Puttakkana Makkalu:ಮಗಳನ್ನು ಹುಡುಕಿ ಬೆಂಗಳೂರಿಗೆ ಹೊರಟ ಪುಟ್ಟಕ್ಕ; ಸಹನಾ ಸಿಗುತ್ತಾಳಾ?
ಪುಟ್ಟಕ್ಕಗೆ ತನ್ನ ಮಗಳು ಬೆಂಗಳೂರಿನಲ್ಲಿ ಇದ್ದಾಳೆ. ಆಕೆ ಖಂಡಿತವಾಗಿಯೂ ಬದುಕಿದ್ದಾಳೆ. ಆಕೆ ಯಾವತ್ತೂ ನನ್ನನ್ನು ಬಿಟ್ಟು ಹೋಗುವುದು ಇಲ್ಲ ಎನ್ನುವ ನಂಬಿಕೆ. ಆದರೂ, ಯಾರ ಜೊತೆಯೂ ಹೇಳಿಕೊಳ್ಳದೆ ಒಬ್ಬರೇ ಮನಸ್ಸಿನಲ್ಲಿ ನೊಂದುಕೊಂಡಿರುತ್ತಾರೆ.
ಕಂಠಿಗೆ ಆಗಾಗ ಕರೆ ಮಾಡಿ "ನಾವು ಬೆಂಗಳೂರಿಗೆ ಹೋಗೋಣ. ಅಲ್ಲಿ ಸಹನಾ ಇದ್ದರೂ ಇರಬಹುದು" ಎಂದು ಅಂದಾಗ ಕಂಠಿಗೆ ಬಹಳ ಭಯ ಆಗುತ್ತದೆ. ಬೆಂಗಳೂರು ಎಂದರೆ ಬಹಳ ದೊಡ್ಡ ಊರು ಅಲ್ಲಿ ಸಹನಾಳನ್ನು ಎಲ್ಲಿ ಹುಡುಕುವುದು? ಎಲ್ಲಾದರೂ ಸಹನಾ ಸಿಗದೆ ಹೋದರೆ, ಅವ್ವನಿಗೆ ಇನ್ನಷ್ಟು ನೋವು ಆಗುವುದು ಮಾತ್ರ ಖಂಡಿತ ಎಂದು ಅಂದುಕೊಳ್ಳುತ್ತಾನೆ. ಹಾಗೆಯೇ ಪುಟ್ಟಕ್ಕ ಜೊತೆ ಪ್ರಸ್ತಾಪ ಕೂಡ ಮಾಡುತ್ತಾನೆ.

"ಅತ್ತೆ ನಿಮ್ಮನ್ನು ನಾನು ಬೆಂಗಳೂರಿಗೆ ಕರೆದುಕೊಂಡು ಹೋಗಬಹುದು. ಆದರೆ, ಅಲ್ಲಿ ಸಹನಾ ಸಿಗದೆ ಹೋದರೆ ನೀವು ಇನ್ನಷ್ಟು ಕುಗ್ಗಿ ಬಿಡುತ್ತೀರಿ. ನನಗೆ ಅದುವೇ ಭಯ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕ "ಹಾಗೇನು ಆಗುವುದಿಲ್ಲ. ನಾಳೆ ಮುಂಜಾನೆ ನಾನು ಹೊರಟು ನಿಂತು ಇರುತ್ತೇನೆ. ನೀನು ಇಲ್ಲಿಗೆ ಬಂದುಬಿಡು. ಒಟ್ಟಿಗೆ ಹೋಗೋಣ" ಎಂದು ಹೇಳುತ್ತಾರೆ. ಕಂಠಿ ಮುಂಜಾನೆ ಅತ್ತೆಯನ್ನು ಕರೆದುಕೊಂಡು ಬೆಂಗಳೂರಿಗೆ ಬರುತ್ತಾನೆ. ಬೆಂಗಳೂರಿನ ಜನರ ಬಳಿ ಪುಟ್ಟಕ್ಕ ತನ್ನ ಮಗಳನ್ನು ಎಲ್ಲಾದರೂ ನೋಡಿದಿರಾ ಎಂದು ಫೋಟೋ ತೋರಿಸಿ ಕೇಳಿಕೊಂಡು ಹೋಗುತ್ತಾಳೆ.
ಆದರೆ ಅಲ್ಲಿರುವ ಜನರಿಗೆ ಸಹನಾ ಯಾರು ಎನ್ನುವುದೇ ತಿಳಿಯುವುದು ಇಲ್ಲ. ಹಾಗೆಯೇ ಪುಟ್ಟಕ್ಕ ದೇವಸ್ಥಾನಕ್ಕೆ ತೆರಳಿ ದೇವರ ಬಳಿ ಕೇಳಿ ಕೊಳ್ಳುತ್ತಾಳೆ. ಅಮ್ಮ ತಾಯಿ ನನ್ನ ಮಗಳನ್ನು ನನಗೆ ಹೇಗಾದರೂ ಮಾಡಿ ಸಿಗುವ ಹಾಗೆ ಮಾಡು. ನನಗೆ ಆಕೆ ಬೇಕು. ಆಕೆ ಇಲ್ಲದೆ ನಾನು ಇಲ್ಲ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಆಗ ಕೂಡಲೇ ಉರಿಯುತ್ತಿರುವ ದೀಪ ಆರಿ ಹೋಗುತ್ತದೆ. ಇದನ್ನು ನೋಡಿದ ಪುಟ್ಟಕ್ಕಗೆ ಬಹಳಷ್ಟು ಆತಂಕ ಹೆಚ್ಚಾಗುತ್ತದೆ. ಇನ್ನೂ ಸ್ನೇಹಾ ಬಳಿ ಬಂಗಾರಮ್ಮ ಒಂದು ಫೈಲ್ ಕೊಟ್ಟು ಇದರಲ್ಲಿ ಬರೆದಿರುವುದು ಎಲ್ಲಾ ಸರಿಯಾಗಿ ಇದೆಯೋ ಅಥವಾ ಏನಾದರೂ ತಪ್ಪು ಆಗಿದೆಯೋ ನೀನೇ ಓದಿ ಹೇಳು ಎಂದು ಸ್ನೇಹಾ ಬಳಿ ಬಂಗಾರಮ್ಮ ಹೇಳುತ್ತಾರೆ.
ಬಂಗಾರಮ್ಮನ ಫೈಲ್ ಓದಿದ ಸ್ನೇಹಾ
ಈ ಮಾತು ಕೇಳಿದ ಸ್ನೇಹಾ ಆ ಫೈಲ್ ತೆಗೆದುಕೊಂಡು ಓದುತ್ತಿರುವಾಗ ಅಲ್ಲಿಗೆ ರಾಧಾ ಬರುತ್ತಾಳೆ. "ಅತ್ತೆ ಆ ಫೈಲ್‌ಗೆ ನೀವು ಸಹಿ ಹಾಕಬಹುದು ಎಂದು ನಾನು ಹೇಳಿದ್ದೆ ಅಲ್ವಾ? ನೀವು ಸಹಿ ಕೂಡ ಹಾಕಿದ್ದೀರಿ" ಎಂದು ಹೇಳಿದಾಗ ಬಂಗಾರಮ್ಮ "ಸಹಿ ಹಾಕಿದ್ದೇನೆ. ಆದರೆ ಅದರಲ್ಲಿ ಏನಿದೆ ಎನ್ನುವುದು ಸರಿಯಾಗಿ ತಿಳಿದುಕೊಳ್ಳಬೇಕು ಅಲ್ವಾ? ಅದಕ್ಕೆ ಸ್ನೇಹಾಗೆ ಕೊಟ್ಟಿದ್ದೀನಿ" ಎಂದು ಹೇಳಿದಾಗ ರಾಧಾಗೆ ಟೆನ್ಶನ್ ಆಗುತ್ತದೆ. ಸ್ನೇಹಾ ಆ ಫೈಲ್ ಓದಿ, ಅತ್ತೆ ಈ ಫೈಲ್‌ಗೆ ಸಹಿ ಹಾಕಿದ್ದಾರೆ ಎಂದುಕೊಂಡು ರಾಧಾ ಬಳಿ ಕೇಳುತ್ತಾಳೆ. "ಇದರಲ್ಲಿ ಏನು ಬರೆದಿದೆ ಎನ್ನುವುದು ಗೊತ್ತಾ ರಾಧಾ ನಿನಗೆ? ನೀರಾವರಿ ಜಾಗದಲ್ಲಿ ಉಳುಮೆ ಮಾಡುವ ಜಾಗದಲ್ಲಿ ಫ್ಯಾಕ್ಟರಿ ಕಟ್ಟಲು ನನ್ನ ಒಪ್ಪಿಗೆ ಇದೆ ಎಂದು ಬರೆದಿದೆ" ಎಂದು ಹೇಳುತ್ತಾಳೆ.

ಸ್ನೇಹಾ ಮಾತು ಕೇಳಿ ಬಂಗಾರಮ್ಮ ಶಾಕ್
ಸ್ನೇಹಾ ಹೇಳಿದ್ದನ್ನು ಕೇಳಿ ಬಂಗಾರಮ್ಮನಿಗೆ ಶಾಕ್ ಆಗುತ್ತೆ. ಆಕೆ ಸ್ನೇಹಾ ಬಳಿ ಬಂದು "ನೀನು ಇದನ್ನು ನನಗೆ ಓದಿ ಹೇಳಿದ್ದು ಒಳ್ಳೆಯದು ಆಯಿತು. ಇಲ್ಲವಾದರೆ ಬಹಳ ಕಷ್ಟ ಆಗುತ್ತಿತ್ತು" ಎಂದು ಹೇಳುತ್ತಾರೆ. ಹಾಗೆಯೇ "ನಾನು ರೈತರಿಗೆ ಮೋಸ ಮಾಡಿದ ಹಾಗೆ ಆಗುತ್ತಿತ್ತು" ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಧಾ ಮಾತ್ರ ಏನು ಮಾಡಬೇಕು ತಿಳಿಯದಾಗುತ್ತೆ.
ರಾಧಾ ವಿರುದ್ಧ ಬಂಗಾರಮ್ಮ ಗರಂ
ಬಂಗಾರಮ್ಮ ರಾಧಾ ಬಳಿ ನೋಡಿ, "ಯಾಕೆ ರಾಧವ್ವಾ ಹೀಗೆ ಮಾಡುತ್ತಿದ್ದಿಯಾ ಏನಾಯಿತು? ನಿನಗೆ ಸರಿಯಾಗಿ ಓದಿದ್ದು ಅರ್ಥ ಆಗಲಿಲ್ವ?" ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಧಾ ಏನು ಮಾತನಾಡದೆ ಸುಮ್ಮನೆ ಆಗುತ್ತಾರೆ. ಕೊನೆಗೆ ಬಂಗಾರಮ್ಮ, ಸ್ನೇಹಾಗೆ ಧನ್ಯವಾದ ಹೇಳಿ ನನ್ನ ಮಗ ಸರಿಯಾದವಳನ್ನೆ ಸೊಸೆಯಾಗಿ ಮನೆ ಬೆಳಗಿಸಿದ್ದಾನೆ" ಎಂದು ಖುಷಿಯಿಂದ ಹೇಳುತ್ತಾರೆ.


Click it and Unblock the Notifications











