Puttakkana Makkalu:ರಾಧಾ ಕುತಂತ್ರಕ್ಕೆ ತಿರುಮಂತ್ರ ಹಾಕಿದ ಚೌಡವ್ವ; ಕೊನೆಗೂ ಒಂದಾದ ಬಂಗಾರಮ್ಮ-ಸ್ನೇಹಾ
ರಾಧಾ ಏನೇ ಕುತಂತ್ರ ಮಾಡಿದರೂ ಅದು ಬಂಗಾಮ್ಮ ಹಾಗೂ ಸ್ನೇಹಳನ್ನು ಮತ್ತಷ್ಟು ಹತ್ತಿರ ಮಾಡುತ್ತಿದೆ. ರಾಜೀ ರಾಧಾ ಮಾತು ಕೇಳಿ ಬಂಗಾರಮ್ಮನ ಸೊಸೆಯ ಮೇಲೆ ಕೈ ಮಾಡಲು ಹೋಗುತ್ತಾಳೆ. ಆದರ ಪರವಾಗಿ ಆಕೆಗೆ ಸರಿಯಾದ ಶಿಕ್ಷೆ ಆಗುತ್ತದೆ. ಬಂಗಾರಮ್ಮ ತನ್ನ ಸೊಸೆಯ ಮೇಲೆ ಕೈ ಎತ್ತಲು ಎಷ್ಟು ಧೈರ್ಯ. ಆಕೆ ಯಾವತ್ತಿದ್ದರೂ ನನ್ನ ಸೊಸೆಯೇ ಎಂದು ಸರಿಯಾಗಿಯೇ ಚಾಟಿ ಬಿಡುತ್ತಾರೆ.
ಇದರ ಬಳಿಕ ರಾಜಿ ಅಲ್ಲಿಂದ ಹೊರಟು ಹೋಗುತ್ತಾಳೆ. ಹಾಗೆಯೇ ಚೌಡವ್ವ ಅಲ್ಲಿಗೆ ಬರುತ್ತಾರೆ. ಅವರು ಬಂಗಾರಮ್ಮ ಹಾಗೂ ಸ್ನೇಹಾ ಇಬ್ಬರನ್ನೂ ನೋಡಿ ಬಹಳ ಖುಷಿ ಪಡುತ್ತಾರೆ. ಆಕೆಗೆ ಇಬ್ಬರನ್ನೂ ನಾನು ಜೊತೆಗೆ ನೋಡಬೇಕು ಎನ್ನುವ ಆಸೆ ಇರುತ್ತದೆ. ಅದರ ಪ್ರಕಾರವಾಗಿ ಸ್ನೇಹಾ, ಬಂಗಾರಮ್ಮ ಅವರ ಕಾಲಿಗೆ ಬೀಳುತ್ತಾರೆ.

"ಅತ್ತೆ ನನ್ನದು ತಪ್ಪಾಯಿತು. ನನ್ನ ಕ್ಷಮಿಸಿ ಬಿಡಿ. ನಿಮ್ಮ ವಿರುದ್ಧವಾಗಿ ನಾನು ತುಂಬಾ ಸಲ ನಡೆದುಕೊಂಡು ಬಿಟ್ಟೆ. ಇದರಿಂದ ನಿಮಗೆ ಬಹಳ ಬೇಸರವಾಗಿ ಇರುತ್ತದೆ. ನನ್ನನ್ನು ಕ್ಷಮಿಸಿ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಸ್ನೇಹಾಳನ್ನು ಎಬ್ಬಿಸಿ, ಆಕೆಯನ್ನು ತಬ್ಬಿಕೊಳ್ಳುತ್ತಾರೆ. "ನೀನು ಒಳ್ಳೆಯವಳು ಸ್ನೇಹಾ. ನಿನ್ನ ತಾಯಿಗಾಗಿ ನೀನು ಏನು ಬೇಕಾದರೂ ಮಾಡಲು ತಯಾರಿ ಇದ್ದೀಯಾ? ಹೀಗಿರುವಾಗ ನಮಗೆ ನೀನು ಸರಿಯಾದ ಸೊಸೆಯೇ. ಇನ್ಮೇಲೆ ನೀನು ಯಾವತ್ತಿದ್ದರೂ ಬಂಗಾರಮ್ಮನ ಸೊಸೆಯೆ, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ" ಎಂದು ಹೇಳುತ್ತಾರೆ.
ಇದನ್ನು ಕೇಳಿದ ಪುಟ್ಟಕ್ಕ ಇಬ್ಬರ ದೃಷ್ಟಿಯೂ ತೆಗೆದು ಬಿಡುತ್ತಾಳೆ. ಪುಟ್ಟಕ್ಕಗೆ ಖುಷಿಯೋ ಖುಷಿ. ಸಹನಾ ಇನ್ನೂ ಮೇಲೆ ಇಲ್ಲ ಎಂದು ತಿಳಿದು ಪುಟ್ಟಕ್ಕ ಬಹಳ ಕುಗ್ಗಿ ಹೋಗಿದ್ದರು. ಹಾಗೆಯೇ ಸ್ನೇಹಾ ಬದುಕು ಹಾಳಾಗುತ್ತದೆ ಎನ್ನುವ ಭಯವೂ ಆಕೆಗೆ ಇರುತ್ತದೆ. ಆದರೆ, ಇದೀಗ ಬಂಗಾರಮ್ಮ, ಸ್ನೇಹಾ ನನ್ನ ಮನೆಯ ಸೊಸೆ ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ. ಇದರಿಂದ ಪುಟ್ಟಕ್ಕ ಬಹಳ ಖುಷಿಯಲ್ಲಿ ಇರುತ್ತಾಳೆ.
ಮಗಳ ಜೀವನ ನೋಡಿ ಖುಷಿಪಟ್ಟ ಪುಟ್ಟಕ್ಕ
ಇದನ್ನೆಲ್ಲ ನೋಡಿದ ಊರ ಮಂದಿ ಪುಟ್ಟಕ್ಕ ಮೊಗದಲ್ಲಿ ಈಗ ನಾವು ನಗು ಕಂಡೆವು. ಸ್ನೇಹಾ ಹಾಗೂ ಬಂಗಾರಮ್ಮ ಅವರು ಹೀಗೆಯೇ ಖುಷಿಯಾಗಿ ಇರಲಿ, ಹಾಗೆಯೇ ತುಂಬಿದ ಕೊಡ ಯಾವತ್ತೂ ತುಳುಕುವುದಿಲ್ಲ ಎಂದು ಹೇಳುತ್ತಾರೆ. ಇದನ್ನೆಲ್ಲ ಕೇಳಿದ ರಾಧಾಗೆ ತಲೆಕೆಟ್ಟು ಹೋಗುತ್ತದೆ. ಏನು ಮಾಡಬೇಕು ತಿಳಿಯದಾಗುತ್ತದೆ. ತಾನು ಕಂಠಿ ಮಾವನನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆದರೆ, ಇದೀಗ ಎಲ್ಲವೂ ತಲೆಕೆಳಗೆ ಆಗಿ ಬಿಟ್ಟಿದೆ. ಆಡಿದ ನಾಟಕ , ಮಾಡಿದ ಪ್ಲಾನ್ ಎಲ್ಲವೂ ಉಲ್ಟವಾಗಿದೆ.

ಅಜ್ಜಿಯ ಮುಂದೆ ತಲೆ ತಗ್ಗಿಸಿ ನಿಂತ ರಾಧಾ
ಅದು ಅಲ್ಲದೆ ತಾನು ಮಾಡಿದ ಪಿತೂರಿ ಅಜ್ಜಿಗೆ ಕೂಡ ಗೊತ್ತಾಗಿರುವುದರಿಂದ ಏನು ಮಾಡಬೇಕು ಎಂದು ದಿಕ್ಕು ತೋಚಾದಾಗುತ್ತದೆ. ತಾನು ಮಾಡಿದ ಪಿತೂರಿ ಅತ್ತೆಗೆ ತಿಳಿದರೆ ಖಂಡಿತವಾಗಿಯೂ ನನಗೆ ಉಳಿಗಾಲ ಇಲ್ಲ ಎನ್ನುವುದು ಖಚಿತವಾಗಿ ಆಕೆಗೆ ತಿಳಿದಿದೆ. ಹಾಗೆಯೇ ಚೌಡವ್ವ ಪರೋಕ್ಷವಾಗಿ ರಾಧಾಗೆ ವಾರ್ನಿಂಗ್ ಕೂಡ ಮಾಡುತ್ತಾರೆ. ಹಾಗೆಯೇ ಸ್ನೇಹಾ ಬಳಿ ನಿನ್ನ ಅತ್ತೆಯನ್ನು ಯಾರು ಜೈಲಿಗೆ ಹಾಕಿದರು ಎನ್ನುವುದನ್ನು ಪತ್ತೆ ಮಾಡುವುದನ್ನು ನೀನು ಮರೆಯಬೇಡ ಎಂದು ಹೇಳುತ್ತಾರೆ. ಇನ್ನೂ ಬಂಗಾರಮ್ಮ ಹಾಗೂ ಸ್ನೇಹಾ ರಾಧಾ ಮನೆಗೆ ಬರುತ್ತಾರೆ.
ಅವ್ವನನ್ನು ಅಪ್ಪಿಕೊಂಡ ಕಂಠಿ
ಮನೆಗೆ ಬರುತ್ತಿದ್ದ ಹಾಗೆಯೇ ಬಂಗಾರಮ್ಮ ಅಲ್ಲಿ ನಡೆದ ವಿಚಾರವನ್ನು ಕಂಠಿ ಹಾಗೂ ಗಂಡನ ಮುಂದೆ ಹೇಳುತ್ತಾರೆ. ಇದನ್ನೆಲ್ಲ ಕೇಳಿದ ರಾಧಾ ವಾಪಸ್ ಅತ್ತೆಯ ಕಾಲಿಗೆ ಬೀಳುತ್ತಾಳೆ. ಇದನ್ನು ನೋಡಿದ ಬಂಗಾರಮ್ಮ "ಪುಟ್ಟಕ್ಕ ಮಗಳಾಗಿ ನೀನು ನನ್ನ ಅರ್ಥ ಮಾಡಿಕೊಳ್ಳಲು ಇಷ್ಟು ಸಮಯ ಬೇಕಾಯಿತು. ಆದರೂ ಪರವಾಗಿಲ್ಲ ತಡವಾಗಿ ಆದರೂ ನಾನು ಅರ್ಥ ಆದೆ ಅಲ್ವಾ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ಅಮ್ಮನನ್ನು ತಬ್ಬಿಕೊಳ್ಳುತ್ತಾನೆ. ಅಮ್ಮ ನನ್ನನ್ನು ಕ್ಷಮಿಸು ನಿನಗೆ ಏನಾದರು ನೋವು ಮಾಡಿದ್ದರೆ ಎಂದಾಗ ಸ್ನೇಹಾ ಕೂಡ ಅತ್ತೆಯನ್ನು ತಬ್ಬಿಕೊಂಡು ತಪ್ಪಾಯಿತು ಎಂದು ಹೇಳುತ್ತಾರೆ. ಇದನ್ನು ನೋಡಿದ ಬಂಗಾರಮ್ಮ ಖುಷಿಯಿಂದ ಸುಖವಾಗಿರಿ ಎಂದು ಹರಸುತ್ತಾರೆ.


Click it and Unblock the Notifications











