Puttakkana Makkalu:ಅಳಿಯನ ಬಳಿ ಬೇಡಿಕೆ ಇಟ್ಟ ಪುಟ್ಟಕ್ಕ; ಅತ್ತೆಯ ಆಸೆಯನ್ನು ಈಡೇರಿಸುತ್ತಾನಾ ಕಂಠಿ?

By ಪೂರ್ವ

ಪುಟ್ಟಕ್ಕಗೆ ತನ್ನ ಮಗಳ ನೆನಪಲ್ಲಿ ಆಕೆಯ ಆರೋಗ್ಯ ಬಹಳಷ್ಟು ಹದಗೆಟ್ಟಿತು. ಹಾಗೆಯೇ ಇದೀಗ ಸಹನಾ ತಿಥಿ ಕಾರ್ಯಕ್ಕೆ ಕೂಡ ಮುಂದಾಗಿದ್ದಾಳೆ. ಆದರೆ, ಸಹನಾ ನೆನಪಲ್ಲಿ ಬಹಳಷ್ಟು ಕುಗ್ಗಿ ಹೋಗಿರುವ ಪುಟ್ಟಕ್ಕಗೆ ಸಹನಾ ಕಾರ್ಯವನ್ನು ಕೂಡ ಸರಿಯಾಗಿ ಮಾಡಲು ಆಗುವುದು ಇಲ್ಲ. ಮನೆಗೆ ಬಂಗಾರಮ್ಮ, ಮುರಳಿ ಎಲ್ಲರೂ ಬಂದಿರುತ್ತಾರೆ. ಕಣಿ ಹೇಳುವವರ ಮಾತಿಗೆ ಪುಟ್ಟಕ್ಕ ಬಹಳ ತಲೆ ಕೆಡಿಸಿಕೊಂಡಿರುತ್ತಾಳೆ. ನನ್ನ ಮಗಳು ಬದುಕಿದ್ದಾಳಾ ಅಥವಾ ಸತ್ತಿದ್ದಾರಾ ಎನ್ನುವುದು ಆಕೆಗೆ ಅನುಮಾನ ಶುರುವಾಗಿ ಬಿಡುತ್ತೆ.

ಹಾಗೆಯೇ ಸಹನಾ ಕಾರ್ಯ ಮಾಡಲು ಶುರು ಮಾಡುತ್ತಾರೆ. ಪುರೋಹಿತರು ಮಂತ್ರ ಪಠಣ ಮಾಡುವ ವೇಳೆ ಪುಟ್ಟಕ್ಕ ಒಮ್ಮೇಲೆ ಸಹನಾ ಎಂದು ಕಿರುಚಿಕೊಳ್ಳುತ್ತಾರೆ. ಪುಟ್ಟಕ್ಕಗೆ ಸಹನಾ ಅಂದರೆ ಅಷ್ಟು ಇಷ್ಟ. ಆಕೆಗೆ ಹಳೆಯದೆಲ್ಲ ನೆನಪಾಗಿ ಬಹಳ ನೊಂದುಕೊಂಡು ಇರುತ್ತಾಳೆ. ಪುಟ್ಟಕ್ಕ, ಸಹನಾ ನೆನಪಲ್ಲಿ ಪ್ರಜ್ಞೆ ಕಳೆದುಕೊಂಡು ಬಿಡುತ್ತಾಳೆ. ಸ್ನೇಹಾಗೆ ಶಾಕ್ ಆಗುತ್ತದೆ. ಅಮ್ಮ ಅಮ್ಮ ಎಂದು ಜೋರಾಗಿ ಕರೆಯುತ್ತಾಳೆ. ಪುಟ್ಟಕ್ಕಗೆ ಯಾವತ್ತೂ ಆಘಾತ ಆಗಬಾರದು ಎಂದು ಡಾಕ್ಟರ್ ಹೇಳಿರುತ್ತಾರೆ. ಆದರೆ, ಈ ವಿಚಾರ ಸ್ನೇಹಾಗೆ ಮಾತ್ರ ತಿಳಿದು ಇರುತ್ತದೆ. ಆ ಕೂಡಲೇ ಡಾಕ್ಟರ್ ಅನ್ನು ಕರೆಯುತ್ತಾರೆ.

Puttakkana Makkalu serial May 28th episode update

ಡಾಕ್ಟರ್ ಪುಟ್ಟಕ್ಕನ ಹೆಲ್ತ್ ಚೆಕಪ್ ಮಾಡಿದ ವೇಳೆ ಪುಟ್ಟಕ್ಕಗೆ ಬಿಪಿ ಹೆಚ್ಚಾಗಿ ಇರುವುದು ಗೊತ್ತಾಗುತ್ತದೆ. ಇದನ್ನು ಗಮನಿಸಿದ ಡಾಕ್ಟರ್ ಹೇಳುತ್ತಾರೆ. ಪುಟ್ಟಕ್ಕಗೆ ಬಿಪಿ ಹೈ ಆಗಿದೆ. ಅವರನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಅವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಹೆಚ್ಚಾಗಿದೆ. ಆದ ಕಾರಣ ಅವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಡಾಕ್ಟರ್ ಹೇಳುತ್ತಾರೆ. ಬಳಿಕ ಪುಟ್ಟಕ್ಕಗೆ ಎಚ್ಚರ ಆಗುತ್ತದೆ. ತನ್ನ ಮಗಳ ತಿಥಿ ಕಾರ್ಯಕ್ಕೆ ನಾನು ಅಡ್ಡಿ ಮಾಡುತ್ತಿದ್ದಾನಲ್ಲ ಎಂದು ಬಹಳ ನೋವು ವ್ಯಕ್ತಪಡಿಸುತ್ತಾಳೆ.

ಅಕ್ಕನ ತಿಥಿ ಕಾರ್ಯ ನಿಲ್ಲಿಸಿದ ಸ್ನೇಹಾ

" ಅಕ್ಕನ ತಿಥಿ ಕಾರ್ಯ ನಿಲ್ಲಿಸಿ. ಇನ್ನೊಂದು ದಿನ ಮಾಡೋಣ. ಇದೀಗ ಮಾಡುವುದು ಬೇಡ. ಅಮ್ಮ ಹುಷಾರಾಗಲಿ ಎಂದು ಹೀಗೆ ಮಾಡಿದೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೋಪಾಲ ಮಾತ್ರ ಇವತ್ತೇ ಮಾಡಿ ಮುಗಿಸೋಣ ಎಂದರೆ ಸ್ನೇಹಾ ಮಾತ್ರ ಬೇಡ ಎಂದು ಹೇಳುತ್ತಾಳೆ. ಅದಕ್ಕೆ ಬಂಗಾರಮ್ಮ ಕೂಡ ಒಪ್ಪಿಗೆ ನೀಡುತ್ತಾರೆ. ಎಲ್ಲರೂ ಹೋದ ಬಳಿಕ ಪುಟ್ಟಕ್ಕ ಕೊಂಚ ನಿಟ್ಟುಸಿರು ಬಿಡುತ್ತಾರೆ.

Puttakkana Makkalu serial May 28th episode update

ಬೆಂಗಳೂರಿಗೆ ತೆರಳಲು ಪುಟ್ಟಕ್ಕ ನಿರ್ಧಾರ

ಪುಟ್ಟಕ್ಕ ಕಂಠಿಯನ್ನು ಕರೆದು "ನನಗೆ ಒಂದು ಆಸೆ ಇದೆ ಅದನ್ನು ಈಡೆರಿಸುತ್ತಿಯಾ" ಎಂದು ಕೇಳುತ್ತಾರೆ. " ಆಸೆ ಈಡೇರಿಸುತ್ತೇನೆ ಅಂತ ನನಗೆ ನೀನು ಪ್ರಮಾಣ ಮಾಡಬೇಕು" ಎಂದು ಹೇಳಿ ಕಂಠಿಯ ಹತ್ತಿರ ಪುಟ್ಟಕ್ಕ ಬೆಂಗಳೂರಿಗೆ ಹೋಗುವ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಕಂಠಿ ಪುಟ್ಟಕ್ಕಗೆ ಪ್ರಮಾಣ ಮಾಡುತ್ತಾನೆ, ಖಂಡಿತವಾಗಿಯೂ ನಿಮ್ಮನ್ನ ನಾನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ. ಇತ್ತ ಸಹನಾ ಪುಟ್ಟಕ್ಕನ ಭಾವ ಚಿತ್ರದ ಫೋಟೋವನ್ನು ಇಬ್ಬ ಕಲಾವಿದರಿಂದ ಬರೆಸುತ್ತಾಳೆ.

ಅಮ್ಮನ ನೆನಪಿನಲ್ಲಿ ಸಹನಾ

ಆ ಫೋಟೋ ನೋಡಿದ ಖುಷಿಯಲ್ಲಿ ಅಮ್ಮನಿಗೆ ಈಗಲೇ ಕರೆ ಮಾಡಿ ಹೇಳಬೇಕು ಎಂದುಕೊಂಡು ಫೋನ್ ಮಾಡಲು ಹೋದಾಗ ಅಮ್ಮನಿಗೆ ಕರೆ ಮಾಡುವುದು ಬೇಡ ಎಂದು ಮತ್ತೆ ಫೋನ್ ಕೆಳಗೆ ಇಡುತ್ತಾಳೆ. ಏನೇ ಕಷ್ಟ ಇದ್ದರೂ ಪುಟ್ಟಕ್ಕನ ಫೋಟೋ ಹಿಡಿದು ಸಹನಾ ಮಾತನಾಡುತ್ತಾ ಕಾಲ ಕಾಲ ಕಳೆಯುತ್ತಿರುತ್ತಾಳೆ.

More from Filmibeat

English summary
Puttakkana Makkalu serial May 28th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X