ಸಹನಾಳ ಬಳಿ ಪ್ರೀತಿ ಹೇಳಿಕೊಳ್ತಾರ ಮೇಷ್ಟ್ರು? ರಾಜೇಶ್ವರಿ ಆಟಕ್ಕೆ ಅಂತ್ಯ ಹಾಡ್ತಾಳ ಸ್ನೇಹಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದೆ. ಸ್ನೇಹ, ಕಂಠಿ ಲವ್ ಸ್ಟೋರಿ ಹಾಗೆಯೇ ಮೇಷ್ಟ್ರು ಹಾಗೂ ಸಹನಾ ಲವ್ ಸ್ಟೋರಿ ಕೂಡ ಚೆನ್ನಾಗಿ ಮೂಡಿ ಬರುತ್ತಿದೆ. ಈ ಬಾರಿ ಮೇಸ್ಟ್ರು ಮಾತ್ರ ತನ್ನ ಪ್ರೀತಿ ವಿಚಾರವನ್ನು ಸಹನಾಗೆ ತಿಳಿಸಬೇಕು ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ. ಮೇಷ್ಟ್ರು ಪ್ರಿನ್ಸಿಪಾಲರ ಬಳಿ ತನಗೆ ಹುಷಾರಿಲ್ಲ, ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ವೇಳೆ, 'ಇವತ್ತು ಸರಿ ನಾಳೆಯಿಂದ ಮಾತ್ರ ಕಾಲೇಜಿಗೆ ಬರಲೇಬೇಕು' ಎಂದು ಪ್ರಿನ್ಸಿಪಾಲರು ತಾಕೀತು ಮಾಡುತ್ತಾರೆ. ಈ ವೇಳೆ ಮೇಷ್ಟ್ರು 'ಇವತ್ತು ಸಹನಾ ಮನೆಗೆ ಬಂದ ವೇಳೆ ಅವಳಿಗೆ ನನ್ನ ಪ್ರೀತಿಯನ್ನು ಹೇಳಿಕೊಂಡು ಬಿಡಬೇಕು ಇದುವೇ ಸರಿಯಾದ ಸಮಯ' ಎಂದು ಮನದಲ್ಲಿ ಅಂದು ಕೊಂಡು ಖುಷಿ ಪಡುತ್ತಿರುತ್ತಾರೆ.
ಇನ್ನು ಪುಟ್ಟಕ್ಕ, ಮತ್ತು ಮಕ್ಕಳು ಒಳಗೆ ಊಟಕ್ಕೆ ಕುಳಿತಿರುವ ವೇಳೆ ಮನೆಯ ಹೊರಗಿನಿಂದ ಬಾಗಿಲು ಬಡಿದ ಸೌಂಡ್ ಆಗುತ್ತದೆ. ಈ ವೇಳೆ ಹೊರಗೆ ಬಂದು ನೋಡಿದಾಗ ಬಾಗಿಲ ಬಳಿ ರಾಜೇಶ್ವರಿ ನಿಂತಿರುವುದನ್ನು ಕಂಡ ಸ್ನೇಹಾಗೆ ಕೋಪ ಬರುತ್ತದೆ. ಈ ವೇಳೆ ಪುಟ್ಟಕ್ಕನೂ ಮನೆಯ ಹೊರಗೆ ಬರುತ್ತಾಳೆ ಈ ವೇಳೆ ರಾಜೇಶ್ವರಿ, ''ಏನು ಪುಟ್ಟಕ್ಕ ಬಂಗಾರಮ್ಮನ ಮನೆಯಲ್ಲಿ ಗಢದ್ದಾಗಿ ತಿಂದಿಲ್ಲವೇ, ಆಕೆ ಏನು ಊಟ ಬಡಿಸಲಿಲ್ಲವೇ, ಇಲ್ಲಿ ಊಟ ಮಾಡುತ್ತಿದ್ದೀಯಲ್ಲ?'' ಎಂದು ಕುಹಕ ಮಾತನಾಡುತ್ತಾಳೆ. 'ಬಂಗಾರಮ್ಮನ ಮನೆಗೆ ತೆರಳಿರುವುದು ಸ್ನೇಹಾಗೆ ತಿಳಿದಿಲ್ಲವೇ' ಎಂದು ಹೇಳಿದಾಗ ಪುಟ್ಟಕ್ಕಗೆ ಸಿಡಿಲು ಬಡಿದ ಹಾಗಾಗುತ್ತದೆ. ಇದನ್ನು ಕೇಳಿಸಿಕೊಂಡ ಸ್ನೇಹಾ ಯಾರು ಹೇಳಿದ್ದು? ನನಗೆ ನನ್ನವ್ವ ಎಲ್ಲ ಹೇಳಿಯೇ ಇಲ್ಲಿಂದ ತೆರಳಿರುವುದು ಎಂದಾಗ ಶಾಕ್ ಆಗುತ್ತದೆ. ಬಳಿಕ ಅಲ್ಲಿಂದ ಹೋಗುತ್ತಾಳೆ.
ಸಹನಾ ಹೇಳುತ್ತಾಳೆ ಅಮ್ಮ ಬೇಕೆಂದು ನಿನ್ನ ಹತ್ತಿರ ಹೇಳದೇ ಹೋದದ್ದು ಅಲ್ಲ, ಬಂದ ಬಳಿಕ ನಾನು ಸುಮ ಬೇಡ ಅಕ್ಕನ ಬಳಿ ಹೇಳುವುದು ಎಂದಾಗ ಅಮ್ಮ ಮಾತ್ರ ಇದಕ್ಕೆ ಒಪ್ಪದೇ ನಿನ್ನ ಬಳಿ ಹೇಳಬೇಕು ಎಂದು ಕೊಂಡಿದ್ದರು ಎಂದು ಹೇಳಿದಾಗ ಈಗ ಊಟ ಮಾಡುವ ವೇಳೆ ಈ ವಿಚಾರ ಮಾತನಾಡಬೇಕು ಎಂದುಕೊಂಡೆ ಎಂದಾಗ ಸ್ನೇಹಾ ಕುಪಿತಗೊಳ್ಳದೇ ನಿನ್ನ ಮರ್ಯಾದೆ ನಾನು ಯಾವತ್ತು ತೆಗಿಯಲ್ಲವ್ವ, ನಾವು ಜಗಳ ಮಾಡಿ ಯಾಕೆ ಅವಳಿಗೆ ಖುಷಿ ನೀಡಬೇಕೆಂದು ಹೇಳುತ್ತಾಳೆ ಇದರಿಂದ ಎಲ್ಲರಿಗೂ ಸ್ವಲ್ಪ ಖುಷಿಯಾಗುತ್ತದೆ.

ಇನ್ನೂ ರಾಜೇಶ್ವರಿ ಮಗ ಪುರುಷಿ ಪುಟ್ಟಕ್ಕನ ಮೆಸ್‌ಗೆ ಬಂದಾಗ ಬಾರ್ಲಾ ಪುರುಷಿ ಎಂದು ಹೇಳಿದಾಗ ಅಕ್ಕ ಮನೆಯಲ್ಲಿ ಅಮ್ಮ ಗಲಾಟೆ ಮಾಡುತ್ತಿದ್ದಳು, ಸರಿಯಾಗಿ ನಿದ್ದೆ ಮಾಡಕ್ಕೂ ಬಿಟ್ಟಿಲ್ಲ ಒಂದು ಗ್ಲಾಸ್ ಟೀ ಕೊಡಕ್ಕೋ ಎಂದು ಹೇಳುತ್ತಾನೆ. ಆ ವೇಳೆ ಸಹನಾ ಟೀ ಕೊಡುತ್ತಾಳೆ. ಈ ವೇಳೆ ಸುಮ ಅವಳಿಗೆ ಬಂದ ಅನುಮಾನವನ್ನು ಹಂಚಿಕೊಳ್ಳುತ್ತಾಳೆ, ನಾವು ಬಂಗಾರಮ್ಮ ಮನೆಗೆ ಊಟಕ್ಕೆ ತೆರಳಿದ ವಿಷಯ ಸ್ನೇಹಳಿಗೆ ಗೊತ್ತಿಲ್ಲ ಎಂದು ರಾಜೇಶ್ವರಿಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಪುಟ್ಟಕ್ಕನ ಮೆಸ್‌ನ ಕೆಲಸದಾಕೆ ಭಯಗೊಳ್ಳುತ್ತಾಳೆ.


Click it and Unblock the Notifications











