Puttakkana Makkalu: ಮುನಿಸು ಮರೆತು ಒಂದಾದ ಅತ್ತೆ-ಸೊಸೆ; ಅಜ್ಜಿಯ ಕೈಯಿಂದ ತಪ್ಪಿಸಿಕೊಂಡ ರಾಧಾ
ಕಂಠಿ ಹಾಗೂ ಸ್ನೇಹಾ ಒಂದಾಗಬಾರದು ಎಂದು ರಾಧಾ ಮಾಡಿದ ಮಸಲತ್ತು ಒಂದಾ ಎರಡಾ? ರಾಧಾಗೆ ಕಂಠಿ ಯಾವತ್ತೂ ಒಲಿಯುವುದಿಲ್ಲ ಎಂದು ಗೊತ್ತಾಯಿತು ಆಗಲೇ ಆತ ಅಡ್ಡ ದಾರಿಯನ್ನು ಹಿಡಿದು ಬಿಡುತ್ತಾನೆ. ಸ್ನೇಹಾ ಜೊತೆ ಮದುವೆ ಮಾಡಿಕೊಂಡು ಬಂದ ಕಂಠಿಯನ್ನು ನೋಡಿದ ರಾಧಾಗೆ ಇಬ್ಬರ ಮೇಲೂ ಅಸೂಯೆ ಹುಟ್ಟಿರುತ್ತೆ. ಇತ್ತ ಸ್ನೇಹಾ ಮೇಲೆ ಬಂಗಾರಮ್ಮನಿಗೆ ಬಹಳ ಕೋಪವಿರುತ್ತದೆ. ಏಕೆಂದರೆ, ಆಕೆ ನಂಜಮ್ಮನ ಮಾತು ಕೇಳಿ ನನ್ನ ವಿರುದ್ದ ಹೋಗುತ್ತಿದ್ದಾಳೆನೋ ಎನ್ನುವ ಅಳುಕಿತ್ತು.
ಆದರೂ ಯಾರ ಜೊತೆಯೂ ಒಂದು ಮಾತು ಆಡದೆ ತನ್ನಲ್ಲೇ ಆ ಕೋಪವನ್ನು ಹುದುಗಿಸಿ ಇಟ್ಟುಕೊಂಡಿದ್ದರು. ಇದೀಗ ಸ್ನೇಹಾ ಹಾಗೂ ಬಂಗಾರಮ್ಮ ಇಬ್ಬರು ಕೂಡ ಒಂದಾಗಿರುವುದು ರಾಧಾ ಕೆಂಗಣ್ಣಿಗೆ ಗುರಿ ಆಗಿದೆ. ಇನ್ನೂ ರಾಧಾ ಮಾಡಿದ ಕೆಲಸವನ್ನು ಚೌಡವ್ವ ಕೂಡ ನೋಡಿದ್ದಾರೆ. ಈ ವಿಚಾರ ಆಕೆಗೆ ಆ ಬಳಿಕ ಮನವರಿಕೆ ಆಗುತ್ತದೆ. ಆದರೂ ಕೂಡ ಏನು ಮಾತನಾಡದೆ ಚೌಡವ್ವ ಮೌನ ತಳೆದಿರುವುದು ಯಾಕೆ ಎನ್ನುವ ಪ್ರಶ್ನೆ ಸೀರಿಯಲ್ ಪ್ರೇಮಿಗಳಲ್ಲಿ ಹುಟ್ಟಿಕೊಂಡಿದೆ. ರಾಧಾಗೆ ಅಜ್ಜಿಗೂ ಎಲ್ಲಾ ವಿಚಾರಗಳು ಗೊತ್ತಾಗಿದೆ ಎಂದು ತಿಳಿದು ಬಿಟ್ಟಿದೆ.

ಅತ್ತೆಯ ಬಳಿ ಅಜ್ಜಿ ಏನಾದರು ಹೇಳಿದರೆ ಮುಂದೆ ನನ್ನ ಗತಿ ಏನು? ಹಾಗೆಯೇ ಕಂಠಿ ಮಾವನನ್ನು ನಾನು ಪಡೆದುಕೊಳ್ಳಬೇಕು ಎಂದು ಮಾಡಿದ ಪ್ಲಾನ್ ಎಲ್ಲಾ ಹಾಳಾಗಿ ಬಿಡುತ್ತದೆ ಎಂದು ಮನಸ್ಸಿನಲ್ಲಿಯೇ ಯೋಚನೆ ಮಾಡುತ್ತಾಳೆ. ಹಾಗೆಯೇ ಅಜ್ಜಿಯ ಬಳಿ ಬಂದು ಕಾಲಿಗೆ ಬೀಳುತ್ತಾಳೆ. ಅಜ್ಜಿ "ನಾನು ಯಾವತ್ತೂ ಇಂತಹ ತಪ್ಪು ಮಾಡುವುದು ಇಲ್ಲ. ನನ್ನನ್ನು ಕ್ಷಮಿಸಿ ಬಿಡಿ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಚೌಡವ್ವ, ರಾಧಾಗೆ ವಾರ್ನಿಂಗ್ ಮಾಡುತ್ತಾರೆ.
ಅಜ್ಜಿಯ ಕೈಯಿಂದ ತಪ್ಪಿಸಿಕೊಂಡ ರಾಧಾ
"ನಾನು ಈ ಮನೆಯಿಂದ ನಿನ್ನ ಈ ಕ್ಷಣದಿಂದಲೇ ಹೊರಗೆ ಹಾಕಬಹುದು. ಆದರೆ, ನಿನಗೆ ಇನ್ನೊಂದು ಸಲ ಈ ಮನೆಯಲ್ಲಿ ಉಳಿಯುವ ಅವಕಾಶ ಕೊಡುತ್ತೇನೆ. ನಿನಗೆ ಈ ಮನೆಯಿಂದ ಸಾಕಷ್ಟು ಅನ್ಯಾಯ ಆಗಿರಬಹುದು. ನೀನು ಅದನ್ನೇ ಬಳಸಿಕೊಂಡು ಎಲ್ಲರ ಜೀವನದ ಜೊತೆ ಆಟ ಆಡಬೇಕು ಎಂದುಕೊಂಡರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ನಾನು ಇನ್ನೊಬ್ಬಳನ್ನು ಬೀದಿಗೆ ಈಗಾಗಲೇ ಬಿಟ್ಟಿದ್ದೇನೆ. ಅದರ ನೋವು ನನಗೆ ಗೊತ್ತಿದೆ. ಆದ ಕಾರಣ ನಾನು ಈ ಬಾರಿ ನಿನ್ನನ್ನು ಕ್ಷಮಿಸುತ್ತಿದ್ದೇನೆ ಎಂದು ಹೇಳುತ್ತಾರೆ

ಅಜ್ಜಿಯ ಮಾತಿನಿಂದ ನಿಟ್ಟುಸಿರುಬಿಟ್ಟ ರಾಧಾ
ಇದನ್ನು ಕೇಳಿದ ರಾಧಾ ಕೊಂಚ ನಿಟ್ಟುಸಿರು ಬಿಡುತ್ತಾಳೆ. ಆಕೆಗೆ ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಆಕೆಗೆ ತಪ್ಪಿಸಿಕೊಳ್ಳುವುದು ಬಿಟ್ಟರೆ ಬೇರೆ ಯಾವ ದಾರಿಯೂ ಕಾಣಲಿಲ್ಲ. ಮುಂದಿದ್ದು ಮುಂದಕ್ಕೆ ನೋಡೋಣ ಎಂದು ಮನಸ್ಸಿನಲ್ಲಿಯೇ ಆಲೋಚನೆ ಮಾಡುತ್ತಾಳೆ. ಇನ್ನೂ ಕಂಠಿ ಮಾತ್ರ ಅವ್ವನನ್ನು ಬಿಗಿದಪ್ಪಿ ಕೊಂಡು ಮುದ್ದಾಡುತ್ತಾನೆ. ಅವ್ವ ನಾನು ಇದನ್ನೇ ದೇವರ ಬಳಿ ಕೇಳಿಕೊಂಡಿದ್ದು. ನನ್ನ ಹೆಂಡತಿ ಅಮ್ಮ ಯಾವತ್ತೂ ಚೆನ್ನಾಗಿ ಇರಲಿ ಹಾಗೆಯೇ ಅವರು ಒಟ್ಟಿಗೆ ಜೊತೆಗಿರುವ ಹಾಗೆ ಮಾಡಪ್ಪ ಎಂದು ನನಗೆ ಇದೀಗ ಬಹಳ ಖುಷಿ ಆಗಿದೆ" ಎಂದಾಗ ಬಂಗಾರಮ್ಮ ಹೇಳುತ್ತಾರೆ.
ಅಮ್ಮನ ಮಾತಿಗೆ ಮುಖ ನೋಡಿದ ಮಗ
ಈ ಕಾರಣಕ್ಕೆ ನೀನು ತಬ್ಬಿಕೊಂಡದ್ದಾ.. ನಾನು ಸ್ನೇಹನಾ ಇನ್ನೂ ಮನಪೂರ್ವಕವಾಗಿ ಸೊಸೆ ಎಂದು ಒಪ್ಪಿಕೊಂಡಿಲ್ಲ ಎಂದು ಬಂಗಾರಮ್ಮ ಹೇಳುತ್ತಾರೆ. ಇದನ್ನು ಕೇಳಿದ ಕಂಠಿಗೆ ಎನು ಹೇಳಬೇಕು ತಿಳಿಯದಾಗುತ್ತದೆ. ಅತ್ತೆಯ ಮಾತು ಸ್ನೇಹಾ ಗೂ ಅರ್ಥ ಆಗದೆ ನಿಂತಿರುತ್ತಾರೆ.


Click it and Unblock the Notifications











