗೆ ಆವಯ್ಯ ಮತ್ತು ಸ್ನೇಹಾ ಮಾತನಾಡಿದಳು. ಇದೀಗ ನೀನು ಸೇರಿಕೊಂಡು ಬಿಟ್ಟೆಯ" ಎಂದಾಗ ಸ್ನೇಹಾಗೆ ಸಿಟ್ಟು ಬರುತ್ತದೆ. "ನನ್ನ ಅವ್ವನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸರಿ ಇರುವುದು ಇಲ್ಲ. ಯಾಕೆ ಇದೆಲ್ಲ ನಿನಗೆ ಅರ್ಥ ಆಗುವುದು ಇಲ್ಲ. ನಾನು ಆ ಪತ್ರಗಳನ್ನು ಯಾಕೆ ಅಡ ಇಡಲಿ" ಎಂದಾಗ ರಾಜೀ ಮಾತ್ರ ಇಲ್ಲಸಲ್ಲದ ಮಾತುಗಳನ್ನು ಹೇಳುತ್ತಾಳೆ. ಹಾಗೆಯೇ "ನಿನ್ನಿಂದಾಗಿಯೇ ಎಲ್ಲಾ ಆಗುತ್ತಿದೆ ಕಣೆ ಸ್ನೇಹಾ" ಎಂದಾಗ ಸ್ನೇಹಾ ಕೂಡ ಸುಮ್ಮನೆ ಇರುವುದು ಇಲ್ಲ. ಆಕೆ ಕೊಂಚ ಜೋರಾಗಿಯೇ ಮಾತನಾಡುತ್ತಾಳೆ. ಇದನ್ನು ಕೇಳಿದ ರಾಜೀ ಕೊಂಚ ಮೌನವಾಗಿ ರಾಧಾ ಮುಖ ನೋಡುತ್ತಾಳೆ. ಹಾಗೆಯೇ ಆಕೆ ಸ್ನೇಹಾ ಕೆನ್ನೆಗೆ ಹೊಡೆಯಲು ಸನ್ನೆ ಮಾಡುತ್ತಾಳೆ.

ಸ್ನೇಹಾ ನನ್ನ ಮನೆಯ ಸೊಸೆ ಎಂದ ಬಂಗಾರಮ್ಮ

ರಾಜೀ ಕಾಲು ಕೆರೆದುಕೊಂಡು ಹೋಗಿ ಸ್ನೇಹಾ ಜೊತೆ ಜಗಳ ಮಾಡುತ್ತಾರೆ. ಹಾಗೆಯೇ ಸ್ನೇಹಾಗೆ ಹೊಡೆಯಲು ಮುಂದಾಗುತ್ತಾಳೆ ರಾಜೀ. ರಾಜೇಶ್ವರಿ ನಡವಳಿಕೆ ನೋಡಿದ ಬಂಗಾರಮ್ಮ ಕೋಪಗೊಳ್ಳುತ್ತಾರೆ. ರಾಜೇಶ್ವರಿ ಕೈಯನ್ನು ಹಿಡಿದುಕೊಂಡು ಆಕೆಯ ಕೆನ್ನೆಗೆ ಹೊಡೆಯುತ್ತಾರೆ ಬಂಗಾರಮ್ಮ. "ನೀನು ಏನು ಅಂದುಕೊಂಡು ಇದ್ದೀಯಾ? ಯಾಕೆ ಹೀಗೆಲ್ಲ ನಡೆದುಕೊಳ್ಳುತ್ತಿದ್ದಿಯಾ? ನಿನಗೆ ಎಷ್ಟು ಧೈರ್ಯ. ಆಕೆಯ ಮೇಲೆ ಕೈ ಮಾಡಲು" ಎಂದು ಹೇಳಿ ರಾಜಿಯ ಕೆನ್ನೆಗೆ ಹೊಡೆಯುತ್ತಾರೆ ಬಂಗಾರಮ್ಮ. ಬಂಗಾರಮ್ಮ ಆ ಬಳಿಕ ರಾಜಿಯ ಬಳಿ "ರಾಜಿ, ಸ್ನೇಹಾ ಪುಟ್ಟಕ್ಕನ ಮಗಳು ಮಾತ್ರ ಅಲ್ಲ. ನನ್ನ ಸೊಸೆ. ಈಗ ಆಕೆಯ ಮೇಲೆ ಕೈ ಮಾಡುವ ಅಧಿಕಾರ ಇಲ್ಲ. ಆ ಹಕ್ಕು ಯಾರು ಕೊಟ್ಟಿಲ್ಲ" ಎಂದು ಹೇಳಿದಾಗ ರಾಜಿಗೆ ಶಾಕ್ ಆಗುತ್ತೆ. ಇನ್ನೂ ರಾಧಾ ಬುದ್ದಿ ಅಜ್ಜಿಗೆ ತಿಳಿದು ಹೋಗಿದೆ. ಬಂಗಾರಮ್ಮ ಅವರ ಮನೆ ಪತ್ರವನ್ನು ತೆಗೆದುಕೊಂಡು ಹೋಗಿದ್ದು ರಾಧಾ ಎಂದು ತಿಳಿದಿದೆ. ಆದರೆ ಇದನ್ನೇ ಬಂಗಾರಮ್ಮಗೆ ಇನ್ನೂ ಹೇಳಿಲ್ಲ. ಇನ್ನೂ ಈ ವಿಚಾರ ರಾಧಾಗೂ ತಿಳಿದಿಲ್ಲ.

More from Filmibeat

English summary
Puttakkana Makkalu serial May 22nd episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X